ಸಾರಾ ಅಲಿ ಖಾನ್ ಹೃದಯ ಕದ್ದ ಈ ಚೋರ ಯಾರು ? ಬಿಜೆಪಿ ಜೊತೆ ಈ ಹುಡುಗನಿಗೆ ಇರುವ ನಂಟೇನು..?
ಕೆಲವರು ಪ್ರೀತಿಯಲ್ಲಿ ಬಿದ್ದರೆ ಕೊನೆಯವರೆಗೆ ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಾರೆ. ತಮ್ಮ ಪ್ರಿಯಕರ/ಪ್ರಿಯತಮೆ ಅಪ್ರಾಮಾಣಿಕವಾದರೂ ಕೂಡ ತಾವು ಮಾತ್ರ ತಮ್ಮ ಪ್ರೀತಿಗೆ ಬದ್ಧರಾಗಿರುತ್ತಾರೆ. ಆದರೆ ಇನ್ನೂ ಕೆಲವರು ಪದೇ ಪದೇ ಪ್ರೀತಿಯಲ್ಲಿ ಬೀಳುತ್ತಾರೆ. ಇದಕ್ಕೆ ಸಾರಾ ಅಲಿ ಖಾನ್ ಸದ್ಯದ ಉದಾಹರಣೆ.
ಹೌದು, ಅಸಲಿಗೆ ಸಾರಾ ಅಲಿ ಖಾನ್ ಈ ಹಿಂದೆ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ ವೀರ್ ಪಹಾರಿಯಾ ಜೊತೆ ಪ್ರೇಮದ ಅಮಲನ್ನೇರಿಸಿಕೊಂಡಿದ್ದರು. ಆದರೆ, ಆ ನಂತರ ಅದೇನಾಯ್ತೋ ಗೊತ್ತಿಲ್ಲ. ವೀರ್ ಪಹಾರಿಯಾ ಮತ್ತು ಸಾರಾ ಅಲಿ ಖಾನ್ ನಡುವೆ ಬಿರುಕು ಕಾಣಿಸಿಕೊಂಡಿತು. ಸಾರಾ ಅಲಿ ಖಾನ್ ಬದಲು ವೀರ್ ಪಹಾರಿಯಾ ಪಕ್ಕ ಮಾನುಷಿ ಚಿಲ್ಲರ್ ಬಂದು ನಿಂತರು.ಮಾನುಷಿ ಚಿಲ್ಲರ್ ಜೊತೆ ವೀರ್ ಪಹಾರಿಯಾ ಪ್ರೀತಿಯಲ್ಲಿ ಬಿದ್ದರು.

ಈ ಕಾರಣಕ್ಕೆ ತಮ್ಮನ್ನು ಮರೆತು ಮಾನುಷಿ ಚಿಲ್ಲರ್ ಜೊತೆ ವೀರ್ ಪಹಾರಿಯಾ ನೆಮ್ಮದಿಯಿಂದ ಇರಬೇಕಾದರೆ ನಾನ್ಯಾಕೇ ನೆಮ್ಮದಿಯನ್ನು ಕೆಡಿಸಿಕೊಂಡು ಬದುಕಬೇಕು ಎನ್ನುವ ತೀರ್ಮಾನಕ್ಕೆ ಬಂದಂತೆ ಇರುವ ಸಾರಾ ಅಲಿ ಖಾನ್ ಸದ್ಯ ಅರ್ಜುನ್ ಬಾಜ್ವಾ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಇಂತಹದ್ದೊಂದು ಅನುಮಾನ ಸದ್ಯಕ್ಕೆ ಬಾಲಿವುಡ್‌ನ ಚಿತ್ರ ಪ್ರಿಯರಿಗೆ ಕಾಡುತ್ತಿದೆ. ಯಾಕೆಂದರೆ .. ಇಬ್ಬರು ಒಂದೇ ಸ್ಥಳದಿಂದ ಪ್ರತ್ಯೇಕವಾಗಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಹೌದು, ಕೆಲ ದಿನಗಳ ಹಿಂದೆ ಕೇದಾರನಾಥಕ್ಕೆ ಜೊತೆಯಲ್ಲಿ ತೆರಳಿದ್ದ ಸಾರಾ ಅಲಿ ಖಾನ್ ಮತ್ತು ಅರ್ಜುನ್ ಬಾಜ್ವಾ ಸದ್ಯಕ್ಕೆ ರಾಜಸ್ಥಾನದಲ್ಲಿದ್ದಾರೆ. ಸಾರಾ ರಮಣೀಯ ಸೌಂದರ್ಯದ ಸವಿ ಅನುಭವಿಸುವ ಭಾವ ಚಿತ್ರ ಹಂಚಿಕೊಂಡಿದ್ದಾರೆ. ಹೋಟೆಲ್‌ನ ಸಿಬ್ಬಂದಿಯ ಜೊತೆ ಫೋಟೊ ಕ್ಲಿಕಿಸಿಕೊಂಡಿದ್ದಾರೆ. ಡೆಸರ್ಟ್ ಸಫಾರಿಯನ್ನು ಕೂಡ ಎಂಜಾಯ್ ಮಾಡಿದ್ದಾರೆ. ಅದೇ ಮತ್ತೊಂದು ಕಡೆ ಅರ್ಜುನ್ ಬಾಜ್ವಾ ಜಿಮ್‌ನಲ್ಲಿ ಕಸರತ್ತು ಮಾಡುವ ಫೋಟೊ ಹಂಚಿಕೊಂಡಿದ್ಧಾರೆ.

ನಿಜಾ, ಇಬ್ಬರು ಜೊತೆಯಲ್ಲಿರುವ ಫೋಟೊ ಹಂಚಿಕೊಂಡಿಲ್ಲ. ಆದರೆ ಇಬ್ಬರ ಫೋಟೊಗಳನ್ನು ನೋಡಿದ ಅನೇಕರು ಇಬ್ಬರು ಒಂದೇ ಕಡೆ ಇದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇಬ್ಬರ ನಡುವೆ ಪ್ರೇಮಾಂಕುರವಾಗಿರುವುದು ನಿಜಾ ಎನ್ನುತ್ತಿದ್ದಾರೆ. ಹಾಗೊಂದು ವೇಳೆ ಕೇಳಿ ಬರುತ್ತಿರುವ ಈ ಮಾತು ನಿಜಾ ಆಗಿದ್ದೇ ಆದಲ್ಲಿ ಸಾರಾ ಅಲಿ ಖಾನ್ ಬಿಜೆಪಿಯ ನಾಯಕನ ಮನೆಗೆ ಸೊಸೆಯಾಗಿ ಹೋಗಲಿದ್ದಾರೆ. ಯಾಕೆಂದರೆ.. ಸಾರಾ ಅಲಿ ಖಾನ್ ಜೊತೆ ಕೇಳಿ ಬರುತ್ತಿರುವ ಅರ್ಜುನ್ ಬಾಜ್ವಾ ಬೇರೆ ಯಾರು ಇಲ್ಲ ಬದಲಿಗೆ ಪಂಜಾಬ್‌ನ ಭಾರತೀಯ ಜನತಾ ಪಕ್ಷದ ಉಪಾಧ್ಯಕ್ಷರಾಗಿರುವ ಫತೇ ಜಂಗ್ ಸಿಂಗ್ ಬಾಜ್ವಾ ಅವರ ಮಗ. ಕೋಟಿ ಮೌಲ್ಯದ ಆಸ್ತಿಯ ಒಡೆಯ.
ಇನ್ನುಳಿದಂತೆ ಅರ್ಜುನ್ ಬಾಜ್ವಾ ಈ ಹಿಂದೆ ಮಾಡೆಲ್ ಆಗಿ ಹೆಸರು ಮಾಡಿದವರು. ಹಲವಾರು ಡಿಸೈನರ್‌ಗಳಿಗೆ ರ್ಯಾಂಪ್ ವಾಕ್ ಮಾಡಿದ್ದಾರೆ. ಇನ್ನೂ ಅಕ್ಷಯ್ ಕುಮಾರ್ ಅಭಿನಯದ ಸಿಂಗ್ ಇಸ್ ಬ್ಲಿಂಗ್ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಕೂಡ ಇವರ ಬೆನ್ನಿಗೆ ಇದೆ. ಇಷ್ಟೇ ಅಲ್ಲ ಎಂಎಂಎ ಫೈಟರ್ ಕೂಡ ಹೌದು ಇವರು.
ಒಟ್ನಲ್ಲಿ ಸದ್ಯಕ್ಕೆ ಸಾರಾ ಅಲಿ ಖಾನ್ ಅವರ ಹೆಸರು ಅರ್ಜುನ್ ಬಾಜ್ವಾ ಜೊತೆ ಥಳುಕು ಹಾಕಿಕೊಂಡಿದೆ. ಇಬ್ಬರ ನಡುವೆ ಪ್ರೇಮಾಂಕುರವಾಗಿದೆ ಎನ್ನುವ ಸುದ್ದಿ ಕೂಡ ಕೇಳಿ ಬರುತ್ತಿದೆ. ಅರ್ಜುನ್ ಪ್ರತಾಪ್ ಬಾಜ್ವಾ ಜೊತೆ ಮದುವೆಯಾಗುವ ಮೂಲಕ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಪಂಜಾಬ್‌ನ ಬಿಜೆಪಿಯ ಉಪಾಧ್ಯಕ್ಷರಾಗಿರುವ ಫತೇ ಜಂಗ್ ಸಿಂಗ್ ಬಾಜ್ವಾ ಅವರ ಮನೆ ಬೆಳಗುತ್ತಾರಾ ಅನ್ನುವುದನ್ನು ಕಾದು ನೋಡಬೇಕಿದೆ


Click it and Unblock the Notifications










