ಸುಶಾಂತ್ ಸಿಂಗ್ ಅನ್ನು ಬಿಟ್ಟು ಹೋಗಿದ್ದೇಕೆ ಪ್ರೇಯಸಿ ರಿಯಾ
ಸುಶಾಂತ್ ಸಿಂಗ್ ಸಾವು ಹಲವು ತಿರುವುಗಳನ್ನು ತೆಗೆದುಕೊಳ್ಳುತ್ತಲೇ ಇದೆ. ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಆಕೆಯೇ ಮೊದಲ ಆರೋಪಿಯಾಗಿದ್ದಾರೆ.
Recommended Video
ಸುಶಾಂತ್ ಸಿಂಗ್ ಜೊತೆಗೆ ವಾಸಿಸುತ್ತಿದ್ದ ರಿಯಾ ಚಕ್ರವರ್ತಿ ಜೂನ್ 08 ರಂದು ಸುಶಾಂತ್ ಮನೆಯಿಂದ ಹೊರಹೋಗಿದ್ದರು. ಅವರು ಮನೆಯಿಂದ ಹೊರಬಂದ ಆರು ದಿನಗಳಲ್ಲಿ ಅಂದರೆ ಜೂನ್ 14 ಕ್ಕೆ ಸುಶಾಂತ್ ಆತ್ಮಹತ್ಯೆಗೆ ಶರಣಾಗಿದ್ದರು.
ಸುಶಾಂತ್ ಸಿಂಗ್ ಜೊತೆಗೆ ಅತೀವ ಆತ್ಮೀಯವಾಗಿದ್ದ ರಿಯಾ ಹಠಾತ್ತನೆ ಮನೆಯಿಂದ ಹೊರಗೆ ಬಂದಿದ್ದಕ್ಕೆ ಕಾರಣವೇನು ಎಂಬುದು ಪ್ರಶ್ನೆಯಾಗಿತ್ತು. ಇದಕ್ಕೆ ರಿಯಾ ಪರ ವಕೀಲರು ಉತ್ತರ ಕೊಟ್ಟಿದ್ದಾರೆ.

ಪದೇ-ಪದೇ ಅಳುತ್ತಿದ್ದ ಸುಶಾಂತ್
ಸುಶಾಂತ್ ಸಿಂಗ್ ಜೂನ್ ತಿಂಗಳಲ್ಲಿ ತೀವ್ರ ಮಾನಸಿಕ ಸಮಸ್ಯೆ ಎದುರಿಸುತ್ತಿದ್ದರಂತೆ. ಪದೇ-ಪದೇ ಅಳುತ್ತಿದ್ದರಂತೆ ಸುಶಾಂತ್. ತಮ್ಮ ಮನೆಯವರಿಗೂ ಕರೆ ಮಾಡಿ ತಮ್ಮನ್ನು ಭೇಟಿ ಮಾಡುವಂತೆ ಕೇಳಿಕೊಳ್ಳುತ್ತಿದ್ದರಂತೆ. ಈ ಸಮಯದಲ್ಲೆಲ್ಲಾ ರಿಯಾ ಅವರ ಜೊತೆಯೇ ಇದ್ದರಂತೆ.

ಮುಂಬೈ ಬಿಟ್ಟುಹೋಗಲು ನಿರ್ಧರಿಸಿದ್ದ ಸುಶಾಂತ್
ಮುಂಬೈ ಬಿಟ್ಟು ಹೋಗಲು ಸುಶಾಂತ್ ನಿರ್ಧರಿಸಿದ್ದರಂತೆ ಹಾಗಾಗಿಯೇ ತಮ್ಮ ಪೋಷಕರಿಗೆ, ಕುಟುಂಬದವರಿಗೆ ಕರೆ ಮಾಡಿ ತಮ್ಮನ್ನು ಭೇಟಿ ಮಾಡಲು, ತಮ್ಮೊಂದಿಗೆ ಇರಲು ಒತ್ತಾಯಿಸಿದರಂತೆ. ಅಂತಿಮವಾಗಿ ಸುಶಾಂತ್ ಸಹೋದರಿ ಮೀತು ಸುಶಾಂತ್ ಜೊತೆ ಇರಲು ಒಪ್ಪಿದರಂತೆ.

ಸುಶಾಂತ್ ಅವರ ಮಾತಿನಂತೆ ಹೊರಗೆ ಹೋಗಿದ್ದರಂತೆ ರಿಯಾ
ಆಗ ಸುಶಾಂತ್ ಅವರೇ ರಿಯಾ ಅವರನ್ನು ಮನೆ ಬಿಟ್ಟು ಹೋಗುವಂತೆ ಹೇಳಿದರಂತೆ. 'ಅಕ್ಕ ನನ್ನ ಜೊತೆ ಇರಲು ಬರುತ್ತಿದ್ದಾರೆ, ನೀನು ಕೆಲ ಕಾಲ ಪೋಷಕರೊಂದಿಗೆ ಇರು' ಎಂದು ಸುಶಾಂತ್ ಹೇಳಿದರಂತೆ. ಆಗ ರಿಯಾ ಸಹ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರಂತೆ.

ಪೋಷಕರನ್ನು ನೋಡಲು ಹೋದ ರಿಯಾ
ಪೋಷಕರನ್ನು ನೋಡಿ ಬಹಳ ದಿನ ಆಗಿತ್ತಾದ್ದರಿಂದ ರಿಯಾ ಸಹ ಒಲ್ಲದ ಮನಸ್ಸಿನಿಂದಲೇ ಸುಶಾಂತ್ ಮನೆ ಬಿಟ್ಟು ಹೋದರಂತೆ. ಹೀಗೆಂದು ರಿಯಾ ಪರ ವಕೀಲರು ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ರಿಯಾ ಹೇಳಿಕೆ ಒಪ್ಪುತ್ತಿಲ್ಲ ಸುಶಾಂತ್ ಕುಟುಂಬ
ಆದರೆ ಇದನ್ನು ಸುಳ್ಳು ಎನ್ನುತ್ತಿರುವ ಸುಶಾಂತ್ ಕುಟುಂಬ ಸದಸ್ಯರು, 'ಸುಶಾಂತ್ ಹೇಳಿದ ಕಾರಣಕ್ಕೆ ರಿಯಾ ಮನೆ ಬಿಟ್ಟು ಹೊರಗೆ ಹೋಗಿದ್ದೇ ಆಗಿದ್ದಲ್ಲಿ, ಸುಶಾಂತ್ ನಂಬರ್ ಅನ್ನು ರಿಯಾ ಬ್ಲಾಕ್ ಯಾಕೆ ಮಾಡಿದ್ದರು'. ಸುಶಾಂತ್ ಕರೆಯನ್ನು ರಿಯಾ ಏಕೆ ಸ್ವೀಕರಿಸಲಿಲ್ಲ' ಎಂದು ಪ್ರಶ್ನೆ ಮಾಡಿದ್ದಾರೆ.


Click it and Unblock the Notifications











