ವಿಚ್ಛೇದನದ ವದಂತಿಗೆ 'ಸೆಲ್ಪಿ' ಮತ್ತು 'ಸ್ಮೈಲ್' ಮೂಲಕ ಉತ್ತರ ನೀಡಿದ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್‌..!

ಸಂಸಾರ ಅಂದಮೇಲೆ ಜಗಳ ರೋಮ್ಯಾನ್ಸು ಅನ್ನೋದು ಒಂದೇ ನಾಣ್ಯದ ಎರಡು ಮುಖಗಳ ತರ. ಒಮ್ಮೆ ಬೈದಾಡಿಕೊಂಡವರೂ ಕೆಲ ನಿಮಿಷಗಳಲ್ಲಿ ಒಂದಾಗಬಹುದು. ಯಾವಾಗ ವೈಯಕ್ತಿಕ ವಿಚಾರಗಳು ಬೀದಿಗೆ ಬಂದು ಸಾರ್ವಜನಿಕರ ಬಾಯಿ ಸೇರುತ್ತದೋ ಆಗ ಚಿಕ್ಕದ್ದು ದೊಡ್ಡದ್ದಾಗುವ ಎಲ್ಲ ಲಕ್ಷಣಗಳೂ ಹೆಚ್ಚಾಗಿಯೇ ಇರುತ್ತದೆ. ಇದಕ್ಕೆಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರ ದಾಂಪತ್ಯ ಬದುಕು ಮತ್ತೊಂದು ಉದಾಹರಣೆ.

ಹೌದು. ಕಳೆದ ಹಲವು ದಿನಗಳಿಂದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರ ಸಾಂಸಾರಿಕ ಜೀವನ ಚರ್ಚೆಯಲ್ಲಿದೆ. ಐಶ್ವರ್ಯ ಮತ್ತು ಅಭಿಷೇಕ್ ಬಚ್ಚನ್ ದೂರವಾಗುವುದು ಖಚಿತ ಎನ್ನುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ನಡೆ ಕೂಡ ಹಾಗೇ ಇದೆ. ಜನ ಎಷ್ಟೇ ಮಾತನಾಡಿದರೂ ಕೂಡ ಇಬ್ಬರು ಮೌನ ಮುರಿಯುತ್ತಿಲ್ಲ. ಜೊತೆಯಲ್ಲಿ ಕಾಣಿಸಿಕೊಂಡಿಲ್ಲ. ಇದರಿಂದ ಹಲವರ ಅನುಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ಈಗ ಈ ಎಲ್ಲ ಅಂತೆ-ಕಂತೆಗಳಿಗೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರ ಒಂದು ಫೋಟೊ ಉತ್ತರವನ್ನು ನೀಡಿದೆ. ಅನೇಕರ ಬಾಯಿಯನ್ನು ಮುಚ್ಚಿಸಿದೆ.

Will Aishwarya Rai and Abhishek Bachchan find peace now as the duo shuts down divorce rumours With S

ಹೌದು, ವಿಚ್ಛೇದನದ ವದಂತಿಯ ನಡುವೆ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅನೇಕ ದಿನಗಳ ನಂತರ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದಾರೆ. ಜೊತೆಯಲ್ಲಿ ನಿಂತು ಉದ್ಯಮಿ ಅನು ರಂಜನ್, ನಟಿ ಆಯೆಷಾ ಜುಲ್ಕಾ ಜೊತೆ ಸೆಲ್ಫಿಯನ್ನು ಕೂಡ ಕ್ಲಿಕಿಸಿಕೊಂಡಿದ್ದಾರೆ. ಕೇವಲ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಮಾತ್ರವಲ್ಲ ಈ ಫೋಟೊದಲ್ಲಿ ಐಶ್ವರ್ಯ ಅವರ ತಾಯಿ ಬೃಂದಾ ರೈ ಕೂಡ ಇದ್ದಾರೆ.

ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಜೊತೆ ಇರುವ ಇನ್ನು ಕೆಲ ಫೋಟೊಗಳನ್ನು ಆಯೆಷಾ ಜುಲ್ಕಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಪಾರ್ಟಿಯ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಅಭಿಮಾನಿಗಳಿಗೆ ಸಮಾಧಾನವನ್ನು ನೀಡಿವೆ. ಇದಕ್ಕೆ ಕೈಗನ್ನಡಿ ಎಂಬಂತೆ ಹಲವಾರು ಅಭಿಪ್ರಾಯಗಳು ವ್ಯಕ್ತವಾಗಿವೆ. ಆ ಪೈಕಿ ಅನೇಕರು ಫೋಟೊ ಹಂಚಿಕೊಂಡಿದ್ದಕ್ಕೆ ಆಯೆಷಾ ಜುಲ್ಕಾ ಅವರಿಗೆ ಧನ್ಯವಾದವನ್ನು ಹೇಳಿದ್ದರೆ, ಇನ್ನು ಕೆಲವರು ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ನಡುವೆ ಯಾವುದೇ ಮನಸ್ತಾಪ ಇಲ್ಲ ಎನ್ನುವುದಕ್ಕೆ ಈ ಫೋಟೊಗಳೇ ಸಾಕ್ಷಿ ಎಂದಿದ್ದಾರೆ. ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿದ್ದರೆ ಪಾರ್ಟಿಗೆ ಇಬ್ಬರು ಜೊತೆಯಾಗಿ ತೆರಳುತ್ತಿರಲಿಲ್ಲ, ಖುಷಿ ಖುಷಿಯಾಗಿ ಹೀಗೆ ಫೋಟೊಗೆ ಪೋಸ್ ಕೊಡುತ್ತಿರಲಿಲ್ಲ ಎಂದಿದ್ದಾರೆ. ಒಂದು ಫೋಟೊ ಅನೇಕರ ಬಾಯಿ ಮುಚ್ಚಿಸಿದೆ ಎಂದಿದ್ದಾರೆ. ಇನ್ನೊಬ್ಬರು ಸಂಸಾರದಲ್ಲಿ ಚಿಕ್ಕ ಚಿಕ್ಕ ಸಮಸ್ಯೆಗಳಿಗೆ ಗಟ್ಟಿ ಮಹಿಳೆ ಯಾವತ್ತು ಹೆದರುವುದಿಲ್ಲ ಡಿವೋರ್ಸ್‌ ನೀಡುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

will-aishwarya-rai-and-abhishek-bachchan-find-peace-now-as-the-duo-shuts-down-divorce-rumours-with-s

ಒಟ್ನಲ್ಲಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ಕಳೆದ ಹಲವಾರು ದಿನಗಳಿಂದ ದಿನವೀಡಿ ಚರ್ಚೆ ಮಾಡುತ್ತಾ ಬಂದ ಅನೇಕರಿಗೆ ಈ ಪಾರ್ಟಿಯ ಫೋಟೊಗಳು ಉತ್ತರವನ್ನು ನೀಡಿವೆ. ಇಬ್ಬರು ತುಂಬಾ ಅನೋನ್ಯವಾಗಿದ್ದಾರೆ ಎನ್ನುವ ಸಂದೇಶವನ್ನು ಕೂಡ ರವಾನೆ ಮಾಡಿವೆ. ಇನ್ನಾದರೂ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ವಿಚ್ಛೇದನದ ಕುರಿತು ತಲೆ ಕೆಡಿಸಿಕೊಂಡಿರುವ ಅನೇಕರು ಸುಮ್ಮನಾಗುತ್ತಾರಾ, ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್‌ ಅವರಿಗೆ ಇನ್ನಾದರೂ ಮಾನಸಿಕ ನೆಮ್ಮದಿ ಸಿಗುತ್ತಾ ಅನ್ನುವುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X