ಬನ್ಸಾಲಿ ಚಿತ್ರದಿಂದ ಸಲ್ಮಾನ್ ಹೊರಬರಲು ಆಲಿಯಾ ಜೊತೆಗಿನ 'ಆ ಸೀನ್' ಕಾರಣ.!

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಹೊಸ ಚಿತ್ರದಲ್ಲಿ ಸಲ್ಮಾನ್ ಖಾನ್ ನಟಿಸಬೇಕಿತ್ತು. ಆದರೆ ಸದ್ಯಕ್ಕೆ ಈ ಪ್ರಾಜೆಕ್ಟ್ ಮಾಡಲು ಸಾಧ್ಯವಿಲ್ಲ ಎಂದು ಬ್ಯಾಡ್ ಬಾಯ್ ಸ್ಪಷ್ಟಪಡಿಸಿದ್ದರು. ಈ ನಿರ್ಧಾರದ ಹಿಂದಿರುವ ಕಾರಣವೇನು ಎಂಬ ಕುತೂಹಲ ಕಾಡುತ್ತಿತ್ತು.

ಈ ಬಗ್ಗೆ ಬಾಲಿವುಡ್ ನಲ್ಲಿ ಹಲವು ರೀತಿಯಲ್ಲಿ ಚರ್ಚೆ ಆಗ್ತಿದೆ. ಅದರಲ್ಲಿ ಒಂದು ಆಲಿಯಾ ಭಟ್ ಜೊತೆಗಿನ ಆ ದೃಶ್ಯ. ಹೌದು, ಸಿನಿಮಾದಲ್ಲಿ ಆಲಿಯಾ ಭಟ್ ಜೊತೆ ಕಿಸ್ಸಿಂಗ್ ದೃಶ್ಯಗಳಿವೆಯಂತೆ. ಇದು ಸಲ್ಮಾನ್ ಖಾನ್ ಇಮೇಜ್ ಗೆ ಒಪ್ಪುವುದಿಲ್ಲ ಎಂಬ ಕಾರಣಕ್ಕೆ ಸಲ್ಲು ಈ ಪ್ರಾಜೆಕ್ಟ್ ನಿಂದ ಹೊರ ನಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

Why Salman Khan Rejects Bhansali Movie

ಈ ಕುರಿತು ಸಂಜಯ್ ಲೀಲಾ ಬನ್ಸಾಲಿ ಅವರ ಬಳಿ ಸಲ್ಲು ಭಾಯ್ ಈ ಹಿಂದೆಯೂ ಹೇಳಿದ್ದರಂತೆ. ಹಾಗಿದ್ದರು ಬನ್ಸಾಲಿ ಅವರು ಕಥೆಯಲ್ಲಿ ಬದಲಾವಣೆ ಮಾಡಲು ತಯಾರಿರಲಿಲ್ಲವಂತೆ.

ಚಿತ್ರತಂಡ ಈ ಸುದ್ದಿಯನ್ನ ಅಲ್ಲೆಗೆಳೆದಿದೆ. ಸಲ್ಮಾನ್ ಖಾನ್ ಮತ್ತು ಸಂಜಯ್ ಲೀಲಾ ಬನ್ಸಾಲಿ ಅವರು ಒಟ್ಟಿಗೆ ಸಿನಿಮ ಮಾಡಿದ್ದಾರೆ. ಇವರಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಬೇರೆ ಯಾವುದು ತೊಂದರೆಗಳಿಲ್ಲ. ಡೇಟ್ ಸಮಸ್ಯೆಯಾಗಿದ್ದರಿಂದ ಈ ಸಿನಿಮಾದಿಂದ ಹಿಂದೆ ಸರಿದಿದ್ದಾರೆ ಅಷ್ಟೆ ಎನ್ನುತ್ತಿದ್ದಾರೆ.

Why Salman Khan Rejects Bhansali Movie

ಸಲ್ಮಾನ್ ಖಾನ್ ರೆಡ್ ಬೋರ್ಡ್ ತೋರಿಸಿರುವುದರಿಂದ ಆ ಜಾಗಕ್ಕೆ ಬೇರೊಬ್ಬ ನಾಯಕನನ್ನು ಕರೆತರಲು ಬನ್ಸಾಲಿ ನಿರ್ಧರಿಸಿದ್ದಾರಂತೆ. ಸದ್ಯ ಬಿಟೌನ್ ನಲ್ಲಿ ಚರ್ಚೆಯಾಗುತ್ತಿರುವ ಮಾಹಿತಿ ಪ್ರಕಾರ, ಹೃತಿಕ್ ರೋಷನ್ ಅಥವಾ ರಣ್ವೀರ್ ಸಿಂಗ್ ಅವರನ್ನ ಈ ಚಿತ್ರಕ್ಕಾಗಿ ಅಪ್ರೋಚ್ ಮಾಡಲಾಗುತ್ತಿದೆಯಂತೆ.

English summary
Why Salman Khan Rejects sanjay leela Bhansali inshallah Movie. here is the reason.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X