ಎರಡು ಭಾಗಗಳಾಗಿ 'ರಾಮಾಯಣ' ಸಿನಿಮಾ ತೆರೆಗೆ ತರಲು ಕಾರಣ ಏನು?
ನಿತೇಶ್ ತಿವಾರಿ ನಿರ್ದೇಶನದಲ್ಲಿ 'ರಾಮಾಯಣ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ರಾವಣನಾಗಿ ಯಶ್ ಹಾಗೂ ಸೀತಾಮಾತೆಯಾಗಿ ಸಾಯಿ ಪಲ್ಲವಿ ನಟಿಸಿದ್ದು 4000 ಕೋಟಿ ರೂ. ಬಜೆಟ್‌ನಲ್ಲಿ ಎರಡು ಭಾಗಗಳಾಗಿ ಸಿನಿಮಾ ತೆರೆಗೆ ಬರ್ತಿದೆ. ಲಾಸ್ ಏಂಜಲೀಸ್‌ನಲ್ಲಿ ಟೀಸರ್ ಪ್ರದರ್ಶನದ ಬಳಿಕ ಅಧಿಕೃತವಾಗಿ ಸೋಶಿಯಲ್ ಮೀಡಿಯಾದಲ್ಲಿ ಝಲಕ್ ರಿವೀಲ್ ಆಗ್ತಿದೆ.
ಹನುಮ ಜಯಂತಿ ಹಿನ್ನೆಲೆಯಲ್ಲಿ ಶ್ರೀರಾಮನ ಟೀಸರ್ ರಿಲೀಸ್ ಮಾಡಲಾಗ್ತಿದೆ. ಮುಂಬೈನಲ್ಲಿ ಒಂದು ದಿನ ಮುನ್ನ ಮಾಧ್ಯಮದವರಿಗೆ ಟೀಸರ್ ಪ್ರದರ್ಶನ ಮಾಡಲಾಗಿದೆ. ನೋಡಿದವರು ಹುಬ್ಬೇರಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಯೂಟ್ಯೂಬ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಶ್ರೀರಾಮನ ದರ್ಶನವಾಗಲಿದೆ. ಮೊದಲ ಭಾಗ ಸಿನಿಮಾ ದೀಪಾವಳಿ ಸಂಭ್ರಮದಲ್ಲಿ ತೆರೆಗೆ ಬರಲಿದೆ. 2ನೇ ಭಾಗ ಮುಂದಿನ ವರ್ಷ ದೀಪಾವಳಿಗೆ ಬಿಡುಗಡೆ ಆಗಲಿದೆ. ಅಷ್ಟಕ್ಕೂ ಎರಡು ಭಾಗಗಳಾಗಿ ಸಿನಿಮಾ ರಿಲೀಸ್ ಯಾಕೆ ಎನ್ನುವ ಬಗ್ಗೆ ನಿರ್ದೇಶಕರು ಮಾತನಾಡಿದ್ದಾರೆ.

'ರಾಮಾಯಣ' ಕಥೆಯನ್ನು ಒಂದೇ ಚಿತ್ರದಲ್ಲಿ ಹೇಳಿ ಮುಗಿಸಬಹುದಿತ್ತಲ್ಲ. ಎರಡು ಭಾಗಗಳಾಗಿ ಯಾಕೆ ತೆರೆಗೆ ತರ್ತಿದ್ದೀರಾ? ಎನ್ನುವ ಮಾಧ್ಯಮದವರ ಪ್ರಶ್ನೆಗೆ ಚಿತ್ರತಂಡ ಉತ್ತರಿಸಿದೆ. ಮೊದಲಿಗೆ ಒಂದೇ ಚಿತ್ರದಲ್ಲಿ ಕಥೆ ಹೇಳಿ ಮುಗಿಸಲು ಬಯಸಿದ್ದೆವು. ಆದರೆ ಯುದ್ಧದ ಸನ್ನಿವೇಶಗಳನ್ನು ಬಹಳ ರೋಚಕವಾಗಿ ತೆರೆಗೆ ತರಲು ಮುಂದಾಗಿದ್ದೇವೆ. ಹಾಗಾಗಿ ಎರಡು ಭಾಗಗಳಾಗಿ ಸಿನಿಮಾ ತೆರೆಗೆ ತರುವುದು ಅನಿವಾರ್ಯವಾಯಿತು ಎಂದು ಹೇಳಿದ್ದಾರೆ.


Click it and Unblock the Notifications











