twitter
    For Quick Alerts
    ALLOW NOTIFICATIONS  
    For Daily Alerts

    ಆಸ್ಕರ್‌ಗೆ ಆಯ್ಕೆ ಆಗಲಿಲ್ಲ 'ದೇಶ ಪ್ರೇಮಿ' ಸಿನಿಮಾ: ಏನಿದು ವಿವಾದ?

    |

    ಆಸ್ಕರ್ 2022 ಹೆಚ್ಚು ದೂರವೇನೂ ಇಲ್ಲ. ಈಗಾಗಲೇ ವಿವಿಧ ದೇಶಗಳು ತಮ್ಮ ದೇಶದ ಅತ್ಯುತ್ತಮ ಸಿನಿಮಾವನ್ನು ಆಸ್ಕರ್‌ ಸ್ಪರ್ಧೆಗೆ ಕಳಿಸುತ್ತಿವೆ. ಅಂತೆಯೇ ಭಾರತವೂ ಒಂದು ಸಿನಿಮಾವನ್ನು ಭಾರತದ ಅಧಿಕೃತ ಸಿನಿಮಾ ಎಂದು ಆಸ್ಕರ್‌ಗೆ ಕಳಿಸಿದೆ.

    ಆಸ್ಕರ್‌ ಸ್ಪರ್ಧೆಗೆ ಸಿನಿಮಾವನ್ನು ಆಯ್ಕೆ ಮಾಡಲು ರಚಿಸಲಾಗಿದ್ದ ಸಮಿತಿಯು ಹಲವು ಸಿನಿಮಾಗಳನ್ನು ವೀಕ್ಷಿಸಿ ಅದರಲ್ಲಿ ಅತ್ಯುತ್ತಮ ಎನಿಸಿದ ತಮಿಳಿನ 'ಕೂಳಂಗಲ್' ಸಿನಿಮಾವನ್ನು ಆಸ್ಕರ್‌ಗೆ ಭಾರತದ ಅಧಿಕೃತ ಎಂಟ್ರಿಯಾಗಿ ಕಳಿಸಿದೆ. ಆದರೆ ಇದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಆಸ್ಕರ್‌ಗೆ ಕಳಿಸಲು ಸಮಿತಿಯು ನೋಡಿದ ಸಿನಿಮಾಗಳಲ್ಲಿ ಹಿಂದಿಯ 'ಸರ್ದಾರ್ ಉದ್ಧಮ್' ಸಿನಿಮಾ ಸಹ ಇತ್ತು. ಜಲಿಯನ್ ವಾಲಾಭಾಗ್ ಹತ್ಯಾಕಾಂಡಕ್ಕೆ ಕಾರಣವಾದ ಜನರಲ್ ಡಯಾರ್ ಅನ್ನು ಇಂಗ್ಲೆಂಡ್‌ನಲ್ಲಿ ಕೊಂದ ಯುವಕ ಸರ್ದಾರ್ ಉದ್ಧಮ್ ಸಾಹಸಗಾಥೆಯ ಬಗೆಗಿನ ಸಿನಿಮಾ ಅದು. ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆದ ಈ ಸಿನಿಮಾವನ್ನು ಹಲವರು ಮೆಚ್ಚಿಕೊಂಡಿದ್ದಾರೆ. ಆದರೆ ಈ ಸಿನಿಮಾವನ್ನು ಸಮಿತಿಯು ಆಸ್ಕರ್‌ಗೆ ಆಯ್ಕೆ ಮಾಡಿಲ್ಲ.

    ಈ ಬಗ್ಗೆ ಪ್ರಶ್ನಿಸಲಾದಾಗ ಸಮಿತಿಯ ಸದಸ್ಯರೊಬ್ಬರು, 'ಆ ಸಿನಿಮಾವು ಬ್ರಿಟೀಷರ ಬಗೆಗಿನ ಭಾರತೀಯರ ದ್ವೇಷವನ್ನು ತೋರಿಸುತ್ತದೆ. ಈಗಿನ ಗ್ಲೋಬಲೈಸೇಷನ್ ಕಾಲದಲ್ಲಿ ಅದು ಸರಿಯಲ್ಲ ಎನಿಸುತ್ತದೆ'' ಎಂದಿದ್ದರು. ಇದು ನೆಟ್ಟಿಗರ ಸಿಟ್ಟಿಗೆ ಕಾರಣವಾಗಿತ್ತು. ''ಬ್ರಿಟೀಷರನ್ನು ಓಲೈಸಲು ಅಥವಾ ಅವರಿಗೆ ಮುಜುಗರವಾಗದಿರಲೆಂದು ಆ ಸಿನಿಮಾವನ್ನು ಆಸ್ಕರ್ ಕಳಿಸುತ್ತಿಲ್ಲವೇ'' ಎಂದು ಪ್ರಶ್ನೆ ಮಾಡಿದ್ದರು.

    ಸಮಿತಿ ಸದಸ್ಯರ ಹೇಳಿಕೆಗೆ 'ಸರ್ದಾರ್ ಉದ್ಧಮ್' ಸಿನಿಮಾದ ನಿರ್ದೇಶಕ ಸುಜಿತ್ ಸರ್ಕಾರ್ ಸಹ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಆ ಬಳಿಕ ಜ್ಯೂರಿಯ ತೀರ್ಪಿಗೆ ಬದ್ಧವಾಗಿರುವುದಾಗಿ ಹೇಳಿದರು.

    ಆದರೆ ಹಲವು ನೆಟ್ಟಿಗರು, ಆಸ್ಕರ್‌ಗೆ 'ಸರ್ದಾರ್ ಉದ್ಧಮ್' ಸಿನಿಮಾದ ಬದಲಿಗೆ ತಮಿಳಿನ ಸಿನಿಮಾ ಆಯ್ಕೆ ಮಾಡಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದೇಶ ಪ್ರೇಮ ಉಕ್ಕಿಸುವ ಸಿನಿಮಾವನ್ನು ಆಸ್ಕರ್‌ಗೆ ಆಯ್ಕೆ ಮಾಡದಿರುವುದಕ್ಕೆ ಸಮಿತಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

    'ಸರ್ದಾರ್ ಉದ್ಧಮ್' ಸಿನಿಮಾ ಆಯ್ಕೆ ಆಗಲಿಲ್ಲ ಏಕೆ?

    'ಸರ್ದಾರ್ ಉದ್ಧಮ್' ಸಿನಿಮಾ ಆಯ್ಕೆ ಆಗಲಿಲ್ಲ ಏಕೆ?

    ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಮಿತಿಯ ಸದಸ್ಯ ಶಾಜಿ ಎನ್ ಕರುಣ್, ''ಸರ್ದಾರ್ ಉದ್ಧಮ್' ಸಿನಿಮಾ ಒಳ್ಳೆಯ ಸಿನಿಮಾ ಆದರೆ ನಾನು ಆಸ್ಕರ್‌ಗೆ ಸಿನಿಮಾ ಆಯ್ಕೆ ಮಾಡಬೇಕಾದರೆ ಗೇಮ್ ಒಂದನ್ನು ಗೆಲ್ಲಲು ಬಳಸುವ ತಂತ್ರಗಳನ್ನು ಬಳಸುತ್ತೇನೆ. ನನಗೆ ಯಾವ ಸಿನಿಮಾ ಇಷ್ಟವಾಯಿತು ಎಂಬುದಕ್ಕಿಂತಲೂ ಆಸ್ಕರ್‌ನಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡುವ ಜ್ಯೂರಿಗಳಿಗೆ ಯಾವ ಸಿನಿಮಾ ಇಷ್ಟವಾಗಬಹುದು ಎಂದು ಯೋಚಿಸಿ ಆಯ್ಕೆ ಮಾಡಿದ್ದೇವೆ'' ಎಂದಿದ್ದಾರೆ.

    'ಕೂಳಂಗಳ್' ಒಳ್ಳೆಯ ಸಿನಿಮಾ: ಶಾಜಿ ಎನ್ ಕರುಣ್

    'ಕೂಳಂಗಳ್' ಒಳ್ಳೆಯ ಸಿನಿಮಾ: ಶಾಜಿ ಎನ್ ಕರುಣ್

    'ಸರ್ದಾರ್ ಉದ್ಧಮ್' ಸಿನಿಮಾ ದೇಶ ಪ್ರೇಮವನ್ನು ಬಡಿದೆಬ್ಬಿಸುವ ಸಿನಿಮಾ, ಜಲಿಯನ್ ವಾಲಾಭಾಗ್ ಪ್ರಕರಣ ಭಾರತೀಯರ ನೆತ್ತರನ್ನು ಬಿಸಿ ಮಾಡುತ್ತದೆ ಅಂಥಹಾ ಕತೆಯನ್ನು ಸಿನಿಮಾ ಹೊಂದಿದೆ. ಹಾಗಾಗಿ ಸಹಜವಾಗಿ 'ಸರ್ದಾರ್ ಉದ್ಧಮ್' ಅತ್ಯುತ್ತಮ ಸಿನಿಮಾ ಎಂದು ವಾದ ಮಾಡಲಾಗುತ್ತಿದೆ. ಈಗ ಆಯ್ಕೆ ಮಾಡಿರುವ 'ಕೂಳಂಗಲ್' ಸಿನಿಮಾ ಆಳವಾದ ಸಂದೇಶ ಮತ್ತು ನಿಜವಾದ ಸಿನಿಮ್ಯಾಟಿಕ್ ಅಂಶಗಳನ್ನು ಹೊಂದಿದೆ ಎಂದಿದ್ದಾರೆ ಅವರು.

    92 ರಾಷ್ಟ್ರಗಳ ಸಿನಿಮಾಗಳ ಮಧ್ಯೆ ಭಾರತದ ಸಿನಿಮಾ

    92 ರಾಷ್ಟ್ರಗಳ ಸಿನಿಮಾಗಳ ಮಧ್ಯೆ ಭಾರತದ ಸಿನಿಮಾ

    ''ಈಗ ನಾವು ಆಯ್ಕೆ ಮಾಡಿರುವ ಸಿನಿಮಾ ನಮ್ಮ ಮುಂದೆ ಆಯ್ಕೆಗಿದ್ದ ಸಿನಿಮಾಗಳಲ್ಲಿ ಅತ್ಯುತ್ತಮವಾಗಿತ್ತು. ನಾವು ರಾಷ್ಟ್ರಪ್ರಶಸ್ತಿಗಾಗಿ ಸಿನಿಮಾ ಆಯ್ಕೆ ಮಾಡುತ್ತಿರಲಿಲ್ಲ. ಬದಲಿಗೆ ಆಸ್ಕರ್‌ಗಾಗಿ ಆಯ್ಕೆ ಮಾಡುತ್ತಿದ್ದೆವು. ಅಲ್ಲಿಗೆ 92 ರಾಷ್ಟ್ರಗಳು ಸಿನಿಮಾಗಳನ್ನು ಕಳಿಸುತ್ತವೆ. ಅವುಗಳ ನಡುವೆ ಸ್ಪರ್ಧೆ ಮಾಡುವಂತಿರುವ ಸಿನಿಮಾವನ್ನು ನಾವು ಕಳಿಸಬೇಕಾಗಿರುತ್ತದೆ'' ಎಂದಿದ್ದಾರೆ ಮಲಯಾಳಂ ಸಿನಿಮಾ ನಿರ್ದೇಶಕ ಶಾಜಿ ಎನ್ ಕರುಣ್.

    ಎಷ್ಟು ಸಿನಿಮಾಗಳು ಸ್ಪರ್ಧೆಯಲ್ಲಿದ್ದವು

    ಎಷ್ಟು ಸಿನಿಮಾಗಳು ಸ್ಪರ್ಧೆಯಲ್ಲಿದ್ದವು

    ಆಸ್ಕರ್‌ಗೆ ಪ್ರವೇಶಪಡೆಯುವ ಸ್ಪರ್ಧೆಯಲ್ಲಿ ವಿದ್ಯಾ ಬಾಲನ್ ನಟನೆಯ 'ಶೇರ್ನಿ', 'ಸರ್ದಾರ್ ಉದ್ಧಮ್', 'ಶೇರ್ಷಾ', 'ತೂಫಾನ್', 'ಕಾಗಜ್', ಅಸ್ಸಾಮಿ ಸಿನಿಮಾ 'ಬ್ರಿಡ್ಜ್', ಮರಾಠಿಯ ಅಟ್ಟಾ ವೆಲ್ ಜಾಲಿ, ಮರಾಠಿಯ 'ಗೋಧಾವರಿ', ಗುಜರಾತಿ ಸಿನಿಮಾ 'ಚೆಲ್ಲಾ ಶೋ', ಮಲಯಾಳಂನ 'ನಾಯಟ್ಟು', ಗೋಜ್ರಿ ಭಾಷೆಯ 'ಲೀಲಾ ಔರ್ ಸಾಥ್ ಗೀತ್', ಮರಾಠಿಯ 'ಕರ್ಕಾನಿಸಂಚಿ ವಾರಿ', ತಮಿಳಿನ 'ಮಂಡೇಲಾ' ಮತ್ತು 'ಕೂಳಂಗಲ್' ಸಿನಿಮಾ ಸ್ಪರ್ಧೆಗಿತ್ತು. ಇವುಗಳಲ್ಲ 'ಕೂಳಂಗಲ್' ಸಿನಿಮಾವನ್ನು ಆಸ್ಕರ್‌ಗೆ ಭಾರತದ ಅಧಿಕೃತ ಸಿನಿಮಾ ಆಗಿ ಸ್ಪರ್ಧೆಗೆ ಕಳುಹಿಸಲಾಗಿದೆ. 'ಕೂಳಂಗಲ್' ಸಿನಿಮಾವನ್ನು ನಯನತಾರಾ ಮತ್ತು ವಿಘ್ನೇಶ್ ನಿರ್ಮಾಣ ಮಾಡಿದ್ದಾರೆ.

    English summary
    Sardar Udham movie not selected for the Oscar. Instead of that movie Tamil movie Koozhangal selected for Oscar.
    Friday, October 29, 2021, 10:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X