Don't Miss!
- News Soumya Reddy in Tirupati:ಸೌಮ್ಯ ರೆಡ್ಡಿ ಫೋಟೋ ಹಿಡಿದು ತಿರುಪತಿ ದೇವಸ್ಥಾನದ ಮುಂದೆ ಫೋಸ್ ಕೊಟ್ಟ ಭಕ್ತ!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Automobiles ಬೈಕಿನಂತೆ ಮೈಲೇಜ್ ಕೊಡೋದ್ರಿಂದ ಈ ಹ್ಯುಂಡೈ ಕಾರಿನ ಮಾಲೀಕರು ಫುಲ್ ಖುಷ್
- Sports LSG vs CSK IPL 2024: ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದ ಎಂಎಸ್ ಧೋನಿ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಮಿತಾಬ್ ಟ್ವಿಟ್ಟರ್ ಫಾಲೋವರ್ಸ್ ಸಂಖ್ಯೆ ಹೆಚ್ಚಾಗದಿರಲು ಕಾರಣವೇನು.?
ಕಳೆದ ಕೆಲವು ದಿನಗಳ ಹಿಂದೆ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಟ್ವಿಟ್ಟರ್ ಗೆ ಗುಡ್ ಬೈ ಹೇಳುವುದಾಗಿ ತಿಳಿಸಿದ್ದರು. ಟ್ವಿಟ್ಟರ್ ನಲ್ಲಿ ತನ್ನ ಫಾಲೋವರ್ಸ್ಗಳ ಸಂಖ್ಯೆ ಕಡಿಮೆಯಾಗಿರುವುದಕ್ಕೆ ಅಮಿತಾಬ್ ಬೇಸರಗೊಂಡು ಟ್ವಿಟ್ಟರ್ ತೊರೆಯಲಿರುವುದಾಗಿ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದರು.
ನಂತರ ಇದು 'ಜಸ್ಟ್ ಫಾರ್ ಫನ್' ಎಂದು ಸುಮ್ಮನಾದರು. ಆದ್ರೆ, ನಿಜವಾಗಲೂ ಟ್ವಿಟ್ಟರ್ ಫಾಲೋವರ್ಸ್ ಸಂಖ್ಯೆ ಯಾಕೆ ಹೆಚ್ಚಾಗುತ್ತಿಲ್ಲ, ಕಡಿಮೆಯಾಗಿದೆ ಎಂಬುದರ ಬಗ್ಗೆ ಬಿಗ್-ಬಿ ಯೋಚನೆ ಮಾಡೋಕೆ ಹೋಗಿಲ್ಲ ಅನಿಸುತ್ತೆ.
ಇದೀಗ, ಅಮಿತಾಬ್ ಬಚ್ಚನ್ ಅವರ ಅಭಿಮಾನಿಯೊಬ್ಬ ಈ ಬಗ್ಗೆ ಟ್ವೀಟ್ ಮಾಡಿದ್ದು, ಬಿಗ್ ಬಿ ಮನದಲ್ಲಿದ್ದ ಪ್ರಶ್ನೆಯೊಂದಕ್ಕೆ ಉತ್ತರ ಕೊಡಲು ಮುಂದಾಗಿದ್ದಾರೆ.
ತಂದೆ-ತಾಯಿ ಜೊತೆಗಿರುವುದು ಹೆಮ್ಮೆ ವಿಷಯ: ಟ್ವೀಟಿಗರಿಗೆ ಗುಂಡ್ ಪಿನ್ ಚುಚ್ಚಿದ ಅಭಿಶೇಕ್!
ಈ ಬಗ್ಗೆ ಟ್ವೀಟ್ ಮಾಡಿರುವ ಅಭಿಮಾನಿ ''ಅಮಿತಾಬ್ ಬಚ್ಚನ್ ಅವರೇ ನಿಮ್ಮ ಟ್ವಿಟ್ಟರ್ ಸಂಖ್ಯೆ ತುಂಬ ದಿನಗಳಿಂದ ಯಾಕೆ ಹೆಚ್ಚಾಗುತ್ತಲೇ ಇಲ್ಲ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಏನಾದರೂ ಸಮಸ್ಯೆಯಾಗಿದೆಯಾ.? ಬಹುಶಃ ನಿಮ್ಮ ಫಾಲೋವರ್ಸ್ ಪಟ್ಟಿ ಜಾಮ್ ಆಗಿರಬಹುದು'' ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.
ನಿರ್ದೇಶನಕ್ಕಿಳಿದ ಅಮಿತಾಬ್ ಬಚ್ಚನ್ ಮೊಮ್ಮಗ
ಇದಕ್ಕೆ ಪ್ರತಿಕ್ರಿಯಿಸಿರುವ ಅಮಿತಾಬ್ ಬಚ್ಚನ್ ''ಇದನ್ನ ಗಮನಿಸಿದ್ದಕ್ಕೆ ಥ್ಯಾಂಕ್ ಯೂ. ಟ್ವಿಟ್ಟರ್ ಗೆ ಹೇಳಿ'' ಎಂದಿದ್ದಾರೆ. ಸದ್ಯ, ಅಮಿತಾಬ್ ಬಚ್ಚನ್ ಮತ್ತು ರಿಷಿ ಕಪೂರ್ ಅಭಿನಯದ '101 ನಾಟ್ ಔಟ್' ಸಿನಿಮಾ ಬಿಡುಗಡೆಯಾಗಿದೆ. ನಂತರ ಅಮೀರ್ ಖಾನ್ ಜೊತೆ ಅಭಿನಯಿಸಿರುವ 'ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾ' ಸಿನಿಮಾ ಬಿಡುಗಡೆಯಾಗಬೇಕಿದೆ.