ಅಮಿತಾಬ್ ಟ್ವಿಟ್ಟರ್ ಫಾಲೋವರ್ಸ್ ಸಂಖ್ಯೆ ಹೆಚ್ಚಾಗದಿರಲು ಕಾರಣವೇನು.?

By Bharath Kumar

ಕಳೆದ ಕೆಲವು ದಿನಗಳ ಹಿಂದೆ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಟ್ವಿಟ್ಟರ್ ಗೆ ಗುಡ್ ಬೈ ಹೇಳುವುದಾಗಿ ತಿಳಿಸಿದ್ದರು. ಟ್ವಿಟ್ಟರ್ ನಲ್ಲಿ ತನ್ನ ಫಾಲೋವರ್ಸ್​ಗಳ ಸಂಖ್ಯೆ ಕಡಿಮೆಯಾಗಿರುವುದಕ್ಕೆ ಅಮಿತಾಬ್ ಬೇಸರಗೊಂಡು ಟ್ವಿಟ್ಟರ್​ ತೊರೆಯಲಿರುವುದಾಗಿ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದರು.

ನಂತರ ಇದು 'ಜಸ್ಟ್ ಫಾರ್ ಫನ್' ಎಂದು ಸುಮ್ಮನಾದರು. ಆದ್ರೆ, ನಿಜವಾಗಲೂ ಟ್ವಿಟ್ಟರ್ ಫಾಲೋವರ್ಸ್ ಸಂಖ್ಯೆ ಯಾಕೆ ಹೆಚ್ಚಾಗುತ್ತಿಲ್ಲ, ಕಡಿಮೆಯಾಗಿದೆ ಎಂಬುದರ ಬಗ್ಗೆ ಬಿಗ್-ಬಿ ಯೋಚನೆ ಮಾಡೋಕೆ ಹೋಗಿಲ್ಲ ಅನಿಸುತ್ತೆ.

ಇದೀಗ, ಅಮಿತಾಬ್ ಬಚ್ಚನ್ ಅವರ ಅಭಿಮಾನಿಯೊಬ್ಬ ಈ ಬಗ್ಗೆ ಟ್ವೀಟ್ ಮಾಡಿದ್ದು, ಬಿಗ್ ಬಿ ಮನದಲ್ಲಿದ್ದ ಪ್ರಶ್ನೆಯೊಂದಕ್ಕೆ ಉತ್ತರ ಕೊಡಲು ಮುಂದಾಗಿದ್ದಾರೆ.

why amitabh bachchan twitter followers not increases

ಈ ಬಗ್ಗೆ ಟ್ವೀಟ್ ಮಾಡಿರುವ ಅಭಿಮಾನಿ ''ಅಮಿತಾಬ್ ಬಚ್ಚನ್ ಅವರೇ ನಿಮ್ಮ ಟ್ವಿಟ್ಟರ್ ಸಂಖ್ಯೆ ತುಂಬ ದಿನಗಳಿಂದ ಯಾಕೆ ಹೆಚ್ಚಾಗುತ್ತಲೇ ಇಲ್ಲ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಏನಾದರೂ ಸಮಸ್ಯೆಯಾಗಿದೆಯಾ.? ಬಹುಶಃ ನಿಮ್ಮ ಫಾಲೋವರ್ಸ್ ಪಟ್ಟಿ ಜಾಮ್ ಆಗಿರಬಹುದು'' ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಅಮಿತಾಬ್ ಬಚ್ಚನ್ ''ಇದನ್ನ ಗಮನಿಸಿದ್ದಕ್ಕೆ ಥ್ಯಾಂಕ್ ಯೂ. ಟ್ವಿಟ್ಟರ್ ಗೆ ಹೇಳಿ'' ಎಂದಿದ್ದಾರೆ. ಸದ್ಯ, ಅಮಿತಾಬ್ ಬಚ್ಚನ್ ಮತ್ತು ರಿಷಿ ಕಪೂರ್ ಅಭಿನಯದ '101 ನಾಟ್ ಔಟ್' ಸಿನಿಮಾ ಬಿಡುಗಡೆಯಾಗಿದೆ. ನಂತರ ಅಮೀರ್ ಖಾನ್ ಜೊತೆ ಅಭಿನಯಿಸಿರುವ 'ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾ' ಸಿನಿಮಾ ಬಿಡುಗಡೆಯಾಗಬೇಕಿದೆ.

More from Filmibeat

English summary
Why bollywood actor amitabh bachchan twitter followers not increases from many days'' asked one of the fan to big b.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X