'ಮಣಿಕರ್ಣಿಕಾ' ಚಿತ್ರದಿಂದ ನಿರ್ದೇಶಕ 'ಔಟ್' ಆಗಿದ್ದು ಯಾಕೆ.? ಇದು ಕಂಗನಾ ಕೈವಾಡ.?

By Harshitha

ನಟಿ ಕಂಗನಾ ರಣೌತ್ ಗೂ ವಿವಾದಗಳಿಗೂ ಒಂಥರಾ ಬಿಡಿಸಲಾರದ ನಂಟು. ಒಂದಲ್ಲಾ ಒಂದು ಕಾಂಟ್ರೋವರ್ಸಿಗಳಿಂದ ನಟಿ ಕಂಗನಾ ಸದಾ ಸುದ್ದಿ ಆಗುತ್ತಲೇ ಇರುತ್ತಾರೆ. ಹೃತಿಕ್ ರೋಷನ್ ವಿಚಾರದಲ್ಲಿ ಸದಾ ಬ್ರೇಕಿಂಗ್ ನ್ಯೂಸ್ ಮಾಡುತ್ತಿದ್ದ ನಟಿ ಕಂಗನಾ ಇದೀಗ 'ಮಣಿಕರ್ಣಿಕಾ' ಚಿತ್ರದಿಂದ ಮಗದೊಂದು ಬಾರಿಗೆ ವಿವಾದದ ಕೇಂದ್ರಬಿಂದು ಆಗಿದ್ದಾರೆ.

'ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ' ಚಿತ್ರದಿಂದ ಮೊನ್ನೆಯಷ್ಟೇ ನಟ ಸೋನು ಸೂದ್ ಹೊರಗೆ ಬಂದರು. ಹಾಗೆ ಚಿತ್ರದಿಂದ ಸೋನು ಸೂದ್ ಹೊರಗೆ ಬರಲು ಕಂಗನಾ ಕಾರಣ ಎಂಬ ಗುಸುಗುಸು ಆರಂಭ ಆಯ್ತು. ಅದಕ್ಕೆ ತಕ್ಕ ಹಾಗೆ ಕಂಗನಾ ಹಾಗೂ ಸೋನು ನಡುವೆ ಕೆಸರೆರಚಾಟ ಶುರುವಾಯ್ತು.

ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ, ಕಂಗನಾ 'ಕೃಪೆ'ಯಿಂದಲೇ 'ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ' ಚಿತ್ರಕ್ಕೆ ನಿರ್ದೇಶಕ ಕ್ರಿಷ್ ಕೂಡ ಗುಡ್ ಬೈ ಹೇಳಿದ್ದಂತೆ.

ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟು, ಅವಾರ್ಡ್ ಗಳನ್ನ ಪಡೆದ್ಮೇಲೆ, ಕಂಗನಾ 'ನಿರ್ದೇಶನ'ದಲ್ಲೂ ಮೂಗು ತೂರಿಸಿದರಂತೆ. ಇದರಿಂದ ಬೇಸೆತ್ತ ನಿರ್ದೇಶಕ ಕ್ರಿಷ್ 'ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ' ಚಿತ್ರಕ್ಕೆ ದೊಡ್ಡ ನಮಸ್ಕಾರ ಹಾಕಿದ್ದಾರೆ. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

'ಸಿನಿಮಾ'.. ನಿರ್ದೇಶಕರ ಕನಸಿನ ಕೂಸು

'ಸಿನಿಮಾ'.. ನಿರ್ದೇಶಕರ ಕನಸಿನ ಕೂಸು

'ಸಿನಿಮಾ'.. ನಿರ್ದೇಶಕರ ಕನಸಿನ ಕೂಸು. ಒಂದು ಸಿನಿಮಾ ಚೆನ್ನಾಗಿ ಮೂಡಿಬರಬೇಕು ಅಂದ್ರೆ, ಅದರ ಹಿಂದೆ ನಿರ್ದೇಶಕರ ಶ್ರಮ, ಜಾಣ್ಮೆ ಅವಶ್ಯಕ. ಒಂದು ಚಿತ್ರಕ್ಕೆ ಡೈರೆಕ್ಟರ್ 'ಕ್ಯಾಪ್ಟನ್ ಆಫ್ ದಿ ಶಿಪ್' ಇದ್ದ ಹಾಗೆ. ಪ್ರೀ-ಪ್ರೊಡಕ್ಷನ್ ನಿಂದ ಹಿಡಿದು ಸಿನಿಮಾ ರಿಲೀಸ್ ಆಗುವವರೆಗೆ ಎಲ್ಲಾ ಜವಾಬ್ದಾರಿಯೂ ನಿರ್ದೇಶಕರ ಹೆಗಲ ಮೇಲಿರುತ್ತೆ. ಹೀಗಿರುವಾಗ, ಏಕಾಏಕಿ ಓರ್ವ ಖ್ಯಾತ ನಿರ್ದೇಶಕ, ಬಹು ನಿರೀಕ್ಷಿತ ಚಿತ್ರಕ್ಕೆ ಗುಡ್ ಬೈ ಹೇಳಲು ಹೇಗೆ ಸಾಧ್ಯ.? ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ 'ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ' ಚಿತ್ರತಂಡ ಬೇರೆಯದ್ದೇ ಉತ್ತರ ನೀಡಿತ್ತು.

ಚಿತ್ರತಂಡ ಕೊಟ್ಟ ವಿವರಣೆ ಏನು.?

ಚಿತ್ರತಂಡ ಕೊಟ್ಟ ವಿವರಣೆ ಏನು.?

ತೆಲುಗಿನಲ್ಲಿ ತಯಾರಾಗುತ್ತಿರುವ ಎನ್.ಟಿ.ರಾಮಾ ರಾವ್ ಜೀವನ ಚರಿತ್ರೆ ಆಧಾರಿತ ಸಿನಿಮಾ 'ಎನ್.ಟಿ.ಆರ್' ಚಿತ್ರೀಕರಣದಲ್ಲಿ ನಿರ್ದೇಶಕ ರಾಧಾಕೃಷ್ಣ ಜಗರ್ಲಮುಡಿ (ಕ್ರಿಷ್) ಬಿಜಿಯಾಗಿದ್ದಾರೆ. ಹೀಗಾಗಿ, 'ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ' ಚಿತ್ರದಿಂದ ಡೈರೆಕ್ಟರ್ ಕ್ರಿಷ್ ಹೊರನಡೆದರು ಎಂದು ಚಿತ್ರತಂಡ ವಿವರಣೆ ನೀಡಿತ್ತು.

ಇದು ನಂಬುವ ಮಾತಾ.?

ಇದು ನಂಬುವ ಮಾತಾ.?

ನಿರ್ದೇಶಕ ಕ್ರಿಷ್ ಟಾಲಿವುಡ್ ನ ಪ್ರಸಿದ್ಧ ನಿರ್ದೇಶಕ. 'ಗಮ್ಯಂ', 'ವೇದಂ', 'ಕೃಷ್ಣಂ ವಂದೇ ಜಗದ್ಗುರು', 'ಗಬ್ಬರ್ ಈಸ್ ಬ್ಯಾಕ್', 'ಗೌತಮಿಪುತ್ರ ಶಾತಕರ್ಣಿ' ಎಂಬ ಸೂಪರ್ ಹಿಟ್ ಸಿನಿಮಾಗಳನ್ನ ನೀಡಿದವರು ಇದೇ ಕ್ರಿಷ್. ಇಂತಿಪ್ಪ ಕ್ರಿಷ್ ಬಾಲಿವುಡ್ ನ 'ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ' ಶೂಟಿಂಗ್ ಮುಗಿಯುವ ಮುನ್ನವೇ ಸಿನಿಮಾದಿಂದ ಹೊರಬರ್ತಾರಾ.?

ಅಸಲಿ ಕಾರಣ ಬೇರೆ ಇದೆ.!

ಅಸಲಿ ಕಾರಣ ಬೇರೆ ಇದೆ.!

'ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ' ಚಿತ್ರದಿಂದ ಡೈರೆಕ್ಟರ್ ಕ್ರಿಷ್ ಹೊರನಡೆಯಲು ಕಂಗನಾ ಕಾರಣ ಎಂದು ವರದಿ ಆಗಿದೆ. ಮೊದಮೊದಲು ಚಿತ್ರದ ಸ್ಕ್ರಿಪ್ಟ್ ನಲ್ಲಿ ಕಂಗನಾ ಮೂಗು ತೂರಿಸಿದರಂತೆ. ಬಳಿಕ ಜೊತೆಯಲ್ಲಿ ನಟಿಸುವವರಿಗೆ ಏನು ಮಾಡಬೇಕು ಎಂಬ ಸೂಚನೆ ನೀಡಲಾರಂಭಿಸಿದರಂತೆ. ನಿರ್ದೇಶನದ ಕೆಲಸದಲ್ಲಿ ಕಂಗನಾ ಸ್ವಲ್ಪ ಜಾಸ್ತಿನೇ ತಲೆ ಹಾಕಿದ್ದು ಡೈರೆಕ್ಟರ್ ಕ್ರಿಷ್ ಗೆ ಇಷ್ಟ ಆಗಲಿಲ್ಲ. ಹೀಗಾಗಿ, ಅವರು ಬೇಸರ ಮಾಡಿಕೊಂಡು ಸಿನಿಮಾಗೆ ಗುಡ್ ಬೈ ಹೇಳಿದ್ರಂತೆ.

ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಕಂಗನಾ

ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಕಂಗನಾ

'ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ' ಚಿತ್ರದಿಂದ ಕ್ರಿಷ್ ಔಟ್ ಆದ್ಮೇಲೆ ಆ ಜಾಗಕ್ಕೆ ಬಂದವರು ಕಂಗನಾ. ಡೈರೆಕ್ಟರ್ ಕ್ಯಾಪ್ ತೊಟ್ಟ ಮೇಲೆ, ಸಿನಿಮಾದ ಸ್ಕ್ರಿಪ್ಟ್ ನಲ್ಲಿ ಕಂಗನಾ ಭಾರೀ ಬದಲಾವಣೆ ಮಾಡಿದ್ದಾರೆ. ಸೋನು ಸೂದ್ ಪಾತ್ರವನ್ನ ಚಿಕ್ಕದು ಮಾಡಿದ್ದಾರೆ. ಇದೇ ಕಾರಣಕ್ಕೆ ಸೋನು ಕೂಡ ಸಿಟ್ಟಾಗಿ ಹೊರಬಂದರು ಅಂತ ಹೇಳುವವರೂ ಇದ್ದಾರೆ.

ಜನವರಿಯಲ್ಲಿ ಬಿಡುಗಡೆ

ಜನವರಿಯಲ್ಲಿ ಬಿಡುಗಡೆ

ಅಂತೂ 'ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ' ನಿರ್ದೇಶಕರ ಕುರ್ಚಿ ಮೇಲೆ ಕಂಗನಾ ಕೂತಾಗಿದೆ. ಜನವರಿ 25, 2019 ರಂದು ಚಿತ್ರವನ್ನ ಬಿಡುಗಡೆ ಮಾಡಲು ಕಂಗನಾ ಬೆವರಿಳಿಸುತ್ತಿದ್ದಾರೆ. ಝಾನ್ಸಿ ರಾಣಿಯ ಕಥೆಯನ್ನ ಕಂಗನಾ ಹೇಗೆ ತೆರೆಮೇಲೆ ತರ್ತಾರೋ.?

More from Filmibeat

English summary
Why Director Krish walked out of Manikarnika: The Queen of Jhansi Film.?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X