twitter
    For Quick Alerts
    ALLOW NOTIFICATIONS  
    For Daily Alerts

    ಏಪ್ರಿಲ್ 14ರಂದೇ 'ಕೆಜಿಎಫ್ 2' ಮತ್ತು 'ಜೆರ್ಸಿ' ರಿಲೀಸ್‌ಗೆ ಪಟ್ಟು ಹಿಡಿದಿದ್ದೇಕೆ? ಈ ಸಿನಿಮಾಗಳ ಬಾಕ್ಸಾಫೀಸ್ ಲೆಕ್ಕಾಚಾರವೇನು?

    |

    'ಕೆಜಿಎಫ್ 2' ರಿಲೀಸ್ ಡೇಟ್ ಮೇಲೆ ಬಾಲಿವುಡ್ ಮಂದಿ ಕಣ್ಣು ಬಿದ್ದಂತಿದೆ. ಇಷ್ಟು ದಿನ 'ಕೆಜಿಎಫ್ 2' ಬಿಡುಗಡೆ ದಿನವೇ ಆಮಿರ್ ಖಾನ್ 'ಲಾಲ್ ಸಿಂಗ್ ಚಡ್ಡ' ಕೂಡ ರಿಲೀಸ್‌ಗೆ ರೆಡಿಯಾಗಿತ್ತು. ಆದ್ರೀಗ ಆಮಿರ್ ಖಾನ್ 'ಲಾಲ್ ಸಿಂಗ್ ಚಡ್ಡ' ಸಿನಿಮಾ ಬಿಡುಗಡೆಯನ್ನು ಆಗಸ್ಟ್‌ಗೆ ಮುಂದೂಡಿದ್ದಾರೆ. ಹಾಗಂತ 'ಕೆಜಿಎಫ್‌ 2' ಒಂಟಿಯಾಗಿ ಅಖಾಡಕ್ಕೆ ಇಳಿಯುತ್ತಿಲ್ಲ. ಆಮಿರ್ ಖಾನ್ ಕಾಲ್ಕೀಳುತ್ತಿದ್ದಂತೆ ಶಾಹಿದ್ ಕಪೂರ್ ಅಭಿನಯದ 'ಜೆರ್ಸಿ' ಇದೇ ದಿನ ಅಖಾಡಕ್ಕಿಳಿಯಲು ತಯಾರಿ ನಡೆಸುತ್ತಿದೆ.

    Recommended Video

    KGF 2 ನೇ ಬೇರೆ ನಾವೇ ಬೇರೆ ಎಂದ ಜೆರ್ಸಿ ನಿರ್ಮಾಪಕ

    ಯಶ್ ಅಭಿನಯದ 'ಕೆಜಿಎಫ್ 2' ಹಾಗೂ ಶಾಹಿದ್ ಕಪೂರ್ ಅಭಿನಯದ 'ಜೆರ್ಸಿ' ಈ ಎರಡೂ ಸಿನಿಮಾಗಳೂ ಏಪ್ರಿಲ್ 14ರಂದೇ ಬಿಡುಗಡೆಗೆ ಪಟ್ಟು ಹಿಡಿದು ಕೂತಿವೆ. ಆದರೆ, ಈ ಎರಡು ಸಿನಿಮಾಗಳಿಗೂ ಏಪ್ರಿಲ್ 14 ಯಾಕೆ ಬೇಕು? ಈ ಎರಡು ಚಿತ್ರಗಳ ಬಾಕ್ಸಾಫೀಸ್ ಲೆಕ್ಕಾಚಾರವೇನು? ಆಮಿರ್ ಖಾನ್ 'ಕೆಜಿಎಫ್ 2' ವಿರುದ್ಧ ಸಮರದಿಂದ ಹಿಂದೆ ಸರಿದಿದ್ದರೂ, ಶಾಹಿದ್ ಕಪೂರ್ 'ಜೆರ್ಸಿ' ಬಿಡುಗಡೆಗೆ ಸಜ್ಜಾಗಿದ್ದೇಕೆ? ಈ ಎಲ್ಲಾ ಪ್ರಶ್ನೆಗಳಿಗೂ ಬಾಲಿವುಡ್ ಬಳಿ ಉತ್ತರವಿದೆ.

    ಕೆಜಿಎಫ್-2 ನಮಗೆ ಯಾವುದೇ ರೀತಿಯಲ್ಲಿ ಸ್ಪರ್ಧಿಯಲ್ಲ: ಜೆರ್ಸಿ ನಿರ್ಮಾಪಕ ಅಮನ್ಕೆಜಿಎಫ್-2 ನಮಗೆ ಯಾವುದೇ ರೀತಿಯಲ್ಲಿ ಸ್ಪರ್ಧಿಯಲ್ಲ: ಜೆರ್ಸಿ ನಿರ್ಮಾಪಕ ಅಮನ್

     ರಜೆಯ ಲಾಭ ಪಡೆದುಕೊಳ್ಳುವ ಯತ್ನ

    ರಜೆಯ ಲಾಭ ಪಡೆದುಕೊಳ್ಳುವ ಯತ್ನ

    ಏಪ್ರಿಲ್ 14ರ ಮೇಲೆ ಮೊದಲು ಕಣ್ಣಿಟ್ಟಿದ್ದು ಹೊಂಬಾಳೆ ಫಿಲಂಸ್. ಈ ದಿನ 'ಕೆಜಿಎಫ್ 2' ಸಿನಿಮಾ ಬಿಡುಗಡೆ ಮಾಡುವುದಾಗಿ 8 ತಿಂಗಳ ಹಿಂದನೇ ಅನೌನ್ಸ್ ಮಾಡಲಾಗಿತ್ತು. ಅಂದಿನಿಂದ ಸುಮ್ಮನಿದ್ದ ಬಾಲಿವುಡ್ ಸಿನಿಮಾಗಳು ಈಗ ಬಿಡುಗಡೆ ಸಜ್ಜಾಗುತ್ತಿವೆ. ಒಂದೊಂದೇ ಸಿನಿಮಾಗಳು ನಿಧಾನವಾಗಿ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡುತ್ತಿವೆ. ಸದ್ಯ 'ಕೆಜಿಎಫ್ 2' ಜೊತೆ ಶಾಹಿದ್ ಕಪೂರ್ ಅಭಿನಯದ 'ಜೆರ್ಸಿ' ಸಿನಿಮಾ ಬಿಡುಗಡೆಯಾಗಲಿದೆ. ಈ ಎರಡು ಸಿನಿಮಾಗಳೂ ಎರಡು ರಜೆ ದಿನಗಳ ಲಾಭ ಪಡೆದುಕೊಳ್ಳಲು ಸ್ಕೆಚ್ ಹಾಕುತ್ತಿವೆ. ಏಪ್ರಿಲ್ 14 ಅಂಬೇಡ್ಕರ್ ಜಯಂತಿ ಹಾಗೂ ಏಪ್ರಿಲ್ 15 ಗುಡ್‌ ಫ್ರೈಡೆ. ಎರಡೂ ದಿನ ಬ್ಯಾಕ್ ಟು ಬ್ಯಾಕ್ ರಜೆ ಇರುವುದರಿದ ಸಿನಿಮಾ ನೋಡಲು ಜನರು ಬರುತ್ತಾರೆ ಎನ್ನುವುದೇ ಲೆಕ್ಕಚಾರ.

     2 ರಜೆ, ವೀಕೆಂಡ್ ಲೆಕ್ಕಾಚಾರವೇನು?

    2 ರಜೆ, ವೀಕೆಂಡ್ ಲೆಕ್ಕಾಚಾರವೇನು?

    ಏಪ್ರಿಲ್ 14 ಗುರುವಾರ ಅಂಬೇಡ್ಕರ್ ಜಯಂತಿ, ಏಪ್ರಿಲ್ 15 ಶುಕ್ರವಾರ ಗುಡ್ ಫ್ರೈಡೆ. ಈ ಎರಡು ದಿನದ ರಜೆಯ ಜೊತೆಗೆ ವೀಕೆಂಡ್ ಕೂಡ ಸೇರಿಕೊಳ್ಳಲಿದೆ. ಒಟ್ಟು ನಾಲ್ಕು ದಿನ ಬ್ಯಾಕ್ ಟು ಬ್ಯಾಕ್ ರಜೆ ಸಿಗುವುದರಿಂದ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಬಹುದು ಎಂದು 'ಕೆಜಿಎಫ್ 2' ಸಿನಿಮಾ ಲೆಕ್ಕಾಚಾರವಾಗಿತ್ತು. ಈಗ ಅದೇ ದಿನ ಶಾಹಿದ್ ಕಪೂರ್ 'ಜೆರ್ಸಿ' ಕೂಡ ಬಿಡುಗಡೆಯಾಗುತ್ತಿರುವುದಿಂದ ಈ ಲಾಭವನ್ನು ಎರಡೂ ಸಿನಿಮಾಗಳೂ ಹಂಚಿಕೊಳ್ಳಬೇಕಾದ ಅನಿವಾರ್ಯತೆ ಇದೆ.

     ಬಾಕ್ಸಾಫೀಸ್ ಲೆಕ್ಕಾಚಾರವೇನು?

    ಬಾಕ್ಸಾಫೀಸ್ ಲೆಕ್ಕಾಚಾರವೇನು?

    'ಕೆಜಿಎಫ್ 2' ಸಿನಿಮಾಗಿರುವ ಕ್ರೇಜ್ ನೋಡಿ ಬಾಲಿವುಡ್ ಒಂದು ಲೆಕ್ಕಾಚಾರಕ್ಕೆ ಹಾಕಿದೆ. ಈ ನಾಲ್ಕು ದಿನವೂ ಬಾಕ್ಸಾಫೀಸ್‌ನಲ್ಲಿ ಭಾರಿ ಗಳಿಕೆ ಆಗುವ ಸಾಧ್ಯತೆಯಿದೆ. ಒಂದು ಲೆಕ್ಕಾಚಾರದ ಪ್ರಕಾರ, 'ಕೆಜಿಎಫ್ 2' ಹಾಗೂ 'ಜೆರ್ಸಿ' ಸಿನಿಮಾ 40 ರಿಂದ 45 ಕೋಟಿ ಗಳಿಸಬಹುದು ಎಂದು ಅಂದಾಜಿಸಲಾಗಿದೆ. ಕೊರೊನಾ ಬಳಿಕ ಚಿತ್ರರಂಗ ಆಕ್ಟಿವ್ ಆಗಿರುವುದರಿಂದ ಜನರು ಥಿಯೇಟರ್‌ಗೆ ಸಿನಿಮಾ ನೋಡಲು ಬರುತ್ತಾರೆ ಎಂಬ ನಂಬಿಕೆಯಿದೆ. ಹೀಗಾಗಿ ಈ ಎರಡೂ ಸಿನಿಮಾಗಳು ಈ ನಾಲ್ಕು ದಿನ ದೊಡ್ಡ ಮೊತ್ತವನ್ನೇ ಕಲೆ ಹಾಕುತ್ತೆ ಎನ್ನಲಾಗುತ್ತಿದೆ.

     ರಜೆ ದಿನಗಳಲ್ಲಿ ಸಿನಿಮಾಗೆ ಯಶಸ್ಸು

    ರಜೆ ದಿನಗಳಲ್ಲಿ ಸಿನಿಮಾಗೆ ಯಶಸ್ಸು

    ಏಪ್ರಿಲ್ 14 ಬೇಸಿಗೆ ರಜೆ ಆರಂಭ ಆಗುತ್ತೆ. ಮಕ್ಕಳಿಗೆ ರಜೆ ಬರುವುದರಿಂದ ಜನರು ಸಿನಿಮಾ ನೋಡಲು ಥಿಯೇಟರ್‌ಗೆ ಬರುತ್ತಾರೆ ಎಂಬುದು ಲೆಕ್ಕಾಚಾರ. ಈ ಲೆಕ್ಕಾಚಾರವನ್ನೇ 'ಕೆಜಿಎಫ್ 2 ಹಾಗೂ 'ಜೆರ್ಸಿ' ಸಿನಿಮಾ ತಂಡಗಳು ನಂಬಿವೆ. 2016ರಲ್ಲಿ 'ಜಂಗಲ್ ಬುಕ್' ಸಿನಿಮಾ ಬಿಡುಗಡೆಯಾಗಿತ್ತು. ಇದು ಮಂಗಳವಾರ 7 ಕೋಟಿ, ಬುಧವಾರ 8 ಕೋಟಿ ಕಲೆ ಹಾಕಿತ್ತು. ಅದೇ ಏಪ್ರಿಲ್ 14ರಂದು ಗುರುವಾರ 11 ಕೋಟಿ ಕಲೆ ಹಾಕಿತ್ತು. ಈ ಲೆಕ್ಕಾಚಾರವನ್ನು ಗಮನದಲ್ಲಿಟ್ಟುಕೊಂಡೇ ಬಾಲಿವುಡ್ ಮಂದಿ ಸಿನಿಮಾವನ್ನು ಬಿಡುಗಡೆ ಮಾಡುತ್ತಿದ್ದಾರೆ.

    English summary
    Yash starrer KGF 2 and Shahid Kapoor starrer Jersey releasing April 14th, because of back to back holidays. Both the team estimated 40 to 45 crore business on that day.
    Thursday, February 17, 2022, 15:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X