ವಿಕ್ಕಿ ಸಂಬಂಧದ ಬಗ್ಗೆ ಕತ್ರಿನಾ ಗೌಪ್ಯತೆ ಕಾಪಾಡಲು ಕಾರಣ ಇದೇ!
ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ನಡುವಿನ ಸಂಬಂಧ ಇಂಡಸ್ಟ್ರಿಯಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಯಲ್ಲಿದೆ. ಇಬ್ಬರು ಡೇಟಿಂಗ್ ಮಾಡ್ತಿದ್ದಾರೆ ಎಂಬ ವದಂತಿ ನಡುವೆಯೇ ಕತ್ರಿನಾ ಮನೆಗೆ ವಿಕ್ಕಿ ಕೌಶಲ್ ಭೇಟಿ ನೀಡಿ ಸುಮಾರು 6 ಗಂಟೆಗಳ ಕಾಲ ಸಮಯ ಕಳೆದಿದ್ದರು ಎಂಬ ವಿಚಾರ ಹೊರಬಿದ್ದಿತ್ತು.
ಈ ಸುದ್ದಿಯ ನಡುವೆ ಅನಿಲ್ ಕಪೂರ್ ಮಗ ಹರ್ಷವರ್ಧನ್ ಕಪೂರ್ 'ಕತ್ರಿನಾ ಮತ್ತು ವಿಕ್ಕಿ ಸಂಬಂಧ ನಿಜ' ಎಂದು ಟಿವಿ ಕಾರ್ಯಕ್ರಮವೊಂದರಲ್ಲಿ ಖಚಿತಪಡಿಸಿದ್ದರು.
ಹರ್ಷವರ್ಧನ್ ಕಪೂರ್ ಹೇಳಿಕೆಯಿಂದ ಕತ್ರಿನಾ ಕೈಫ್ ಬೇಸರಗೊಂಡಿದ್ದಾರೆ. ತನ್ನ ಖಾಸಗಿ ವಿಚಾರವನ್ನು ಸಾರ್ವಜನಿಕ ವೇದಿಕೆಯಲ್ಲಿ ಚರ್ಚಿಸಲು ಅವರಿಗೆ ಏನು ಅಧಿಕಾರ ಇದೆ ಆಪ್ತರಲ್ಲಿ ಹೇಳಿಕೊಂಡು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ವಿಷಯ ತಿಳಿದು ಬಂದಿದೆ.

ಕತ್ರಿನಾ ಕೈಫ್ ಆಪ್ತ ಸ್ನೇಹಿತೆಯೊಬ್ಬರು ವೆಬ್‌ಸೈಟ್‌ವೊಂದರ ಜೊತೆ ಈ ಕುರಿತು ಮಾತನಾಡಿದ್ದು, ''ಕತ್ರಿನಾ ಖಾಸಗಿ ವಿಚಾರವನ್ನು ಟಿವಿ ಶೋನಲ್ಲಿ ಮಾತನಾಡಲು ಹರ್ಷವರ್ಧನ್‌ಗೆ ಯಾವ ಹಕ್ಕು ಇಲ್ಲ. ಅವರು ಏಕೆ ಚರ್ಚಿಸಿದರು. ಒಂದು ವೇಳೆ ಕತ್ರಿನಾ ವಿಷಯ ತಿಳಿದಿದ್ದರೂ, ಅದನ್ನು ಮಾತನಾಡುವ ಮುನ್ನ ಅನುಮತಿ ಪಡೆಯಬೇಕಿತ್ತು'' ಎಂದು ಹೇಳಿದ್ದಾರೆ.
ಹಳೆ ಸಂಬಂಧ (ರಣ್ಬೀರ್ ಕಪೂರ್) ಜೊತೆಗಿನ ಸಂಬಂಧ ಮುರಿದು ಬಿದ್ದಾಗ ಕತ್ರಿನಾ ಬಹಳ ನೋವು ಅನುಭವಿಸಿದರು. ಅಂತಹ ನೋವು ಮತ್ತೊಮ್ಮೆ ಬರುವುದು ಬೇಡ ಎಂಬ ಕಾರಣಕ್ಕೆ ಹೊಸ ಸಂಬಂಧದ ಬಗ್ಗೆ ಗೌಪ್ಯತೆ ಕಾಪಾಡಿಕೊಳ್ಳುತ್ತಿದ್ದಾರೆ. ಆದ್ರೆ, ಈ ವಿಚಾರದಲ್ಲಿ ಮೂರನೇಯವರು ಏಕೆ ಮಧ್ಯಪ್ರವೇಶ ಮಾಡ್ತಿದ್ದಾರೆ ಎಂದು ಕತ್ರಿನಾ ಸ್ನೇಹಿತ ಪ್ರಶ್ನಿಸಿದ್ದಾರೆ.
ಕೊರೊನಾ ವೈರಸ್ ಎರಡನೇ ಅಲೆ ವೇಳೆ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಇಬ್ಬರಿಗೂ ಸೋಂಕು ತಗುಲಿತ್ತು. ಮೊದಲು ವಿಕ್ಕಿ ಸೋಂಕು ತಗುಲಿರುವುದನ್ನು ಖಚಿತಪಡಿಸಿದರು. ನಂತರ ಕತ್ರಿನಾ ತನಗೂ ಸೋಂಕು ತಗುಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದರು.


Click it and Unblock the Notifications











