KGF Chapter 2 : 'ಕೆಜಿಎಫ್ 2' ಬಗ್ಗೆ ಕನ್ನಡ ನಟರ ಮೌನವೇಕೆ? ಜನರ ಪ್ರಶ್ನೆ!

'ಕೆಜಿಎಫ್ 2' ಇದು ಒಂದು ಸಿನಿಮಾ ಮಾತ್ರ ಆಗಿ ಉಳಿದಿಲ್ಲ. ಇದೊಂದು ಮೈಲಿಗಲ್ಲಾಗಿದೆ. ಕನ್ನಡ, ಕರುನಾಡು ಮಾತ್ರವಲ್ಲ ಭಾರತೀಯ ಹೆಮ್ಮಯ ಚಿತ್ರಗಳಲ್ಲಿ ಒಂದಾಗಿದೆ. ಹಾಗಾಗಿ ಈ ಚಿತ್ರಕ್ಕೆ ಪರ ಭಾಷಿಗರು ಬಹುಪರಾಕ್ ಹಾಕುತ್ತಿದ್ದಾರೆ. ಜನ ಮಾತ್ರ ಅಲ್ಲ, ಪರ ಭಾಷೆಯ ಕಲಾವಿದರು ನಟ, ನಟಿಯರು ಕೂಡ ಚಿತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

'ಕೆಜಿಎಫ್ 2' ಏಪ್ರಿಲ್ 14ಕ್ಕೆ ತೆರೆಗೆ ಕಂಡಿದೆ. ಚಿತ್ರ ರಿಲೀಸ್ ಆಗಿ ಐದು ದಿನಗಳು ಕಳೆದರೂ ಕೂಡ ಚಿತ್ರದ ಕಲೆಕ್ಷನ್ ತಗ್ಗಿಲ್ಲ. ಈ ಚಿತ್ರ ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದ್ದು, ಎಲ್ಲೆಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಚಿತ್ರದ ಕಲೆಕ್ಷನ್ ಕೋಟಿ, ಕೋಟಿಯ ಗಡಿ ದಾಟಿ ದಾಖಲೆ ಮಾಡುತ್ತಾ ಇದೆ.

ಕನ್ನಡದಲ್ಲಿ ಮೈಲಿಗಲ್ಲಾದ ಈ ಚಿತ್ರದ ಬಗ್ಗೆ ಕನ್ನಡದ ಹಲವು ತಾರೆಯರು, ನಿರ್ಮಾಪಕ, ನಿರ್ದೇಶಕ, ತಂತ್ರಜ್ಞನರು ಮಾತನಾಡಿದ್ದಾರೆ. ಚಿತ್ರದ ಯಶಸನ್ನು ಸಂಭ್ರಮಿಸಿದ್ದಾರೆ. ಆದರೆ ಈಗ ಸಾಮಾಜಿಕ ಜಾಲತಾಣದಲ್ಲಿ ಕನ್ನಡದ ಸ್ಟಾರ್ ನಟರನ್ನು ಈ ಬಗ್ಗೆ ಪ್ರಶ್ನೆ ಮಾಡಲಾಗುತ್ತಿದೆ.

ಕನ್ನಡ ನಟರಿಗೆ ಸೋಷಿಯಲ್ ಮೀಡಿಯಾದಲ್ಲಿ ಜನರ ಪ್ರಶ್ನೆ!

ಕನ್ನಡ ನಟರಿಗೆ ಸೋಷಿಯಲ್ ಮೀಡಿಯಾದಲ್ಲಿ ಜನರ ಪ್ರಶ್ನೆ!

ಕೆಜಿಎಫ್ 2 ಚಿತ್ರ ರಿಲೀಸ್ ದೊಡ್ಡ ಮಟ್ಟದಲ್ಲಿ ದಾಖಲೆ ಮಾಡುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಈ ರೀತಿಯ ದಾಖಲೆ ಮಾಡಿದಂತಹ ಚಿತ್ರ ಇದೆ ಮೊದಲು 100 ಕೋಟಿ, 200 ಕೋಟಿಯ ಗಡಿಯನ್ನು ಅತಿ ವೇಗವಾಗಿ ಮುಟ್ಟಿದೆ. ಅದರೂ ಕೂಡ ಕನ್ನಡದ ಇತರೆ ಖ್ಯಾತ ನಟರು, ನಿರ್ದೇಶಕರು ಮಾತನಾಡುತ್ತಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜನ ಪ್ರಶ್ನೆ ಮಾಡುತ್ತಾ ಇದ್ದಾರೆ. ಕನ್ನಡದ ಚಿತ್ರ ಪರವಾಗಿ ಕನ್ನಡದವರೆ ಮಾತನಾಡುತ್ತಿಲ್ಲ ಏಕೆ ಎನ್ನುತ್ತಿದ್ದಾರೆ.

'ಕೆಜಿಎಫ್ 2' ಬಗ್ಗೆ ದರ್ಶನ್, ಸುದೀಪ್, ಧ್ರುವ ಮೌನ!

'ಕೆಜಿಎಫ್ 2' ಬಗ್ಗೆ ದರ್ಶನ್, ಸುದೀಪ್, ಧ್ರುವ ಮೌನ!

ಸೋಶಿಯಲ್ ಮೀಡಿಯಾದಲ್ಲಿ ನೇರವಾಗಿ ಕನ್ನಡದ ಸ್ಟಾರ್ ನಟರ ಬಗ್ಗೆಯೇ ಪ್ರಶ್ನೆಯೆ ಮಾಡಲಾಗುತ್ತಿದೆ. ಒಂದು ಚಿತ್ರ ಇಷ್ಟು ದೊಡ್ಡ ಯಶಸ್ಸು ಕಂಡರೂ ಕೂಡ ಯಾಕೆ ನಮ್ಮ ಕನ್ನಡದ ನಟರಾದ ದರ್ಶನ್, ಸುದೀಪ್, ಧ್ರುವ ಅಂತಹ ನಟರು ಮಾತನಾಡುತ್ತಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಪೋಸ್ಟ್‌ಗಳನ್ನು ಹಾಕಿ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ. ಆದರೆ ಸಾರ್ವಜನಿಕವಾಗಿ ಪೋಸ್ಟ್ ಹಾಕಿಲ್ಲ ಅಂದ ಮಾತ್ರಕ್ಕೆ ಅವರು ಚಿತ್ರತಂಡಕ್ಕೆ ಶುಭಕೋರಿಲ್ಲ ಎಂದಲ್ಲ. ವೈಯಕ್ತಿಕವಾಗಿ ಅವರು ಚಿತ್ರತಂಡಕ್ಕೆ ತಮ್ಮ ವಿಶ್ ತಿಳಿಸಿದ್ದರು ಇರಬಹುದು.

'ಕೆಜಿಎಫ್ 2'ಗೆ ವಿಶ್ ಮಾಡಿದ ತಾರೆಯರು!

'ಕೆಜಿಎಫ್ 2'ಗೆ ವಿಶ್ ಮಾಡಿದ ತಾರೆಯರು!

ಇನ್ನು ಕೆಜಿಎಫ್ 2 ಯಶಸ್ಸನ್ನು ಕನ್ನಡದ ಹಲವು ತಾರೆಯರು ಸಂಭ್ರಮಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ತಂದುಕೊಟ್ಟ ಈ ಯಶಸ್ಸನ್ನು ಸ್ಮರಿಸಿದ್ದಾರೆ. ಕನ್ನಡದ ನಿರ್ದೇಶಕ ಕೆ.ಎಂ ಚೈತನ್ಯ, ನಟಿ ಮಾನ್ವಿತಾ ಹರೀಶ್, ಆಶಿಕಾ ರಂಗನಾಥ್, ನಿರ್ದೇಶಕ ಸುನಿ, ಪವನ್ ಒಡೆಯರ್ ಏರಿದಂತೆ ಹಲವರು ಕೆಜಿಎಫ್ 2 ಚಿತ್ರಕ್ಕೆ ಶುಭಕೋರಿದ್ದಾರೆ.

ಪ್ರಶಾಂತ್ ನೀಲ್‌ಗೆ ಮಹೇಶ್ ಬಾಬು, ಜೂ.ಎನ್‌ಟಿಆರ್ ಕರೆ!

ಪ್ರಶಾಂತ್ ನೀಲ್‌ಗೆ ಮಹೇಶ್ ಬಾಬು, ಜೂ.ಎನ್‌ಟಿಆರ್ ಕರೆ!

ಇನ್ನು ಕೆಜಿಎಫ್ 2 ಚಿತ್ರವನ್ನು ನೋಡಿದ ಪರಭಾಷಿಗರು ಚಿತ್ರತಂಡಕ್ಕೆ ವೈಯಕ್ತಿಕವಾಗಿ ಕರೆಮಾಡಿ ಶುಭಕೋರಿದ್ದಾರೆ. ಈ ವಿಚಾರವನ್ನು ನಿರ್ದೇಶಕ ಪ್ರಶಾಂತ್ ನೀಲ್ ಹಂಚಿಕೊಂಡಿದ್ದಾರೆ. ಮಹೇಶ್ ಬಾಬು, ಜೂ.ಎನ್‌ಟಿಆರ್ ಕರೆ ಮಾಡಿ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಜಗಪತಿ ಬಾಬು, ಶಿವ ಕಾರ್ತಿಕೇಯನ್, ವಿಶಾಲ್ ಅಂತಹ ನಟರು ಸಾಮಾಜಿಕ ಜಾಲತಾಣದಲ್ಲಿ ಕೆಜಿಎಫ್ 2 ಚಿತ್ರದ ಬಗ್ಗೆ ಪೋಸ್ಟ್ ಹಂಚಿಕೊಂಡಿರುವುದು ಗಮನಾರ್ಹ.

More from Filmibeat

English summary
Why Kannada Star Heroes Not Talking About KGF 2 Success, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X