ಸೋನಮ್ ಕಪೂರ್ ಸೀಮಂತದಲ್ಲಿ ಕಾಣಿಸಿಕೊಂಡ 'ಈತನ್ಯಾರು'? ಎಲ್ಲೆಲ್ಲೂ ಇದೇ ಚರ್ಚೆ!
ನಟಿ ಸೋನಂ ಕಪೂರ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಬೇಬಿ ಬಂಪ್‌ನ ಫೊಟೊಶೂಟ್ ಮಾಡಿಸಿಕೊಂಡಿದ್ದ ನಟಿ, ಆ ನಂತರ ಬೇಬಿ ಶವರ್ ಸಹ ಆಚರಿಸಿಕೊಂಡರು.
ಸೋನಮ್ ಕಪೂರ್‌ರ ಬೇಬಿ ಶವರ್ ಪಾರ್ಟಿಗೆ ಹಲವು ಗಣ್ಯರು ಆಗಮಿಸಿದ್ದರು. ಆದರೆ ಗಮನ ಸೆಳೆದಿದ್ದು ಮಾತ್ರ ಆ ಒಂದು ಚಿತ್ರ. ಸೋನಮ್ ಕಪೂರ್ ಜೊತೆ ಪುರುಷನೊಬ್ಬ ಮಹಿಳೆಯರ ಧಿರಿಸಿನಲ್ಲಿ ನಿಂತು ಫೋಟೊ ತೆಗೆಸಿಕೊಂಡಿದ್ದ. ಸೋನಮ್ ಕಪೂರ್ ಹಾಗೂ ಆ ವ್ಯಕ್ತಿ ಆಪ್ತವಾಗಿ ಚಿತ್ರಕ್ಕೆ ಫೋಸು ನೀಡಿದ್ದರು. ಪಾರ್ಟಿಯಲ್ಲಿ ಆತ ಹಾಡು ಹಾಡುತ್ತಿರುವ ವಿಡಿಯೋವನ್ನು ಸಹ ಸೋನಂ ಕಪೂರ್ ಹಂಚಿಕೊಂಡಿದ್ದರು.
ಸೋನಂ ಕಪೂರ್ ಜೊತೆ ನಿಂತಿದ್ದ ಆ ದ್ವಿಲಿಂಗಿಯ ಚಿತ್ರ ಸಖತ್ ವೈರಲ್ ಆಗಿದ್ದು, ಆತ ಯಾರು ಎಂಬ ಹುಡುಕಾಟವನ್ನು ನೆಟ್ಟಿಗರು ಮಾಡುತ್ತಿದ್ದಾರೆ. ಸೋನಂ ಕಪೂರ್ ಬೇಬಿ ಶವರ್‌ಗೆ ಬಂದಿದ್ದ ಆತನನ್ನು ಟ್ರೋಲ್ ಸಹ ಮಾಡಲಾಗಿದೆ.

ಆ ವ್ಯಕ್ತಿಯ ಹೆಸರೇನು?
ಸೋನಂ ಕಪೂರ್ ಜೊತೆ ಫೋಟೊಕ್ಕೆ ಫೋಸ್ ನೀಡಿರುವ ಆ ವ್ಯಕ್ತಿಯ ಹೆಸರು ಲಿಯೋ ಕಲ್ಯಾಣ್ ಎಂದು. ಪಾಕಿಸ್ತಾನಿ ಮೂಲದ ಲಂಡನ್ ನಿವಾಸಿಯಾಗಿರುವ ಲಿಯೋ ಕಲ್ಯಾಣ್ ತ್ರಿಲಿಂಗಿ ಆಗಿದ್ದಾರೆ. ತನ್ನ ಇನ್‌ಸ್ಟಾಗ್ರಾಂನಲ್ಲಿ ನನ್ನನ್ನು 'ಅವನು, ಅವಳು ಹಾಗೂ ಅವರು (ಹಿ/ಶಿ/ದೇ) ಎಂದು ಕರೆಯಬಹುದು ಎಂದು ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನ ಮೂಲದ ಲಿಯೋ ಕಲ್ಯಾಣ್
ಪಾಕಿಸ್ತಾನದಲ್ಲಿ ಜನಿಸಿದ ಲಿಯೋ ಕಲ್ಯಾಣ್, ಮೊದಲ ಕೆಲ ವರ್ಷ ಲಾಹೋರ್‌ನಲ್ಲಿದ್ದರು. ಮಾಡೆಲ್ ಆಗಿದ್ದ ಲಿಯೋ ಕಲ್ಯಾಣ್, ಹಾಡು ಬರಹಗಾರ, ಗಾಯಕ ಹಾಗೂ ಸಂಗೀತ ನಿರ್ದೇಶಕ ಸಹ ಆಗಿದ್ದಾರೆ. ತಾವು ಬಾಲಿವುಡ್ ಸೇರಿದಂತೆ ಹಲವು ಬೇರೆ ಭಾಷೆಗಳ ಹಾಡುಗಳು ಹಾಡಿರುವ ವಿಡಿಯೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ ಲಿಯೋ ಕಲ್ಯಾಣ್.

ಟ್ರೋಲಿಗರಿಗೆ ಉತ್ತರ ನೀಡಿರುವ ಲಿಯೋ
ಸೋನಂ ಕಪೂರ್‌ರ ಬೇಬಿ ಶವರ್ ಕಾರ್ಯಕ್ರಮಕ್ಕೆ ಹೆಣ್ಣು ಮಕ್ಕಳು ಧರಿಸುವ ಉಡುಪು ಧರಿಸಿ ಬಂದಿದ್ದಕ್ಕೆ ಬಹುವಾಗಿ ಟ್ರೋಲ್ ಆಗಿದ್ದಾರೆ ಲಿಯೋ ಕಲ್ಯಾಣ್. ಆದರೆ ಟ್ರೋಲ್ ಮಾಡಿದವರಿಗೆ ಸಾಮಾಜಿಕ ಜಾಲತಾಣದ ಮೂಲಕವೇ ಉತ್ತರಿಸಿರುವ ಲಿಯೋ ಕಲ್ಯಾಣ್, ''ದ್ವೇಷ ಕಾರುವ ಕಮೆಂಟ್‌ಗಳಿಂದ ನನಗೇನೂ ಹಾನಿಯಾಗದು. ಕೆಲವು ಕಮೆಂಟ್‌ಗಳಂತೂ ಅದೆಷ್ಟು ತಮಾಷೆಯಾಗಿರುತ್ತವೆಂದರೆ ಅವುಗಳನ್ನು ನನ್ನ ಗೆಳೆಯರಿಗೆ ಕಳಿಸಿ ನಾವೆಲ್ಲ ಸೇರಿ ಚೆನ್ನಾಗಿ ನಗುತ್ತೇವೆ. ಅಲ್ಲದೆ, ದ್ವೇಷ ಕಮೆಂಟ್‌ಗಳು ಬಂದಾಗ, ನಾನು ಸಮಾಜವನ್ನು ಚಾಲೆಂಜ್ ಮಾಡುತ್ತಿದ್ದೇನೆ ಎಂಬ ಭಾವ ನನ್ನಲ್ಲಿ ಮೂಡುತ್ತದೆ'' ಎಂದಿದ್ದಾರೆ.

'ಮಸಕ್ಕಲಿ' ಹಾಡು ಹಾಡಿದ ಲಿಯೋ
ಸೋನಮ್ ಕಪೂರ್‌ರ ಸೀಮಂತ ಕಾರ್ಯಕ್ರಮದಲ್ಲಿ ಹಲವು ಹಿಂದಿ ಹಾಡುಗಳನ್ನು ಹಾಡಿ ರಂಜಿಸಿದ್ದಾರೆ ಲಿಯೋ ಕಲ್ಯಾಣ್. ಸೋನಂ ಕಪೂರ್ ಜೊತೆಗಿನ ತಮ್ಮ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಲಿಯೋ, 'ಬಾಲಿವುಡ್‌ನ ಖಾರದ ಹುಡುಗಿ. ಈಗಷ್ಟೆ ಸೋನಂ ಕಪೂರ್‌ಳ ಬೇಬಿ ಶವರ್ ಕಾರ್ಯಕ್ರಮದಲ್ಲಿ ನಾನು ಪ್ರದರ್ಶನ ನೀಡಿದೆ. ಎಂಥಹಾ ಅದ್ಭುತ ಜೀವನ'' ಎಂದಿದ್ದಾರೆ. ಸೋನಂ ಕಪೂರ್ ಬೇಬಿ ಶವರ್‌ನಲ್ಲಿ ಸೋನಂರ 'ಡೆಲ್ಲಿ 6' ಸಿನಿಮಾದ 'ಮಸಕ್ಕಲಿ' ಸೇರಿದಂತೆ ಹಲವು ಹಿಟ್ ಹಾಡುಗಳನ್ನು ಲಿಯೋ ಕಲ್ಯಾಣ್ ಹಾಡಿದ್ದಾರೆ.


Click it and Unblock the Notifications











