For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಬಾಲಿವುಡ್ ಪ್ರವೇಶಕ್ಕೆ 'ಮಿಷನ್ ಮಜ್ನು' ಚಿತ್ರವನ್ನೇ ಆಯ್ಕೆ ಮಾಡಿದ್ದೇಕೆ?

  |

  ದಕ್ಷಿಣ ಚಿತ್ರರಂಗದಲ್ಲಿ ಸತತವಾಗಿ ಸಕ್ಸಸ್ ಕಂಡ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌ನಲ್ಲಿ ಚೊಚ್ಚಲ ಸಿನಿಮಾ ಮಾಡ್ತಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರ ನಟನೆಯ 'ಮಿಷನ್ ಮಜ್ನು' ಸಿನಿಮಾ ಮೂಲಕ ರಶ್ಮಿಕಾ ಬಿಗ್ ಇಂಡಸ್ಟ್ರಿಗೆ ಪ್ರವೇಶ ಪಡೆದುಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ನನ್ನದು ವಿಶೇಷ ಪಾತ್ರ, ಈ ಸಿನಿಮಾ ನನ್ನ ಪಾಲಿಗೆ ತುಂಬಾ ಸ್ಪೆಷಲ್ ಎಂದು ಅನೇಕ ಸಲ ಹೇಳಿಕೊಂಡಿದ್ದಾರೆ.

  'ಮಿಷನ್ ಮಜ್ನು' ಚಿತ್ರಕ್ಕೂ ಮುಂಚೆಯೂ ರಶ್ಮಿಕಾ ಹಲವು ಹಿಂದಿ ಪ್ರಾಜೆಕ್ಟ್‌ಗಳು ಅವಕಾಶ ಬಂದಿದ್ದವು. ಆದರೆ, ಇದೇ ಚಿತ್ರವನ್ನು ತಮ್ಮ ಚೊಚ್ಚಲ ಸಿನಿಮಾ ಆಗಿ ಆಯ್ಕೆಮಾಡಿಕೊಂಡರು. ಇದೊಂದು ಸ್ಪೈ ಥ್ರಿಲ್ಲರ್ ಕಥೆ ಹೊಂದಿದೆ ಎನ್ನುವುದು ವಿಶೇಷ. ಈ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ರಾ ಏಜೆಂಟ್ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ರಶ್ಮಿಕಾ ಪಾತ್ರ ಏನು ಎನ್ನುವುದು ಇದುವರೆಗೂ ಬಹಿರಂಗವಾಗಿಲ್ಲ.

  ರಶ್ಮಿಕಾ ಮಂದಣ್ಣಗೆ ಅಭಿಮಾನಿಗಳ ಮುತ್ತಿಗೆ: ಫುಲ್ ಖುಷ್ ಆದ ನಟಿರಶ್ಮಿಕಾ ಮಂದಣ್ಣಗೆ ಅಭಿಮಾನಿಗಳ ಮುತ್ತಿಗೆ: ಫುಲ್ ಖುಷ್ ಆದ ನಟಿ

  ಅಷ್ಟಕ್ಕೂ, ಮಿಷನ್ ಮಜ್ನು ಚಿತ್ರವನ್ನೇ ಚೊಚ್ಚಲ ಬಾಲಿವುಡ್ ಚಿತ್ರ ಆಗಿ ಆಯ್ಕೆ ಮಾಡಿಕೊಂಡಿದ್ದು ಏಕೆ ಎನ್ನುವು ವಿಚಾರ ಕುತೂಹಲ ಕೆರಳಿಸಿದೆ. ಈ ಬಗ್ಗೆ ಸ್ವತಃ ರಶ್ಮಿಕಾ ಮಂದಣ್ಣ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮುಂದೆ ಓದಿ...

  'ಮಿಷನ್ ಮಜ್ನು' ಚಿತ್ರೀಕರಣ ಮುಗಿಸಿದ ರಶ್ಮಿಕಾ

  'ಮಿಷನ್ ಮಜ್ನು' ಚಿತ್ರೀಕರಣ ಮುಗಿಸಿದ ರಶ್ಮಿಕಾ

  ಕೋವಿಡ್ ಭೀತಿಯ ನಡುವೆಯೇ ರಶ್ಮಿಕಾ ಮಂದಣ್ಣ ತಮ್ಮ ಮೊದಲ ಹಿಂದಿ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಸಂತಸ ಹಂಚಿಕೊಂಡಿದ್ದರು. ''ಮಿಷನ್ ಮಜ್ನು ಚಿತ್ರದಲ್ಲಿ ನಾನು ಕೆಲಸ ಮಾಡಿದ್ದು ಅದ್ಭುತ ನೆನಪು. ನಾನು ಅದಾಗಲೇ ಚೊಚ್ಚಲ ಹಿಂದಿ ಸಿನಿಮಾ ಶೂಟಿಂಗ್ ಮುಗಿಸಿದೆ ಎನ್ನುವುದನ್ನು ನಂಬಲು ಸಾಧ್ಯವಾಗ್ತಿಲ್ಲ. ನಾನು ಈ ಚಿತ್ರದ ಸ್ಕ್ರಿಪ್ಟ್ ಕೇಳಿದಾಗ 'ನಾನು ಅದ್ಭುತ ಪ್ರಾಜೆಕ್ಟ್‌ನಲ್ಲಿ ಭಾಗಿಯಾಗುತ್ತಿದ್ದೇನೆ' ಎಂದು ಅಂದುಕೊಂಡಿದ್ದೆ. ಈಗ ಅದು ನೆನಪಾಗುತ್ತಿದೆ.'' ಎಂದಿದ್ದಾರೆ.

  ಹಿಂದಿ ಚೊಚ್ಚಲ ಸಿನಿಮಾದ ಚಿತ್ರೀಕರಣ ಮುಗಿಸಿದ ರಶ್ಮಿಕಾ ಮಂದಣ್ಣಹಿಂದಿ ಚೊಚ್ಚಲ ಸಿನಿಮಾದ ಚಿತ್ರೀಕರಣ ಮುಗಿಸಿದ ರಶ್ಮಿಕಾ ಮಂದಣ್ಣ

  ಸ್ಕ್ರಿಪ್ಟ್ ಕೇಳಿದ ಮೊದಲ ಸಲವೇ ಫಿಕ್ಸ್ ಆದೆ

  ಸ್ಕ್ರಿಪ್ಟ್ ಕೇಳಿದ ಮೊದಲ ಸಲವೇ ಫಿಕ್ಸ್ ಆದೆ

  ''ಮೊದಲ ಚಿತ್ರಗಳು ಯಾವಾಗಲೂ ವಿಶೇಷ. ಮಿಷನ್ ಮಜ್ನು ನನ್ನನ್ನು ಗಡಿದಾಟಿ ಬರುವ ಅವಕಾಶ ಮಾಡಿಕೊಟ್ಟ ಚಿತ್ರ. ಈ ಪ್ರಾಜೆಕ್ಟ್‌ನೊಂದಿಗೆ ಸುಂದರ ಜನರು ಹಾಗೂ ಹಿಂದಿ ಚಿತ್ರರಂಗದೊಂದಿಗೆ ನನ್ನ ಪಯಣ ಆರಂಭಿಸಿದೆ ಎನ್ನುವ ಸಂತಸ ನನ್ನಲ್ಲಿದೆ. ಈ ಚಿತ್ರದ ಸ್ಕ್ರಿಪ್ಟ್ ಮೊದಲ ಬಾರಿಗೆ ಕೇಳಿದಾಗಲೇ ಇದರಲ್ಲಿ ನಾನು ಭಾಗಿಯಾಗಬೇಕು ಎಂದು ನಿರ್ಧರಿಸಿದೆ. ಏಕಂದ್ರೆ, ಈ ಅವಕಾಶ ಕಳೆದುಕೊಂಡರೆ ಮತ್ತೊಮ್ಮೆ ಇಂತಹ ಪಾತ್ರ ನಾನು ಮಾಡುವುದಿಲ್ಲ ಎಂದು ತಿಳಿದಿತ್ತು. ಅಂತಹದೊಂದು ಪಾತ್ರ ಇದಾಗಿತ್ತು. ಎಂದಿಗೂ ವಿಶೇಷವಾಗಿ ಉಳಿಯುವ ಪಾತ್ರ ಇದು'' ಎಂದು ಚಿತ್ರದ ಬಗ್ಗೆ ಮಾತನಾಡಿದರು.

  ಅದ್ಭುತ ಅನುಭವ ನನಗೆ ಸಿಕ್ಕಿದೆ

  ಅದ್ಭುತ ಅನುಭವ ನನಗೆ ಸಿಕ್ಕಿದೆ

  ಮಾತು ಮುಂದುವರಿಸಿ, ''ಮಿಷನ್ ಮಜ್ನು ನನಗೆ ಹಲವು ಪ್ರಥಮಗಳ ಅನುಭವ ನೀಡಿದೆ. ಭಾರತದ ಉತ್ತರದ ಭಾಗ, ಅದರ ಸಂಸ್ಕೃತಿ, ಭಾಷೆ, ಜನರು, ಉದ್ಯಮದ ಜೊತೆಗೆ ಅದ್ಭುತ ತಂಡ ಮತ್ತು ಸಹ ನಟರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ನಾನು ಇದಕ್ಕಿಂತ ಹೆಚ್ಚು ಕೇಳುವುದಿಲ್ಲ. ಮಿಷನ್ ಮಜ್ನು ತಂಡಕ್ಕೆ ಪ್ರೀತಿ ಪೂರ್ವಕ ಧನ್ಯವಾದ'' ತಿಳಿಸಿದ್ದಾರೆ ನ್ಯಾಷನಲ್ ಕ್ರಶ್ ರಶ್ಮಿಕಾ.

  ನೈಜ ಘಟನೆಗಳನ್ನು ಆಧರಿಸಿದ ಚಿತ್ರ

  ನೈಜ ಘಟನೆಗಳನ್ನು ಆಧರಿಸಿದ ಚಿತ್ರ

  'ಮಿಷನ್ ಮಜ್ನು' 1970ರ ನೈಜ ಘಟನೆಗಳಿಂದ ಸ್ಫೂರ್ತಿಯಿಂದ ತಯಾರಾಗಿತ್ತಿರುವ ಚಿತ್ರ. ಈ ಚಿತ್ರದಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ರಾ ಏಜೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದುವರೆಗೂ ರಶ್ಮಿಕಾ ಮಂದಣ್ಣ ಪಾತ್ರ ಏನು ಎನ್ನುವುದು ಬಹಿರಂಗವಾಗಿಲ್ಲ. ರೋನಿ ಸ್ಕ್ರೂವಾಲಾ, ಅಮರ್ ಬುಟಾಲಾ ಮತ್ತು ಗರಿಮಾ ಮೆಹ್ತಾ ಈ ಚಿತ್ರ ನಿರ್ಮಿಸಿದ್ದಾರೆ. ಇನ್ನು ಚೊಚ್ಚಲ ಸಿನಿಮಾ 'ಮಿಷನ್ ಮಜ್ನು' ತೆರೆಗೆ ಬಂದಿಲ್ಲ. ಅಷ್ಟರಲ್ಲೇ ಎರಡನೇ ಬಾಲಿವುಡ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. ಅಮಿತಾಭ್ ಬಚ್ಚನ್ ನಟಿಸುತ್ತಿರುವ 'ಗುಡ್ ಬೈ' ಚಿತ್ರದಲ್ಲಿ ನ್ಯಾಷನಲ್ ಕ್ರಶ್ ಕಾಣಿಸಿಕೊಳ್ಳುತ್ತಿದ್ದಾರೆ. ಮಿಷನ್ ಮಜ್ನು ಜೊತೆ ಜೊತೆಯಲ್ಲಿ ಈ ಚಿತ್ರದ ಶೂಟಿಂಗ್ ಸಹ ಮಾಡಿದ್ದಾರೆ.

  English summary
  Why South actress Rashmika Mandanna chose Mission Majnu as her Hindi debut?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X