ಅರೇ.. ಆಲಿಯಾ ಹೀಗ್ ಮಾಡಿದ್ಯಾಕೆ? ರಣ್ಬೀರ್ ಸಿಟ್ಟು ಮಾಡ್ಕೊಂಡಿದ್ದಾರಾ?

By Harshitha

ಇತ್ತೀಚೆಗಷ್ಟೇ ಬಾಲಿವುಡ್ ನ ಹಿರಿಯ ನಟಿ ನೀತು ಕಪೂರ್ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಂಡರು. ಹೇಗೆ ಆಚರಿಸಿಕೊಂಡರು ಅಂದ್ರೆ, ಇಡೀ ಫ್ಯಾಮಿಲಿ ಜೊತೆಗೆ ಪ್ಯಾರಿಸ್ ರೌಂಡ್ ಹೊಡೆದು ಜನ್ಮದಿನವನ್ನ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿಕೊಂಡರು.

ನೀತು ಕಪೂರ್ ಬರ್ತಡೇ ಗಾಗಿ ರಣ್ಬೀರ್ ಕಪೂರ್ ಸೇರಿದಂತೆ ಇಡೀ ಕಪೂರ್ ಖಾನ್ದಾನ್ ಪ್ಯಾರಿಸ್ ಗೆ ಪ್ರಯಾಣ ಬೆಳೆಸಿತ್ತು. ಹಾಗ್ನೋಡಿದ್ರೆ, ಕಪೂರ್ ಕುಟುಂಬದ ಜೊತೆಗೆ ಆಲಿಯಾ ಭಟ್ ಕೂಡ ಸೇರಿಕೊಳ್ಳಬೇಕಿತ್ತು. ಆದ್ರೆ, ಹಾಗೆ ಆಗಲಿಲ್ಲ. ಯಾಕೆ ಅಂದ್ರೆ, ಆಲಿಯಾ ಭಟ್ ತಂದೆ ಮಹೇಶ್ ಭಟ್ ಒಪ್ಪಿಗೆ ನೀಡಲಿಲ್ಲ.!

Why Alia Bhatt ditched Neetu Kapoors birthday

ಮಹೇಶ್ ಭಟ್.. ಹೇಳಿ ಕೇಳಿ ಹೆಸರಾಂತ ನಿರ್ದೇಶಕ. ತಮ್ಮ ಪುತ್ರಿ ಆಲಿಯಾ ಭಟ್ ಕೂಡ ಬಾಲಿವುಡ್ ನಲ್ಲಿ ಭದ್ರವಾದ ನೆಲೆ ಕಂಡುಕೊಳ್ಳಬೇಕು, ಅದಕ್ಕಾಗಿ ಶ್ರಮ ವಹಿಸಬೇಕು ಎನ್ನುವುದು ಮಹೇಶ್ ಭಟ್ ಬಯಕೆ. ಹೀಗಾಗಿ ''ವೃತ್ತಿ ಬಗ್ಗೆ ಮೊದಲು ಗಮನ ಹರಿಸು... ಟ್ರಿಪ್, ಪಾರ್ಟಿಯಲ್ಲಾ ಆಮೇಲೆ'' ಎಂದು ಬುದ್ಧಿವಾದ ಹೇಳಿ 'ಬ್ರಹ್ಮಾಸ್ತ್ರ' ಚಿತ್ರದ ಚಿತ್ರೀಕರಣಕ್ಕೆ ರೆಡಿ ಆಗುವಂತೆ ಆಲಿಯಾ ಭಟ್ ಗೆ ಮಹೇಶ್ ಭಟ್ ಸೂಚಿಸಿದ್ರಂತೆ. ಹೀಗಾಗಿ, ಅಪ್ಪನ ಮಾತು ಪಾಲಿಸಿದ ಆಲಿಯಾ ಪ್ಯಾರಿಸ್ ಗೆ ತೆರಳಲಿಲ್ಲ.

ಅಮ್ಮನ ಹುಟ್ಟುಹಬ್ಬಕ್ಕೆ ಗೆಳತಿ ಆಲಿಯಾ ಭಟ್ ಕೂಡ ಬರಬೇಕಿತ್ತು ಅನ್ನೋದು ರಣ್ಬೀರ್ ಆಸೆ ಆಗಿತ್ತು. ಆದ್ರೆ, ಅದು ಈಡೇರಲಿಲ್ಲ. ಪ್ಯಾರಿಸ್ ಟ್ರಿಪ್ ಗೆ ಕೈಕೊಟ್ಟಿದ್ದಕ್ಕೆ, ನೀತು ಕಪೂರ್ ಹುಟ್ಟುಹಬ್ಬದಂದು ಮಿಸ್ ಆಗಿದ್ದಕ್ಕೆ ಆಲಿಯಾ ಮೇಲೆ ರಣ್ಬೀರ್ ಮುನಿಸಿಕೊಂಡಿದ್ದಾರಾ.? ಈ ಪ್ರಶ್ನೆಗೆ ಗಾಸಿಪ್ ಪಂಡಿತರು 'ಹೌದು' ಎನ್ನುತ್ತಿದ್ದಾರೆ.

ರಣ್ಬೀರ್ ಹಾಗೂ ಆಲಿಯಾ ನಡುವಿನ ಗೆಳೆತನ ಇದೀಗ ಒಂದು ಸ್ಟೆಪ್ ಮುಂದಕ್ಕೆ ಹೋಗಿದೆ ಎಂಬ ಗುಸುಗುಸು ಹೊಸದೇನಲ್ಲ. ಸದ್ಯ 'ಸಂಜು' ಸಿನಿಮಾದ ಯಶಸ್ಸಿನಲ್ಲಿ ಇರುವ ರಣ್ಬೀರ್ ಕಪೂರ್ ಮದುವೆ ಆಗಲು ಯಾವಾಗ ಮನಸ್ಸು ಮಾಡ್ತಾರೋ.?

More from Filmibeat

English summary
Bollywood Actress Alia Bhatt ditched Neetu Kapoor's birthday because of Dad Mahesh Bhatt.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X