For Quick Alerts
  ALLOW NOTIFICATIONS  
  For Daily Alerts

  'ಕೊನೆ ಕ್ಷಣದಲ್ಲಿ ಬೇಡ ಅಂದ್ರು, ಕ್ಷಮೆ ಕೇಳಿದ ನಿರ್ದೇಶಕ ಕಾರಣ ಮಾತ್ರ ಹೇಳಿಲ್ಲ'

  |

  ''ಸಿನಿಮಾವೊಂದಕ್ಕೆ ಆಯ್ಕೆ ಮಾಡಲಾಗಿತ್ತು. ಶೂಟಿಂಗ್‌ಗಾಗಿ ಡೇಟ್ ಲಾಕ್ ಮಾಡಿಕೊಂಡಿದ್ದೆ. ಇನ್ನೇನೂ ಚಿತ್ರೀಕರಣಕ್ಕೆ ತಯಾರಾಗುತ್ತಿದ್ದ ಸಮಯದಲ್ಲಿ ನನ್ನನ್ನು ಚಿತ್ರದಿಂದ ಕೈ ಬಿಟ್ಟರು'' ಎಂದು ನಟಿ ತಾಪ್ಸಿ ಪನ್ನು ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

  ಆಮೇಲೆ ನಿರ್ದೇಶಕರು ತಾಪ್ಸಿ ಬಳಿ ಸಿನಿಮಾದಿಂದ ಡ್ರಾಪ್ ಮಾಡಿದ್ದಕ್ಕೆ ಕ್ಷಮೆಯಾಚಿಸಿದರಂತೆ. ಆದರೆ, ಅಂತಿಮ ಕ್ಷಣದಲ್ಲಿ ಏಕೆ ಈ ಪ್ರಾಜೆಕ್ಟ್‌ನಿಂದ ತಿರಸ್ಕರಿಸಿದರು ಎಂಬ ಕಾರಣ ಮಾತ್ರ ಹೇಳಿಲ್ಲವಂತೆ. ನಿಜವಾದ ಕಾರಣ ಹೇಳಲು ನಿರ್ದೇಶಕರು ಅದ್ಯಾಕೋ ಹಿಂಜರಿಯುತ್ತಿದ್ದರು ಎಂದು ತಾಪ್ಸಿ ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ, ತಾಪ್ಸಿ ಹೇಳಿದ ಸಿನಿಮಾ ಯಾವುದು? ಯಾರು ಆ ನಿರ್ದೇಶಕ? ಮುಂದೆ ಓದಿ...

  ಪತಿ-ಪತ್ನಿ ಔರ್ ವೋ

  ಪತಿ-ಪತ್ನಿ ಔರ್ ವೋ

  2019ರಲ್ಲಿ ಮುದಾಸರ್ ಅಜೀಜ್ ನಿರ್ದೇಶನದಲ್ಲಿ ಮೂಡಿಬಂದಿದ್ದ 'ಪತಿ ಪತ್ನಿ ಔರ್ ವೋ' ಚಿತ್ರದಲ್ಲಿ ಕಾರ್ತಿಕ್ ಆರ್ಯನ್, ಭೂಮಿ ಪಡ್ನೆಕರ್, ಅನನ್ಯ ಪಾಂಡೆ ನಟಿಸಿದ್ದರು. ಮೊದಲು ಈ ಚಿತ್ರದಲ್ಲಿ ತಾಪ್ಸಿ ಅವರನ್ನು ಅಂತಿಮ ಮಾಡಿಕೊಳ್ಳಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ತಾಪ್ಸಿ ಬದಲು ಭೂಮಿ ಪಡ್ನೆಕರ್‌ಗೆ ಮಣೆ ಹಾಕಲಾಯಿತು.

  ತಾಪ್ಸಿ ಪನ್ನು ನಟನೆಯ ಹಿಂದಿ ಸಿನಿಮಾದಲ್ಲಿ ಕನ್ನಡದ ಖ್ಯಾತ ನಟತಾಪ್ಸಿ ಪನ್ನು ನಟನೆಯ ಹಿಂದಿ ಸಿನಿಮಾದಲ್ಲಿ ಕನ್ನಡದ ಖ್ಯಾತ ನಟ

  ಮಾಧ್ಯಮಗಳ ಮೂಲಕ ನನಗೆ ತಿಳಿಯಿತು

  ಮಾಧ್ಯಮಗಳ ಮೂಲಕ ನನಗೆ ತಿಳಿಯಿತು

  ''ಈ ಸಿನಿಮಾದಲ್ಲಿ ನಾನು ನಟಿಸುತ್ತಿಲ್ಲ ಎನ್ನುವ ವಿಷಯ ನನಗೆ ಮಾಧ್ಯಮಗಳ ಮೂಲಕ ತಿಳಿಯಿತು. ಆಮೇಲೆ ನಿರ್ದೇಶಕರು ನನ್ನನ್ನು ಭೇಟಿ ಮಾಡಿ ಕ್ಷಮೆಯಾಚಿಸಿದರು. ಆದರೆ, ಈ ಸಿನಿಮಾದಿಂದ ಕೈ ಬಿಡಲು ಕಾರಣ ಮಾತ್ರ ಹೇಳಿಲ್ಲ. ಅಸಲಿ ಕಾರಣ ಹೇಳಲು ನಿರ್ದೇಶಕರು ಹಿಂಜರಿಯುತ್ತಿದ್ದರು'' ಎಂದು ರೇಡಿಯೋ ಜಾಕಿ ಸಿದ್ಧಾರ್ಥ್ ಕಾನನ್ ಜೊತೆಗಿನ ಸಂದರ್ಶನಲ್ಲಿ ನೆಪಿಸಿಕೊಂಡಿದ್ದಾರೆ.

  ನಾನು ಕಾರಣ ತಿಳಿಯಲು ಬಹಳ ಪ್ರಯತ್ನಿಸಿದೆ

  ನಾನು ಕಾರಣ ತಿಳಿಯಲು ಬಹಳ ಪ್ರಯತ್ನಿಸಿದೆ

  ''ಪತಿ ಪತ್ನಿ ಔರ್ ವೋ ಚಿತ್ರಕ್ಕಾಗಿ ನಾನು ಕಮಿಟ್ ಆಗಿದ್ದೆ. ಆದರೆ, ನಿರ್ಮಾಪಕರು ನಿರ್ದೇಶಕ ಅಜೀಜ್‌ಗೆ ಬೇರೆಯೊವರೊಂದಿಗೆ ಸಿನಿಮಾ ಮುಂದುವರಿಸಿ ಎಂದು ಹೇಳಿದರಂತೆ. ಈ ಬಗ್ಗೆ ಪ್ರಶ್ನಿಸಲು ಮುಂದಾದೆ. ಏಕೆ ಎನ್ನುವ ಕಾರಣ ಕೇಳಿದೆ. ನಿರ್ಮಾಪಕರು ಈ ಕುರಿತು ಮಾತನಾಡಲು ತಯಾರಿರಲಿಲ್ಲ. ಈ ವಿಷಯದ ಬಗ್ಗೆ ಮಾತನಾಡಿದರೆ ಅವರು ಆಸಕ್ತಿ ಕೊಡುತ್ತಿರಲಿಲ್ಲ'' ಎಂದು 2019ರಲ್ಲಿ ಮುಂಬೈ ಮಿರರ್‌ಗೆ ನೀಡಿದ ಸಂದರ್ಶನದಲ್ಲಿ ತಾಪ್ಸಿ ಹೇಳಿದ್ದರು.

  ತಾಪ್ಸಿಯನ್ನು ಕಂಡರೆ ಉರಿದು ಬೀಳುತ್ತಿದ್ದ ಕಂಗನಾಗೆ ಈಗ ದಿಢೀರ್ ಪ್ರೀತಿ ಉಕ್ಕಿದ್ದೇಕೆ?ತಾಪ್ಸಿಯನ್ನು ಕಂಡರೆ ಉರಿದು ಬೀಳುತ್ತಿದ್ದ ಕಂಗನಾಗೆ ಈಗ ದಿಢೀರ್ ಪ್ರೀತಿ ಉಕ್ಕಿದ್ದೇಕೆ?

  ತಾಪ್ಸಿ ಜೊತೆ ಒಪ್ಪಂದವೇ ಆಗಿರಲಿಲ್ಲ

  ತಾಪ್ಸಿ ಜೊತೆ ಒಪ್ಪಂದವೇ ಆಗಿರಲಿಲ್ಲ

  ಆ ಸಮಯದಲ್ಲಿ ನಿರ್ಮಾಪಕ ಭೂಷಣ್ ಕುಮಾರ್ ಮತ್ತು ಜುನೋ ಚೋಪ್ರಾ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದರು. ''ಪತಿ ಪತ್ನಿ ಔರ್ ವೋ ಚಿತ್ರಕ್ಕಾಗಿ ಬಹಳಷ್ಟು ಕಲಾವಿದರನ್ನು ಸಂಪರ್ಕಿಸಲಾಗಿತ್ತು. ಪಾತ್ರಕ್ಕೆ ಸರಿ ಹೊಂದುವ ನಟಿಯರಿಗಾಗಿ ಹುಡುಕಿದ್ದರು. ಆದರೆ, ತಾಪ್ಸಿಗೆ ಈ ಸಿನಿಮಾದ ಕುರಿತು ಯಾವುದೇ ಕಮಿಟ್‌ಮೆಂಟ್ ಕೊಟ್ಟಿರಲಿಲ್ಲ'' ಎಂದು ತಿಳಿಸಿದ್ದರು.

  ರೇವತಿ ಗರ್ಭಿಣಿಯಾಗಿರೋ ವಿಚಾರ ತಿಳಿದ ರಾಧಿಕಾ ಕುಮಾರಸ್ವಾಮಿ ಏನ್ ಮಾಡಿದ್ರು ನೋಡಿ | Filmibeat Kannada
  ನನಗೆ ಡೇಟ್ ಲಾಕ್ ಮಾಡಲು ಹೇಳಿದ್ದರು

  ನನಗೆ ಡೇಟ್ ಲಾಕ್ ಮಾಡಲು ಹೇಳಿದ್ದರು

  ನಿರ್ಮಾಪಕ ಜಂಟಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ್ದ ನಟಿ ತಾಪ್ಸಿ ''ನಾನು ಇದಕ್ಕೆ ಸರಿಯಾದ ರೀತಿಯಲ್ಲಿ ಉತ್ತರ ಕೊಡಬೇಕು ಎನ್ನುವುದಾರೇ, ನನ್ನ ಜೊತೆ ಮಾತನಾಡಿರುವ ಮೆಸೆಜ್‌ಗಳನ್ನು ಹೊರಗೆ ಪ್ರಕಟಿಸಬೇಕಾಗುತ್ತದೆ. ಇದರಲ್ಲಿ ನನಗೆ ಡೇಟ್ ಲಾಕ್ ಮಾಡಿಕೊಳ್ಳಿ ಎಂದು ಹೇಳಿರುವ ಬಗ್ಗೆಯೂ ಮೆಸೆಜ್ ಇದೆ. ಆದರೆ, ನಾನು ಅಷ್ಟು ಕೀಳುಮಟ್ಟಕ್ಕೆ ಹೋಗುವುದಿಲ್ಲ. ನಾನು ಇದನ್ನು ಮುಂದವರಿಸಲು ಸಹ ಇಷ್ಟವಿಲ್ಲ'' ಎಂದು ಹೇಳಿ ತೆರೆ ಎಳೆದಿದ್ದರು.

  English summary
  Why taapsee pannu dropped from pati patni aur woh film in last moment?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X