For Quick Alerts
  ALLOW NOTIFICATIONS  
  For Daily Alerts

  ಖಾನ್‌ಗಳೇಕೆ ಮೌನವಾಗಿದ್ದಾರೆ: ಕಾರಣ ಹೇಳಿದ ನಾಸಿರುದ್ಧೀನ್ ಶಾ

  |

  ದೇಶದಲ್ಲಿ ಸಾಕಷ್ಟು ವಿಷಯಗಳು ಘಟಿಸುತ್ತಿವೆ. ರಾಜಕೀಯ, ಸಾಮಾಜಿಕ ವಿಷಯಗಳು ಪ್ರತಿದಿನ ಚರ್ಚೆಗೆ ಬರುತ್ತಿವೆ. ಹಲವರು ಈ ಬಗ್ಗೆ ಧೈರ್ಯವಾಗಿ ಮಾತನಾಡುತ್ತಿದ್ದಾರೆ. ಆದರೆ ಬಾಲಿವುಡ್‌ನ ಜನಪ್ರಿಯ ಖಾನ್‌ಗಳು, ದೇಶದ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಪರಿಗಣಿಸಲಾಗುವ ಸಲ್ಮಾನ್ ಖಾನ್, ಅಮೀರ್ ಖಾನ್, ಶಾರುಖ್ ಖಾನ್‌ ಅವರುಗಳು ಈ ಬಗ್ಗೆ ತುಟಿ ಬಿಚ್ಚಿಲ್ಲ.

  ನೇರವಾಗಿ ಸಲ್ಮಾನ್ ಖಾನ್, ಶಾರುಖ್ ಖಾನ್, ಅಮೀರ್ ಖಾನ್ ಅವರುಗಳ ಮೇಲೆ ಧಾರ್ಮಿಕ ವಿಷಯಕ್ಕೆ ಸಂಬಂಧಿಸಿದಂತೆ ವಾಗ್ದಾಳಿಗಳು, ಸಾಮಾಜಿಕ ಜಾಲತಾಣದಲ್ಲಿ ಮೂದಲಿಕೆಗಳು ಕೇಳಿ ಬಂದಿದ್ದರೂ ಸಹ ಈ ಮೂವರು ಈ ಬಗ್ಗೆ ತುಟಿ ಬಿಚ್ಚಿಲ್ಲ.

  ಈ ಬಗ್ಗೆ ಬಾಲಿವುಡ್‌ನ ಹಿರಿಯ ನಟ ನಾಸಿರುದ್ಧೀನ್ ಶಾ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸಲ್ಮಾನ್, ಶಾರುಖ್ ಹಾಗೂ ಅಮೀರ್ ಖಾನ್ ಏಕೆ ದೇಶದ ಪ್ರಸ್ತುತ, ಪ್ರಚಲಿತ ವಿಷಯಗಳ ಬಗ್ಗೆ ಮಾತನಾಡುತ್ತಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

  ''ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾತನಾಡಿದರೆ ಅವರ ಮೇಲಾಗಬಹುದಾದ ಮೂದಲಿಗೆ, ದೌರ್ಜನ್ಯದ ಬಗ್ಗೆ ಅವರಿಗೆ ಅರಿವಿದೆ. ಹಾಗಾಗಿಯೇ ಅವರು ಮೌನವಾಗಿದ್ದಾರೆ. ಒಂದೊಮ್ಮೆ ಅವರೇನಾದರೂ ಮಾತನಾಡಿದರೆ ಇಷ್ಟು ವರ್ಷ ಕಷ್ಟಪಟ್ಟು ಗಳಿಸಿದ್ದೆಲ್ಲವನ್ನೂ ಅವರು ಕಳೆದುಕೊಳ್ಳಬೇಕಾಗುತ್ತದೆ'' ಎಂದಿದ್ದಾರೆ ನಾಸಿರುದ್ಧೀನ್ ಶಾ.

  ''ಖಾನ್‌ಗಳು ಪ್ರಸ್ತುತ ವಿಷಯಗಳ ಬಗ್ಗೆ ಮೌನ ಮುರಿದರೆ ಕೇವಲ ವಾಗ್ದಾಳಿ ಮಾತ್ರವೇ ಅಲ್ಲ. ಅವರಿಗೆ ಸಂಬಂಧಿಸಿದ ಪ್ರತಿಯೊಬ್ಬರೂ ದೌರ್ಜನ್ಯ ಎದುರಿಸಬೇಕಾಗುತ್ತದೆ. ಅವರ ಮೇಲೆ ಹಲವು ರೀತಿಯ ದಾಳಿಗಳಾಗುತ್ತವೆ. ಇಷ್ಟು ವರ್ಷ ಕಷ್ಟಪಟ್ಟು ಗಳಿಸಿಕೊಂಡ ಗೌರವ, ಹೆಸರು ಎಲ್ಲವನ್ನೂ ವ್ಯವಸ್ಥಿತವಾಗಿ ಮಣ್ಣುಪಾಲು ಮಾಡಲಾಗುತ್ತದೆ'' ಎಂದು ಶಾ ಹೇಳಿದ್ದಾರೆ.

  ಮುಂದುವರೆದು ಮಾತನಾಡಿರುವ ಶಾ, ''ಸರ್ಕಾರಗಳು, ರಾಜಕೀಯ ಪಕ್ಷಗಳು ಕೆಲವು ನಟರನ್ನು, ನಿರ್ಮಾಪಕ, ನಿರ್ದೇಶಕರನ್ನು ಬಳಸಿಕೊಂಡು ತಮ್ಮ ಪರವಾದ ಸಿನಿಮಾಗಳನ್ನು ಮಾಡಿಸುತ್ತಿವೆ. ಸರ್ಕಾರದ ಪರವಾದ ಸಿನಿಮಾಗಳನ್ನು ಮಾಡುವವರಿಗೆ ದೊಡ್ಡ ಮೊತ್ತದ ಹಣ ನೀಡಲಾಗುತ್ತದೆ. ಅವರಿಗೆ ಕ್ಲೀನ್ ಚಿಟ್ ನೀಡಲಾಗುತ್ತದೆ. ಸಿನಿಮಾ ನಿರ್ಮಾಣ ಮಾಡಲು ಭಾರಿ ಬಂಡವಾಳವನ್ನು ನೀಡಲಾಗುತ್ತದೆ'' ಎಂದು ನಾಸಿರುದ್ಧೀನ್ ಶಾ, ಪ್ರೊಪಾಗ್ಯಾಂಡ ಸಿನಿಮಾ ಬಗ್ಗೆ ಹೇಳಿದರು.

  ಮುಂದುವರೆದು ಮಾತನಾಡಿರುವ ಶಾ, ''ನಾನು ಮುಸ್ಲಿಂ ವ್ಯಕ್ತಿ ಎಂಬ ಕಾರಣಕ್ಕೆ ಸಿನಿಮಾ ರಂಗದಲ್ಲಿ ಎಂದೂ ಅಸಮಾನತೆ ಎದುರಿಸಿಲ್ಲ. ಆದರೆ ನಟ-ನಟಿಯರು ತಮ್ಮ ಮನದ ಮಾತುಗಳನ್ನು ಬಹಿರಂಗವಾಗಿ ಆಡುವುದರಿಂದ ಸಾಕಷ್ಟು ಬಾರಿ ದೌರ್ಜನ್ಯ, ದ್ವೇಷ, ಮೂದಲಿಕೆಗಳನ್ನು ಎದುರಿಸಬೇಕಾಗಿ ಬಂದಿದೆ'' ಎಂದಿದ್ದಾರೆ ನಾಸಿರುದ್ಧೀನ್ ಶಾ.

  ಕೆಲವು ದಿನಗಳ ಹಿಂದಷ್ಟೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸಿದ್ದ ನಾಸಿರುದ್ಧೀನ್ ಶಾ, ''ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದಕ್ಕೆ ಸಂಭ್ರಮಿಸುತ್ತಿರುವ ಭಾರತೀಯ ಮುಸಲ್ಮಾನರ ಬಗ್ಗೆ ಅಸಮಾಧಾನ ಹೊರಗೆ ಹಾಕಿದ್ದರು. ಬಾಲಿವುಡ್‌ ಮತ್ತೊಬ್ಬ ಖ್ಯಾತ ಚಿತ್ರ ಸಾಹಿತಿ ಜಾವೇದ್ ಅಖ್ತರ್ ಸಹ ಇದೇ ವಿಷಯಕ್ಕೆ ಭಾರತೀಯ ಮುಸಲ್ಮಾನರ ವಿರುದ್ಧ ಅಸಮಾಧಾನಗೊಂಡಿದ್ದರು. ಜಾವೇದ್ ಅಖ್ತರ್ ಆರ್‌ಎಸ್‌ಎಸ್‌ ಮತ್ತು ತಾಲಿಬಾನ್ ನಡುವೆ ಸಾಮ್ಯತೆ ಇದೆ ಎಂದು ಸಹ ಹೇಳಿದ್ದರು. ಇದರಿಂದಾಗಿ ಜಾವೇದ್ ಅಖ್ತರ್ ಮನೆಯ ಮುಂದೆ ಯುವ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.

  English summary
  Naseeruddin Shah talked about why three famous Khans of Bollywood were not speaking about Sociopolitical issues of country.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X