ಬಯಸಿದ್ದು ಬಾಲಿವುಡ್ ಸಿನಿಮಾ, ಗೆದ್ದಿದ್ದು ತೆಲುಗು ಸಿನಿಮಾ; ಈ ನಟಿಯ ಭವಿಷ್ಯವೇನು?

By ಫಿಲ್ಮಿಬೀಟ್ ಡೆಸ್ಕ್

ಬಾಲಿವುಡ್ ನಟಿ ಮೃಣಾಲ್ ಠಾಕೂರ್‌ಗೆ ದಕ್ಷಿಣ ಭಾರತದಲ್ಲಿ ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ. ತೆಲುಗು ಎರಡೇ ಎರಡು ಸಿನಿಮಾಗಳಿಂದ ಬಾಲಿವುಡ್‌ನಲ್ಲೂ ಸಿಗದಷ್ಟು ಜನಪ್ರಿಯತೆ ಸಿಕ್ಕಿದೆ. ಆದರೆ, ಬಾಲಿವುಡ್‌ನಲ್ಲೇ ಸಿನಿಮಾಗಳ ಮೇಲೆ ಹೆಚ್ಚು ಆಸಕ್ತಿ ಹೊಂದಿರುವ ಈ ನಟಿಗೆ ಅಲ್ಲಿನ ಫಿಲ್ಮ್‌ಮೇಕರ್‌ಗಳೇ ಆಫರ್ ಕೊಡುತ್ತಿಲ್ಲ.

ದುಲ್ಖರ್ ಸಲ್ಮಾನ್ ಜೊತೆ ನಟಿಸಿದ 'ಸೀತಾರಾಮಂ' ಸಿನಿಮಾ ತೆಲುಗಿನಲ್ಲಿ ಬ್ಲಾಕ್‌ ಬಸ್ಟರ್ ಹಿಟ್ ಆಯ್ತು. ಇಲ್ಲಿಂದ ದಕ್ಷಿಣ ಭಾರತದಲ್ಲಿ ಮೃಣಾಲ್ ಠಾಕೂರ್‌ಗೆ ಅವರದ್ದೇ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. 'ಸೀತಾರಾಮಂ' ಬಳಿಕ ' ಹಾಯ್ ನಾನ್ನ' ಸಿನಿಮಾ ಕೂಡ ಟಾಲಿವುಡ್‌ನ ಬ್ಲಾಕ್‌ ಬಸ್ಟರ್ ಲಿಸ್ಟ್ ಸೇರಿಕೊಂಡಿತ್ತು. ಹೀಗಾಗಿ ಟಾಲಿವುಡ್‌ನಲ್ಲಿ ಈಕೆಯ ದೊಡ್ಡ ಫ್ಯಾನ್ಸ್‌ ಬೇಸ್ ಇದೆ.

Why actress Mrunal Thakur craze in south is not seen in Bollywood movies

ಟಾಲಿವುಡ್‌ನಲ್ಲಿ ಬಾಲಿವುಡ್ ನಾಯಕಿಯರಿಗೆ ಮೊದಲಿನಿಂದಲೂ ದೊಡ್ಡ ಪ್ಲಾಟ್‌ಫಾರ್ಮ್ ಸಿಕ್ಕಿದೆ. ತಮನ್ನಾ, ರಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್‌ವಾಲ್ ಸೇರಿದಂತೆ ಉತ್ತರ ಭಾರತದಿಂದ ಬಂದ ನಟಿಯರು ತೆಲುಗು ಚಿತ್ರರಂಗದಲ್ಲಿ ಸ್ಟಾರ್ ಪಟ್ಟಕ್ಕೆ ಏರಿದ್ದಾರೆ. ಇಲ್ಲಿ ಹೆಸರು ಗಿಟ್ಟಿಸಿಕೊಂಡು ಬಳಿಕ ಬಾಲಿವುಡ್‌ ಕಡೆ ಮುಖ ಮಾಡಿದ್ದರು.

ಈಗ ಬಾಲಿವುಡ್‌ನ ಮತ್ತೊಬ್ಬ ನಟಿ ಮೃಣಾಲ್ ಠಾಕೂರ್ ಟಾಲಿವುಡ್‌ನ ಫೇವರಿಟ್ ನಟಿಯಾಗಿದ್ದಾರೆ. ಸದ್ಯ ವಿಜಯ್ ದೇವರಕೊಂಡ ಜೊತೆ ಮೃಣಾಲ್ ಠಾಕೂರ್ 'ಫ್ಯಾಮಿಲಿ ಸ್ಟಾರ್' ಸಿನಿಮಾದಲ್ಲಿ ನಟಿಸಿದ್ದಾರೆ. ಇಬ್ಬರ ಕಾಂಬಿನೇಷನ್‌ ಈಗಾಗಲೇ ಟಾಕ್‌ ಆಫ್‌ ದಿ ಟೌನ್ ಆಗಿದೆ. ಈ ಜೋಡಿಯ ತೆರೆಮೇಲಿನ ರೊಮ್ಯಾಂಟಿಕ್ ಜರ್ನಿಯನ್ನು ನೋಡುವುದಕ್ಕೆ ತೆಲುಗು ಮಂದಿ ತುದಿಗಾಲಲ್ಲಿ ನಿಂತಿದ್ದಾರೆ.

Why actress Mrunal Thakur craze in south is not seen in Bollywood movies

ಇದೇ ಸಂದರ್ಭದಲ್ಲಿ ಮೃಣಾಲ್ ಠಾಕೂರ್ ಸಿನಿಮಾ ಜರ್ನಿ ಬಗ್ಗೆ ಚಿಕ್ಕದೊಂದು ಚರ್ಚೆಯಾಗುತ್ತಿದೆ. ಮೃಣಾಲ್ ಠಾಕೂರ್‌ಗೆ ದಕ್ಷಿಣ ಭಾರತದಲ್ಲಿ ಆಫರ್‌ಗಳು ಸಿಗುತ್ತಿವೆ. ಆದರೆ, ಬಾಲಿವುಡ್‌ ನಟಿಯಾಗಿದ್ದರೂ ಅಲ್ಲಿನ ಫಿಲ್ಮ್‌ ಮೇಕರ್‌ಗಳೇ ಅವಕಾಶ ನೀಡುತ್ತಿಲ್ಲ. ಈ ಮಾತನ್ನು ಸ್ವತ: ಮೃಣಾಲ್ ಠಾಕೂರ್ ಹಲವು ಸಂದರ್ಶನಗಳಲ್ಲಿ ನೋವು ತೋಡಿಕೊಂಡ ಉದಾಹರಣೆಗಳಿವೆ.

ಇದರೊಂದಿಗೆ ಮೃಣಾಲ್ ಠಾಕೂರ್ ನಟಿಸಿದ ಬಾಲಿವುಡ್ ಸಿನಿಮಾಗಳೂ ಕೂಡ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡಿಲ್ಲ. ಮೊದಲ ಸಿನಿಮಾ 'ಸೀತಾರಾಮಂ' ಮೂಲಕ ಎಂಟ್ರಿ ಕೊಡುವುದಕ್ಕೂ ಮುನ್ನ 7 ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ, ಮೃಣಾಲ್‌ಗೆ ಅಲ್ಲಿ ಯಶಸ್ಸು ಸಿಗಲಿಲ್ಲ. ತೆಲುಗಿನ ಎರಡನೇ ಸಿನಿಮಾ 'ಹಾಯ್‌ ನಾನ್ನ' ರಿಲೀಸ್ ಆಗುವುದಕ್ಕೂ ಮುನ್ನ ಬಾಲಿವುಡ್‌ನ ಆರು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ, ಆಗಲೂ ಯಶಸ್ಸು ಸಿಕ್ಕಿಲ್ಲ.

ಆದರೆ, ಮೃಣಾಲ್ ಠಾಕೂರ್ ಪ್ರಯತ್ನವನ್ನೇನು ನಿಲ್ಲಿಸಿಲ್ಲ. ಬಾಲಿವುಡ್ ನಟ ವರುಣ್ ಧವನ್ ನಟಿಸುತ್ತಿರುವ ಸಿನಿಮಾಗೆ ಆಯ್ಕೆಯಾಗಿದ್ದಾರೆ. ವರುಣ್ ತಂದೆ ಡೇವಿಡ್ ಧವನ್ ಅವರೇ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಜೊತೆಗೆ 'ಪೂಜಾ ಮೇರಿ ಜಾನ್' ಅನ್ನೋ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಈ ಎರಡು ಬಾಲಿವುಡ್‌ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಯಶಸ್ಸು ತಂದುಕೊಡಬಹುದಾ? ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ.

More from Filmibeat

English summary
Why Mrunal Thakur not getting offers in Bollywood?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X