For Quick Alerts
  ALLOW NOTIFICATIONS  
  For Daily Alerts

  ವಿವಾಹಕ್ಕೆ 5 ದಿನ ಇದ್ದಾಗ ಸಲ್ಮಾನ್ ಖಾನ್ 'ಮದ್ವೆ ಬೇಡ' ಅಂದಿದ್ದೇಕೆ?

  |

  ಬಾಲಿವುಡ್ ಮೋಸ್ಟ್ ವಾಂಟೆಡ್ ಬ್ಯಾಚುಲರ್ ಸಲ್ಮಾನ್ ಖಾನ್ 53 ವರ್ಷ ದಾಟಿದರೂ ಇನ್ನು ಮದುವೆ ಆಗಿಲ್ಲ. ಸಲ್ಲು ಯಾಕೆ ಮದುವೆ ಆಗಿಲ್ಲ ಎಂಬ ಕಾರಣ ಹುಡುಕುತ್ತಾ ಹೋದರೆ, ಗಲ್ಲಿ ಗಲ್ಲಿಗೊಂದು ಕಥೆ ಹುಟ್ಟಿಕೊಳ್ಳುತ್ತೆ.

  ಸಂಗೀತ ಬಿಜಲಾನಿ, ಐಶ್ವರ್ಯ ರೈ, ಡೈಸಿ ಶಾ, ಕತ್ರಿಕಾ ಕೈಫ್, ಜರೀನ್ ಖಾನ್ ಹೀಗೆ ಹಲವು ನಟಿಯರ ಜೊತೆ ಬ್ಯಾಡ್ ಬಾಯ್ ಹೆಸರು ತಳುಕು ಹಾಕಿಕೊಂಡಿತ್ತು. ಆದರೆ, ಸಲ್ಲು ಯಾರ ಜೊತೆಯಲ್ಲು ಮದುವೆ ಆಗಿಲ್ಲ.

  ಈ ವಿಷ್ಯದಲ್ಲಿ 'ದಬಾಂಗ್ 3'ಯನ್ನು ಮೀರಿಸಿದೆ 'ಅವನೇ ಶ್ರೀಮನ್ನಾರಾಯಣ'ಈ ವಿಷ್ಯದಲ್ಲಿ 'ದಬಾಂಗ್ 3'ಯನ್ನು ಮೀರಿಸಿದೆ 'ಅವನೇ ಶ್ರೀಮನ್ನಾರಾಯಣ'

  ಅದೆಷ್ಟು ಜನಕ್ಕೆ ಗೊತ್ತೋ...ಗೊತ್ತಿಲ್ವೋ...ಸಲ್ಮಾನ್ ಖಾನ್ ಗೆ ಮದುವೆ ಫಿಕ್ಸ್ ಆಗಿತ್ತು. ಮದುವೆಗೆ ಇನ್ನು 5 ದಿನ ಮಾತ್ರ ಬಾಕಿ ಇತ್ತು. ಅಂತಿಮ ಕ್ಷಣದಲ್ಲಿ ಸಲ್ಲು 'ಮದ್ವೆ ಬೇಡ' ಎಂದು ನಿರ್ಧರಿಸಿದರಂತೆ. ಅದಕ್ಕೆ ಸ್ಟಾರ್ ನಟಿಯೊಬ್ಬರು ಕಾರಣ ಎಂದು ನಿರ್ಮಾಪಕರೊಬ್ಬರು ಬಾಯ್ಬಿಟ್ಟಿದ್ದಾರೆ. ಅಷ್ಟಕ್ಕೂ, ಸಲ್ಲು ಮದುವೆಗೂ ಆ ನಟಿಗೂ ಏನ್ ಸಂಬಂಧ? ಮುಂದೆ ಓದಿ.....

  1999ರಲ್ಲಿ ಮದುವೆ ಫಿಕ್ಸ್ ಆಗಿತ್ತಂತೆ

  1999ರಲ್ಲಿ ಮದುವೆ ಫಿಕ್ಸ್ ಆಗಿತ್ತಂತೆ

  ಬಾಲಿವುಡ್ ನಿರ್ಮಾಪಕ ಸಾಜಿದ್ ಸಾಜಿದ್ ನಾಡಿಯಾಡ್ವಾಲಾ, ಕಪಿಲ್ ಶರ್ಮಾ ಶೋನಲ್ಲಿ ಮಾತನಾಡುವ ವೇಳೆ ಸಲ್ಮಾನ್ ಖಾನ್ ಮದುವೆ ರದ್ದಾದ ಘಟನೆ ಕುರಿತು ಹೇಳಿಕೊಂಡಿದ್ದಾರೆ. '1999ರ ಸಮಯದಲ್ಲಿ ಸಲ್ಮಾನ್ ಖಾನ್ ಅವರಿಗೆ ಮದುವೆ ಮಾಡಲು ಮನೆಯಲ್ಲಿ ನಿರ್ಧರಿಸಿದ್ದರಂತೆ. ತಂದೆಯ ಹುಟ್ಟುಹಬ್ಬದ ದಿನವೇ ವಿವಾಹ ಜರುಗಿಸಲು ತೀರ್ಮಾನಿಸಲಾಗಿತ್ತು' ಎಂದು ಸಾಜೀದ್ ಬಹಿರಂಗಪಡಿಸಿದ್ದಾರೆ.

  ಆಮಂತ್ರಣ ಪತ್ರಿಕೆ ಹಂಚಲಾಗಿತ್ತು

  ಆಮಂತ್ರಣ ಪತ್ರಿಕೆ ಹಂಚಲಾಗಿತ್ತು

  ''ಮದುವೆಗೆ ಎಲ್ಲ ಸಿದ್ಧತೆ ಆಗಿತ್ತು. ಆಮಂತ್ರಣ ಪತ್ರಿಕೆಯನ್ನು ಹಂಚಲಾಗಿತ್ತು. ಮದುವೆ ಐದಾರು ದಿನ ಇತ್ತು. ಆ ಸಮಯದಲ್ಲಿ ಸಲ್ಮಾನ್ ಖಾನ್ ಮದುವೆ ಬೇಡ ಅಂದುಬಿಟ್ಟರು. ನನಗೆ ಮದುವೆ ಆಗುವ ಮೂಡ್ ಇಲ್ಲ ಎಂದು ಹೊರಟು ಹೋದರು'' ಎಂದು ಸಾಜೀದ್ ಮದುವೆ ಬಗ್ಗೆ ಹೇಳಿದ್ದಾರೆ.

  ಸಲ್ಮಾನ್ ಖಾನ್ ಕನ್ನಡ ಕೇಳಿ ಖುಷಿಯಾದ ಕನ್ನಡಿಗರುಸಲ್ಮಾನ್ ಖಾನ್ ಕನ್ನಡ ಕೇಳಿ ಖುಷಿಯಾದ ಕನ್ನಡಿಗರು

  ಕಾರಣ ಐಶ್ವರ್ಯ ರೈ?

  ಕಾರಣ ಐಶ್ವರ್ಯ ರೈ?

  ಕಾಕತಾಳೀಯ ಅಂದ್ರೆ ಆ ಸಮಯದಲ್ಲಿ ಐಶ್ವರ್ಯ ರೈ ಜೊತೆ ಸಲ್ಮಾನ್ ಖಾನ್ ಹೆಚ್ಚು ಆತ್ಮೀಯವಾಗಿದ್ದರು. ಇಬ್ಬರು ಲವ್ವಲ್ಲಿ ಇದ್ದರು ಎಂದು ಹೇಳಲಾಗುತ್ತೆ. ಮದುವೆ ವಿಚಾರದಲ್ಲಿ ಐಶ್, ಸಲ್ಮಾನ್ ಖಾನ್ ಮನಸ್ಸು ಬದಲಿಸಿರಬಹುದು ಎಂಬ ಅನುಮಾನವೂ ಇದೆ. ಆದರೆ, ಇದನ್ನ ಸಲ್ಲು ಭಾಯ್ ಅವರೇ ಹೇಳಬೇಕು.

  ಐಶ್ ಜೊತೆ ಬ್ರೇಕ್ ಅಪ್.!

  ಐಶ್ ಜೊತೆ ಬ್ರೇಕ್ ಅಪ್.!

  ಐಶ್ವರ್ಯ ರೈ ಜೊತೆ ಸಲ್ಮಾನ್ ಖಾನ್ ಮದುವೆ ಆಗಬಹುದು ಎಂಬ ನಿರೀಕ್ಷೆಯೂ ಬಾಲಿವುಡ್ ವಲಯದಲ್ಲಿತ್ತು. ಅಷ್ಟರ ಮಟ್ಟಿಗೆ ಐಶ್-ಸಲ್ಲು ಜೋಡಿ ಕಾಣಿಸಿಕೊಂಡಿತ್ತು. ಬಟ್, ಯಾರೂ ಗೆಸ್ ಮಾಡದ ರೀತಿ ಇಬ್ಬರು ದೂರ ಆದರು. ಐಶ್ ಬಿಟ್ಟು ಹೋದ್ಮೇಲೆ ಸಲ್ಮಾನ್ ಖಾನ್ ಮದುವೆ ಕುರಿತು ಆಸಕ್ತಿ ತೋರಲೇ ಇಲ್ಲ ಎನ್ನುತ್ತವೆ ಮೂಲಗಳು.

  English summary
  Bollywood Actor Salman Khan was cancel his marriage 5 days before the date. why?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X