ಹೊಸ ವರ್ಷ: ಬೆಸ್ಟ್ ಕತೆಗಳನ್ನು ಕೊಡುತ್ತೀನಿ ಎಂದ ಅನುಷ್ಕಾ ಶರ್ಮಾ

ಹೊಸ ವರ್ಷದಲ್ಲಿ ಅಮ್ಮನಾಗಲಿರುವ ಅನುಷ್ಕಾ ಶರ್ಮಾಗೆ ಸಹಜವಾಗಿಯೇ 2021 ರ ಮೇಲೆ ಭಾರಿ ನಿರೀಕ್ಷೆಗಳಿವೆ. ಮಗುವಿನ ಕಾರಣದಿಂದ 2021 ಅನುಷ್ಕಾ ಗೆ ಮರೆಯದ ವರ್ಷವಾಗಲಿದೆ.

2021 ರ ನಿರೀಕ್ಷೆಗಳು, ತಮ್ಮ ವೈಯಕ್ತಿಕ ಗುರಿಗಳ ಬಗ್ಗೆ ಪತ್ರಿಕೆಯೊಂದರ ಜೊತೆ ಮಾತನಾಡಿರುವ ಅನುಷ್ಕಾ ಶರ್ಮಾ, ಮುಂದಿನ ವರ್ಷ ಜನರಿಗೆ ಹೆಚ್ಚು-ಹೆಚ್ಚು ಗುಣಮಟ್ಟದ ಸಿನಿಮಾ, ವೆಬ್ ಸರಣಿಗಳನ್ನು ನೀಡುವುದಾಗಿ ಹೇಳಿದ್ದಾರೆ ಅನುಷ್ಕಾ.

ಕ್ಲೀನ್ ಸ್ಲೇಟ್ ಹೆಸರಿನ ಸ್ವಂತ ನಿರ್ಮಾಣ ಸಂಸ್ಥೆ ಹೊಂದಿರುವ ಅನುಷ್ಕಾ ಶರ್ಮಾ, ಈಗಾಗಲೇ ಹಲವು ಉತ್ತಮ ಸಿನಿಮಾಗಳು, ವೆಬ್ ಸರಣಿಗಳನ್ನು ನೀಡಿದ್ದಾರೆ. ಮುಂದಿನ ವರ್ಷ ಇನ್ನಷ್ಟು ಒಳ್ಳೆಯ ಕಂಟೆಂಟ್ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ.

2020 ರಲ್ಲಿ ಸಾಕಷ್ಟು ಕತೆಗಳು ಹುಟ್ಟಿವೆ: ಅನುಷ್ಕಾ

2020 ರಲ್ಲಿ ಸಾಕಷ್ಟು ಕತೆಗಳು ಹುಟ್ಟಿವೆ: ಅನುಷ್ಕಾ

2020 ರ ವರ್ಷ ನಾವೆಲ್ಲರೂ ಮನೆಯಲ್ಲಿಯೇ ಉಳಿಯುವಂತೆ ಮಾಡಿತು. ಈ ಸಂದರ್ಭದಲ್ಲಿ ಕೆಲವು ಉತ್ತಮ ಕತೆಗಳನ್ನು ಹೆಣೆಯಲು, ಕೇಳಲು, ಚಿಂತಿಸಲು ಸಮಯವೂ ಸಿಕ್ಕಿತು. ಅದರ ಪ್ರತಿಫಲ 2021 ರಲ್ಲಿ ವೀಕ್ಷಕರಿಗೆ ಪರದೆಯ ಮೇಲೆ ಕಾಣಲಿದೆ ಎಂದಿದ್ದಾರೆ ಅನುಷ್ಕಾ ಶರ್ಮಾ.

2021 ನಮ್ಮ ಪಾಲಿಗೆ ಸಾಕಷ್ಟು ಭಿನ್ನವಾಗಿರಲಿದೆ: ಅನುಷ್ಕಾ

2021 ನಮ್ಮ ಪಾಲಿಗೆ ಸಾಕಷ್ಟು ಭಿನ್ನವಾಗಿರಲಿದೆ: ಅನುಷ್ಕಾ

ಕ್ಲೀನ್‌ ಸ್ಲೇಟ್ ನಿರ್ಮಾಣ ಸಂಸ್ಥೆಯ ಧ್ಯೇಯ-ಉದ್ದೇಶದ ಬಗ್ಗೆ ಮಾತನಾಡಿದ ಅನುಷ್ಕಾ ಶರ್ಮಾ, 'ನಮ್ಮ ಸಂಸ್ಥೆಯು ರಿಸ್ಕ್ ತೆಗೆದುಕೊಳ್ಳುತ್ತದೆ ಮತ್ತು ಪಕ್ಕಾ ಒರಿಜಿನಲ್ ಕಂಟೆಂಟ್ ಅನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. 2021 ನಮಗೆ ಸಾಕಷ್ಟು ಭಿನ್ನವಾಗಿರಲಿದೆ ಎಂದಿದ್ದಾರೆ ಅನುಷ್ಕಾ ಶರ್ಮಾ.

ಒಳ್ಳೆಯ ಸಿನಿಮಾಗಳನ್ನು ನೀಡಿದ್ದಾ ಅನುಷ್ಕಾ

ಒಳ್ಳೆಯ ಸಿನಿಮಾಗಳನ್ನು ನೀಡಿದ್ದಾ ಅನುಷ್ಕಾ

ಅನುಷ್ಕಾ ಶರ್ಮಾ ಒಡೆತನದ ಕ್ಲೀನ್‌ ಸ್ಲೆಟ್ ನಿರ್ಮಾಣ ಸಂಸ್ಥೆಯ ಮೂಲಕ ಎನ್‌ಎಚ್ 10, ಫಿಲೌರಿ, ಪರಿ, ಬುಲ್‌ಬುಲ್ ಸಿನಿಮಾಗಳನ್ನು ನಿರ್ಮಿಸಲಾಗಿದೆ. ವೆಬ್ ಸರಣಿ ಪಾತಾಳ್ ಲೋಕ್ ಅನ್ನು ಸಹ ನಿರ್ಮಿಸಲಾಗಿದೆ. 'ಮೈ' ಹೆಸರಿನ ಹೊಸ ಸಿನಿಮಾದ ನಿರ್ಮಾಣ ಕಾರ್ಯ ಚಾಲ್ತಿಯಲ್ಲಿದೆ.

Recommended Video

ಪೊಗರು ರಿಲೀಸ್ ಗೆ ಮೊದಲೆ ಮತ್ತೊಂದು ಸುರ್ಪ್ರೈಸ್ ಕೊಟ್ಟ ಧ್ರುವ ಸರ್ಜಾ | Filmibeat Kannada
ಜನವರಿ ತಿಂಗಳಲ್ಲಿ ಮಗು

ಜನವರಿ ತಿಂಗಳಲ್ಲಿ ಮಗು

ಅನುಷ್ಕಾ ಶರ್ಮಾ ಗರ್ಭಿಣಿಯಾಗಿದ್ದು, ಜನವರಿ ತಿಂಗಳಲ್ಲಿ ಮಗು ಜನಿಸುವ ಸಂಭವ ಇದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ವಿರಾಟ್ ಕೊಹ್ಲಿ, ಇದೇ ಕಾರಣಕ್ಕೆ ಪ್ರವಾಸವನ್ನು ಮೊಟಕುಗೊಳಿಸಿ ಆಸ್ಟ್ರೇಲಿಯಾದಿಂದ ಭಾರತಕ್ಕೆ ಬರುತ್ತಿದ್ದಾರೆ.

More from Filmibeat

English summary
Actress Anushka Sharma promises to give exiting content from her production house clean slate.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X