ಸಾನಿಯಾ ಮಿರ್ಜಾ ಜೀವನ ಸಿನಿಮಾ ಆದ್ರೆ ನಾಯಕಿ ಇವರೇ ಆಗ್ಬೇಕಂತೆ

ಬಾಲಿವುಡ್‌ನಲ್ಲೀಗ ಬಯೋಪಿಕ್‌ಗಳದ್ದೇ ಅಬ್ಬರ. ಮಿಲ್ಕಾ ಸಿಂಗ್ ಜೀವನ ಆಧರಿಸಿದ ಬಾಗ್-ಮಿಲ್ಕಾ-ಬಾಗ್ ಸಿನಿಮಾ ಯಶಸ್ವಿಯಾಗಿದ್ದೇ ತಡ ಬಾಲಿವುಡ್‌ನಲ್ಲಿ ಸಾಲು-ಸಾಲು ಬಯೋಪಿಕ್‌ ಗಳು ಆರಂಭವಾಗಿವೆ.

ಅದರಲ್ಲೂ ಕ್ರೀಡಾ ತಾರೆಗಳ ಜೀವನಾಧಾರಿತ ಚಿತ್ರಗಳಿಗೆ ಬಾಲಿವುಡ್‌ನಲ್ಲಿ ಭಾರಿ ಬೇಡಿಕೆ ಬಂದಿದೆ. ಅಜರ್‌, ಮೇರಿ ಕೋಮ್, ಧೋನಿ, ಕಪಿಲ್ ದೇವ್ ಹೀಗೆ ಸಾಲ-ಸಾಲು ಕ್ರೀಡಾ ತಾರೆಗಳ ಸಿನಿಮಾಗಳು ತೆರೆಗೆ ಬಂದಿವೆ. ಕಪಿಲ್ ಜೀವನಾಧಾರಿತ ಸಿನಿಮಾ ಇನ್ನಷ್ಟೆ ಬಿಡುಗಡೆ ಆಗಬೇಕಿದೆ.

ಬ್ಯಾಡ್‌ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರ ಜೀವನ ಸಹ ಸಿನಿಮಾ ಆಗುವುದರಲ್ಲಿದೆ. ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಜೀವನ ಸಹ ಸಿನಿಮಾ ಆಗುವ ಗುಣವನ್ನು ಹೊಂದಿದೆ.

ಸಾನಿಯಾ ಮಿರ್ಜಾ ಎದುರಾದ ಪ್ರಶ್ನೆ

ಸಾನಿಯಾ ಮಿರ್ಜಾ ಎದುರಾದ ಪ್ರಶ್ನೆ

ಸಾನಿಯಾ ಮಿರ್ಜಾ ಅವರಿಗೆ ಇದೇ ಪ್ರಶ್ನೆ ಸಂದರ್ಶನವೊಂದರಲ್ಲಿ ಎದುರಾಯಿತು. 'ನಿಮ್ಮ ಜೀವನ ಸಿನಿಮಾ ಆದಲ್ಲಿ, ನಿಮ್ಮ ಪಾತ್ರವನ್ನು ಯಾರು ಮಾಡಬೇಕು? ಎಂದು ಸಂದರ್ಶಕ ಕೇಳಿದ.

ಗೆಳತಿಯೇ ತನ್ನ ಪಾತ್ರ ಮಾಡಿದರೆ ಒಳ್ಳೆಯದು

ಗೆಳತಿಯೇ ತನ್ನ ಪಾತ್ರ ಮಾಡಿದರೆ ಒಳ್ಳೆಯದು

ಇದಕ್ಕೆ ಉತ್ತರಿಸಿದ ಸಾನಿಯಾ ಮಿರ್ಜಾ, ನನ್ನ ಬಗೆಗಿನ ಸಿನಿಮಾದಲ್ಲಿ ನನ್ನ ಪಾತ್ರವನ್ನು ಗೆಳತಿ ಪರಿಣಿತಿ ಛೋಪ್ರಾ ಮಾಡಿದರ ಚಂದ ಎಂದರು. ನಾನು ಪರಿಣಿತಿ ಛೋಪ್ರಾ ದೊಡ್ಡ ಅಭಿಮಾನಿ, ಆಕೆಯ ಅದ್ಭುತ ನಟಿ ಎಂದರು ಸಾನಿಯಾ.

ಸಾನಿಯಾ ಹೇಳಿದರು ಮತ್ತೊಬ್ಬ ನಾಯಕಿ ಹೆಸರು

ಸಾನಿಯಾ ಹೇಳಿದರು ಮತ್ತೊಬ್ಬ ನಾಯಕಿ ಹೆಸರು

ಪರಿಣಿತಿ ಛೋಪ್ರಾ ಹೊರತಾಗಿ ದೀಪಿಕಾ ಪಡುಕೋಣೆ ನನ್ನ ಪಾತ್ರ ಮಾಡಿದರೂ ಚೆನ್ನಾಗಿರುತ್ತದೆ. ಆದರೆ ಆಕೆ ಈಗ ಬಹಳ ಬ್ಯುಸಿ ಆಕೆ ನಟಿಸುವುದಕ್ಕೆ ಒಪ್ಪಬೇಕಲ್ಲ ಎಂದು ನಕ್ಕರು ಸಾನಿಯಾ ಮಿರ್ಜಾ.

ಸಾನಿಯಾ ಮಿರ್ಜಾ ತಾಯಿ ಹೆಸರಿಸಿದ್ದು ಯಾರನ್ನು?

ಸಾನಿಯಾ ಮಿರ್ಜಾ ತಾಯಿ ಹೆಸರಿಸಿದ್ದು ಯಾರನ್ನು?

ಅದೇ ಕಾರ್ಯಕ್ರಮದಲ್ಲಿ ಹಾಜರಿದ್ದ ಸಾನಿಯಾ ಮಿರ್ಜಾ ತಾಯಿ ಬೇರೆಯದೇ ಉತ್ತರ ನೀಡಿದರು. ನನ್ನ ಮಗಳ ಜೀವನ ಸಿನಿಮಾ ಆದರೆ, ನನ್ನ ಮಗಳು ತನ್ನ ಪಾತ್ರವನ್ನು ತಾನೇ ನಿರ್ವಹಿಸಲಿ, ಆಕೆಯ ಮುಖದಲ್ಲಿ ನಾಯಕಿಗೆ ಇರಬೇಕಾದ ಕಳೆ ಇದೆ ಎಂದಿದ್ದಾರೆ.

More from Filmibeat

English summary
Who will act as Saniya Mirza in her biopic movie if it made in bollywood in future.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X