ಚರಿತ್ರೆ ಸೃಷ್ಟಿಸಿದ ಕಂಗನಾ ರಣಾವತ್, ಮಂಡಿ ಕ್ವೀನ್‌ ಕನಸಿನ ಕೂಸು ಎಮರ್ಜೆನ್ಸಿಗೆ ನಿಷೇಧದ ಭೀತಿ..?

ಕಂಗನಾ ರಣಾವತ್ ಈಗ ಕೇವಲ ನಾಯಕಿಯಷ್ಟೇ ಅಲ್ಲ. ಬಿಜೆಪಿ ಸಂಸದೆಯೂ ಹೌದು. ಹೀಗಾಗಿ ಹಣಬಲದ ಜೊತೆ ಅಧಿಕಾರದ ಬಲವನ್ನೂ ಹೊಂದಿರುವ ಕಂಗನಾ ಅವರ ಮೇಲೆ ಈಗ ಕಂಡ ಕಂಡಲ್ಲಿ ಕಿಡಿ ಕಾರಲು ಸಾಧ್ಯವಾಗಲ್ಲ ಅನ್ನುವ ಚಿಂತೆ ಒಂದು ಕಡೆ ಒಂದು ವರ್ಗಕ್ಕೆ ಈಗ ಕಾಡುತ್ತಿದ್ದರೆ, ಮತ್ತೊಂದು ಕಡೆ ಕಂಗನಾ ರಣಾವತ್ ಅವರ ಕನಸಿನ ಕೂಸು ಎಮರ್ಜೆನ್ಸಿಯ ಕಥೆ ಏನಾಗಲಿದೆ ಅನ್ನುವ ಚಿಂತೆ ಮತ್ತೊಂದು ಬಣಕ್ಕೆ ಕಾಡುತ್ತಿದೆ.

ಯಾಕೆಂದರೆ.. ನಿಮಗೆ ಗೊತ್ತು, ಎಮರ್ಜೆನ್ಸಿ 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಹೇರಿದ್ದ ಎಮರ್ಜೆನ್ಸಿಯ ಕಥೆ. ಎಲ್ಲಕ್ಕಿಂತ ಹೆಚ್ಚಾಗಿ ಕಂಗನಾ ಈಗ ಎಂಪಿ. ರಾಜಕೀಯದ ರಣರಂಗಕ್ಕೆ ಅಧಿಕೃತವಾಗಿ ಪ್ರವೇಶವನ್ನ ಪಡೆದವರು. ಹೀಗಾಗಿ ಎಮರ್ಜೆನ್ಸಿಯನ್ನ ಕಂಗನಾ ಶುರು ಮಾಡಿದಾಗ ಕಾಣದ ವಿರೋಧದ ಅಲೆ ಈಗ ಕಾಣಿಸುವ ಸಾಧ್ಯತೆ ಹೆಚ್ಚಿದೆ. ರಾಹುಲ್ ಗಾಂಧಿ ಸೇರಿ ಕಾಂಗ್ರೆಸ್ ಪಡೆ ಎಮರ್ಜೆನ್ಸಿ ಚಿತ್ರವನ್ನ ಹೇಗೆ ಸ್ವೀಕರಿಸಲಿದೆ ಎಂಬ ಕುತೂಹಲ ಕೂಡ ಮನೆ ಮಾಡಿದೆ

Will Congress oppose the release of Kangana Ranaut s ambitious film Emergency

ಇನ್ನೂ ಎಮರ್ಜೆನ್ಸಿಯಲ್ಲಿ ಇಂದಿರಾ ಗಾಂಧಿ ಅವರನ್ನ ಕಂಗನಾ ನಾಯಕಿಯಂತೆ ತೋರಿಸಿದ್ದಾರಾ..? ಅಥವಾ ಖಳನಾಯಕಿಯಂತೆ ಬಿಂಬಿಸಿದ್ದಾರಾ..? ಎಂಬ ಜಿಜ್ಞಾಸೆ ಕೂಡ ಅನೇಕರಲ್ಲಿದೆ. ಬಿಜೆಪಿಯ ತತ್ವ ಸಿದ್ಧಾಂತಗಳಿಂದ ಪ್ರಭಾವಿತರಾದ ಕಂಗನಾ ವಿರುದ್ಧ ಎಮರ್ಜೆನ್ಸಿ ಚಿತ್ರದ ವಿಚಾರದಲ್ಲಿ ಕಾಂಗ್ರೆಸ್ ಸಮರ ಸಾರುವ ಸಾಧ್ಯತೆ ಇದೆ.ಎಮರ್ಜೆನ್ಸಿ ಚಿತ್ರದ ಮೇಲೆ ನಿಷೇಧ ಹೇರುವಂತೆ ಒತ್ತಾಯ ಹೇರುವ ಸಾಧ್ಯತೆ ಕೂಡ ಇದೆ.

ಇನ್ನೂ.. ಚುನಾವಣೆ ಫಲಿತಾಂಶಕ್ಕಿಂತ ಮೊದಲು ಗೆದ್ದರೆ ಚಿತ್ರರಂಗದಿಂದ ದೂರ ಸರಿಯುವುದಾಗಿ ಹೇಳಿದ್ದರು. ಈ ಮಾತನ್ನ ಗಂಭೀರವಾಗಿ ಹೇಳಿದ್ದಾ..? ಅಥವಾ ಚುನಾವಣೆಯಲ್ಲಿ ಸೋಲು ಖಚಿತ ಎಂದುಕೊಂಡು ಸುಮ್ಮನೆ ಹೇಳಿದ್ದಾ..? ಉತ್ತರ ಖುದ್ದು ಕಂಗನಾ ರಣಾವತ್ ಅವರಿಗೆ ಗೊತ್ತಾದರೂ ಸದ್ಯಕ್ಕೆ ಮಂಡಿ ಕ್ವೀನ್‌ನ ಮುಂದಿನ ನಡೆಯ ಮೇಲೆ ಎಲ್ಲರ ಕಣ್ಣಂತೂ ಇದೆ.
ಮಾತು ಹೇಳಿದ್ದರು.

ಅಂದ್ಹಾಗೇ ಕಂಗನಾ ರಣಾವತ್ ಈ ಚಿತ್ರದ ನಾಯಕಿಯೂ ಹೌದು ನಿರ್ದೇಶಕಿಯೂ ಹೌದು. ಎಲ್ಲವೂ ಅಂದುಕೊಂಡತೆ ಆಗಿದ್ದರೆ ಈ ಚಿತ್ರ ಕಳೆದ ವರ್ಷದ ಅಂತ್ಯದಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಅದು ಆಗಲಿಲ್ಲ. ಇನ್ನೂ ಈ ವರ್ಷದ ಆರಂಭದಲ್ಲಿ ಜೂನ್ 14ಕ್ಕೆ ಚಿತ್ರ ಬಿಡುಗಡೆಯಾಗಲಿದೆ ಎಂದು ಕಂಗನಾ ಘೋಷಿಸಿದ್ದರು. ಆದರೆ ಆ ನಂತರ ಲೋಕಸಭಾ ಚುನಾವಣೆಯತ್ತ ಗಮನ ವಹಿಸಲು ಮತ್ತೆ ಕಂಗನಾ ಬಿಡುಗಡೆಯ ದಿನವನ್ನ ಮುಂದೂಡಿದರು. ಈಗ ಕಂಗನಾ ಗೆದ್ದಿದ್ದಾರೆ. ಸಂಭ್ರಮದ ಅಲೆಯಲ್ಲಿದ್ದಾರೆ.
ಈ ಸಂದರ್ಭದಲ್ಲಿ ಚಿತ್ರದ ಕಡೆ ಗಮನ ಕೊಡಲು ಹೇಗೆ ಸಾಧ್ಯ..?

Will Congress oppose the release of Kangana Ranaut s ambitious film Emergency

ಇವೆಲ್ಲ ಕಾರಣಗಳಿಂದ ಎಮರ್ಜೆನ್ಸಿ ಚಿತ್ರದ ಬಿಡುಗಡೆಯ ಮೇಲೆ ಈಗ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ. ಬಿಡುಗಡೆಯಾಗಿದ್ದೇ ಆದಲ್ಲಿ ಯಾವತ್ತು ಬಿಡುಗಡೆಯಾಗಲಿದೆ ಅನ್ನುವ ಪ್ರಶ್ನೆ ಎದ್ದಿದೆ. ಬಿಡುಗಡೆಯಾದರೆ ಎಮರ್ಜೆನ್ಸಿ ಚಿತ್ರವನ್ನ ಕಾಂಗ್ರೆಸ್ ಪಕ್ಷ ಹೇಗೆ ಸ್ವೀಕರಿಸುತ್ತೆ ಅನ್ನುವ ಕುತೂಹಲ ಕೂಡ ಬಹುತೇಕರಲ್ಲಿದೆ. ಕಂಗನಾ ಇನ್ಮುಂದೆ ಚಿತ್ರಗಳಲ್ಲಿ ನಟಿಸಲ್ಲ ಎಂಬ ನೋವು ಕೂಡ ಅನೇಕರಿಗೆ ಕಾಡುತ್ತಿದೆ.

More from Filmibeat

English summary
After the Lok Sabha Election 2024 results were announced, questions arose regarding the release of Kangana Ranaut's highly anticipated movie 'Emergency
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X