For Quick Alerts
  ALLOW NOTIFICATIONS  
  For Daily Alerts

  ಸಾವು ಸಮೀಪಿಸುತ್ತಿದೆ ಎಂದು ತಿಳಿಸಿ ಕೊನೆಯುಸಿರೆಳೆದ ನಟಿಯ ಹಿನ್ನೆಲೆ ಗೊತ್ತೇ?

  |

  'ನಾನು ಮರಣಶಯ್ಯೆಯಲ್ಲಿದ್ದೇನೆ. ಈ ರೀತಿಯ ನರಳಾಟಗಳಿಲ್ಲದ ಮತ್ತೊಂದು ಜೀವನವನ್ನು ಬಯಸುತ್ತೇನೆ' ಎಂದು ಇನ್‌ಸ್ಟಾಗ್ರಾಂ ಸ್ಟೋರೀಸ್‌ನಲ್ಲಿ ಬರೆದುಕೊಂಡಿದ್ದ ಕೆಲವೇ ಗಂಟೆಗಳಲ್ಲಿ ನಟಿ ದಿವ್ಯಾ ಚೌಕ್ಸಿ ಕೊನೆಯುಸಿರೆಳೆದಿದ್ದಾರೆ.

  ಶಿವಣ್ಣನ ಅಭಿಮಾನಿಗಳು ನಂಗೆ ಏನ್ ಮಾಡ್ತಾರೋ ಅನ್ನೋ ಭಯ ಆಗಿತ್ತು | Vijay Raghavendra | Filmibeat Kannada

  ತಾವು ಸಾವಿನ ಸನಿಹ ಇರುವುದು ಅವರಿಗೆ ತಿಳಿದಿತ್ತು. ಕ್ಯಾನ್ಸರ್ ಎಂಬ ಮಹಾಮಾರಿ ಆಕೆಯ ಜೀವನವನ್ನು ಕಸಿಕೊಳ್ಳುವುದು ಖಾತರಿಯಾಗಿತ್ತು. ಆ ನೋವಿನ ನಡುವೆಯೂ ದಿವ್ಯಾ ಅಭಿಮಾನಿಗಳ ಜತೆ ಖುಷಿ ಹಂಚಿಕೊಳ್ಳುತ್ತಿದ್ದರು. ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಸಂಗತಿ ಈ ಹಿಂದೆಯೇ ಬಹಿರಂಗವಾಗಿದ್ದರೂ ಅವರು ಅದನ್ನು ಗೆದ್ದು ಬರುತ್ತಾರೆ ಎಂದೇ ಅನೇಕರು ಭಾವಿಸಿದ್ದರು. ಅದು ಸಾಧ್ಯವಾಗಲಿಲ್ಲ. ಆದರೆ ಅವರಿಗೆ ತಮ್ಮ ಕೊನೆಯ ದಿನ ಯಾವುದು ಎಂದು ಮೊದಲೇ ಗೊತ್ತಿತ್ತೇ? ಅವರ ಪೋಸ್ಟ್ ನೋಡಿದಾಗ ಹಾಗೆ ಅನಿಸದೆ ಇರದು.

  ಸಾಯುವ ಮುನ್ನಾ ಹೃದಯ ಹಿಂಡುವ ಸಂದೇಶ ನೀಡಿ ಹೋದ ನಟಿಸಾಯುವ ಮುನ್ನಾ ಹೃದಯ ಹಿಂಡುವ ಸಂದೇಶ ನೀಡಿ ಹೋದ ನಟಿ

  ಅನೇಕರಿಗೆ ದಿವ್ಯಾ ಚೌಕ್ಸಿ ಎಂಬ ನಟಿಯ ಬಗ್ಗೆ ಮಾಹಿತಿ ಇಲ್ಲ. ಅವರು ಯಾರು? ಹಿನ್ನೆಲೆ ಏನು ಎಂಬ ವಿವರ ಇಲ್ಲಿದೆ. ಮುಂದೆ ಓದಿ...

  ಸುಗಮ ಪಯಣಕ್ಕೆ ಪ್ರಾರ್ಥಿಸಿ

  ಸುಗಮ ಪಯಣಕ್ಕೆ ಪ್ರಾರ್ಥಿಸಿ

  ಜುಲೈ 12ರಂದು ನಿಧನರಾದ ದಿವ್ಯಾ, ಕಳೆದ 1.5 ವರ್ಷದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಸಾಯುವ ಕೆಲವೇ ಗಂಟೆಗಳ ಮೊದಲು ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು. ಮರಣಶಯ್ಯೆಯಲ್ಲಿರುವ ತಾವು ಇನ್ನಷ್ಟು ಗಟ್ಟಿಯಾಗಿದ್ದೇನೆ ಎನ್ನುತ್ತಲೇ ಅಭಿಮಾನಿಗಳಿಗೆ ಗುಡ್ ಬೈ ಹೇಳಿದ್ದರು. ಕ್ಯಾನ್ಸರ್ ತಮ್ಮನ್ನು ಸಾಯಿಸುತ್ತಿದೆ ಎಂದಿದ್ದ ಅವರು, ಸುಗಮವಾಗಿ ಕೊನೆಯ ಪಯಣ ಮುಗಿಸಲಿ ಎಂದು ಪ್ರಾರ್ಥಿಸಿ ಎಂಬುದಾಗಿ ಮನವಿ ಮಾಡಿದ್ದರು.

  ಬ್ರಿಟನ್‌ನಲ್ಲಿ ಉನ್ನತ ಅಧ್ಯಯನ

  ಬ್ರಿಟನ್‌ನಲ್ಲಿ ಉನ್ನತ ಅಧ್ಯಯನ

  ದಿವ್ಯಾ ಚೌಕ್ಸಿ ಮಧ್ಯಪ್ರದೇಶದ ಭೋಪಾಲ್‌ನವರು. ಲಾಯರ್‌ಗಳೇ ತುಂಬಿದ ಕುಟುಂಬದಿಂದ ಬಂದವರು. ತಂದೆ ಮೋಹನ್ ಚೌಕ್ಸಿ ಹಾಗೂ ಸಹೋದರಿ ಪಲ್ಲವಿ ಇಬ್ಬರೂ ಭೋಪಾಲ್‌ನಲ್ಲಿ ಹೆಸರಾಂತ ವಕೀಲರು. ಆರಂಭದ ಶಿಕ್ಷಣವನ್ನು ಹುಟ್ಟೂರಲ್ಲೇ ಪೂರೈಸಿದ ಅವರು, ದೆಹಲಿಯಲ್ಲಿ ಪದವಿ ಪಡೆದರು. ನಂತರ ಉನ್ನತ ಶಿಕ್ಷಣಕ್ಕಾಗಿ ಬ್ರಿಟನ್‌ಗೆ ತೆರಳಿದರು. ಡಾಕ್ಯುಮೆಂಟರಿ ಫಿಲ್ಮ್ ಮೇಕಿಂಗ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

  2016ರಲ್ಲಿ ಬಾಲಿವುಡ್ ಪ್ರವೇಶ

  2016ರಲ್ಲಿ ಬಾಲಿವುಡ್ ಪ್ರವೇಶ

  ಬ್ರಿಟನ್‌ನಿಂದ ಮರಳಿದ ನಂತರ ಅವರು ಮಾಡೆಲಿಂಗ್‌ಅನ್ನು ವೃತ್ತಿಯನ್ನಾಗಿ ಪರಿಗಣಿಸಿದರು. ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡರು. ಬಳಿಕ ಎಂಟಿವಿಯ ಎರಡು ಜನಪ್ರಿಯ ಕಾರ್ಯಕ್ರಮಗಳಾದ 'ಎಂಟಿವಿ ಮೇಕಿಂಗ್' ಮತ್ತು 'ಎಂಟಿವಿ ಟ್ರೂ ಲೈಫ್'ಗಳಲ್ಲಿ ಭಾಗವಹಿಸಿದ್ದರು. 2016ರಲ್ಲಿ 'ಹೈ ಅಪ್ನಾ ದಿಲ್ ಆವಾರಾ' ಚಿತ್ರದಲ್ಲಿ ಸಾಹಿಲ್ ಆನಂದ್ ಅವರೊಂದಿಗೆ ನಟಿಸುವ ಮೂಲಕ ಬಾಲಿವುಡ್ ಪ್ರವೇಶಿಸಿದರು.

  ಮೇಕಪ್ ಸಹಾಯಕನ ನಿಧನಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಂಬನಿಮೇಕಪ್ ಸಹಾಯಕನ ನಿಧನಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಂಬನಿ

  ನೃತ್ಯಪಟು, ಗಾಯಕಿಯೂ ಹೌದು

  ನೃತ್ಯಪಟು, ಗಾಯಕಿಯೂ ಹೌದು

  ಅನೇಕ ಸೌಂದರ್ಯ ಸ್ಪರ್ಧೆಗಳಲ್ಲಿ ಪಾಲ್ಗೊಂಡ ಅವರು ಮಿಸ್ ಇಂಡಿಯಾ ಯುಕೆ ಸ್ಪರ್ಧೆಯಲ್ಲಿ ಎರಡನೆಯ ರನ್ನರ್ ಅಪ್ ಆಗಿದ್ದರು. 2012ರಲ್ಲಿ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಕೂಡ ಭಾಗವಹಿಸಿದ್ದರು. ಸಾಲ್ಸಾ ಮತ್ತು ಕಥಕ್ ನೃತ್ಯ ಪ್ರಾಕಾರಗಳನ್ನು ಅವರು ಕಲಿತಿದ್ದರು. ಆದರೆ ಅವುಗಳನ್ನು ಪ್ರದರ್ಶಿಸುವ ಅವಕಾಶ ಸಿಗಲಿಲ್ಲ. ಗಾಯಕಿಯೂ ಆಗಿದ್ದ ದಿವ್ಯಾ, 2018ರಲ್ಲಿ 'ಪಟಿಯಾಲೆ ಡಿ ಕ್ವೀನ್' ಎಂಬ ಆಲ್ಬಮ್ ಹೊರತಂದಿದ್ದರು. ಮಹಿಳೆಯರನ್ನು ದುರ್ಬಲ ಲಿಂಗಿಗಳೆಂದು ಬಿಂಬಿಸುವ ಹನಿ ಸಿಂಗ್ ಅವರ ಸೆಕ್ಸಿಸ್ಟ್ ಹಾಡುಗಳಿಗೆ ತಮ್ಮ ಹಾಡುಗಳು ಉತ್ತರ ಎಂದಿದ್ದರು.

  ವಿಪರೀತ ಮಾತುಗಾತಿ

  ವಿಪರೀತ ಮಾತುಗಾತಿ

  ದಿವ್ಯಾ ಬಹಳ ಚಟುವಟಿಕೆ ಮತ್ತು ಲವಲವಿಕೆಯಿಂದ ಇರುತ್ತಿದ್ದವರು. ಆದರೆ ಕ್ಯಾನ್ಸರ್ ಅವರನ್ನು ಕಾಡತೊಡಗಿದ ಬಳಿಕ ಅವರು ಮಾನಸಿಕವಾಗಿಯೂ ಕುಗ್ಗತೊಡಗಿದ್ದರು. ಅವರಿಗೆ ಸರಿಯಾಗಿ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟು ವಾಚಾಳಿಯಾಗಿದ್ದವರಿಗೆ ಹೀಗಾದರೆ ತೀವ್ರ ನೋವಾಗುತ್ತದೆ. ಅವರೊಂದಿಗೆ ಏನೇ ಮಾತುಕತೆ ನಡೆಸಿದರೂ ಎದುರಿದ್ದವರಿಗೆ ಮಾತನಾಡಲು ಅವಕಾಶವೇ ನೀಡುತ್ತಿರಲಿಲ್ಲ. ಅಷ್ಟೇ ವೃತ್ತಿಗೆ ಬದ್ಧರಾಗಿರುತ್ತಿದ್ದರು ಎಂದು ಸಹ ನಟ ಸಾಹಿಲ್ ಆನಂದ್ ಹೇಳಿದ್ದಾರೆ.

  ಮತ್ತೆ ಮರುಕಳಿಸಿದ್ದ ಕ್ಯಾನ್ಸರ್

  ಮತ್ತೆ ಮರುಕಳಿಸಿದ್ದ ಕ್ಯಾನ್ಸರ್

  ಕಳೆದ ಒಂದೂವರೆ ವರ್ಷದಿಂದ ಮೇದೋಜ್ಜೀರಕ ಗ್ರಂಥಿ ಕ್ಯಾನ್ಸರ್‌ಗೆ ಒಳಗಾಗಿದ್ದರು. ತಮ್ಮನ್ನು ಆರೈಕೆ ಮಾಡಿಕೊಂಡಿದ್ದ ಅವರು ಅದರಿಂದ ಚೇತರಿಸಿಕೊಂಡಿದ್ದರು ಕೂಡ. ಆದರೆ ಕೆಲವು ತಿಂಗಳ ಹಿಂದೆ ಅವರ ಕ್ಯಾನ್ಸರ್ ಮರುಕಳಿಸಿತ್ತು. ಅತಿಯಾದ ವೇದನೆ ಪಡುತ್ತಿದ್ದ ಅವರಿಗೆ ನೋವು ಸಹಿಸಿಕೊಳ್ಳಲು ಆಗುತ್ತಿರಲಿಲ್ಲ. ಮುಂದಿನ ಜನ್ಮದಲ್ಲಿ ನೋವಿಲ್ಲದ ಜೀವನ ನೋಡಬೇಕು ಎಂದು ಅವರು ಹೇಳಿಕೊಂಡಿದ್ದರು. ಸಾಯುವಾಗ ಅವರ ವಯಸ್ಸು ಕೇವಲ 29.

  ನಟ ಸುಶೀಲ್ ಗೌಡ ಆತ್ಮಹತ್ಯೆಯ ನಿರ್ಧಾರಕ್ಕೆ ಕಾರಣವೇನು?ನಟ ಸುಶೀಲ್ ಗೌಡ ಆತ್ಮಹತ್ಯೆಯ ನಿರ್ಧಾರಕ್ಕೆ ಕಾರಣವೇನು?

  English summary
  Bollywood actress, model, singer Divya Chouksey was died on July 12 due to cancer. Here is some interesting things about her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X