For Quick Alerts
  ALLOW NOTIFICATIONS  
  For Daily Alerts

  ದೀಪಿಕಾ ನೆಚ್ಚಿನ ಕ್ರಿಕೆಟಿಗ ಯುವರಾಜ್ ಅಲ್ಲ, ಕೊಹ್ಲಿನೂ ಅಲ್ಲ, ಮತ್ಯಾರು?

  By Bharath Kumar
  |

  ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ಭಾರತ ಕ್ರಿಕೆಟ್ ಗೆ ಒಂಥರಾ ನಂಟು. ಕೆಲವು ಕ್ರಿಕೆಟಿಗರ ಜೊತೆ ದೀಪಿಕಾ ಸುತ್ತಾಡಿದ್ದು, ಕೆಲವರು ಜೊತೆ ಡಿಪ್ಪಿಯ ಹೆಸರು ಕೂಡ ಅಂಟಿಕೊಂಡಿತ್ತು. ಅದೆಲ್ಲ ಫ್ಲ್ಯಾಶ್ ಬ್ಯಾಕ್ ಬಿಡಿ. ಈಗ ಅಸಲಿ ವಿಷ್ಯ ಏನಪ್ಪಾ ಅಂದ್ರೆ, ಸದ್ಯಕ್ಕೆ ದೀಪಿಕಾ ಪಡುಕೋಣೆ ಅವರ ನೆಚ್ಚಿನ ಕ್ರಕೆಟಿಗ ಯಾರು ಎಂಬುದು ಚರ್ಚೆಯಾಗಿದೆ.

  ದೀಪಿಕಾ ಪಡುಕೋಣೆ ಅವರ ಫೆವರೇಟ್ ಕ್ರಿಕೆಟರ್ ಯುವರಾಜ್ ಸಿಂಗ್ ಇರಬಹುದು ಎಂದುಕೊಂಡವರು ಹೆಚ್ಚು. ಅದರ ಜೊತೆಗೆ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಇರಬಹುದು ಎಂಬ ಉತ್ತರವೂ ಸಿಕ್ಕಿರುತ್ತೆ. ಆದ್ರೆ, ಅಭಿಮಾನಿಗಳ ನಿರೀಕ್ಷೆಯನ್ನ ಹುಸಿಗೊಳಿಸಿದ ದೀಪಿಕಾ, ಹೇಳಿದ್ದು ಮಾತ್ರ ಬೇರೆ ಹೆಸರನ್ನ.

  ವಿವಾದಾತ್ಮಕ ಚಿತ್ರ 'ಪದ್ಮಾವತ್' ಮೊದಲ ದಿನ ಗಳಿಸಿದ್ದೆಷ್ಟು?ವಿವಾದಾತ್ಮಕ ಚಿತ್ರ 'ಪದ್ಮಾವತ್' ಮೊದಲ ದಿನ ಗಳಿಸಿದ್ದೆಷ್ಟು?

  ಹೌದು, ದೀಪಿಕಾ ಪಡುಕೋಣೆಯ ನೆಚ್ಚಿನ ಕ್ರಿಕೆಟಿಗ ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ 'ಕೂಲ್ ಕ್ಯಾಪ್ಟನ್' ಎಂದೇ ಖ್ಯಾತಿ ಗಳಿಸಿಕೊಂಡಿದ್ದ ಮಹೇಂದ್ರ ಸಿಂಗ್ ಧೋನಿ ಅಂತೆ. ಈಗಂತ ಸ್ವತಃ ದೀಪಿಕಾ ಟಿವಿ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ.

  ಅಂದ್ಹಾಗೆ, ಈ ಹಿಂದೆ ಎಂ.ಎಸ್ ಧೋನಿ ಮತ್ತು ದೀಪಿಕಾ ಪಡುಕೋಣೆ ಡೇಟಿಂಗ್ ಮಾಡಿದ್ದರು ಎಂಬ ಸುದ್ದಿ ಕೇಳಿಬಂದಿತ್ತು. ಕಾರ್ಯಕ್ರಮವೊಂದರಲ್ಲಿ ದೀಪಿಕಾ ಪಡುಕೋಣೆ ಮೇಲೆ ನನಗೆ ಕ್ರಶ್ ಆಗಿದೆ ಎಂದು ಸ್ವತಃ ಧೋನಿ ಹೇಳಿಕೊಂಡಿದ್ದರು. ದೀಪಿಕಾ ಕೂಡ ಧೋನಿ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು.

  ಸದ್ಯ, ದೀಪಿಕಾ ಪಡುಕೋಣೆ ಅಭಿನಯದ 'ಪದ್ಮಾವತ್' ಸಿನಿಮಾ ಬಿಡುಗಡೆಯಾಗಿದ್ದು, ಎಲ್ಲರಿಂದಲೂ ಪ್ರಶಂಸೆ ಪಡೆದುಕೊಂಡಿದೆ. ಸಂಜಯ್ ಲೀಲಾ ಬನ್ಸಾಲಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ರಣ್ವೀರ್ ಸಿಂಗ್, ಶಾಹೀದ್ ಕಪೂರ್ ಅಭಿನಯಿಸಿದ್ದಾರೆ.

  English summary
  Deepika Padukone revealed her favourite cricketer and it's not Virat Kohli or Yuvraj Singh. Deepika opened up by saying that her favourite cricketer is none other than 'Captain Cool' Mahendra Singh Dhoni.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X