ನಟಿಯೊಂದಿಗಿನ ಸಂಬಂಧವೇ ನವಾಜುದ್ದಿನ್ ಸಿದ್ಧಿಕಿ ದಾಂಪತ್ಯಕ್ಕೆ ಮುಳುವಾಯಿತೆ?
ಬಾಲಿವುಡ್ ಖ್ಯಾತ ನಟ ನವಾಜುದ್ದೀನ್ ಸಿದ್ಧಿಕಿ ವೈವಾಹಿಕ ಜೀವನ ಮುರಿದು ಬಿದ್ದಿದೆ. ನವಾಜುದ್ದೀನ್ ಪತ್ನಿ ಆಲಿಯಾ ಅಲಿಯಾಸ್ ಅಂಜನಾ ಕಿಶೋರ್ ಪಾಂಡೆ ನವಾಜುದ್ದೀನ್ ಸಿದ್ಧಿಕಿ ಗೆ ತಲಾಕ್ ನೀಡಿದ್ದಾರೆ.
Recommended Video
ನವಾಜುದ್ದೀನ್ ಸಿದ್ಧಿಕಿ ಮತ್ತು ಅಂಜನಾ ಪಾಂಡೆಯದ್ದು 10 ವರ್ಷಗಳ ದಾಂಪತ್ಯ ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ಆದರೆ ನಿನ್ನೆ ನವಾಜುದ್ದೀನ್ ಹುಟ್ಟುಹಬ್ಬದಂದೇ ಅಂಜನಾ, ನವಾಜುದ್ದೀನ್ ಗೆ ವಿಚ್ಚೇದನ ನೀಡಿದ್ದಾರೆ.
ಹೀಗೆ ಹಠಾತ್ತನೆ ವಿಚ್ಛೇದನ ನೀಡಲು ಕಾರಣವೇನು ಎಂಬ ಪ್ರಶ್ನೆ ಎದ್ದಿದ್ದು, ನವಾಜುದ್ದಿನ್ ಸಿದ್ಧಿಕಿಗೆ ನಟಿಯೊಬ್ಬಾಕೆಯೊಂದಿಗೆ ಇದ್ದ ಸಂಬಂಧವೇ ವಿಚ್ಚೇದನಕ್ಕೆ ಕಾರಣವೇ ಎಂಬ ಅನುಮಾನ ವ್ಯಕ್ತವಾಗಿದೆ.

ಸಂಬಂಧದ ಬಗ್ಗೆ ಆತ್ಮಕತೆಯಲ್ಲಿ ಬಹಿರಂಗ
ನವಾಜುದ್ದೀನ್ ಸಿದ್ಧಿಕಿಗೆ ನಟಿ ನಿಹಾರಿಕಾ ಸಿಂಗ್ ಜೊತೆ ಆಪ್ತ ಗೆಳೆತನವಿತ್ತು, ಆಕೆಯ ಜೊತೆಗಿದ್ದ ಸಂಬಂಧದ ಬಗ್ಗೆ ನವಾಜುದ್ದೀನ್ ತಮ್ಮ ಆತ್ಮಕತೆ 'ಆನ್ ಆರ್ಡಿನರಿ ಲೈಫ್: ಎ ಮೆಮೋರ್' ನಲ್ಲಿ ಬಹಿರಂಗಗೊಳಿಸಿದ್ದರು. ನವಾಜುದ್ದೀನ್ ಸಿದ್ದಿಕಿ ಮತ್ತು ನಿಹಾರಿಕಾ ಸಿಂಗ್ ಗೆಳೆತನ ಒಂದು ವರ್ಷ ಮಾತ್ರ ನಡೆಯಿತು ನಂತರ ಅವರಿಬ್ಬರೂ ಬೇರೆಯಾದರು.

ಆಗಾಗ್ಗೆ ಜಗಳವಾಡುತ್ತಲೇ ಇದ್ದರು: ಆಲಿಯಾ
ನವಾಜುದ್ದೀನ್ ಸಿದ್ದಿಕಿ ಮತ್ತು ಪತ್ನಿ ಆಲಿಯಾ ಅಲಿಯಾಸ್ ಅಂಜನಾ ಕಿಶೋರ್ ಪಾಂಡೆ ಗೆ ಈ ವಿಷಯಕ್ಕೆ ಆಗಾಗ್ಗೆ ಜಗಳವಾಗುತ್ತಲೇ ಇತ್ತು ಎನ್ನಲಾಗಿದೆ. ನವಾಜುದ್ದೀನ್ ಸಿದ್ಧಿಕಿ ಮತ್ತು ಆಲಿಯಾ ಬೇರಾಗಲು ಇದೇ ಮೂಲ ಕಾರಣ ಎನ್ನಲಾಗುತ್ತಿದೆ.

'ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾರೆ'
ಆಲಿಯಾ ಹೇಳಿರುವಂತೆ, ನವಾಜುದ್ದೀನ್ ಸಿದ್ಧಿಕಿ ಮತ್ತು ಅವರ ಕುಟುಂಬ ಆಕೆಯನ್ನು ಮಾನಸಿಕ ಹಾಗೂ ದೈಹಿಕವಾಗಿ ಬಹುವಾಗಿ ಕಾಡಿದರಂತೆ. ನವಾಜುದ್ದೀನ್ ಸಿದ್ಧಿಕಿ ಅವರ ಸಹೋದರ ಆಲಿಯಾ ಮೇಲೆ ಹಲ್ಲೆ ಸಹ ಮಾಡಿದ್ದನಂತೆ.

'ನವಾಜುದ್ದೀನ್ ನನ್ನನ್ನು ಹೊಡೆದಿಲ್ಲ ಆದರೆ ಹಿಂಸಿಸಿದ್ದಾನೆ'
ನವಾಜುದ್ದೀನ್ ನನ್ನನ್ನು ಎಂದಿಗೂ ಹೊಡೆದಿಲ್ಲ ಆದರೆ ಅದೊಂದನ್ನು ಬಿಟ್ಟು ಇನ್ನೆಲ್ಲವನ್ನೂ ಆತ ಮಾಡಿದ್ದಾನೆ. ಆತನ ಕುಟುಂಬದವೆರೆಲ್ಲರೂ ಒಟ್ಟಿಗೆ ಇದ್ದರೂ ನಾನೂ ಅವರೊಟ್ಟಿಗೆ ಇದ್ದೆ, ಕುಟುಂಬದವರೆಲ್ಲಾ ನನ್ನನ್ನು ಮಾನಸಿಕವಾಗಿ ಹಿಂಸಿಸಿದರು ಎಂದು ಆಲಿಯಾ ಹೇಳಿದ್ದಾರೆ.


Click it and Unblock the Notifications











