For Quick Alerts
  ALLOW NOTIFICATIONS  
  For Daily Alerts

  ಅಮೀರ್ ಖಾನ್ 'ವಿಕ್ರಂ ವೇದ' ರೀಮೇಕ್ ರಿಜೆಕ್ಟ್ ಮಾಡಿದ್ದು ಇದೇ ಕಾರಣಕ್ಕಾ?

  |

  ತಮಿಳು ಸೂಪರ್ ಹಿಟ್ ಚಿತ್ರ ವೀಕ್ರಂವೇದ ಬಾಲಿವುಡ್‌ಗೆ ರೀಮೇಕ್ ಆಗ್ತಿದೆ. ಹಿಂದಿಯಲ್ಲಿ ಹೃತಿಕ್ ರೋಷನ್ ಮತ್ತು ಸೈಫ್ ಅಲಿ ಖಾನ್ ನಟಿಸುತ್ತಿದ್ದಾರೆ. 2021ರಲ್ಲಿ ಚಿತ್ರೀಕರಣ ಶುರುವಾಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.

  ಇದಕ್ಕೂ ಮುಂಚೆ ವಿಕ್ರಂ ವೇದ ಚಿತ್ರದ ರೀಮೇಕ್‌ನಲ್ಲಿ ಅಮೀರ್ ಖಾನ್ ನಟಿಸಬೇಕಿತ್ತು. ಚಿತ್ರದ ಸ್ಕ್ರಿಪ್ಟ್ ಕೇಳಿ ಅಮೀರ್ ಖಾನ್ ಒಪ್ಪಿಗೆ ಸಹ ಸೂಚಿಸಿದ್ದರು. ಇನ್ನೇನೂ ಅಧಿಕೃತವಾಗಿ ಘೋಷಣೆ ಮಾಡುವ ಸಮಯದಲ್ಲಿ ಇದ್ದಕ್ಕಿದ್ದಂತೆ ಪ್ರಾಜೆಕ್ಟ್‌ನಿಂದ ಹಿಂದೆ ಸರಿದಿದ್ದರು.

  ವಿಕ್ರಂವೇದ ಹಿಂದಿ ರೀಮೇಕ್: ಹೃತಿಕ್ ರೋಷನ್ ಮತ್ತು ಸೈಫ್ ಅಲಿ ಖಾನ್ ಪಕ್ಕಾವಿಕ್ರಂವೇದ ಹಿಂದಿ ರೀಮೇಕ್: ಹೃತಿಕ್ ರೋಷನ್ ಮತ್ತು ಸೈಫ್ ಅಲಿ ಖಾನ್ ಪಕ್ಕಾ

  ವಿಕ್ರಂ ವೇದ ರೀಮೇಕ್‌ನಿಂದ ದಿಢೀರ್ ಅಂತ ಹಿಂದೆ ಸರಿಯಲು ಕಾರಣ ನೀಡದ ಅಮೀರ್ ಖಾನ್ ಸುಮ್ಮನಾದರು. ಆದ್ರೆ, ಅಮೀರ್ ಖಾನ್ ಅವರ ಆಪ್ತ ಮೂಲಗಳು ಚಿತ್ರದ ಸ್ಕ್ರಿಪ್ಟ್ ಇಷ್ಟ ಆಗಿಲ್ಲ ಅಂತ ಕಾರಣ ನೀಡಿದರು. ವಾಸ್ತವ ಏನಪ್ಪ ಅಂದ್ರೆ, ವಿಕ್ರಂ ವೇದ ಸ್ಕ್ರಿಪ್ಟ್ ಕೇಳಿ ಅಮೀರ್ ತುಂಬಾ ಖುಷಿಯಾಗಿದ್ದರು ಎಂದು ಹೇಳಲಾಗಿದೆ. ಹಾಗಾದ್ರೆ, ವಿಕ್ರಂವೇದ ಪ್ರಾಜೆಕ್ಟ್‌ನಿಂದ ಅಮೀರ್ ಖಾನ್ ಹಿಂದೆ ಸರಿಯಲು ಕಾರಣವೇನು? ಮುಂದೆ ಓದಿ...

  ವಿಜಯ್ ಸೇತುಪತಿ ಪಾತ್ರ ನಿರ್ವಹಿಸಲು ಹಿಂದೇಟು

  ವಿಜಯ್ ಸೇತುಪತಿ ಪಾತ್ರ ನಿರ್ವಹಿಸಲು ಹಿಂದೇಟು

  ಎಲ್ಲ ಅಂದುಕೊಂಡಂತೆ ಆಗಿದ್ದರೆ ವಿಕ್ರಂವೇದ ಚಿತ್ರದಲ್ಲಿ ವಿಜಯ್ ಸೇತುಪತಿ ಪಾತ್ರವನ್ನು ಅಮೀರ್ ಖಾನ್‌ ಮಾಡಬೇಕಿತ್ತು. ಬಾಲಿವುಡ್ ಹಂಗಾಮ ವರದಿ ಮಾಡಿರುವಂತೆ 'ಲಾಲ್ ಸಿಂಗ್ ಚಡ್ಡಾ' ಚಿತ್ರದಿಂದ ವಿಜಯ್ ಸೇತುಪತಿ ಹೊರಗೆ ಬಂದ ಮೇಲೆ ಅಮೀರ್ ಖಾನ್ ವಿಕ್ರಂವೇದ ಪ್ರಾಜೆಕ್ಟ್‌ನಿಂದ ಹಿಂದೆ ಸರಿದಿದ್ದಾರೆ.

  ವಿಜಯ್ ಸೇತಿಪತಿ ವಿರುದ್ಧ ಅಮೀರ್ ಬೇಸರ

  ವಿಜಯ್ ಸೇತಿಪತಿ ವಿರುದ್ಧ ಅಮೀರ್ ಬೇಸರ

  'ಲಾಲ್ ಸಿಂಗ್ ಚಡ್ಡಾ' ಚಿತ್ರಕ್ಕೆ ಸಂಬಂಧಿಸಿದಂತೆ ಅಮೀರ್ ಖಾನ್ ಮತ್ತು ವಿಜಯ್ ಸೇತುಪತಿ ನಡುವೆ ಮನಸ್ತಾಪವಿದ್ದು, ಇದು ಈ ಬೆಳವಣಿಗೆಗೆ ಕಾರಣವಾಗಿದೆ ಎನ್ನಲಾಗಿದೆ. ವಿಜಯ್ ಸೇತುಪತಿ ತಮ್ಮ ತೂಕವನ್ನು ಹೆಚ್ಚಿಸಿಕೊಂಡಿದ್ದರು. ಅದು ಲಾಲ್‌ಸಿಂಗ್ ಚಡ್ಡಾ ಪಾತ್ರಕ್ಕೆ ವಿರುದ್ಧವಾಗಿತ್ತು. ಇದರಿಂದ ಬೇಸರ ಮಾಡಿಕೊಂಡಿರುವ ಅಮೀರ್ ಖಾನ್, ವಿಜಯ್ ಸೇತುಪತಿ ಅವರ ಪಾತ್ರವನ್ನು ಬದಲಿಸಲು ನಿರ್ಧರಿಸಿದರು ಎಂದು ವರದಿಯಾಗಿದೆ.

  ಅಮೀರ್ ಖಾನ್ ಸಿನಿಮಾದಲ್ಲಿ ನಟಿಸುವ ಅವಕಾಶ ಕಳೆದುಕೊಂಡ ವಿಜಯ್ ಸೇತುಪತಿಅಮೀರ್ ಖಾನ್ ಸಿನಿಮಾದಲ್ಲಿ ನಟಿಸುವ ಅವಕಾಶ ಕಳೆದುಕೊಂಡ ವಿಜಯ್ ಸೇತುಪತಿ

  ಅಮೀರ್ ಬದಲು ಹೃತಿಕ್

  ಅಮೀರ್ ಬದಲು ಹೃತಿಕ್

  ಅಮೀರ್ ಖಾನ್ ವಿಕ್ರಂವೇದ ಚಿತ್ರದಿಂದ ಹಿಂದೆ ಸರಿದ ಬಳಿಕ ಹೃತಿಕ್ ರೋಷನ್ ಅವರನ್ನು ಸಂಪರ್ಕಿಸಲಾಯಿತು. ಸ್ಕ್ರಿಪ್ಟ್ ಕೇಳಿದ ಹೃತಿಕ್ ಕೂಡಲೇ ಚಿತ್ರಕ್ಕೆ ಓಕೆ ನೀಡಿದ್ದಾರೆ. ಅದಾದ ಮೇಲೆಯೇ ವಿಕ್ರಂವೇದ ಹಿಂದಿ ರೀಮೇಕ್‌ನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.

  ಮೊದಲ ಆಯ್ಕೆ ಹೃತಿಕ್ ಆಗಿದ್ದರು!

  ಮೊದಲ ಆಯ್ಕೆ ಹೃತಿಕ್ ಆಗಿದ್ದರು!

  ಅಂದ್ಹಾಗೆ, ಅಮೀರ್ ಖಾನ್ ಅವರನ್ನು ಈ ಪಾತ್ರಕ್ಕೆ ಅಪ್ರೋಚ್ ಮಾಡುವ ಮೊದಲೇ ಹೃತಿಕ್ ಅವರನ್ನು ಪರಿಗಣಿಸಿದ್ದರು. ಆದರೆ, ಹೃತಿಕ್ ಆಗ ಬೇರೆ ಪ್ರಾಜೆಕ್ಟ್ ಬ್ಯುಸಿಯಿದ್ದ ಕಾರಣ ಡೇಟ್ ಹೊಂದಾಣಿಕೆಯಾಗಲಿಲ್ಲ. ಈಗ ಅದೃಷ್ಟ ಮತ್ತೆ ಹೃತಿಕ್ ಬಾಗಿಲಿಗೆ ಹೋಗಿದೆ. ಸದ್ಯದ ಮಾಹಿತಿ ಪ್ರಕಾರ 2021ರ ದ್ವಿತೀಯಾರ್ಧದಲ್ಲಿ ಚಿತ್ರೀಕರಣ ಆರಂಭವಾಗಬಹುದು.

  English summary
  Why Bollywood superstar aamir khan was rejects Vikram Vedha Remake. what is the real reason behind this issue.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X