ಪಹಲ್ಗಾಮ್ ದಾಳಿ ಖಂಡಿಸಿ ಪೋಸ್ಟ್ ಮಾಡಿದ್ದ ಪಾಕ್ ನಟಿ, ಬಳಿಕ ಡಿಲೀಟ್ ಮಾಡಿದ್ದೇಕೆ?

4 ದಿನಗಳ ಹಿಂದೆ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಪೈಶಾಚಿಕ ಕ್ರೌರ್ಯವನ್ನು ಎಲ್ಲರೂ ಖಂಡಿಸುತ್ತಿದ್ದಾರೆ. ಉಗ್ರರ ಅಟ್ಟಹಾಸಕ್ಕೆ 28 ಜನ ಸಾವನ್ನಪ್ಪಿದ್ದು ಕೆಲವರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿನಿಮಾ ತಾರೆಯರು ಕೂಡ ಘಟನೆಯನ್ನು ಖಂಡಿಸಿ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

ಭಯೋತ್ಪಾದರ ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನದ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ದಾಳಿಯ ಪ್ರತೀಕಾರಕ್ಕೆ ಭಾರತ ಸರ್ಕಾರ ಹಾಗೂ ಸೇನೆ ಮುಂದಾಗಿದ್ದಾರೆ. ಇನ್ನು ಭಾರತದ ಸಿನಿಮಾಗಳಲ್ಲಿ ನಟಿಸುತ್ತಿದ್ದ ಪಾಕ್ ಕಲಾವಿದರಿಗೆ ಸಂಕಷ್ಟ ಎದುರಾಗಿದೆ. ಇದೆಲ್ಲದರ ನಡುವೆ ಪಹಲ್ಗಾಮ್ ದಾಳಿ ಬಗ್ಗೆ ಪೋಸ್ಟ್ ಮಾಡಿದ್ದ ಪಾಕ್ ನಟಿ ಮಹಿರಾ ಖಾನ್ ಬಳಿಕ ಅದನ್ನು ಡಿಲೀಟ್ ಮಾಡಿದ್ದಾರೆ. ಇದು ಭಾರೀ ಚರ್ಚೆ ಹುಟ್ಟಾಕ್ಕಿದೆ.

Why Pakistani actress Mahira Khan delete post on condemning Pahalgam incident

ಹೌದು ಏಪ್ರಿಲ್ 24ರ ರಾತ್ರಿ 9 ಗಂಟೆ ಸುಮಾರಿಗೆ ಮಹಿರಾ ಖಾನ್ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಉಗ್ರರ ಅಟ್ಟಾಹಾಸ ಖಂಡಿಸಿ ಪೋಸ್ಟ್ ಹಾಕಿದ್ದರು. ಆದರೆ ಕೆಲ ಹೊತ್ತಿನ ಬಳಿಕ ಅದನ್ನು ಅಳಿಸಿ ಹಾಕಿದ್ದಾರೆ. ಅಷ್ಟರಲ್ಲೇ ಆಕೆಯ ಪೋಸ್ಟ್ ಸ್ಕ್ರೀನ್‌ ಶಾಟ್ ವೈರಲ್ ಆಗಿತ್ತು. "ಜಗತ್ತಿನ ಯಾವುದೇ ಭಾಗದಲ್ಲಿ, ಯಾವುದೇ ರೂಪದಲ್ಲಿ ಹಿಂಸಾಚಾರ ನಡೆದರೂ ಅದು ಕೇವಲ ಹೇಡಿತನದ ಕೃತ್ಯ. ಪಹಲ್ಗಾಮ್ ದಾಳಿಯಿಂದ ಬಾಧಿತರಾದ ಎಲ್ಲರಿಗೂ ನನ್ನ ಸಂತಾಪಗಳು" ಎಂದು ಆಕೆ ಬರೆದುಕೊಂಡಿದ್ದರು.

2017ರಲ್ಲಿ ಬಂದ ಶಾರುಖ್ ಖಾನ್ ನಟನೆಯ 'ರಯೀಸ್' ಚಿತ್ರದಲ್ಲಿ ಮಹೀರಾ ಖಾನ್ ನಟಿಸಿದ್ದರು. ಪಾಕಿಸ್ತಾನದ ಸಿನಿಮಾ ಹಾಗೂ ಕಿರುತೆರೆ ಕಾರ್ಯಕ್ರಮಗಳಲ್ಲಿ ಮಹೀರಾ ಹೆಚ್ಚು ನಟಿಸಿದ್ದಾರೆ. ಇದನ್ನು ಮುನ್ನ ಪಾಕಿಸ್ತಾನದ ನಟ ಫವಾದ್ ಖಾನ್ ಪಹಲ್ಗಾಮ್ ದಾಳಿ ಖಂಡಿಸಿ ಪೋಸ್ಟ್ ಮಾಡಿದ್ದರು.

"ಪಹಲ್ಗಾಮ್‌ನಲ್ಲಿ ನಡೆದ ಘೋರ ದಾಳಿಯ ಸುದ್ದಿ ಕೇಳಿ ತೀವ್ರ ದುಃಖವಾಯಿತು. ಈ ಭಯಾನಕ ಘಟನೆಯಲ್ಲಿ ಬಲಿಪಶುಗಳಾದವರ ಬಗ್ಗೆ ಪ್ರಾರ್ಥಿಸುತ್ತೇನೆ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬಗಳಿಗೆ ಶಕ್ತಿ ಸಿಗಲಿ ಮತ್ತು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಬರೆದುಕೊಂಡಿದ್ದರು.

ಈ ಹಿಂದೆ ಕೂಡ ಉಗ್ರರ ದಾಳಿ ನಡೆದಾಗ ಪಾಕ್ ಕಲಾವಿದರು ಹಾಗೂ ತಂತ್ರಜ್ಞರು ಭಾರತೀಯ ಸಿನಿಮಾಗಳಲ್ಲಿ ಕೆಲಸ ಮಾಡುವುದಕ್ಕೆ ನಿಷೇಧ ಹೇರಲಾಗಿತ್ತು. ಆದರೆ ಕೆಲ ವರ್ಷಗಳಿಂದ ಮತ್ತೆ ಅವಕಾಶ ಸಿಕ್ಕಿತ್ತು. ಫವಾದ್ ಖಾನ್ ಕೆಲ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರು ನಟಿಸಿರುವ 'ಅಬೀರ್ ಗುಲಾಲ್' ಸಿನಿಮಾ ಮೇ 9ರಂದು ಬಿಡುಗಡೆ ಆಗಬೇಕಿತ್ತು. ಆದರೆ ಈಗ ಚಿತ್ರತಂಡ ನಿರ್ಧಾರದಿಂದ ಹಿಂದೆ ಸರಿದಿದೆ.

'ಅಬೀರ್ ಗುಲಾಲ್' ಚಿತ್ರದಲ್ಲಿ ಫವಾದ್ ಖಾನ್ ಜೊತೆ ವಾಣಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಇನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿದ್ದ ಚಿತ್ರದ ಹಾಡನ್ನು ಕೂಡ ಡಿಲೀಟ್ ಮಾಡಲಾಗಿದೆ. ಲಿಸಾ ಹೇಡನ್, ಫರೀದಾ ಜಲಾಲ್, ಸೋನಿ ರಜ್ದಾನ್, ಪರ್ಮೀತ್ ಸೇಥಿ ಹಾಗೂ ರಿದ್ಧಿ ಡೋಗ್ರಾ ಚಿತ್ರದ ತಾರಾಗಣದಲ್ಲಿದ್ದಾರೆ. ಈ ರೊಮ್ಯಾಂಟಿಕ್ ಚಿತ್ರಕ್ಕೆ ಆರ್ತಿ ಎಸ್ ಬಗ್ಡಿ ಆಕ್ಷನ್ ಕಟ್ ಹೇಳಿದ್ದಾರೆ.

ಫವಾದ್ ಖಾನ್ ಮಾತ್ರವಲ್ಲ ಪಾಕಿಸ್ತಾನ ಮೂಲದ ಹನಿತಾ ಆಮಿರ್, ಆಯೆಜಾ ಖಾನ್, ಮೌರಾ ಹೊಕೇನ್ ಕೂಡ ಬಾಲಿವುಡ್ ಸಿನಿಮಾಗಳಲ್ಲಿ ಕೆಲಸ ಮಾಡಬೇಕಿತ್ತು. ಎಲ್ಲರಿಗೂ ಇದೀಗ ಸಂಕಷ್ಟ ಎದುರಾಗಿದೆ. ಗಾಯಕ ದಿಲ್ಜಿತ್ ದೋಸಾಂಜ್ ಜೊತೆ ನಾಯಕಿಯಾಗಿ ಹನಿತಾ ಆಮಿರ್ ನಟಿಸಬೇಕಿತ್ತು. ಆಯೆಜಾ ಖಾನ್ ಕೂಡ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವ ಸುಳಿವು ಕೊಟ್ಟಿದ್ದರು. ಆದರೆ ಈಗ ಎಲ್ಲವೂ ತಲೆಕೆಳಗಾಗಿದೆ. ಬಾಲಿವುಡ್ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವುದು ಪಾಕ್ ಕಲಾವಿದರು ಕನಸಾಗಿರುತ್ತದೆ. ಆದರೆ ಸದ್ಯದ ಮಟ್ಟಿಗೆ ಇವರ ಕನಸು ನನಸಾಗುವುದಿಲ್ಲ.

More from Filmibeat

English summary
Pakistani actor Mahira Khan condemns Pahalgam incident, later she deletes her post
Read more about: hindi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X