ಕಾಜೋಲ್ ಡೀಪ್‌ಫೇಕ್ ವಿಡಿಯೋದಲ್ಲಿರೋ ಆ ಮಹಿಳೆ ಯಾರು? ಆಕೆಯ ಹಿನ್ನೆಲೆ ಏನು?

ಬಾಲಿವುಡ್ ನಟಿ ಕಾಜೋಲ್ ಡೀಪ್‌ಫೇಕ್ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಮಹಿಳೆಯೊಬ್ಬರು ಬಟ್ಟೆ ಬದಲಿಸುತ್ತಿರುವ ವಿಡಿಯೋಗೆ ನಟಿ ಕಾಜೋಲ್ ಮುಖ ಅಂಟಿಸಿ ನಕಲಿ ವಿಡಿಯೋ ಸೃಷ್ಟಿಸಲಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಇತ್ತೀಚೆಗಷ್ಟೆ ನಟಿ ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ಭಾರೀ ಸದ್ದು ಮಾಡಿತ್ತು. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ವ್ಯಕ್ತವಾಗಿತ್ತು. ಅಮಿತಾಬ್ ಬಚ್ಚನ್, ನಾಗಚೈತನ್ಯಾ, ವಿಜಯ್ ದೇವರಕೊಂಡ ಸೇರಿದಂತೆ ಹಲವರು ಈ ಬಗ್ಗೆ ದನಿ ಎತ್ತಿದ್ದರು. ಈಗಾಗಲೇ ದೆಹಲಿ ಪೊಲೀಸರು ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Who is Rosie Breen, woman in Kajols viral deepfake video?

ತಂತ್ರಜ್ಞಾನದ ಸಹಾಯದಿಂದ ಯಾರ ಫೋಟೊ, ವಿಡಿಯೋವನ್ನು ಬೇಕಾದರೂ ಈ ರೀತಿ ಮಾರ್ಪ್‌ ಮಾಡಬಹುದು ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದರು. ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಬೆಳೆದು ಇದು ಮತ್ತಷ್ಟು ಹೆಚ್ಚಾಗುತ್ತದೆ. ಈಗ ಸೆಲೆಬ್ರೆಟಿಗಳ ಡೀಪ್‌ಫೇಕ್‌ ವಿಡಿಯೋ ಮಾಡುತ್ತಿರುವವರು ಮುಂದೆ ನಮ್ಮ ಅಕ್ಕ ಪಕ್ಕದವರ ಫೋಟೊ, ವಿಡಿಯೋ ಮಾರ್ಪ್‌ ಮಾಡಲು ಆರಂಭಿಸುತ್ತಾರೆ, ಹಾಗಾಗಿ ಇದಕ್ಕೆ ಕಡಿವಾಣ ಹಾಕಬೇಕು ಎಂದು ನಟ ರಕ್ಷಿತ್ ಶೆಟ್ಟಿ ಕೂಡ ಆಗ್ರಹಿಸಿದ್ದಾರೆ.

ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಬಾಲಿವುಡ್ ನಟಿ ಕಾಜೋಲ್ ದೇವಗನ್ ಬಟ್ಟೆ ಬದಲಿಸುವಂತೆ ಫೇಕ್ ವಿಡಿಯೋ ಮಾಡಿದ್ದಾರೆ. ಇನ್ನು ವಿಡಿಯೋದಲ್ಲಿ ಇರುವ ಆ ಮಹಿಳೆ ಯಾರು ಎನ್ನುವುದನ್ನು ನೋಡುವುದಾದರೆ ಆಕೆ ಇಂಗ್ಲೀಷ್ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಎಂದು ಗೊತ್ತಾಗುತ್ತಿದೆ. ಆಕೆಯ ಹೆಸರು ರೋಸಿ ಬ್ರೀನ್. 'ಗೆಟ್ ರೆಡಿ ವಿತ್ ಮೀ' ಟ್ರೆಂಡ್ ಭಾಗವಾಗಿ ಜೂನ್ 5, 2023ರಲ್ಲಿ ಈ ವಿಡಿಯೋವನ್ನು ಆಕೆ ಹಂಚಿಕೊಂಡಿದ್ದಳು. ಆಕೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಲಕ್ಷಾಂತರ ಮಂದಿ ಫಾಲೋವರ್ಸ್ ಇದ್ದಾರೆ. ಇಂತಹ ಹಾಟ್ ವಿಡಿಯೋಗಳಿಂದಲೇ ಆಕೆ ಹೆಚ್ಚು ಸುದ್ದಿಯಲ್ಲಿರುತ್ತಾಳೆ.

ಬಹಳ ದಿನಗಳಿಂದ ಕಾಜೋಲ್ ಡೀಪ್‌ಫೇಕ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ರಶ್ಮಿಕಾ ಫೇಕ್ ವಿಡಿಯೋ ಹೊರಬಂದ ಮೇಲೆ ಕಾಜೋಲ್ ವೀಡಿಯೋ ಚರ್ಚೆಗೆ ಗ್ರಾಸವಾಗಿದೆ. ರಶ್ಮಿಕಾ ಬಳಿಕ ಬಾಲಿವುಡ್ ನಟಿ ಕತ್ರೀನಾ ಕೈಫ್‌ಗೂ ಇಂತದ್ದೇ ಸಮಸ್ಯೆ ಎದುರಾಗಿತ್ತು. ಆದರೆ ಆಕೆ ಈ ಬಗ್ಗೆ ಇನ್ನು ಪ್ರತಿಕ್ರಿಯಿಸಿಲ್ಲ. ಸದ್ಯ ಕಾಜೋಲ್ ಕೂಡ ಈ ಬಗ್ಗೆ ಮೌನವಾಗಿಯೇ ಇದ್ದಾರೆ.

ರಶ್ಮಿಕಾ ಮಂದಣ್ಣ AI ಡೀಪ್ ಫೇಕ್ ವೀಡಿಯೊ ವೈರಲ್ ಆದ ನಂತರ, ಭಾರತ ಸರ್ಕಾರವು ಪ್ರಮುಖ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ಸಲಹೆಯನ್ನು ನೀಡಿತು. ಡೀಪ್‌ಫೇಕ್ ವೀಡಿಯೊಗಳ ವಿರುದ್ಧ ತ್ವರಿತ ಕ್ರಮ ತೆಗೆದುಕೊಳ್ಳುವಂತೆ ಮತ್ತು ತಪ್ಪು ಮಾಹಿತಿಯನ್ನು ಪ್ರಚಾರ ಮಾಡುವ ವಿಷಯವನ್ನು ತೆಗೆದುಹಾಕುವಂತೆ ಒತ್ತಾಯಿಸಿತು.

ಇನ್ನು ರಶ್ಮಿಕಾ ಮಂದಣ್ಣ ಫೇಕ್ ವಿಡಿಯೋ ಬಗ್ಗೆ ದೆಹಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಯುವಕನೊಬ್ಬರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಆಗಿರುವ ಮಾಹಿತಿ ಸಿಕ್ಕಿತ್ತು. ಆತನನ್ನು ವಿಚಾರಿಸಿದಾಗ ಆತ ಇದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡೆ, ನಾನು ಮಾರ್ಪ್‌ ಮಾಡಲಿಲ್ಲ ಎಂದು ಹೇಳಿರುವುದಾಗಿ ಹೇಳಲಾಗುತ್ತಿದೆ.

ಸಿನಿಮಾ ಸೆಲೆಬ್ರೆಟಿಗಳ ಫೇಕ್ ವಿಡಿಯೋ ಬಂದಾಗ ಈ ರೀತಿ ಎಲ್ಲರೂ ಚರ್ಚಿಸುತ್ತಿದ್ದೇವೆ. ಅವರ ಬೆಂಬಲಕ್ಕೆ ನಿಲ್ಲುತ್ತಿದ್ದೇವೆ. ಸಾಮಾನ್ಯ ಜನರಿಗೆ ಇಂತಹ ಸಮಸ್ಯೆ ಎದುರಾದರೆ ಹೇಗೆ? ಅಂತಹ ಸಮಯದಲ್ಲಿ ಏನು ಮಾಡಬೇಕು? ಇಂತಹ ಸಾಫ್ಟ್‌ವೇರ್ ಮತ್ತು ಆಪ್‌ಗಳಿಗೆ ಕಡಿವಾಣ ಹಾಕಲೇಬೇಕು, ಸರ್ಕಾರ ಈ ಬಗ್ಗೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೆಲವರು ಮನವಿ ಮಾಡುತ್ತಿದ್ದಾರೆ.

More from Filmibeat

English summary
here is details about Rosie Breen, woman in Kajol's deepfake video.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X