ಬಿಂದಾಸ್ ಬೆಡಗಿ ಆಯೇಶಾ ಟಾಕಿಯಾ ಮುಖಕ್ಕೆ ಏನಾಯ್ತು? ಬೇಸರದಿಂದ ಆಕೆ ಮಾಡಿದ್ದೇನು?

ಬಾಲಿವುಡ್ ಬೆಡಗಿ ಆಯೇಷಾ ಟಕಿಯಗೆ ಒಂದ್ಕಾಲದಲ್ಲಿ ಭಾರೀ ಕ್ರೇಜ್ ಇತ್ತು. ತಮ್ಮ ಮಾದಕ ಚೆಲುವುನಿಂದ ಹಿಂದಿ ಸಿನಿಮಾಗಳಲ್ಲಿ ಮಿಂಚಿದ ಆಕೆ ಒಂದು ತೆಲುಗು ಚಿತ್ರದಲ್ಲೂ ನಟಿಸಿದ್ದರು. ದಿಲ್ ಮಾಂಗೇ ಮೋರ್, ಶಾದಿ ನಂಬರ್ 1, ಸಲಾಮ್ ಎ ಇಷ್ಕ್, ಕ್ಯಾಶ್ ಹೀಗೆ ಹಲವು ಸಿನಿಮಾಗಳಲ್ಲಿ ಆಯೇಷಾ ಮಿಂಚಿದ್ದರು.

ಫರ್ಹಾನ್ ಅಜ್ಮಿ ಎಂಬುವವರ ಕೈ ಹಿಡಿದ ಬಳಿಕ ಆಯೇಷಾ ಟಕೀಯ ಚಿತ್ರರಂಗದಿಂದ ದೂರಾಗಿಬಿಟ್ಟರು. ಮಗು, ಫ್ಯಾಮಿಲಿ ಅಂತ ಫುಲ್ ಬ್ಯುಸಿ ಆಗಿಬಿಟ್ಟಿದ್ದರು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದ ಆಕೆ ಆಗಾಗ್ಗೆ ಪೋಸ್ಟ್ ಮಾಡುತ್ತಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊ, ವೀಡಿಯೋ ಹಾಕುತ್ತಿದ್ದರು.

Why Actress Ayesha Takia Deactivate Her Instagram Account

ಇತ್ತೀಚೆಗೆ ಆಯೇಷಾ ಹಾಕಿದ್ದ ಫೋಟೊವೊಂದು ಸಖತ್ ವೈರಲ್ ಆಗ್ತಿದೆ. ಅದರಲ್ಲಿ ಆಕೆಯ ಲುಕ್ ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಹೇಗಿದ್ದ ಆಯೇಷಾ ಹೇಗಾಗಿಬಿಟ್ಟರು? ಎಂದು ಹುಬ್ಬೇರಿಸಿದ್ದಾರೆ. ಕೆಲವರು ನೆಗೆಟಿವ್ ಆಗಿ ಟ್ರೋಲ್ ಮಾಡುತ್ತಿದ್ದಾರೆ. ಇದರಿಂದ ಬೇಸತ್ತ ಆಯೇಷಾ ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್ ಡಿಆಕ್ಟಿವೇಟ್ ಮಾಡಿಬಿಟ್ಟಿದ್ದಾರೆ.

ಆಯೇಷಾ ಪೋಸ್ಟ್ ಮಾಡಿದ್ದ ಫೋಟೊದಲ್ಲಿ ಆಕೆ ಗುರುತು ಸಿಗದಷ್ಟು ಬದಲಾಗಿಬಿಟ್ಟಿದ್ದಾರೆ. ಇದನ್ನು ನೋಡಿ ಕೆಲವರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಆಯೇಷಾ ಹೀಗಾಗಿಬಿಟ್ಟಿದ್ದಾರೆ ಎಂದು ಕಾಮೆಂಟ್ ಮಾಡಲು ಆರಂಭಿಸಿದ್ದರು. ಸಾಕಷ್ಟು ಜನ ಇದು ಆಯೇಷಾ ಎಂದು ಗೊತ್ತೇ ಆಗುತ್ತಿಲ್ಲ ಎಂದು ಬರೆಯುತ್ತಿದ್ದರು. ಆಕೆ ಏನಾಯ್ತು ಅಂತ ಟ್ರೋಲ್ ಮಾಡಿದ್ದರು. ಅದೇ ಕಾರಣಕ್ಕೆ ಆಕೆ ತನ್ನ ಇನ್‌ಸ್ಟಾಗ್ರಾಮ್ ಖಾತೆಯನ್ನು ಡೀ-ಆಕ್ಟಿವೇಟ್ ಮಾಡಿದ್ದಾರೆ ಎನ್ನಲಾಗ್ತಿದೆ.

6 ತಿಂಗಳ ಹಿಂದೆ ಕೂಡ ಆಯೇಷಾ ಇದೇ ರೀತಿಯ ಟ್ರೋಲ್ ಎದುರಿಸಿದ್ದರು. ತಮ್ಮ ಲುಕ್ಸ್ ಬಗ್ಗೆ ಮಾತನಾಡುವವರಿಗೆ ತಿರುಗೇಟು ನೀಡಿದ್ದರು. ಮುಂಬೈ ವಿಮಾನ ನಿಲ್ದಾಣದಲ್ಲಿ ಫೋಟೊಗ್ರಫರ್ಸ್ ಫೋಟೊ ಕ್ಲಿಕ್ಕಿಸಲು ಮುಗಿಬಿದ್ದ ವಿಚಾರದ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು.

"ಈ ವಿಚಾರವನ್ನು ಹೇಳಬೇಕು. ಎರಡು ದಿನಗಳ ಹಿಂದೆ ನನ್ನ ಸಹೋದರಿ ಆಸ್ಪತ್ರೆ ಸೇರಿದ್ದಳು. ಅವಳನ್ನು ನೋಡಲು ಬಂದೆ. ಇದೆಲ್ಲದರ ನಡುವೆ ವಿಮಾನ ನಿಲ್ದಾಣದಲ್ಲಿ ಫೋಟೊಗ್ರಫರ್ಸ್ ನನ್ನ ಫೋಟೊ ಕ್ಲಿಕ್ಕಿಸುತ್ತಿದ್ದರು. ನಿಲ್ಲಿ ನಿಲ್ಲಿ ಎಂದರು. ನನ್ನ ಫೋಟೊ ಕ್ಲಿಕ್ಕಿಸುವುದು ಬಿಟ್ಟು ಈ ದೇಶದಲ್ಲಿ ಬೇರೆ ಸಮಸ್ಯೆಗಳು ಇಲ್ಲವೇ ಎನಿಸಿತು" ಎಂದು ಬರೆದುಕೊಂಡಿದ್ದರು.

ಮಾತು ಮುಂದುವರೆಸಿದ ಆಯೇಷಾ "ನಾನು ಹೇಗೆ ಕಾಣಬೇಕು, ಕಾಣಬಾರದು ಜನ ಭಾವಿಸುತ್ತಾರೆ ಎನ್ನುವುದು ನಿಜಕ್ಕೂ ಹಾಸ್ಯಾಸ್ಪದ. ಜನ ಹೇಳುವಂತೆ ನನಗೆ ಮತ್ತೆ ಸಿನಿಮಾಗಳಲ್ಲಿ ನಟಿಸುವ ಯಾವುದೇ ಆಸಕ್ತಿ ಇಲ್ಲ. ನನ್ನ ಸಂತೋಷದಿಂದ ಜೀವನ ಸಾಗಿಸುತ್ತಿದ್ದೇನೆ. ನನಗೆ ಲೈಮ್‌ಲೈಟ್ ಬೇಡ, ಫೇಮ್ ಬೇಡ, ಸಿನಿಮಾಗಳಲ್ಲಿ ನಟಿಸುವುದು ಇಷ್ಟವಿಲ್ಲ. ಹಾಗಾಗಿ ಸುಮ್ಮನಿರಿ. ನನ್ನ ಬಗ್ಗೆ ಹೆಚ್ಚು ಯೋಚಿಸಬೇಡಿ"

"ಒಂದು ಹುಡುಗಿ ಟೀನೇಜ್‌ನಲ್ಲಿ ಕಂಡಂತೆಯೇ 15 ವರ್ಷಗಳ ಬಳಿಕ ಕೂಡ ಕಾಣಬೇಕು ಎಂದುಕೊಳ್ಳಬೇಡಿ. ಇದೆಲ್ಲ ಎಷ್ಟು ಅವಾಸ್ತವಿಕ ಮತ್ತು ಹಾಸ್ಯಾಸ್ಪದವಾಗಿದೆ. ಚೆನ್ನಾಗಿರುವ ಹುಡುಗಿಯನ್ನು ನೋಡುವುದು ಬಿಟ್ಟು ಅದೇ ಸಮಯವನ್ನು ಬೇರೆ ಯಾವುದಕ್ಕಾದರೂ ಬಳಸಿ. ನನಗೆ ಒಳ್ಳೆ ಜೀವನ ಸಿಕ್ಕಿದೆ. ನಿಮ್ಮ ಅಭಿಪ್ರಾಯ ಬೇಕಿಲ್ಲ. ಯಾರಿಗೆ ಬೇಕೋ ಅವರಿಗೆ ಹೇಳಿ"

"ನೀವು ಹೇಳಿದ್ದನೆಲ್ಲಾ ನಿಮಗೆ ವಾಪಸ್ ಕೊಡುತ್ತಿದ್ದೇನೆ. ಚೆನ್ನಾಗಿರಿ, ಒಳ್ಳೆಯ ಕೆಲಸ ಮಾಡಿ, ಚೆನ್ನಾಗಿ ತಿನ್ನಿ, ಎಲ್ಲರೊಟ್ಟಿಗೆ ಸಂತೋಷದಿಂದ ಇರಿ. ನೀವು ಬಯಸಿದಂತೆ ಸುಂದರವಾಗಿ ಖುಷಿಯಾಗಿ ಮಹಿಳೆಯರು ಇರಬೇಕು ಎಂದು ಬಯಸುವುದು ಬಿಡಿ" ಎಂದು ಆಯೇಷಾ ಬರೆದುಕೊಂಡಿದ್ದರು.

ಸದ್ಯ ಈಗ ಇನ್‌ಸ್ಟಾಗ್ರಾಂ ಅಕೌಂಟ್ ಯಾಕೆ ಡೀ-ಆಕ್ಟಿವೇಟ್ ಮಾಡಿದ್ದು ಎನ್ನುವ ಬಗ್ಗೆ ಆಯೇಷಾ ಪ್ರತಿಕ್ರಿಯಿಸಿಲ್ಲ. ಆದರೆ ಟ್ರೋಲ್‌ಗಳಿಗೆ ಬೇಸತ್ತು ಆಕೆ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಬಾಲಿವುಡ್ ಮಾಧ್ಯಮಗಳು ವರದಿ ಮಾಡಿವೆ.

More from Filmibeat

English summary
Ayesha Takia deactivates her Instagram account amid plastic surgery rumours;
Read more about: bollywood actress ayesha takia
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X