ಬಾಲಿವುಡ್‌ಗೆ ಕಾಲಿಟ್ಟಿದ್ದೇಕೆ ರಶ್ಮಿಕಾ ಮಂದಣ್ಣ? ಗುಟ್ಟು ಬಿಚ್ಚಿಟ್ಟ ನಟಿ

ದಕ್ಷಿಣ ಭಾರತ ಸಿನಿಮಾ ತಾರೆಯರಿಗೆ ತಾವು ಬಾಲಿವುಡ್‌ನಲ್ಲಿ ನಟಿಸಬೇಕೆಂಬ ಹಪಹಪಿ ಇರುವುದು ಹೊಸದಲ್ಲ. ಹಲವು ದಕ್ಷಿಣ ಭಾರತದ ನಟಿಯರು ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷಿಸಿದ್ದಾರೆ. ಕೆಲವರಿಗೆ ಯಶಸ್ಸು ಧಕ್ಕಿದೆ, ಕೆಲವರಿಗಿಲ್ಲ.

ಹಿರಿಯ ನಟಿ ರೇಖಾ ಇಂದ ಆರಂಭಿಸಿ ದಕ್ಷಿಣ ಭಾರತ ಸಿನಿಮಾಗಳಲ್ಲಿ ನಟಿಸಿದ ಹಲವು ನಟಿಯರು ಬಾಲಿವುಡ್‌ನಲ್ಲಿ ಮಿನುಗಿದ್ದಾರೆ, ಮಿನುಗುತ್ತಿದ್ದಾರೆ. ದಕ್ಷಿಣ ಭಾರತದಿಂದ ಹೋಗಿ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿರುವ ಇತ್ತೀಚಿನ ನಟಿಯರಲ್ಲಿ ಮುಖ್ಯವಾದ ಹೆಸರು ರಶ್ಮಿಕಾ ಮಂದಣ್ಣರದ್ದು.

ಕನ್ನಡದ 'ಕಿರಿಕ್ ಪಾರ್ಟಿ' ಸಿನಿಮಾದಿಂದ ಸಿನಿಮಾ ಜರ್ನಿ ಆರಂಭಿಸಿದ ಕನ್ನಡತಿ ರಶ್ಮಿಕಾ ಮಂದಣ್ಣ ಒಂದೊಂದೆ ಮೆಟ್ಟಿಲುಗಳನ್ನು ಹತ್ತುತ್ತಾ ಇದೀಗ ಬಾಲಿವುಡ್‌ ಅಂಗಳದಲ್ಲಿದ್ದಾರೆ. ಒಂದರಮೇಲೊಂದು ಹಿಂದಿ ಸಿನಿಮಾ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ. ತಮ್ಮ ಹೊಸ ಹಿಂದಿ ಸಿನಿಮಾದ ಪ್ರಚಾರದಲ್ಲಿ ನಿರತರಾಗಿರುವ ರಶ್ಮಿಕಾ ಮಂದಣ್ಣ, ತಾನೇಕೆ ಬಾಲಿವುಡ್‌ಗೆ ಬಂದೆ ಎಂಬುದನ್ನು ಹೇಳಿದ್ದಾರೆ.

ಬಾಲಿವುಡ್‌ಗೆ ಬರಲು ಕಾರಣ ತಿಳಿಸಿದ ರಶ್ಮಿಕಾ

ಬಾಲಿವುಡ್‌ಗೆ ಬರಲು ಕಾರಣ ತಿಳಿಸಿದ ರಶ್ಮಿಕಾ

ತಮ್ಮ ಹೊಸ ಹಿಂದಿ ಸಿನಿಮಾ 'ಗುಡ್ ಬೈ' ಪ್ರಚಾರದಲ್ಲಿ ರಶ್ಮಿಕಾ ಮಂದಣ್ಣ ತೊಡಗಿಕೊಂಡಿದ್ದು, ಪ್ರಚಾರದ ಮಧ್ಯೆ ತಾವೇಕೆ ಬಾಲಿವುಡ್‌ಗೆ ಬಂದಿದ್ದು ಎಂದು ಹೇಳಿದ್ದಾರೆ. ರಶ್ಮಿಕಾ ಮಂದಣ್ಣ ಬಾಲಿವುಡ್‌ಗೆ ಬರಲು ಮುಖ್ಯ ಕಾರಣ ಅವರ ಅಭಿಮಾನಿಗಳೇ ಅಂತೆ. ಅವರ ಕೆಲವು ಒತ್ತಾಯ, ಪ್ರೀತಿ ಪೂರ್ವಕ ಸಂದೇಶ, ಬೇಡಿಕೆಗಳಿಂದಾಗಿಯೇ ರಶ್ಮಿಕಾ ಬಾಲಿವುಡ್‌ಗೆ ಬಂದರಂತೆ.

ಅಭಿಮಾನಿಗಳೇ ಕಾರಣ ಎಂದ ರಶ್ಮಿಕಾ

ಅಭಿಮಾನಿಗಳೇ ಕಾರಣ ಎಂದ ರಶ್ಮಿಕಾ

''ನಾನು ಬಾಲಿವುಡ್‌ಗೆ ಬರಲು ಮುಖ್ಯ ಕಾರಣ ನನ್ನ ಅಭಿಮಾನಿಗಳು. ನಾನು ಹಿಂದಿ ಸಿನಿಮಾದ ಚಿತ್ರಕತೆಗಳನ್ನು ಕೇಳಲು ಪ್ರಾರಂಭಿಸಲು ಕಾರಣ ನನ್ನ ವೀಕ್ಷಕರು. ಇಲ್ಲಿಗೆ ಬನ್ನಿ, ಇಲ್ಲಿ ಒಂದು ಸಿನಿಮಾ ಮಾಡಿ, ನಿಮ್ಮ ಕೆಲಸ ನೋಡಲು ನಾವು ಬಯಸಿದ್ದೇವೆ ಎಂದು ಹೇಳಿದ್ದರಿಂದಲೇ ನಾನು ಇಲ್ಲಿಗೆ (ಬಾಲಿವುಡ್‌) ಬಂದೆ. ಅದೇ ಸಮಯಕ್ಕೆ 'ಪುಷ್ಪ' ಸಿನಿಮಾ ಸಹ ಬಂದು ದೊಡ್ಡ ಹಿಟ್ ಆಯ್ತು. ಆ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನನಗೆ ಇನ್ನಷ್ಟು ಧೈರ್ಯ ನೀಡಿತು'' ಎಂದಿದ್ದಾರೆ ರಶ್ಮಿಕಾ ಮಂದಣ್ಣ.

ಹಿಂದಿ ಅವಕಾಶ ಸಿಕ್ಕಿದ್ದು ಹೇಗೆ?

ಹಿಂದಿ ಅವಕಾಶ ಸಿಕ್ಕಿದ್ದು ಹೇಗೆ?

ತೆಲುಗು, ತಮಿಳು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದ ಸಮಯದಲ್ಲಿಯೇ ರಶ್ಮಿಕಾ ಮಂದಣ್ಣ ಮೊದಲಿಗೆ ಹನಿ ಸಿಂಗ್ ಜೊತೆಗೆ ಹಿಂದಿ ಮ್ಯೂಸಿಕ್ ಆಲ್ಬಂ ಒಂದರಲ್ಲಿ ಕಾಣಿಸಿಕೊಂಡರು. ಆ ಬಳಿಕ ಅವರಿಗೆ ಮೊದಲಿಗೆ ಹಿಂದಿ ಸಿನಿಮಾ 'ಮಿಷನ್ ಮಜ್ನು' ಅವಕಾಶ ದೊರಕಿತು. ಆ ಸಿನಿಮಾಕ್ಕೆ ನಟ ಸಿದ್ಧಾರ್ಥ್ ಮಲ್ಹೋತ್ರಾ ನಾಯಕ. ಆ ಬಳಿಕ ಅಮಿತಾಬ್ ಬಚ್ಚನ್ ಜೊತೆಗೆ ನಟಿಸುವ ಅವಕಾಶ 'ಗುಡ್ ಬೈ' ಸಿನಿಮಾದಲ್ಲಿ ಲಭಿಸಿತು. ಆ ಸಿನಿಮಾ ಅಕ್ಟೋಬರ್ 07 ರಂದು ಬಿಡುಗಡೆ ಆಗಲಿದೆ.

ಹಲವು ಬಾಲಿವುಡ್ ಅವಕಾಶ ರಶ್ಮಿಕಾ ಕೈಯಲ್ಲಿ

ಹಲವು ಬಾಲಿವುಡ್ ಅವಕಾಶ ರಶ್ಮಿಕಾ ಕೈಯಲ್ಲಿ

ಈ ಎರಡು ಸಿನಿಮಾಗಳ ಬಳಿಕ ಇನ್ನೂ ಎರಡು ದೊಡ್ಡ ಬಾಲಿವುಡ್ ಪ್ರಾಜೆಕ್ಟ್‌ಗಳು ರಶ್ಮಿಕಾರ ಪಾಲಾಗಿವೆ. ಟೈಗರ್ ಶ್ರಾಫ್ ಜೊತೆಗೆ 'ಸ್ಕ್ರೂ ಡೀಲಾ' ಸಿನಿಮಾದಲ್ಲಿ ನಟಿಸಲಿದ್ದಾರೆ. ಆ ಸಿನಿಮಾದ ಬಳಿಕ ಬಾಲಿವುಡ್‌ನ ಟಾಪ್ ಯುವನಟ ಕಾರ್ತಿಕ್ ಆರ್ಯನ್ ಜೊತೆಗೆ 'ಆಶಿಕಿ 3' ಸಿನಿಮಾದಲ್ಲಿ ನಟಿಸಲಿದ್ದಾರೆ. ಇವುಗಳ ಜೊತೆಗೆ ಕೆಲವು ಬಾಲಿವುಡ್ ಸ್ಟಾರ್‌ಗಳ ಜತೊಗೆ ಜಾಹೀರಾತುಗಳಲ್ಲಿಯೂ ರಶ್ಮಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ದಕ್ಷಿಣ ಭಾರತದ ಸಿನಿಮಾದೊಂದಿಗೂ ಸಂಬಂಧ ಮುರಿದುಕೊಳ್ಳದ ರಶ್ಮಿಕಾ ಇಲ್ಲಿಯೂ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ ಸ್ಟಾರ್ ನಟ ವಿಜಯ್ ಜೊತೆ 'ವಾರಿಸು' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್ ಜೊತೆ 'ಪುಷ್ಪ 2' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Why actress Rashmika Mandanna went to Bollywood, She said the reason in 'Good Bye' movie promotions.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X