ಚಿತ್ರರಂಗಕ್ಕೆ ದೀಪಿಕಾ ಪಡುಕೋಣೆ ಗುಡ್ ಬೈ ? ಕಲ್ಕಿ ನಿರ್ಮಾಪಕರಲ್ಲಿ ಮಾಡಿಕೊಂಡ ಮನವಿ ಏನು..?

ಮೊನ್ನೆವರೆಗೆ ದೀಪಿಕಾ ಪಡುಕೋಣೆ ಸಿಕ್ಕಾಗೆಲ್ಲ ಏನಾದ್ರೂ ಗುಡ್ ನ್ಯೂಸ್ ಇದೆಯಾ ಎಂದು ಕೇಳ್ತಿದ್ದವರಿಗೆಲ್ಲ, ಇವತ್ತು ಗರ್ಭಿಣಿಯಾಗಿರುವ ದೀಪಿಕಾ ಇನ್ಮುಂದೆ ಮುಖಕ್ಕೆ ಬಣ್ಣ ಹಚ್ತಾರಾ ಇಲ್ವಾ ಅನ್ನುವ ಚಿಂತೆ ಶುರುವಾಗಿದೆ.

ಇದಕ್ಕೆ ಪೂರಕವಾಗಿ ಮೇ ನಂತರ ಡಿಪ್ಪಿ, ಚಿತ್ರರಂಗದಲ್ಲಿ ಸಕ್ರೀಯರಾಗಿ ಇರ್ತಾರಾ ಅಥವಾ ಮನೆಯಲ್ಲಿಯೇ ವಿಶ್ರಾಂತಿಯನ್ನ ಪಡೆಯುತ್ತಾರಾ ಅನ್ನುವ ರಸಪ್ರಶ್ನೆ ಸ್ಫರ್ಧೆಯನ್ನ ಅನೇಕರು ಹಮ್ಮಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಚರ್ಚೆಯನ್ನೂ ಮಾಡ್ತಿದ್ದಾರೆ.

will-deepika-padukone-take-break-from-film-industry-due-to-this-reason

ಇನ್ನೂ ಇದರ ನಡುವೆ ಒಪ್ಪಿಕೊಂಡಿರುವ ಚಿತ್ರಗಳನ್ನ, ದೀಪಿಕಾ ಅಂದುಕೊಂಡ ಸಮಯದಲ್ಲಿಯೇ ಪೂರೈಸುತ್ತಾರಾ, ಒಂದು ವೇಳೆ ಪೂರೈಸಿದರೂ ಆ ಚಿತ್ರದ ಪ್ರಚಾರದಲ್ಲಿ ಭಾಗಿಯಾಗ್ತಾರಾ ಅನ್ನುವ ಮಿಲಿಯನ್ ಡಾಲರ್ ಪ್ರಶ್ನೆ ಕೂಡ ಅನೇಕರಲ್ಲಿದೆ. ಯಾಕೆಂದರೆ.. ದೀಪಿಕಾ ಅಭಿನಯದ ಕಲ್ಕಿ 2898 ಡಿ ಇನ್ನೇನು ಜೂನ್‌ನಲ್ಲಿ ಬಿಡುಗಡೆಯಾಗಲಿದೆ. ಇನ್ನೂ ಗರ್ಭಿಣಿಯಾದರೂ ಕೂಡ ದೀಪಿಕಾ ಸಿಂಗಂ ಅಗೇನ್ ಚಿತ್ರದಲ್ಲಿ ಆಕ್ಟ್ ಮಾಡ್ತಿದ್ದಾರೆ.

ಸಿಂಗಂ ಅಗೇನ್ ಚಿತ್ರದಲ್ಲಿ ಇವರ ಪಾತ್ರದ ಅವಧಿ ಎಷ್ಟಿದೆ ಅನ್ನುವುದು ಸದ್ಯಕ್ಕೆ ಗೊತ್ತಿಲ್ಲವಾದರು, ಕಲ್ಕಿ 2898 ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರಲ್ಲಿ ದೀಪಿಕಾ ಮನವಿಯೊಂದನ್ನ ಮಾಡಿಕೊಂಡಿದ್ದಾರೆ ಅನ್ನುವ ಸುದ್ದಿ ಸದ್ಯಕ್ಕೆ ವೈರಲ್ ಆಗಿದೆ

will-deepika-padukone-take-break-from-film-industry-due-to-this-reason

ಹೌದು, ಜೂನ್‌ನಿಂದ ಮನೆಯಲ್ಲಿ ರೆಸ್ಟ್‌ ಮಾಡುವ ಕಾರಣ ಅವರು ಜೂನ್‌ ನಂತರ ಯಾವುದೇ ಶೂಟಿಂಗ್‌ ಅಥವಾ ಚಿತ್ರದ ಪ್ರಚಾರಕ್ಕೆ ಲಭ್ಯವಿರುವುದಿಲ್ಲ ಎಂಬ ಸುದ್ದಿ ಸದ್ಯಕ್ಕೆ ಹಬ್ಬಿದೆ. ದೀಪಿಕಾ ಅವರು ಮುಂದಿನ ತಿಂಗಳಿನಿಂದ ಅಂತಿಮವಾಗಿ ಕೆಲಸಕ್ಕೆ ವಿರಾಮ ಹೇಳುತ್ತಿದ್ದಾರೆ ಎಂದು ಎಲ್ಲರೂ ಮಾತನಾಡಿಕೊಳ್ತಿದ್ದಾರೆ.

ಇಷ್ಟೇ ಅಲ್ಲ ಕಡಿಮೆ ಅಂದರೂ ಇನ್ನೈದು ವರ್ಷ ದೀಪಿಕಾ ಪಡುಕೋಣೆ ಬಣ್ಣದ ಪ್ರಪಂಚದಿಂದ ಅಂತರವನ್ನು ಕಾಪಾಡಿಕೊಳ್ಳಲಿದ್ದಾರೆ ಅನ್ನುವ ಭವಿಷ್ಯವನ್ನು ಕೂಡ ಮುಂಬೈನಲ್ಲಿ ಅಷ್ಟೇ ಅಲ್ಲ ಚೆನೈನಲ್ಲಿ ಕೂಡ ಅನೇಕರು ಹೇಳಲು ಶುರು ಮಾಡಿದ್ದಾರೆ. ಗೊತ್ತಿಲ್ಲ.. ಅನುಷ್ಕಾ ಶರ್ಮಾ ಅವರಂತೆ ಪರ್ಮನೆಂಟಾಗಿ ದೀಪಿಕಾ ಪಡುಕೋಣೆ ಮನೆ-ಗಂಡ-ಸಂಸಾರ ಎಂದು ಬ್ಯುಸಿಯಾದರು ಆಗಬಹುದು.

will-deepika-padukone-take-break-from-film-industry-due-to-this-reason

ಇದೆಲ್ಲದರ ನಡುವೆ ದೀಪಿಕಾ ಪಡುಕೋಣೆ ಹೆರಿಗೆಗೆ ಸಜ್ಜಾದ ಹೆರಿಗೆ ಆಸ್ಪತ್ರೆ ಯಾವುದು..? ಹೆರಿಗೆ ಆಗುವ ದಿನ ಮತ್ತು ಮುಹೂರ್ತ ಯಾವುದು..? ಆ ಆಸ್ಪತ್ರೆ ಮುಂಬೈದ್ದಾ ಅಥವಾ ಬೆಂಗಳೂರಿನದ್ದಾ ಅನ್ನುವ ಪ್ರಶ್ನೆ ಕೂಡ ಅನೇಕರಲ್ಲಿದೆ. ಇದಕ್ಕೆಲ್ಲ ನಿಖರವಾದ ಉತ್ತರ ಇನ್ನೂ ಸಿಗಬೇಕಿದೆ ಅಷ್ಟೇ

ಒಟ್ನಲ್ಲಿ ಸದ್ಯಕ್ಕೆ ದೀಪಿಕಾ ಪಡುಕೋಣೆ ಮದುವೆಯಾಗಿ 5 ವರ್ಷಗಳ ನಂತ್ರ ದೀಪಿಕಾ ಮತ್ತು ರಣವೀರ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ದೀಪಿಕಾ ಪ್ರೆಗ್ನೆಸಿ ಸುತ್ತ ಚರ್ಚೆಯನ್ನೂ ಅನೇಕರು ಆರಂಭ ಮಾಡಿದ್ದಾರೆ. ಕೆಲವರ ಪ್ರಕಾರ ದೀಪಿಕಾ ನಿವೃತ್ತಿ ಘೋಷಿಸಲಿದ್ದರೆ, ಇನ್ನೂ ಕೆಲವರ ಪ್ರಕಾರ ದೀಪಿಕಾ ತಮ್ಮ ಚಿತ್ರ ಜೀವನಕ್ಕೆ ಅಲ್ಪವಿರಾಮವನ್ನ ಹಾಕಲಿದ್ದಾರೆ. ತಮ್ಮ ನಿರ್ಧಾರ ಏನೆಂಬುದು ದೀಪಿಕಾ ಪಡುಕೋಣೆ ಖುದ್ದು ಹೇಳೋವರೆಗೂ ಎಲ್ಲವೂ ಅಸ್ಪಷ್ಟ.

More from Filmibeat

English summary
According To Latest Report Mom-To-Be Deepika Padukone To Take Break From Film Industry
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X