ಬಾಲಿವುಡ್‌ಗೆ ಭಯೋತ್ಪಾದಕರ ನಂಟು!? ಯಾರು ಈ ಟೋನಿ ಅಶೈ
ಬಾಲಿವುಡ್‌ಗೆ ಭಯೋತ್ಪಾದಕರ ಜೊತೆ ನಂಟು ಇದೆಯಾ? ಇದು ಇಂದು ಉದ್ಭವವಾಗಿರುವ ಪ್ರಶ್ನೆಯಲ್ಲ, ಆಗಾಗ್ಗೆ ಈ ಪ್ರಶ್ನೆ ಕೇಳಿಬರುತ್ತಲೇ ಇರುತ್ತದೆ. ಆದರೆ ಈ ಬಾರಿ ತುಸು ಗಟ್ಟಿಯಾಗಿ ಕೇಳುತ್ತಿದೆ.
Recommended Video
ಬಿಜೆಪಿ ಮುಖಂಡ ಒಬ್ಬರು ಹಾಗೂ ಹೋರಾಟಗಾರ್ತಿಯೊಬ್ಬರು ಶಾರುಖ್ ಖಾನ್ ಗೆ ಕಾಶ್ಮೀರ ಪ್ರತ್ಯೇಕವಾದಿಗಳಿಗೆ ಹಣ ಸಹಾಯ ಮಾಡುವವರೊಂದಿಗೆ ಹಣಕಾಸು ವ್ಯವಹಾರ ಇದೆ ಎಂಬ ಗಂಭೀರ ಆರೋಪ ಮಾಡಿದ್ದು, ಇದಕ್ಕೆ ಸಾಖ್ಷಿಯಾಗಿ ಕೆಲವು ಚಿತ್ರಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಶಾರುಖ್ ಖಾನ್ ಹಾಗೂ ಪತ್ನಿ ಗೌರಿ ಖಾನ್ ಟೋನಿ ಅಶೈ ಎಂಬಾತನೊಂದಿಗೆ ಇರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶಾರುಖ್ ಖಾನ್‌ಗೆ ಕಾಶ್ಮೀರ ಪ್ರತ್ಯೇಕತವಾದಿಗಳ ಜೊತೆಗೆ ನಂಟಿದೆ ಎಂಬ ಆರೋಪಕ್ಕೆ ಸಾಕ್ಷಿಯಾಗಿ ಈ ಚಿತ್ರಗಳನ್ನು ತೋರಿಸಲಾಗುತ್ತಿದೆ. ಹಾಗಾಗಿದ್ದರೆ ಶಾರುಖ್ ಖಾನ್ ಜೊತೆಗಿರುವ ಈ ಟೋನಿ ಅಶೈ ಯಾರು?

ಟೋನಿ ಅಶೈ ಹುಟ್ಟಿದ್ದು ಭಾರತದ ಕಾಶ್ಮೀರದಲ್ಲಿ
ಟೋನಿ ಅಶೈ ಉರುಫ್ ಅಜೀಜ್ ಅಶೈ ಹುಟ್ಟಿದ್ದು ಕಾಶ್ಮೀರದಲ್ಲಿಯೇ. ಪ್ರಸ್ತುತ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಈತ ಪ್ರಸಿದ್ಧ ಆರ್ಕಿಟೆಕ್ಟ್. ಈತನ ಟ್ವಿಟ್ಟರ್ ಖಾತೆಯಲ್ಲಿ ತನ್ನ ಪರಿಚಯವನ್ನು 'ನಾನೊಬ್ಬ ಕಶ್ಮೀರಿ, ಕಶ್ಮೀರದ ಜನರಿಗಾಗಿ ನನ್ನನ್ನು ತೊಡಗಿಸಿಕೊಂಡಿದ್ದೇನೆ' ಎಂದು ಬರೆದುಕೊಂಡಿದ್ದಾನೆ.

ಕಾಶ್ಮೀರಿ ಮುಸ್ಲಿಂ ಯುವಕರಿಗೆ ಅಶೈ ಹೀರೊ
ಟೋನಿ ಅಶೈ ಕಾಶ್ಮೀರಿ ಮುಸ್ಲಿಂ ಯುವಕರ ಪಾಲಿಗೆ ಹೀರೋ. ಆತನಗೆ ಅಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಆತನ ಟ್ವಿಟ್ಟರ್ ಖಾತೆಯನ್ನು ಎರಡು-ಮೂರು ಸ್ಕ್ರೋಲ್ ಮಾಡುವುದರೊಳಗೆ ನಿಮಗೆ ಗೊತ್ತಾಗಿಬಿಡುತ್ತದೆ ಆತನಿಗೆ ಕಾಶ್ಮೀರದ ಮುಸ್ಲಿಂ ಯುವಕರು ಏಕೆ ಅಭಿಮಾನಿಗಳೆಂದು. ಕಾಶ್ಮೀರದಲ್ಲಿ ನಡೆಯುತ್ತಿರುವ ಪ್ರತ್ಯೇಕತವಾದದ ಪರವಾದ ನಿಲುವುಗಳನ್ನು ಆತ ಹೊಂದಿರುವುದು ಆತನ ಟ್ವಿಟ್ಟರ್ ಪೋಸ್ಟ್‌ಗಳಿಂದಲೇ ಗೊತ್ತಾಗಿ ಬಿಡುತ್ತದೆ.

ಭಯೋತ್ಪಾದನಾ ಸಂಘಟನೆಗೆ ಹಣಕಾಸು ನೆರವು ಆರೋಪ
ಪ್ರತ್ಯೇಕತವಾದದ ಪರವಾದ ಆಲೋಚನೆಗಳನ್ನಷ್ಟೆ ಟೋನಿ ಅಶೈ ಇಟ್ಟುಕೊಂಡಿದ್ದಿದ್ದರೆ ಅದು ದೊಡ್ಡ ಎನಿಸಿಕೊಳ್ಳುತ್ತಿರಲಿಲ್ಲ. ಆದರೆ ಆತ ಪ್ರತ್ಯೇಕತಾವಾದಿಗಳಿಗೆ ಹಣ ಸಹಾಯ ಮಾಡುತ್ತಾನೆ ಎಂಬ ಆರೋಪ ಹೊತ್ತಿದ್ದಾನೆ ಅಷ್ಟೆ ಅಲ್ಲ ಟೋನಿ ಅಶೈ ಐಎಸ್‌ಐ ಏಜೆಂಟ್ ಎಂಬ ಹೊಸ ಆರೋಪವೂ ಆತನ ಮೇಲೆ ಕೆಲವು ದಿನಗಳ ಹಿಂದಷ್ಟೆ ಹೇರಿಕೆಯಾಗಿದೆ.

ಭಯೋತ್ಪಾದಕ ಸಂಘಟನೆ ಜೆಕೆಎಪ್‌ಎಫ್‌ನ ಸದಸ್ಯ?
ಕಾಶ್ಮೀರದ ಖ್ಯಾತ ಹೋರಾಟಗಾರ ಅಲ್ ಇಸ್ಕಂದರ್ ಪ್ರಕಾರ, ಟೋನಿ ಅಶೈ, ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್‌ನ ಸದಸ್ಯ. ವಿದೇಶದಲ್ಲಿ ಓದಿದ ಆತನಿಗೆ ಹಣ ಸಹಕಾರ ಕೊಟ್ಟಿದ್ದು ಇದೇ ಜೆಕೆಎಲ್‌ಎಫ್. ಈಗಲೂ ಆತ ಜೆಕೆಎಲ್‌ಎಫ್‌ನ ಸದಸ್ಯನಾಗಿದ್ದು, ಸಂಘಟನೆಗೆ ಪ್ರಮುಖ ಹಣ ದೇಣಿಗೆದಾರ ಸಹ ಹೌದು ಎನ್ನುತ್ತಾರೆ ಅಲ್ ಇಸ್ಕಂದರ್.

ಇಮ್ರಾನ್ ಖಾನ್ ಗೆ ಅತ್ಯಾಪ್ತ ಟೋನಿ ಅಶೈ
ಪಾಕಿಸ್ತಾನದ ಜೊತೆಗೆ ತೀರಾ ಆಪ್ತ ನಂಟು ಹೊಂದಿದ್ದಾನೆ ಟೋನಿ ಅಶೈ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಆಪ್ತ ಸಹ ಹೌದು. ಬೃಹತ್ ವಿಶ್ವವಿದ್ಯಾಲಯ ವಿನ್ಯಾಸ ಮಾಡುವ ಹೊಣೆಯನ್ನು ಇಮ್ರಾನ್ ಖಾನ್ ವಹಿಸಿದ್ದು ಇದೇ ಕಾಶ್ಮೀರಿ-ಅಮೆರಿಕನ್ ಟೋನಿ ಅಶೈಗೆ. ಅದೀಗ ಅಂತಿಮ ಹಂತದಲ್ಲಿದೆ.

ಶಾರುಖ್ ಖಾನ್ ವಿದೇಶಿ ಮನೆಗಳ ವಿನ್ಯಾಸ ಈತನದ್ದೆ
ಶಾರುಖ್ ಖಾನ್ ಹಾಗೂ ಗೌರಿ ಖಾನ್ ಜೊತೆ ಆಪ್ತ ನಂಟು ಹೊಂದಿರುವ ಟೋನಿ ಅಶೈ, ಶಾರುಖ್ ಖಾನ್ ಅವರ ದುಬೈ ಹಾಗೂ ಅಮೆರಿಕದಲ್ಲಿನ ಮನೆಗಳು, ಅಪಾರ್ಟ್‌ಮೆಂಟ್‌ಗಳನ್ನು ವಿನ್ಯಾಸ ಮಾಡಿರುವುದು ಇದೇ ಅಶೈ. ಗೌರಿ ಖಾನ್ ಒಡೆತನದ ಆರ್ಕಿಟೆಕ್ಟ್ ಸಂಸ್ಥೆಯಲ್ಲಿ ಮುಖ್ಯ ಹುದ್ದೆಯನ್ನು ಅಶೈಗೆ ನೀಡಲಾಗಿದೆ. ಇದೇ ಈಗ ವಿವಾದಕ್ಕೆ ಕಾರಣವಾಗಿರುವುದು.ಐಎಸ

ತನ್ನ ಮೇಲಿನ ಆರೋಪಗಳಿಗೆ ಟೋನಿ ಅಶೈ ಪ್ರತಿಕ್ರಿಯೆ
ಐಎಸ್‌ಐ ಏಜೆಂಟ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಟೋನಿ ಅಶೈ, 'ಇದು ಭಾರತದ ಮಾಧ್ಯಮಗಳು ಹುಟ್ಟಿಸಿರುವ ಕಪೋಲ ಕಲ್ಪಿತ ಕತೆ. ಅದರಲ್ಲಿಯೂ ಪತ್ರಕರ್ತೆ ಆರ್ತಿ ಟಿಕೂ ಸಿಂಗ್ ಅನ್ನು ಕ್ಯಾಲಿಫೋರ್ನಿಯಾದ ಕೋರ್ಟ್‌ಗೆ ಎಳೆಯುತ್ತೇನೆ' ಎಂದು ಹೇಳಿದ್ದಾರೆ.


Click it and Unblock the Notifications











