For Quick Alerts
  ALLOW NOTIFICATIONS  
  For Daily Alerts

  ತಂಗಿ ಶಮಿತಾ, ಲಗಾನ್ ಸಿನಿಮಾ ನಿರಾಕರಿಸಿದ್ದಕ್ಕೆ ಶಿಲ್ಪಾ ಶೆಟ್ಟಿ ಕೊಟ್ಟರು ಕಾರಣ

  |

  ಆಸ್ಕರ್‌ಗೆ ನಾಮಿನೇಟ್ ಆಗಿದ್ದ ಅಮೀರ್ ಖಾನ್ ನಟನೆಯ ಲಗಾನ್ ಸಿನಿಮಾ,ಭಾರತ ಸಿನಿ ಇತಿಹಾಸದ ಪ್ರಮುಖ ಸಿನಿಮಾ. ಈ ಸಿನಿಮಾದಲ್ಲಿ ನಟಿಸಿದವರೆಲ್ಲಾ ಸ್ಟಾರ್‌ಗಳಾಗಿಬಿಟ್ಟರು.

  ಸಿನಿಮಾದಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದ ಗ್ರೇಸಿ ಸಿಂಗ್‌ಗೆ ಅವಕಾಶಗಳ ಸುರಿಮಳೆಯೇ ಸುರಿದಿತ್ತು. ಆದರೆ ಸಿನಿಮಾದ ನಾಯಕಿ ಪಾತ್ರಕ್ಕೆ ಮೊದಲು ಆಯ್ಕೆ ಆಗಿದ್ದಿದ್ದು ಗ್ರೇಸಿ ಸಿಂಗ್ ಅಲ್ಲ ಬದಲಿಗೆ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ.

  2001 ರಲ್ಲಿ ಬಿಡುಗಡೆ ಆಗಿದ್ದ ಲಗಾನ್ ಸಿನಿಮಾದಲ್ಲಿ ನಟಿಸಲು ನಿರಾಕರಿಸಿದ್ದರಂತೆ ಶಮಿತಾ ಶೆಟ್ಟಿ. ಆದರೆ ಅದಕ್ಕೆ ಕಾರಣವನ್ನು ಶಮಿತಾ ಸಹೋದರಿ ಶಿಲ್ಪಾ ಶೆಟ್ಟಿ ಇತ್ತೀಚಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

  ಗೊಂದಲದಲ್ಲಿ ಬಿದ್ದ ಶಮಿತಾ ಶೆಟ್ಟಿ

  ಗೊಂದಲದಲ್ಲಿ ಬಿದ್ದ ಶಮಿತಾ ಶೆಟ್ಟಿ

  2001 ರಲ್ಲಿ ಶಮಿತಾ ಶೆಟ್ಟಿ ಬಾಲಿವುಡ್‌ಗೆ ಪ್ರವೇಶ ಮಾಡಲು ನಿರ್ಧರಿಸಿದ್ದಾಗ ಎರಡು ಸಿನಿಮಾಗಳ ಆಯ್ಕೆ ಅವರ ಮುಂದಿತ್ತು. ಒಂದು ಲಗಾನ್ ಮತ್ತೊಂದು ಶಾರುಖ್-ಅಮಿತಾಬ್ ನಟನೆಯ 'ಮೊಹಾಬತ್ತೇ'. ಎರಡು ಸಿನಿಮಾಗಳಲ್ಲಿ ಯಾವುದನ್ನು ಒಪ್ಪಿಕೊಳ್ಳಬೇಕು ಎಂಬ ಗೊಂದಲದಲ್ಲಿದ್ದರು ಶಮಿತಾ ಶೆಟ್ಟಿ.

  ಮೊಹಾಬತ್ತೇ ಆಯ್ಕೆ ಮಾಡಿಕೊಂಡ ಶಮಿತಾ

  ಮೊಹಾಬತ್ತೇ ಆಯ್ಕೆ ಮಾಡಿಕೊಂಡ ಶಮಿತಾ

  ಯಶ್ ಚೋಪ್ರಾ ನಿರ್ಮಿಸುತ್ತಿದ್ದ 'ಮೊಹಾಬತ್ತೇ' ಸಿನಿಮಾವನ್ನು ಶಮಿತಾ ಆಯ್ಕೆ ಮಾಡಿಕೊಂಡರು. ರೊಮ್ಯಾಂಟಿಕ್ ಸಿನಿಮಾ ಆಗಿದ್ದ 'ಮೊಹಾಬತ್ತೇ' ಪಕ್ಕಾ ಬಾಲಿವುಡ್ ಮಾದರಿ ಸಿನಿಮಾ ಎಂಬ ನಿರ್ಧಾರದೊಂದಿಗೆ ಲಗಾನ್ ಅನ್ನುನ ಬಿಟ್ಟು 'ಮೊಹಾಬತ್ತೇ' ಆಯ್ಕೆ ಮಾಡಿಕೊಂಡರು ಶಮಿತಾ.

  ಮೊಹಬತ್ತೇ ನಂತರ ಹಲವು ಸಿನಿಮಾಗಳು ಫ್ಲಾಪ್

  ಮೊಹಬತ್ತೇ ನಂತರ ಹಲವು ಸಿನಿಮಾಗಳು ಫ್ಲಾಪ್

  ಮೊಹಬ್ಬತೇ ಸಿನಿಮಾ ಸೂಪರ್ ಹಿಟ್ ಆಯಿತು, ಶಮಿತಾ ಶೆಟ್ಟಿ ಸಹ ಬಾಲಿವುಡ್ಡಿಗರ ಗಮನ ಸೆಳೆದರು. ಅವರಿಗೆ ಅವಕಾಶಗಳೂ ದೊರೆತವಾದರೂ ಬಹುತೇಕ ಸಿನಿಮಾಗಳು ಫ್ಲಾಪ್ ಆದವು. ನಂತರ ಅವರು ಬಾಲಿವುಡ್‌ನಲ್ಲಿ ನೆಲೆ ಕಂಡುಕೊಳ್ಳಲಾಗಲೇ ಇಲ್ಲ.

  ಲೇಡಿ ಸೂಪರ್ ಸ್ಟಾರ್ ಆದ್ರೂ Priyanka Upendra | Kaimara | Filmibeat Kannada
  ತೆಲುಗಿನಲ್ಲೂ ನಟಿಸಿದ ಗ್ರೇಸಿ

  ತೆಲುಗಿನಲ್ಲೂ ನಟಿಸಿದ ಗ್ರೇಸಿ

  ಶಮಿತಾ ಶೆಟ್ಟಿ ನಿರಾಕರಿಸಿದ್ದ ಪಾತ್ರಕ್ಕೆ ಗ್ರೇಸಿ ಸಿಂಗ್ ಆಯ್ಕೆಯಾದರು. ಲಗಾನ್ ಸಿನಿಮಾದಲ್ಲಿ ಗಮನ ಸೆಳೆದ ಗ್ರೇಸಿ ಸಿಂಗ್ ಆ ನಂತರ ಹಲವು ಹಿಟ್‌ ಸಿನಿಮಾಗಳನ್ನು ನೀಡಿದರು. ತೆಲುಗಿನಲ್ಲೂ ಕೆಲವು ಸಿನಿಮಾಗಳನ್ನು ಮಾಡಿದರು. ಪ್ರಸ್ತುತ ಟಿವಿ ಶೋಗಳಲ್ಲಿ ಸಹ ನಟಿಸುತ್ತಿದ್ದಾರೆ.

  English summary
  Shamita Shetty rejected Lagaan movie offer. Shilpa Shetty gives reason in an recent interview.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X