ಧುರಂಧರ್ ಗೆದ್ದರೂ ರಣ್ವೀರ್ ಸಿಂಗ್‌ಗೆ ಸಿಗಲಿಲ್ಲ 'ಡಾನ್' ಪಟ್ಟ ; ಹೊರಗಡೆ ಬಂದಿದ್ದಾ ? ದಬ್ಬಿದ್ದಾ ?
ಬಾಲಿವುಡ್ ಅಂಗಳದಲ್ಲಿ ಈಗ ಎಲ್ಲಿ ನೋಡಿದರೂ ''ಡಾನ್ 3'' ಚಿತ್ರದ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಶಾರುಖ್ ಖಾನ್ ಜಾಗಕ್ಕೆ ರಣವೀರ್ ಸಿಂಗ್ ಬಂದಾಗ ದೊಡ್ಡ ಮಟ್ಟದ ಪರ-ವಿರೋಧ ಚರ್ಚೆಗಳು ಶುರುವಾಗಿದ್ದವು. ಈಗ ರಣವೀರ್ ಸಿಂಗ್ ಈ ಪ್ರಾಜೆಕ್ಟ್‌ದಿಂದಹಿಂದೆ ಸರಿದಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ.ಸಿನಿಮಾ ಪ್ರೇಮಿಗಳಲ್ಲಿ ಈ ಸುದ್ದಿ ಕೇಳಿ ಅಚ್ಚರಿ ಮೂಡಿದೆ.
ಅದರಲ್ಲೂ ಇತ್ತೀಚೆಗೆ ರಣವೀರ್ ಸಿಂಗ್ ನಟನೆಯ ''ಧುರಂಧರ್'' ಬಾಕ್ಸಾಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಈ ಯಶಸ್ಸಿನ ನಡುವೆಯೇ ಇಂತಹದೊಂದು ಸುದ್ದಿ ಹೊರಬಿದ್ದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಫರ್ಹಾನ್ ಅಖ್ತರ್ ನಿರ್ದೇಶನದ ಈ ಮೆಗಾ ಪ್ರಾಜೆಕ್ಟ್‌ನಲ್ಲಿ ಏನಾಗುತ್ತಿದೆ ಎಂಬುದು ಯಾರಿಗೂ ತಿಳಿಯುತ್ತಿಲ್ಲ. ರಣವೀರ್ ಅಭಿಮಾನಿಗಳು ಈ ಬಗ್ಗೆ ಅಧಿಕೃತ ಮಾಹಿತಿ ನಿರೀಕ್ಷಿಸುತ್ತಿದ್ದಾರೆ. ಆದರೆ ಸದ್ಯಕ್ಕೆ ಕೇಳಿ ಬರುತ್ತಿರುವ ಸುದ್ದಿಗಳ ಹಿಂದೆ ಒಂದು ಬಲವಾದ ಕಾರಣವಿದೆ ಎನ್ನಲಾಗುತ್ತಿದೆ.
ಧುರಂಧರ್ ಯಶಸ್ಸು ಮತ್ತು ಡಾನ್ 3 ಮೇಲಿನ ಪರಿಣಾಮ...
ರಣವೀರ್ ಸಿಂಗ್ ನಟನೆಯ 'ಧುರಂಧರ್' ಸಿನಿಮಾ ಈಗಾಗಲೇ ತೆರೆಕಂಡು ಪ್ರೇಕ್ಷಕರ ಮನ ಗೆದ್ದಿದೆ. ಈ ಚಿತ್ರದಲ್ಲಿನ ರಣವೀರ್ ಅವರ ಆಕ್ಷನ್ ಮತ್ತು ಮ್ಯಾನಸಂ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಹೀಗಿರುವಾಗ 'ಧುರಂಧರ್' ಯಶಸ್ಸಿನ ಬೆನ್ನಲ್ಲೇ ರಣವೀರ್ ಯಾಕೆ 'ಡಾನ್ 3' ಕೈಬಿಟ್ಟರು ಎಂಬ ಪ್ರಶ್ನೆ ಮೂಡುವುದು ಸಹಜ.
ಕೆಲವರು ಈ ಸಿನಿಮಾದ ದೊಡ್ಡ ಯಶಸ್ಸಿನಿಂದಾಗಿಯೇ ರಣವೀರ್ ತಮ್ಮ ಸಂಭಾವನೆ ಹೆಚ್ಚಿಸಿದ್ದಾರೆ ಅಥವಾ ಬೇರೆ ಆಫರ್ ಒಪ್ಪಿಕೊಂಡಿದ್ದಾರೆ ಎಂದು ಅಂದುಕೊಂಡಿದ್ದರು. ಆದರೆ ಅಸಲಿ ವಿಷಯ ಅದಲ್ಲ. ಇತ್ತೀಚಿನ ವರದಿಗಳ ಪ್ರಕಾರ ರಣವೀರ್ ಸಿಂಗ್ 'ಡಾನ್ 3' ಚಿತ್ರದಿಂದ ಹೊರಬಂದಿರುವುದು ಕೇವಲ ಡೇಟ್ಸ್ ಸಮಸ್ಯೆ ಅಥವಾ ಚಿತ್ರದ ಯಶಸ್ಸಿನ ಕಾರಣಕ್ಕಾಗಿ ಅಲ್ಲವೇ ಅಲ್ಲ.
ರಣವೀರ್ ಸಿಂಗ್ 'ಡಾನ್ 3' ಬಿಡಲು ಅಸಲಿ ಕಾರಣವೇನು?
ಇಲ್ಲಿಂದ ಅಸಲಿ ಕಥೆ ಶುರುವಾಗುತ್ತದೆ. ''ಇಂಡಿಯಾ ಟುಡೇ'' ವರದಿಯ ಪ್ರಕಾರ 'ಡಾನ್ 3' ಚಿತ್ರದ ಸ್ಕ್ರಿಪ್ಟ್ ಮತ್ತು ಮೇಕಿಂಗ್ ಶೈಲಿಯಲ್ಲಿ ಫರ್ಹಾನ್ ಅಖ್ತರ್ ಕೆಲವು ಹೊಸ ಪ್ರಯೋಗಗಳನ್ನು ಮಾಡಲು ಮುಂದಾಗಿದ್ದಾರೆ. ಆದರೆ ಈ ಬದಲಾವಣೆಗಳು ರಣವೀರ್ ಸಿಂಗ್ ಅವರ ನಿರೀಕ್ಷೆಗೆ ತಕ್ಕಂತೆ ಇಲ್ಲ ಎನ್ನಲಾಗುತ್ತಿದೆ. 'ಧುರಂಧರ್' ಚಿತ್ರದಲ್ಲಿ ಅವರು ಕಂಡ ಯಶಸ್ಸು ಅವರ ಇಮೇಜ್ ಅನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ದಿದೆ.

ಹೀಗಾಗಿ 'ಡಾನ್ 3' ಚಿತ್ರದಲ್ಲಿನ ತಮ್ಮ ಪಾತ್ರವು ಅದಕ್ಕಿಂತ ಶಕ್ತಿಶಾಲಿಯಾಗಿರಬೇಕು ಎಂಬುದು ರಣವೀರ್ ಆಶಯವಾಗಿತ್ತು. ಆದರೆ ನಿರ್ದೇಶಕರು ಕಥೆಯ ಹರಿವನ್ನು ಬೇರೆಯದೇ ದಿಕ್ಕಿನಲ್ಲಿ ಕೊಂಡೊಯ್ಯಲು ಬಯಸಿದ್ದಾರೆ. ಈ ಸೃಜನಾತ್ಮಕ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ರಣವೀರ್ ಈ ಪ್ರಾಜೆಕ್ಟ್‌ದಿಂದ ಗೌರವಯುತವಾಗಿ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಮುಂದಿನ ಡಾನ್ ಯಾರು?
ಈ ಹಠಾತ್ ಬೆಳವಣಿಗೆಯಿಂದಾಗಿ ಈಗ 'ಡಾನ್ 3' ತಂಡಕ್ಕೆ ದೊಡ್ಡ ತಲೆನೋವು ಶುರುವಾಗಿದೆ. ರಣವೀರ್ ಸಿಂಗ್ ಬದಲಿಗೆ ಮತ್ಯಾರು ಸೂಟ್ ಆಗಬಹುದು ಎಂಬ ಚರ್ಚೆ ಈಗ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಅಭಿಮಾನಿಗಳು ಮಾತ್ರ ಮತ್ತೆ 'ಕಿಂಗ್ ಖಾನ್' ಶಾರುಖ್ ಅವರೇ ಡಾನ್ ಆಗಿ ಮರಳಲಿ ಎಂದು ಆಗ್ರಹಿಸುತ್ತಿದ್ದಾರೆ.
ಸಿನಿಮಾ ರಂಗದಲ್ಲಿ ಬದಲಾವಣೆಗಳು ಸಹಜ. ರಣವೀರ್ ಸಿಂಗ್ ಸದ್ಯಕ್ಕೆ 'ಧುರಂಧರ್' ಸಕ್ಸಸ್ ಅನ್ನು ಎಂಜಾಯ್ ಮಾಡುತ್ತಿದ್ದು, ತಮ್ಮ ಇಮೇಜ್ಗೆ ತಕ್ಕಂತಹ ಮತ್ತೊಂದು ಬಿಗ್ ಆಕ್ಷನ್ ಕಥೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಡಾನ್ ಸರಣಿಯ ಭವಿಷ್ಯ ಈಗ ಫರ್ಹಾನ್ ಅಖ್ತರ್ ಅವರ ಮುಂದಿನ ನಿರ್ಧಾರದ ಮೇಲೆ ನಿಂತಿದೆ. ಈ ವಿದ್ಯಮಾನಗಳ ಬಗ್ಗೆ ರಣ್ವೀರ್ ಸಿಂಗ್ ಆಗಲಿ ಅಥವಾ ಫರ್ಹಾನ್ ಅಖ್ತರ್ ಆಗಲಿ ಸ್ಪಷ್ಟೀಕರಣವನ್ನು ಇನ್ನೂ ನೀಡಿಲ್ಲ. ಶೀಘ್ರದಲ್ಲಿಯೇ ಈ ಕುರಿತು ಅಧಿಕೃತ ಘೋಷಣೆ ಹೊರ ಬೀಳುವ ಸಾಧ್ಯತೆ ಇದೆ.


Click it and Unblock the Notifications











