ಕೆಜಿಎಫ್, RRR ಅಸಲಿ ಆಟ ಶುರು: 'ಬಾಯ್‌ಕಾಟ್' ಬಾಲಿವುಡ್ ಎನ್ನುತ್ತಿರೋದೇಕೆ?
ಚಿತ್ರರಂಗದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿದೆ. ಭಾರತೀಯ ಸಿನಿಮಾರಂಗ ದೊಡ್ಡ ಬದಲಾವಣೆಗಳಿಗೆ ಸಾಕ್ಷಿ ಆಗುತ್ತಿದೆ. ಸ್ಯಾಂಡಲ್‌ವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್, ಬಾಲಿವುಡ್ ಎನ್ನುವ ಭೇದವನ್ನು ತೊಲಗಿಸುವ ಹಾದಿ ಈಗ ತೆರೆದುಕೊಂಡಿದೆ.
ಉತ್ತರ ಭಾರತದ ಪ್ರೇಕ್ಷಕರಿಗೆ ಈಗ ಸೌತ್ ಚಿತ್ರಗಳನ್ನು ನೋಡುವ ಅವಕಾಶ ಸಿಕ್ಕಿದೆ. ಕೆಲವು ಬಾಲಿವುಡ್ ಚಿತ್ರಗಳೇ ಅತ್ಯುತ್ತಮ ಚಿತ್ರಗಳು ಎನ್ನುವ ಭ್ರಮೆಯಲ್ಲಿ ಇದ್ದ ಪ್ರೇಕ್ಷಕರಿಗೆ ಸೌತ್ ಚಿತ್ರಗಳು ಹೊಸತನದ ಪರಿಚಯ ಮಾಡಿ ಕೊಟ್ಟಿವೆ. ಹಾಗಾಗಿ ಈಗ ಬಾಲಿವುಡ್ ವಿರುದ್ಧ ಜನ ಸಮರ ಸಾರುತ್ತಿದ್ದಾರೆ.
ಉತ್ತರ ಭಾರತದ ಪ್ರೇಕ್ಷಕರು ಸೌತ್ ಚಿತ್ರಗಳನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಇದಕ್ಕೆ ಉತ್ತಮ ಉದಾರಣೆಯಾಗಿ ನಿಂತಿರೋದು 'ಬಾಹುಬಲಿ', 'RRR', 'ಕೆಜಿಎಫ್ 2' ಚಿತ್ರಗಳು. ಈಗ ಮತ್ತೆ ಬಾಯ್ ಕಾಟ್ ಬಾಲಿವುಡ್ ಎನ್ನುತ್ತಿದ್ದಾರೆ ಪ್ರೇಕ್ಷಕರು. ಸಾಮಾಜಿಕ ಜಾಲತಾಣದಲ್ಲಿ ಬಾಯ್ ಕಾಟ್ ಬಾಲಿವುಡ್ ಎನ್ನುವುದು ಟ್ರೆಂಡಿಂಗ್‌ನಲ್ಲಿ ಇದೆ.

ಇನ್ಮುಂದೆ ಬಾಲಿವುಡ್ ಎಂದರೆ ಭಾರತ ಅಲ್ಲ
ಈ ಮೊದಲು ಭಾರತೀಯ ಚಿತ್ರರಂಗ ಅಂದರೆ ಅದು ಬಾಲಿವುಡ್ ಎನ್ನುವುದು ವಾಡಿಕೆಯಾಗಿತ್ತು. ಹಿಂದಿ ಭಾಷೆಯ ಚಿತ್ರಗಳಿಗೆ ಬಾಲಿವುಡ್ ಎನ್ನುವ ಹೆಸರು ಬಂತು. ನಂತರ ಅದು ಭಾರತೀಯ ಚಿತ್ರರಂಗ ಎನ್ನುವಂತೆ ಆಗಿತ್ತು. ಆದರೆ ಈಗ ಅದು ಬದಲಾಗುತ್ತಾ ಇದೆ. ಸಿನಿಮಾವನ್ನು ದೇಶ, ಭಾಷೆಯ ಗಡಿ ಬಿಟ್ಟು ನೋಡುವ ಪ್ರೇಕ್ಷಕರು ಹುಟ್ಟಿ ಕೊಂಡಿದ್ದಾರೆ.
As someone said, bollywood actors r ghutka sellers, even at this age Amitabh sells ghutka, dont know what kind of $ poverty they all suffer from apart from poverty of values #BoycottBollywood https://t.co/Ciy9RGXvCy
— Sneha 🇮🇳 (sneharaghunath9) April 19, 2022
ಟ್ರೆಂಡಿಂಗ್‌ನಲ್ಲಿ ಬಾಯ್ ಕಾಟ್ ಬಾಲಿವುಡ್!
'ಕೆಜಿಎಫ್ 2' ಚಿತ್ರ ಬಾಲಿವುಡ್‌ನಲ್ಲಿ ಸೂಪರ್ ಹಿಟ್ ಆಗುತ್ತಿದ್ದಂತೆ, ಉತ್ತರ ಭಾರತೀಯ ಪ್ರೇಕ್ಷಕರು ಸೌತ್ ಚಿತ್ರರಂಗ ಮತ್ತು ಕಲಾವಿದರಿಗೆ ಜೈ ಕಾರ ಹಾಕುತ್ತಿದ್ದಾರೆ. ಸೌತ್ ಚಿತ್ರಗಳೇ ಬಾಲಿವುಡ್ ಚಿತ್ರಗಳಿಗಿಂತ ಉತ್ತಮ ಎನ್ನುತ್ತಿದ್ದಾರೆ. ಹಾಗಾಗಿ ಟಾಲಿವುಡ್‌ನಲ್ಲಿ ಬಾಯ್ ಕಾಟ್ ಬಾಲಿವುಡ್ ಎನ್ನುವ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್‌ನಲ್ಲಿದೆ. ಇದರ ಜೊತೆಗೆ ಬಾಲಿವುಡ್ ಹೀರೊಗಳನ್ನು ಟ್ರೋಲ್ ಮಾಡಲಾಗುತ್ತಿದೆ.
ಶಾರುಖ್, ಆಮಿರ್, ಸಲ್ಮಾನ್ ಟ್ರೋಲ್!
ಬಾಯ್‌ಕಾಟ್ ಬಾಲಿವುಡ್ ಎನ್ನುವುದು ಟ್ರೆಂಡ್ ಆಗುತ್ತಲೇ, ಬಾಲಿವುಡ್ ಸ್ಟಾರ್ ನಟರನ್ನು ಟ್ರೋಲ್ ಮಾಡಲಾಗುತ್ತಿದೆ. ಬಾಲಿವುಡ್ ನಟರು ಚಿತ್ರಗಳ ಮೂಲಕ ಪ್ರೇಕ್ಷಕರನ್ನು ಮೂರ್ಖರನ್ನಾಗಿ ಮಾಡಿ, ತಾವು ದುಡ್ಡು ಮಾಡಿಕೊಳ್ಳುತ್ತಾರೆ. ಎನ್ನುವಂತಹ ಕಮೆಂಟ್‌ಗಳು ಬಂದಿದೆ. ಜೊತೆಗೆ ಬಾಲಿವುಡ್‌ನಲ್ಲಿ ಬಂದ ಕೆಟ್ಟ ಚಿತ್ರಗಳು ಭಾರತೀಯ ಸಂಸ್ಕೃತಿಯನ್ನು ಹಾಳು ಮಾಡಿವೆ. ದುಡ್ಡಿಗಾಗಿ ಚಿತ್ರ ಮಾಡಿ ಸಂಸ್ಕೃತಿಯನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎನ್ನುವಂತಹ ಕಮೆಂಟ್‌ಗಳು ಬಂದಿವೆ.

ರಾಜಮೌಳಿ, ಕೆಜಿಎಫ್ ಕೊಡುಗೆ ಅಪಾರ!
ಇಂತಹ ದೊಡ್ಡದೊಂದು ಬದಲಾವಣೆಗೆ ನಿರ್ದೇಶಕ ರಾಜಮೌಳಿ ಬುನಾದಿ ಹಾಕಿದರು ಎಂದರೆ ತಪ್ಪಾಗಲಾರದು. 'ಬಾಹುಬಲಿ' ಎನ್ನುವಂತಹ ಚಿತ್ರ ಮಾಡಿದ ರಾಜಮೌಳಿ ಬಾಲಿವುಡ್ ಹಾಕಿಕೊಂಡಿದ್ದ ಬೇಲಿಗಳನ್ನು ಮುರಿದು ಹಾಕಿತು. ನಂತರ 'ಬಾಹುಬಲಿ 2', 'RRR' ಚಿತ್ರ ಮತ್ತಷ್ಟು ದೊಡ್ಡ ಯಶಸ್ಸು ಕಂಡಿತು. ಈ ಬೆಳವಣಿಗೆಯಲ್ಲಿ ಕನ್ನಡ ಚಿತ್ರ 'ಕೆಜಿಎಫ್ 2' ಪಾಲು ಇದೆ ಎನ್ನುವುದು ಕನ್ನಡಿಗರಿಗೆ ಹೆಮ್ಮೆ. ಈ ಚಿತ್ರಗಳ ಜೊತೆಗೆ 'ಪುಷ್ಪ' ಚಿತ್ರ ಕೂಡ ಬಾಲಿವುಡ್‌ನಲ್ಲಿ ಉತ್ತಮ ಛಾಪು ಮೂಡಿಸಿತು.


Click it and Unblock the Notifications











