ಚಿತ್ರರಂಗಕ್ಕೆ ಬರಲಿಲ್ಲವೇಕೆ ಜೂಹಿ ಚಾವ್ಲಾ ಮಗಳು ? ಎಲ್ಲಿದ್ದಾರೆ, ಏನ್ಮಾಡ್ತಿದ್ದಾರೆ ಪ್ರೇಮಲೋಕದ ಚೆಲುವೆಯ ಮಗಳು ?
ಅಪ್ಪ ಸ್ಟಾರ್ ಆದರೆ ಮಕ್ಕಳು ಕೂಡ ಸ್ಟಾರಾಗುವುದು, ಅಪ್ಪ ರಾಜಕಾರಣಿಯಾದರೆ ಮಕ್ಕಳು ರಾಜಕಾರಣಿಯಾಗುವುದು ಈಗೀಗ ಕಾಮನ್ನು. ಇದಕ್ಕೆ ಬಣ್ಣದ ಪ್ರಪಂಚದಲ್ಲಿ ಅನೇಕ ಉದಾಹರಣೆಗಳಿವೆ. ಅದರಲ್ಲಿಯೂ.. ಬಾಲಿವುಡ್‌ನಲ್ಲಿ ಇವತ್ತು ಆಳುತ್ತಿರುವ ಬಹುತೇಕರು, ಒಂದ್ಕಾಲಿನ ಸ್ಟಾರ್ ಕಲಾವಿದರ ಮಕ್ಕಳೇ. ಆದರೆ, ಇದಕ್ಕೆ ತದ್ವಿರುದ್ದ ಎನ್ನುವಂತೆ ಅಲ್ಲೊಬ್ಬರು .. ಇಲ್ಲೊಬ್ಬರು.. ತಮ್ಮ ತಂದೆ-ತಾಯಿಯ ನೆರಳಿನಾಚೆ ಬದುಕು ಕಟ್ಟಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಚಿತ್ರರಂಗದ ಕಡೆ ಮುಖ ಹಾಕಿ ಮಲಗದೇ ಬೇರೆ ಬೇರೆ ಕ್ಷೇತ್ರಗಳತ್ತ ಗಮನ ಕೊಡುತ್ತಾರೆ. ಸಾಧನೆಯ ಶಿಖರವನ್ನೂ ಏರುತ್ತಾರೆ. ಇದಕ್ಕೆ ಜೂಹಿ ಚಾವ್ಲಾ ಮಗಳು ಸದ್ಯದ ಉದಾಹರಣೆ.
ಹೌದು, 90ರ ದಶಕದಲ್ಲಿ ಭಾರತೀಯ ಚಿತ್ರರಂಗದಲ್ಲಿ ಮೆರೆದವರು ಜೂಹಿ ಚಾವ್ಲಾ. ಸುಲ್ತಾನತ್ ಎಂಬ ಚಿತ್ರದಿಂದ ಚಿತ್ರರಂಗವನ್ನು ಪ್ರವೇಶ ಮಾಡಿದ ಜೂಹಿ ಅವರನ್ನು ಆ ನಂತರ ನಮ್ಮ ಕನ್ನಡದ ಕ್ರೇಜಿ ಸ್ಟಾರ್ ಡಾ.ವಿ.ರವಿಚಂದ್ರನ್, ಪ್ರೇಮ ಲೋಕ ಚಿತ್ರಕ್ಕಾಗಿ ಕನ್ನಡಕ್ಕೆ ಕರೆತಂದರು. ಹನ್ನೊಂದು ಹಾಡುಗಳಿದ್ದ ಪ್ರೇಮಲೋಕದಲ್ಲಿ ನಿಂಬೆ ಹಣ್ಣಿನಂತೆ ಇದ್ದ ಜೂಹಿ ಕನ್ನಡಿಗರ ಹೃದಯ ಗೆದ್ದಿದ್ದರು. ಮಿಂಚಿದರು. ಆ ನಂತರ ಬಾಲಿವುಡ್ ಎಂಬ ಮಾಯಾನಗರಿಯಲ್ಲಿ ತಮ್ಮದೇ ಸಾಮ್ರಾಜ್ಯವನ್ನು ಕೂಡ ಸ್ಥಾಪಿಸಿದರು.

ಆದರೆ ಇಂತಹ ಜೂಹಿ ಚಾವ್ಲಾ ಮಗಳಾದ ಜಾಹ್ನವಿ ಮೆಹ್ತಾಗೆ ಚಿತ್ರರಂಗದಲ್ಲಿ ಯಾವ ಆಸಕ್ತಿ ಇಲ್ಲ. ಬದಲಿಗೆ ವ್ಯಾಪಾರ ವ್ಯವಹಾರದ ಕಡೆ ಇವರಿಗೆ ಒಲವು ಇದೆ. ಕ್ರಿಕೆಟ್ ಮೇಲೆ ವಿಪರೀತ ಆಸಕ್ತಿ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಜಾಹ್ನವಿ ಮೆಹ್ತಾ ನಿನ್ನೆ ಮತ್ತು ಇಂದು ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ತಮ್ಮ ತಾಯಿ ಜೂಹಿ ಚಾವ್ಲಾ ಪರವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಎಲ್ಲರ ಕಣ್ಮನವನ್ನು ಸೆಳೆದಿದ್ದಾರೆ. ತಮ್ಮ ಸೌಂದರ್ಯದಿಂದ ಪಡ್ಡೆ ಹುಡುಗರನ್ನು ಕ್ಲೀನ್ ಬೋಲ್ಡ್ ಮಾಡಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಸದ್ಯಕ್ಕೆ ಅನೇಕರು ಜಾಹ್ನವಿ ಮೆಹ್ತಾ ಅವರ ಜಾತಕವನ್ನು ಜಾಲಾಡುತ್ತಿದ್ದಾರೆ. ಗೂಗಲ್‌ನಲ್ಲಿ ಜಾಹ್ನವಿ ಮೆಹ್ತಾ ಅವರ ಫೋಟೊ ಹುಡುಕುತ್ತಿದ್ದಾರೆ. ಜಾಹ್ನವಿ ಮೆಹ್ತಾ ಅವರ ಇನ್ಸ್ಟಾಗ್ರಾಮ್ ಐಡಿ ಯಾರ ಬಳಿಯಾದರು ಇದ್ದರೆ ಕೊಡಿ ಎನ್ನುವ ಮನವಿಯನ್ನು ಮಾಡಿಕೊಳ್ಳುತ್ತಿದ್ದಾರೆ.
ಆದರೆ, ದುರಾದೃಷ್ಟ.. ಎಲ್ಲ ಸ್ಟಾರ್ ಮಕ್ಕಳಂತೆ ಜಾಹ್ನವಿ ಮೆಹ್ತಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿಲ್ಲ. ಎರಡು ವರ್ಷದಿಂದ ಒಂದೇ ಒಂದು ಫೋಸ್ಟ್ ಕೂಡ ಹಾಕಿಲ್ಲ. ಅಂದ್ಹಾಗೇ ಜಾಹ್ನವಿ ಮೆಹ್ತಾ ಐಪಿಎಲ್ ಹರಾಜು ಪ್ರಕ್ರಿಯೆಗೆ ಬಂದಿದ್ದು ಇದು ಮೊದಲೇನಲ್ಲ. ಈ ಹಿಂದೆ ಅಂದರೆ 2022ರಲ್ಲಿ ಕೂಡ ಜಾಹ್ನವಿ ಮೆಹ್ತಾ ತಮ್ಮ ತಾಯಿ ಜೂಹಿ ಚಾವ್ಲಾ ಜೊತೆ ಬಂದಿದ್ದರು. ಆದರೆ ಅವತ್ತು ಕೆಕೆಆರ್ ತಂಡದ ಜೊತೆ ಕೂರದ ಜಾಹ್ನವಿ ಮೆಹ್ತಾ ಶಾರುಖ್ ಖಾನ್ ಅವರ ಮಕ್ಕಳಾದ ಆರ್ಯನ್ ಖಾನ್ ಮತ್ತು ಸುಹಾನ ಜೊತೆ ಕುಳಿತುಕೊಂಡಿದ್ದರು. ಹೀಗಾಗಿಯೇ ಅವತ್ತು ಅನೇಕರ ಕಣ್ಣು ಜಾಹ್ನವಿ ಮೆಹ್ತಾ ಮೇಲೆ ಬಿದ್ದಿರಲಿಲ್ಲ. ಜಾಹ್ನವಿ ಮೆಹ್ತಾ ಹೆಸರು ಮತ್ತು ಫೋಟೊ ವೈರಲ್ ಆಗಿರಲಿಲ್ಲ.

ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಶಾರುಖ್ ಖಾನ್ ಮತ್ತು ಜೂಹಿ ಮೊದಲಿಂದ ಅತ್ಯಾಪ್ತರು. ಇವರ ಸ್ನೇಹಕ್ಕೆ ಐಪಿಎಲ್‌ನ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಸಾಕ್ಷಿ. ಶಾರುಖ್ ಜೊತೆ ಸೇರಿ ಕ್ರಿಕೆಟ್‌ನಲ್ಲಿ ಕೂಡ ಹಣವನ್ನು ಹೂಡಿರುವ ಜೂಹಿ ಚಾವ್ಲಾ ನಮ್ಮ ಮಕ್ಕಳೇ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮುಂದಿನ ಭವಿಷ್ಯ ಎಂದು ಹೇಳಿದ್ದರು. ನನ್ನ ಮತ್ತು ಶಾರುಖ್ ಖಾನ್ ನಡುವೆ ಇರುವ ಸ್ನೇಹ ಮತ್ತು ಹಣಕಾಸಿನ ವ್ಯವಹಾರವನ್ನು ಶಾರುಖ್ ಮಕ್ಕಳಾದ ಆರ್ಯನ್ ಖಾನ್, ಸುಹಾನ ಮತ್ತು ನನ್ನ ಮಗಳು ಜಾಹ್ನವಿ ಮುಂದುವರೆಸಿಕೊಂಡು ಹೋಗುತ್ತಾರೆ ಎಂದು ಹೇಳಿದ್ದರು. ಇನ್ನುಳಿದಂತೆ ಜಾಹ್ನವಿ ಮೆಹ್ತಾ ನ್ಯೂಯಾರ್ಕ್‌ನ ಪ್ರತಿಷ್ಠಿತ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದಿದ್ದಾರೆ. ತಮ್ಮ ತಾಯಿಯ ಬಿಸಿನೆಸ್‌ನ ನೋಡಿಕೊಳ್ಳುತ್ತಿದ್ದಾರೆ.


Click it and Unblock the Notifications











