ನಮ್ಮಲ್ಲೇನು ಪ್ರತಿಭೆ ಇಲ್ವಾ ? 'ಪರಮ ಸುಂದರಿ' ಜಾಹ್ನವಿ ಕಪೂರ್ ವಿರುದ್ಧ ಕಿಡಿ ಕಾರಿದ ಮಲಯಾಳಂ ನಟಿ

ಸೆಲೆಬ್ರಿಟಿಗಳ ಖಾಸಗಿ ಬದುಕು, ಮನರಂಜನೆಯ ಸರಕು ಆಗಿ ಬದಲಾಗಿದ್ದು ಎಲ್ಲರಿಗೆ ಗೊತ್ತಿರುವಂತಹದ್ದೇ. ಕುಂತರು.. ನಿಂತರು.. ಇವರು ಸದಾ ಸುದ್ದಿಯಲ್ಲಿಯೇ ಇರುತ್ತಾರೆ. ಕ್ಯಾಮರಾದಲ್ಲಿ ಸೆರೆಯಾಗುತ್ತಲೇ ಇರುತ್ತಾರೆ. ಹೀಗೆ ಮೂರೊತ್ತು ಪ್ರಚಲಿತದಲ್ಲಿರುವ ಈ ಚಿತ್ರರಂಗದವರನ್ನು ಸಾಮಾನ್ಯವಾಗಿ ಸಾಮಾನ್ಯ ಜನರು ಟ್ರೋಲ್ ಮಾಡುತ್ತಾರೆ. ಚಿತ್ರ ಅಥವಾ ಪಾತ್ರದ ಪೋಷಣೆಯಲ್ಲಿ ಕುಂದು ಕೊರತೆಗಳು ಕಂಡು ಬಂದರೆ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಾರೆ.

ಆದರೆ.. ಫಾರ್ ಎ ಚೇಂಜ್ ಜಾಹ್ನವಿ ಕಪೂರ್ ಅವರನ್ನು ಮಲಯಾಳಂನ ನಾಯಕಿಯೊಬ್ಬರು ಟ್ರೋಲ್ ಮಾಡಿದ್ದಾರೆ. ಜಾಹ್ನವಿ ಕಪೂರ್ ಅಭಿನಯ ಸಾಮರ್ಥ್ಯವನ್ನೇ ಪ್ರಶ್ನೆ ಮಾಡಿದ್ದಾರೆ. ಹೌದು, ಅಸಲಿಗೆ ಜಾಹ್ನವಿ ಕಪೂರ್ ಅಭಿನಯದ ''ಪರಮ್ ಸುಂದರಿ'' ಚಿತ್ರ ಈ ಆಗಸ್ಟ್ ಕೊನೆಯ ವಾರದಲ್ಲಿ ಬಿಡುಗಡೆಯಾಗಲಿದೆ. ಮೊನ್ನೆ ಮೊನ್ನೆಯಷ್ಟೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ಭರವಸೆಯನ್ನು ಮೂಡಿಸಿದೆ.

Why Not a Malayali Actress Pavithra Menon Calls Out Janhvi Kapoor s Param Sundari Accent

ಈ ಚಿತ್ರದಲ್ಲಿ ಜಾಹ್ನವಿ ಕಪೂರ್ ಮಲಯಾಳಂ ಹುಡುಗಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಮಲಯಾಳಂ ಮಾತನಾಡುವ ಪ್ರಯತ್ನವನ್ನು ಕೂಡ ಮಾಡಿದ್ದಾರೆ. ಆದರೆ ಇವರ ಈ ಪ್ರಯತ್ನ ಮಲಯಾಳಂನ ನಾಯಕಿ ಕಂ ಗಾಯಕಿ ಪವಿತ್ರಾ ಮೆನನ್ ಅವರ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿಯೇ ವಿಡಿಯೋ ಮೂಲಕ ತಮ್ಮ ಆಕ್ರೋಶವನ್ನು ಪವಿತ್ರಾ ಮೆನನ್ ಹೊರ ಹಾಕಿದ್ದಾರೆ.

ವಿಡಿಯೋದ ಆರಂಭದಲ್ಲಿ ''ಪರಮ್ ಸುಂದರಿ''ಯ ಟ್ರೇಲರ್ ಪ್ಲೇ ಮಾಡುವ ಪವಿತ್ರಾ ಮೆನನ್ 38 ನೆ ಸೆಕೆಂಡ್‌ಗೆ ನಿಲ್ಲಿಸುತ್ತಾರೆ. ಜಾಹ್ನವಿ ಬಾಯಲ್ಲಿ ಮಲಯಾಳಂನ ಕೇಳಿ ಕೆರಳುವ ಪವಿತ್ರಾ ಮೆನನ್ ಮಲಯಾಳಂನ ನಾಯಕಿಯರನ್ನು ನಿಮ್ಮ ಚಿತ್ರದಲ್ಲಿ ಹಾಕಿಕೊಳ್ಳಲು ನಿಮಗೇನು ಸಮಸ್ಯೆ ಎಂದು ಕೇಳಿದ್ದಾರೆ.

Why Not a Malayali Actress Pavithra Menon Calls Out Janhvi Kapoor s Param Sundari Accent

ನಮ್ಮಲ್ಲಿ ಪ್ರತಿಭೆ ಇಲ್ಲವಾ ? ಮಲಯಾಳಂ ಪದಗಳ ಸರಿಯಾದ ಉಚ್ಛಾರಣೆ ಮಾಡಲು ಕೂಡ ಬರುವುದಿಲ್ಲ ಎಂದು ಹೇಳುವ ಪವಿತ್ರಾ ಮೆನನ್ ಮಲಯಾಳಂ ಕೂಡ ಮಾತನಾಡಿ ತೋರಿಸುತ್ತಾರೆ. ನಮ್ಮಲ್ಲಿ ಕೂಡ 90ರ ದಶಕದಲ್ಲಿ ಪಂಜಾಬಿ ಪಾತ್ರಗಳನ್ನು ಹೆಣೆಯುತ್ತಿದ್ದರು ಆಗ ತಪ್ಪುಗಳಾಗಿವೆ ಆದರೆ ಈಗ ನಾವು 2025ರಲ್ಲಿ ಇದ್ದೇವೆ ಮಲಯಾಳಂನ ಜನ ನೀವು ತೋರಿಸಿದಂತೆ ಮಾತನಾಡುವುದಿಲ್ಲ ಅವರು ಕೂಡ ಎಲ್ಲರಂತೆ ಸಾಮಾನ್ಯವಾಗಿ ಬದುಕುತ್ತಾರೆ ಎಂದು ಹೇಳಿರುವ ಪವಿತ್ರಾ ಮೆನನ್ ಯಾವಾಗಲೂ ಮಲ್ಲಿಗೆ ಹೂವುಗಳನ್ನು ಧರಿಸಿಕೊಂಡು ನಾವು ಮೋಹಿನಿಯಾಟ್ಟಂ [ ಕೇರಳ ರಾಜ್ಯದ ಶಾಸ್ತ್ರೀಯ ನೃತ್ಯ ] ಮಾಡುವುದಿಲ್ಲ ಎಂದು ಕಿಡಿ ಕಾರಿದ್ದಾರೆ.

ಆದರೆ.. ಹೀಗೆ ಪವಿತ್ರಾ ಮೆನನ್ ಹೀಗೆ ಹಂಚಿಕೊಂಡ ವಿಡಿಯೋ ಆನಂತರ ಡಿಲೀಟ್ ಆಗಿತ್ತು. ಈ ಹಿನ್ನೆಲೆ ಪವಿತ್ರಾ ಅವರೇ ವಿಡಿಯೋ ಡಿಲೀಟ್ ಮಾಡಿದ್ದಾರೆ ಎಂದು ಅನೇಕರು ಅಂದುಕೊಂಡಿದ್ದರು. ಆದರೆ. ಅಸಲಿಗೆ
ಕಾಪಿರೈಟ್ ಕಾಯ್ದೆಯಡಿ ನಿರ್ಮಾಣ ಸಂಸ್ಥೆ ಇನ್‌ಸ್ಟಾಗ್ರಾಮ್‌ದಿಂದ ವಿಡಿಯೋವನ್ನು ಡಿಲೀಟ್ ಮಾಡಿಸಿತ್ತು.

ಈಗ ಆ ಟ್ರೇಲರ್‌ನ ದೃಶ್ಯವನ್ನು ತಮ್ಮ ವಿಡಿಯೋದಿಂದ ತೆಗೆದು, ತಮ್ಮ ವಿಡಿಯೋವನ್ನು ಪವಿತ್ರಾ ಮೆನನ್ ರೀ ಅಪ್ಲೋಡ್ ಮಾಡಿದ್ದಾರೆ. ಸದ್ಯಕ್ಕೆ ಈ ವಿಡಿಯೋಗೆ ಬಗೆ ಬಗೆಯ ಕಾಮೆಂಟ್‌ಗಳು ಬರುತ್ತಿವೆ. ಕೇವಲ ಮಲಯಾಳಂ ಮಾತ್ರವಲ್ಲ ಬಾಲಿವುಡ್ ನವರು ಬೆಂಗಾಲಿ ಭಾಷೆ ಮತ್ತು ಸಂಸ್ಕ್ರತಿಗೆ ಕೂಡ ಅವಮಾನ ಮಾಡುತ್ತಾರೆ ಎಂದು ಕೆಲವರು ಹೇಳಿದ್ದರೆ, ಇನ್ನೂ ಕೆಲವರು ಇದು ಭಾಷಾಭಿಮಾನದಿಂದ ನೀವು ಹೇಳ್ತಿರುವ ಮಾತಾ ಅಥವಾ ಅಸೂಯೆಯಿಂದ ಹೇಳುತ್ತಿರುವ ಮಾತಾ ಎಂದು ಪ್ರಶ್ನೆ ಕೇಳಿದ್ದಾರೆ.

ಇನ್ನುಳಿದಂತೆ ಜಾಹ್ನವಿ ಕಪೂರ್‌ಗೆ ಸಿದ್ಧಾರ್ಥ್ ಮಲ್ಹೋತ್ರಾ ಈ ಚಿತ್ರದಲ್ಲಿ ನಾಯಕನಾಗಿದ್ದಾರೆ. ತುಷಾರ್ ಜಲೋಟಾ ಚಿತ್ರವನ್ನು ನಿರ್ದೇಶಿಸಿದ್ದು ಚಿತ್ರ ಈ ಆಗಸ್ಟ್ 29ರಂದು ತೆರೆಗೆ ಬರುತ್ತಿದೆ.

More from Filmibeat

English summary
janhvi Kapoor's "Param Sundari" faces backlash from actress Pavithra Menon over her accent and the film's stereotypical portrayal of Malayalis. Get the full story on the casting controversy and the social media debate it sparked.
Read more about: jhanvi kapoor mollywood trailer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X