ನೋಡಲು ಹಾಲಿವುಡ್ ಹೀರೋನಂತೆ ಇರುವ ಈ ಸುರಸುಂದರಾಂಗ ಯಾವ ಸೂಪರ್ ಸ್ಟಾರ್ ಮಗ ?
ಪ್ರೀತಿ ಅಂದರೆ ಏನು ? ಈ ಪ್ರಶ್ನೆಗೆ ಉತ್ತರ ಸಿಕ್ಕಿರುವುದಿಲ್ಲ. ಅದಾಗಲೇ ಅನೇಕ ಹದಿಹರೆಯದ ಯುವಕ-ಯುವತಿಯರ ಮನಸ್ಸು ಬಾಳ ಸಂಗಾತಿಯ ಹುಡುಕಾಟದಲ್ಲಿ ತೊಡಗಿಕೊಂಡಿರುತ್ತದೆ. ದಿನನಿತ್ಯ ಚಟುವಟಿಕೆಗಳ ಸಲುಗೆ ಸ್ನೇಹಕ್ಕೆ ಬುನಾದಿಯನ್ನು ಹಾಕುತ್ತೆ. ಆ ನಂತರ ಸ್ನೇಹ ಒಂದು ರೀತಿಯ ಬಾಂಧವ್ಯ ಬೆಳೆಸಿ ವಿಚಾರ ವಿನಿಮಯಗಳಿಗೆ ಕೂಡ ಕಾರಣವಾಗುತ್ತೆ, ಸುಖ ಸಂತೋಷಗಳ ಹಂಚಿಕೆಯಾಗುತ್ತೆ. ಪ್ರೀತಿಗೆ ತಳಪಾಯವಾಗುತ್ತೆ.
ಆದರೆ ಇನ್ನೂ ಕೆಲವೊಮ್ಮೆ ಬೆಳೆಯುತ್ತ ಹೋದಂತೆ ಭಾವನೆಗಳು ಬದಲಾಗುತ್ತಾ ಹೋಗುತ್ತವೆ. ತುಂಬಾ ಬೇಕು ಎನಿಸಿದವರ ಜಾಗವನ್ನು ನಾಳೆ ಇನ್ಯಾರೋ ತುಂಬಲು ಶುರುಮಾಡುತ್ತಾರೆ. ವಯೋಸಹಜ ಆಕರ್ಷಣೆಗೆ ಒಳಗಾಗಿ ಅದನ್ನೇ ಪ್ರೀತಿ ಎಂದು ಅರ್ಥೈಸಿಕೊಳ್ಳುತ್ತಾರೆ. ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಮತ್ತು ಅಂದಕಾಲತ್ತಿಲ್‌ನ ಚೆಲುವೆ ಟ್ವಿಂಕಲ್ ಖನ್ನಾ ಅವರ ಮುದ್ದಿನ ಮಗ ಆರವ್ ಕುಮಾರ್ ಇದೇ ರೀತಿಯ ವಯೋಸಹಜ ಆಕರ್ಷಣೆಗೆ ಒಳಗಾಗಿ ಪ್ರೀತಿ ಪ್ರೇಮದ ಭ್ರಮೆಯಲ್ಲಿ ತೇಲುತ್ತಿದ್ದಾರಾ ಗೊತ್ತಿಲ್ಲ. ಆದರೆ ಸದ್ಯ ಇವರ ಲವ್ ಸ್ಟೋರಿಯ ಕುರಿತು ಇಡೀ ಬಾಲಿವುಡ್ ಚರ್ಚೆ ಮಾಡುತ್ತಿದೆ.

ಹೌದು, ಅಸಲಿಗೆ ಹಬ್ಬ ಹರಿದಿನಗಳನ್ನು ಜೋರಾಗಿ ಆಚರಿಸುವ ಸಂಪ್ರದಾಯ ಬಾಲಿವುಡ್‌ನಲ್ಲಿದೆ. ಒಬ್ಬರ ಮನೆಗೆ ಒಬ್ಬರು ತೆರಳಿ ಅನೇಕರು ಹಬ್ಬದ ಶುಭಾಶಯಗಳನ್ನು ಕೋರುತ್ತಾರೆ. ಮತ್ತೂ ಕೆಲವರು ಹಬ್ಬದ ಸಂಭ್ರಮದಲ್ಲಿ ಔತಣಕೂಟ ಏರ್ಪಡಿಸುತ್ತಾರೆ. ಪಾರ್ಟಿಗಳನ್ನು ಮಾಡುತ್ತಾರೆ. ಮೊನ್ನೆ ಈದ್ ಹಬ್ಬದ ಪ್ರಯುಕ್ತ ಗ್ಯಾಂಗ್ಸ್ ಆಫ್ ವಾಸೇಪುರ್, ಏಕ್ ಥಿ ಡಾಯನ್, ಬದ್ಲಾಪುರ್ ಮತ್ತು ಮಹಾರಾಣಿ ಅಂತಹ ವೆಬ್ ಸರಣಿಗಳ ಮೂಲಕ ಜನ ಮನ ಗೆದ್ದ ಹುಮಾ ಖುರೇಶಿ ಇದೇ ರೀತಿ ಔತಣಕೂಟವನ್ನು ಹಮ್ಮಿಕೊಂಡಿದ್ದರು.
ಈ ಡಿನ್ನರ್ ಪಾರ್ಟಿಗೆ ಅಕ್ಷಯ್ ಕುಮಾರ್ ಮಗ ಆರವ್ ಸುಂದರವಾದ ಯುವತಿಯ ಜೊತೆ ಬಂದಿದ್ದರು. ನಗು ನಗುತ್ತಾ ಯುವತಿಯ ಜೊತೆ ಹುಮಾ ಖುರೇಶಿಯ ಮನೆಯೊಳಗೆ ತೆರಳಿದರು. ಕ್ಯಾಮರಾಗಳಿಗೆ ಪೋಸ್ ಕೂಡ ನೀಡಿದರು. ಹುಮಾ ಖುರೇಶಿ ಅವರ ಮನೆಗೆ ಆರವ್ ಮತ್ತು ಆರವ್ ಗೆಳತಿ ಆಗಮಿಸಿರುವ ವಿಡಿಯೋ ಮತ್ತು ಫೋಟೊಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಆರವ್ ಜೊತೆ ಇದ್ದ ಚೆಲುವೆ ಯಾರು ಎನ್ನುವ ಪ್ರಶ್ನೆ ಕೂಡ ಹಲವರನ್ನು ಕಾಡುತ್ತಿದೆ.
ಈ ಕುರಿತು ಚರ್ಚೆಯನ್ನು ಶುರು ಮಾಡಿರುವ ಬಾಲಿವುಡ್‌ನ ಸಿನಿಮಾಪ್ರಿಯರು ಸದ್ಯ ಆರವ್ ಜೊತೆ ಕಾಣಿಸಿಕೊಂಡ ಹುಡುಗಿಯ ಕುಲ-ಗೋತ್ರ-ಜಾತಕವನ್ನು ಹುಡುಕಲು ಶುರು ಮಾಡಿದ್ದಾರೆ. ಕೆಲವರು ಇಬ್ಬರು ಗೆಳೆಯರು ಇರಬಹುದು ಎಂದರೆ ಇನ್ನು ಕೆಲವರು ಇಬ್ಬರ ನಡುವೆ ಪ್ರೇಮಾಂಕುರವಾಗಿರಬಹುದು ಎನ್ನುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಮತ್ತೂ ಕೆಲವರು ಆಕೆ ಅಕ್ಷಯ್ ಕುಮಾರ್ ಅವರ ಸೋದರ ಸಂಬಂಧಿಯ ಮಗಳು, ಆಕೆಯ ಹೆಸರು ಸಿಮರ್ ಭಾಟಿಯಾ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇದೆಲ್ಲದರ ನಡುವೆ ಅಕ್ಷಯ್ ಕುಮಾರ್ ಮಗನ ಸರಳತೆಯನ್ನು ಕೂಡ ಅನೇಕರು ಕೊಂಡಾಡುತ್ತಿದ್ದಾರೆ. ಸದ್ಯ ಹುಮಾ ಖುರೇಶಿ ಅವರ ಈದ್ ಪಾರ್ಟಿಗೆ ಆರವ್ ಭಾಟಿಯಾ ಬಂದಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅಭಿಮಾನಿಗಳ ಗಮನವನ್ನು ಸೆಳೆದಿವೆ.
ಅಂದ್ಹಾಗೇ ಕಳೆದ ವರ್ಷ ತಮ್ಮ ಮಗನ ಕುರಿತು ಮನ ಬಿಚ್ಚಿ ಮಾತನಾಡಿದ್ದ ಅಕ್ಷಯ್ ಕುಮಾರ್ ನನ್ನ ಮಗ ಲಂಡನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾನೆ, ವಿದ್ಯಾಭ್ಯಾಸಕ್ಕೆ 15ನೇ ವಯಸ್ಸಿನಲ್ಲಿಯೇ ಮನೆಯನ್ನು ತೊರೆದ ಎಂದು ಹೇಳಿದ್ದರು. ಅವನಿಗೆ ಓದುವುದರಲ್ಲಿ ತುಂಬಾನೇ ಆಸಕ್ತಿ ಇದೆ, ನಿಜಾ ಹೇಳಬೇಕು ಅಂದರೆ ಆರವ್‌ನ ಲಂಡನ್‌ಗೆ ಕಳುಹಿಸುವುದು ನನಗೆ ಇಷ್ಟ ಇರಲಿಲ್ಲ ಆದರೆ ಅವನ ಆಸಕ್ತಿ ಮತ್ತು ಓದಿಗೆ ಅಡ್ಡಿಯಾಗುವುದಕ್ಕೆ ಕೂಡ ಇಷ್ಟ ಇರಲಿಲ್ಲ ಎಂದು ಹೇಳಿದ್ದ ಅಕ್ಷಯ್ ಕುಮಾರ್ ನಾನು ಕೂಡ 14ನೇ ವಯಸ್ಸಿನಲ್ಲಿ ಮನೆ ಬಿಟ್ಟು ಹೋಗಿದ್ದೇ ಹೀಗಾಗಿ ಅವನನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದರು.
ಆರವ್ ಜೀವನ ಶೈಲಿಯ ಕುರಿತು ಕೂಡ ಮಾತನಾಡಿದ್ದ ಅಕ್ಷಯ್ ಕುಮಾರ್ ಅವನು ತುಂಬಾ ಸರಳ ಜೀವಿ ಎಂದು ಹೇಳಿದ್ದರು. ಅವನ ಬಟ್ಟೆಯನ್ನು ಅವನೇ ಒಗೆಯುತ್ತಾನೆ, ಅಡುಗೆಯನ್ನು ಮಾಡುತ್ತಾನೆ, ಪಾತ್ರೆಯನ್ನು ಅವನೇ ತೊಳೆಯುತ್ತಾನೆ, ಯಾವ ಕೆಲಸಕ್ಕೂ ಅವನು ಬೇರೆಯವರ ಮೇಲೆ ಅವಲಂಬಿತನಾಗಿಲ್ಲ ಎಂದು ಹೇಳಿದ್ದ ಅಕ್ಷಯ್ ಕುಮಾರ್ ಸೆಕೆಂಡ್ ಹ್ಯಾಂಡ್ ಸ್ಟೋರ್‌ಗಳಿಗೆ ತೆರಳಿ ಅವನು ಬಟ್ಟೆಯನ್ನು ಖರೀದಿ ಮಾಡುತ್ತಾನೆ ಎಂದು ಹೇಳಿದ್ದರು. ಅವನು ಹಾಕಿಕೊಳ್ಳುವ ಬಟ್ಟೆಗಳೆಲ್ಲ ಬೇರೆಯವರು ಧರಿಸಿ ಬಿಸಾಡಿದ ಬಟ್ಟೆಗಳು ಅವನಿಗೆ ಸುಖಾ ಸುಮ್ಮನೆ ದುಡ್ಡು ಪೋಲು ಮಾಡಲು ಇಷ್ಟ ಇಲ್ಲ ಎಂದು ಹೇಳಿದ್ದರು.
ಇನ್ನು ಚಿತ್ರರಂಗಕ್ಕೆ ತಮ್ಮ ಮಗನನ್ನು ಪರಿಚಯಿಸುವದರ ಕುರಿತು ಕೂಡ ಶಿಖರ್ ಧವನ್‌ಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಅಕ್ಷಯ್ ಕುಮಾರ್ ಇಂತಹದ್ದೇ ಕ್ಷೇತ್ರದಲ್ಲಿ ಮುಂದುವರೆಯಬೇಕೆಂದು ನಾನು ನನ್ನ ಮಕ್ಕಳಿಗೆ ಯಾವತ್ತು ಒತ್ತಾಯಿಸಿಲ್ಲ, ಆರವ್‌ಗೆ ಫ್ಯಾಷನ್‌ನಲ್ಲಿ ತುಂಬಾನೇ ಆಸಕ್ತಿ ಇದೆ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ನನಗೆ ಹೇಳಿದ್ದಾನೆ ನೋಡೋಣ ಎಂದು ಹೇಳಿದ್ದರು. ಫ್ಯಾಷನ್ ಪ್ರಪಂಚದಲ್ಲಿ ಬದುಕು ಕಟ್ಟಿಕೊಳ್ಳುವ ಆಸೆ ಅವನದ್ದು ಎಂದು ಹೇಳಿದ್ದರು.
ಮುಂದುವರೆದು ಆರವ್‌ನನ್ನು ಟ್ವಿಂಕಲ್ ಬೆಳೆಸಿದ ರೀತಿ ನನಗೆ ತುಂಬಾನೇ ಖುಷಿ ಕೊಟ್ಟಿದೆ ಎಂದು ಹೇಳಿದ್ದ ಅಕ್ಷಯ್ ಕುಮಾರ್, ನನ್ನ ಮಗ ಆರವ್ ತುಂಬಾನೇ ಸರಳವಾದ ಹುಡುಗ ಆದರೆ ನನ್ನ ಮಗಳಿಗೆ ಬಟ್ಟೆಗಳ ಮೇಲೆ ತುಂಬಾನೇ ಮೋಹ ಎಂದು ಕೂಡ ಹೇಳಿದ್ದರು.
ಇನ್ನುಳಿದಂತೆ ಬಾಲಿವುಡ್‌ನ ಒಂದ್ಕಾಲದ ಸ್ಟಾರ್‌ಗಳ ಮಕ್ಕಳು ಒಬ್ಬೊಬ್ಬರಾಗಿಯೇ ಚಿತ್ರರಂಗವನ್ನು ಪ್ರವೇಶಿಸುತ್ತಿದ್ದಾರೆ. ಈಗಾಗಲೇ ಶಾರುಖ್ ಖಾನ್ ಮಗಳು ಸುಹಾನಾ ನಾಯಕಿಯಾಗಿ ಚಿತ್ರರಂಗವನ್ನು ಪ್ರವೇಶಿಸಿದ್ದಾರೆ. ಸೈಫ್ ಅಲಿ ಖಾನ್ ಮಗ ಇಬ್ರಾಹಿಂ ಅಲಿ ಖಾನ್ ಕೂಡ ಚಿತ್ರರಂಗಕ್ಕೆ ಬಂದಿದ್ದಾರೆ. ರವೀನಾ ಟಂಡನ್ ಮಗಳು ರಾಶಾ ಅಭಿನಯದ ಮೊದಲ ಚಿತ್ರ ಆಜಾದ್ ಈ ವರ್ಷದ ಆರಂಭದಲ್ಲಿ ಬಿಡುಗಡೆಯಾಗಿದೆ. ಬಾಕ್ಸಾಫೀಸ್‌ನಲ್ಲಿ ಚಿತ್ರ ಗೆಲ್ಲದಿದ್ದರೂ ಕೂಡ ರಾಶಾ ಅಭಿನಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಶ್ರೀದೇವಿಯ ಎರಡನೇ ಮಗಳು ಖುಷಿ ಕಪೂರ್ ಕೂಡ ಈಗಾಗಲೇ ಚಿತ್ರರಂಗಕ್ಕೆ ಬಂದಿದ್ದಾರೆ. ಅಮೀರ್ ಖಾನ್ ಮಗ ಜುನೈದ್ ಖಾನ್ ಕೂಡ ಈಗಾಗಲೇ ಒಂದು ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಹೀಗಾಗಿ ನೋಡಲು ಹಾಲಿವುಡ್ ಹೀರೋ ರೀತಿ ಇರುವ ಅಕ್ಷಯ್ ಕುಮಾರ್ ಮಗ ಆರವ್ ಕೂಡ ಚಿತ್ರರಂಗಕ್ಕೆ ಬರಬೇಕೆಂಬ ಆಸೆಯನ್ನು ಅನೇಕರು ಸದ್ಯ ವ್ಯಕ್ತಪಡಿಸುತ್ತಿದ್ದಾರೆ. ಆರವ್ ಚಿತ್ರರಂಗಕ್ಕೆ ಬಂದರೆ ತಂದೆಯಂತೆ ಗೆಲ್ಲುವಲ್ಲಿ ಅನುಮಾನ ಇಲ್ಲ ಎನ್ನುವ ಭವಿಷ್ಯವಾಣಿಯನ್ನು ಕೂಡ ಹೇಳುತ್ತಿದ್ದಾರೆ. ಒಟ್ನಲ್ಲಿ ಸದ್ಯ ಆರವ್ ಮೊನ್ನೆಯ ದಿವಸ ಹುಮಾ ಖುರೇಶಿ ಅವರ ಈದ್ ಪಾರ್ಟಿಯಲ್ಲಿ ಭಾಗವಹಿಸಿದ ಫೋಟೊ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಆರವ್ ಜೊತೆ ಇದ್ದ ಹುಡುಗಿ ಯಾರು ಎನ್ನುವ ಕುರಿತು ಚರ್ಚೆ ಕೂಡ ನಡೆಯುತ್ತಿದೆ. ಆರವ್ ಜೊತೆ ಇದ್ದ ಆ ಹುಡುಗಿ ನಿಜಕ್ಕೂ ಸಂಬಂಧಿನಾ..? ಆರವ್ ಮುಂದಿನ ದಿನಗಳಲ್ಲಿ ಚಿತ್ರರಂಗಕ್ಕೆ ಬರುತ್ತಾರಾ ? ಉತ್ತರ ಕಾಲ ಕಾಲಕ್ಕೆ ಸಿಗುವ ನಿರೀಕ್ಷೆ ಇದೆ.


Click it and Unblock the Notifications











