For Quick Alerts
  ALLOW NOTIFICATIONS  
  For Daily Alerts

  ಕರಣ್ ಜೋಹರ್ ಸಿನಿಮಾದಿಂದ ಆರ್ಯನ್ ಅನ್ನು ಹೊರದಬ್ಬಿದ್ದಕ್ಕೆ ಕಾರಣವಿದು

  |

  ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಸಿನಿಮಾ 'ದೋಸ್ತಾನಾ 2' ನಿಂದ ಹಠಾತ್ತನೆ ನಟ ಕಾರ್ತಿಕ್‌ ಆರ್ಯನ್ ಅನ್ನು ಹೊರಗೆ ಹಾಕಲಾಯಿತು. ಕರಣ್ ಜೋಹರ್ ಆಗಲಿ ಆರ್ಯನ್ ಆಗಲಿ ಈ ಬೆಳವಣಿಗೆ ಮತ್ತೆ ಮಾತನಾಡಿರಲಿಲ್ಲ. ಆದರೆ ಈಗ ಕಾರಣ ಬಹಿರಂಗಗೊಂಡಿದೆ.

  ಕಾರ್ತಿಕ್‌ ಆರ್ಯನ್ ಅವರು ಹಠಾತ್ತನೆ ತಮ್ಮ ಸಂಭಾವನೆ ಏರಿಸುವಂತೆ ನಿರ್ಮಾಪಕ ಕರಣ್ ಮೇಲೆ ಒತ್ತಡ ಹೇರಿದ್ದರಿಂದ ಆರ್ಯನ್ ಅನ್ನು ಸಿನಿಮಾದಿಂದ ತೆಗೆದು ಹಾಕಿದ್ದಾರೆ ಕರಣ್ ಜೋಹರ್ ಅಷ್ಟೆ ಅಲ್ಲದೆ ಮುಂದೆ ಧರ್ಮ ಪ್ರೊಡಕ್ಷನ್‌ನ ಯಾವುದೇ ಸಿನಿಮಾಗಳಲ್ಲಿಯೂ ಆರ್ಯನ್‌ಗೆ ಅವಕಾಶ ಕೊಡುವುದಿಲ್ಲವೆಂದು ಹೇಳಿದ್ದಾರೆ.

  2019 ರಲ್ಲಿ 'ದೋಸ್ತಾನಾ 2' ಸಿನಿಮಾಕ್ಕೆ ಸಹಿ ಮಾಡಿದ್ದರಂತೆ ಆರ್ಯನ್. ಆಗಿನ ಅವರ ಮಾರುಕಟ್ಟೆ ದರಕ್ಕೆ ತಕ್ಕಂತೆ 2-3 ಕೋಟಿ ಸಂಭಾವನೆಗೆ ಒಪ್ಪಿ ಸಹಿ ಹಾಕಿದ್ದರು. ಆದರೆ ಈ ಮೂರು ವರ್ಷಗಳಲ್ಲಿ ಆರ್ಯನ್‌ ಮಾರುಕಟ್ಟೆ ಮೌಲ್ಯ ಹೆಚ್ಚಾಗಿದೆ. ಹಾಗಾಗಿ ಈಗಿನ ಮಾರುಕಟ್ಟೆಕೆ ಮೌಲ್ಯಕ್ಕೆ ತಕ್ಕಂತೆ ಹಣ ನೀಡುವಂತೆ ಆರ್ಯನ್ ಒತ್ತಾಯ ಮಾಡಿದರಂತೆ. ಇದಕ್ಕೆ ಒಪ್ಪದ ಕರಣ್ ವಾಗ್ವಾದಗಳ ಬಳಿಕ ಆರ್ಯನ್ ಅನ್ನು ಸಿನಿಮಾದಿಂದ ಹೊರಗೆ ಹಾಕಿದ್ದಾರೆ.

  ಕಾರ್ತಿಕ್‌ರ ಸಂಭಾವನೆ ಹೆಚ್ಚಿಸುವ ಬೇಡಿಕೆಗೆ ಬದಲಾಗಿ ಮುಂದಿನ ಸಿನಿಮಾ 'ಮಿಸ್ಟರ್‌ ಲಿಲೆ'ದಲ್ಲಿ ಅಥವಾ ಬೇರೆ ಸಿನಿಮಾದಲ್ಲಿ ಅವಕಾಶ ನೀಡಿ ಆಗ ಹೆಚ್ಚಿನ ಸಂಭಾವನೆ ನೀಡುವುದಾಗಿ ಕರಣ್ ಮನವೊಲಿಸುವ ಪ್ರಯತ್ನ ಮಾಡಿದ್ದರು. ಕಾರ್ತಿಕ್ ಸಹ ಇದನ್ನು ಒಪ್ಪಿದ್ದರು. ಆದರೆ 'ಮಿಸ್ಟರ್‌ ಲಿಲೆ' ಸಿನಿಮಾದಲ್ಲಿ ವಿಕ್ಕಿ ಕೌಶಲ್‌ಗೆ ಕರಣ್ ಅವಕಾಶ ನೀಡಿದ್ದಕ್ಕೆ ಸಿಟ್ಟಾದ ಕಾರ್ತಿಕ್ ಆರ್ಯನ್, 'ಹೊಸ ಸಿನಿಮಾಕ್ಕೆ ಸಹಿ ಹಾಕಿಸಿಕೊಳ್ಳದ ಹೊರತು 'ದೋಸ್ತಾನಾ 2' ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡುವುದಿಲ್ಲವೆಂದು ಕರಣ್ ಬಳಿ ಹಠ ಹಿಡಿದಿದ್ದಾರೆ. ಇದನ್ನು ಸಹಿಸದ ಕರಣ್ ಆರ್ಯನ್ ಅನ್ನು ಸಿನಿಮಾದಿಂದ ಹೊರಗೆ ಹಾಕಿದ್ದಾರೆ.

  'ದೋಸ್ತಾನಾ 2' ಮಾತ್ರವೇ ಅಲ್ಲದೆ ಆರ್ಯನ್‌ ನಟಿಸುತ್ತಿರುವ ಇತರ ಸಿನಿಮಾಗಳ ನಿರ್ಮಾಪಕರ ಬಳಿಯೂ ಆರ್ಯನ್‌ ಹೆಚ್ಚಿನ ಹಣಕ್ಕೆ ಒತ್ತಾಯ ಮಾಡಿದ್ದಾರೆ ಎನ್ನಲಾಗುತ್ತಿದೆ.

  ಯಡಿಯೂರಪ್ಪ ಬಳಿ ಮನವಿ ಮಾಡಿಕೊಂಡ ಜಗ್ಗೇಶ್ | Filmibeat Kannada

  'ದೋಸ್ತಾನಾ 2' ನಲ್ಲಿ ಕಾರ್ತಿಕ್ ಆರ್ಯನ್ ಮಾಡುತ್ತಿದ್ದ ಪಾತ್ರಕ್ಕೆ ಸೂಕ್ತವಾದ ನಟನ ಹುಡುಕಾಟದಲ್ಲಿದೆ ಧರ್ಮ ಫಿಲಮ್ಸ್ ಸಂಸ್ಥೆ. ಈ ಸಿನಿಮಾದಲ್ಲಿ ಜಾಹ್ನವಿ ಕಪೂರ್ ಮತ್ತು ಲಕ್ಷ್ಯ ನಾಯಕಿಯರಾಗಿದ್ದಾರೆ.

  English summary
  Karan Johar suddenly dropped out Karthik Aryan from his production movie Dostana 2. Here is the reason.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X