ರಾಜಕೀಯ ಪ್ರವೇಶದ ಸುಳಿವು ಕೊಟ್ಟ ಕ್ವೀನ್ ಬೆಡಗಿ!

By Naveen

ನಟಿ ಕಂಗನಾ ರಣಾವತ್ ಒಂದಲ್ಲ ಒಂದು ವಿಚಾರವಾಗಿ ಸದಾ ಸುದ್ದಿಯಲ್ಲಿರುವ ನಟಿ. ಯಾವುದೇ ಹೀರೋಗಳ ಜೊತೆಯಲ್ಲಿ ನಟಿಸದೇಯೂ ತನ್ನ ಸ್ವತಃ ಸಾಮರ್ಥ್ಯದ ಮೂಲಕ ಕೋಟಿ ಕ್ಲಬ್ ಸೇರಬಲ್ಲ ನಟಿಮಣಿ ಈಕೆ. ಸದ್ಯ ಸಿನಿಮಾರಂಗದಲ್ಲಿ ಬ್ಯುಸಿ ಆಗಿರುವ ಕಂಗನಾ ರಣಾವತ್ ರಾಜಕೀಯ ಪ್ರವೇಶದ ಬಗ್ಗೆ ಸುಳಿವು ನೀಡಿದ್ದಾರೆ.

ಇತ್ತೀಚಿಗಷ್ಟೆ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ರಾಜಕೀಯದ ಬಗ್ಗೆ ಮಾತನಾಡಿದ ಕಂಗನಾ ದೇಶದಲ್ಲಿನ ಸಾಮಾಜಿಕ ಅಸಮಾನತೆಗಳ ಬಗ್ಗೆಯೂ ಕೂಡ ತಮ್ಮ ಕಾಳಜಿ ತೋರಿದ್ದರು. ಇದೇ ಸಮಯದಲ್ಲಿ ಬಾಲಿವುಡ್ ಬೋಲ್ಡ್ ಬೆಡಗಿ ರಾಜಕೀಯಕ್ಕೆ ಬರುವ ಸಣ್ಣ ಸುಳಿವು ನೀಡಿದ್ದಾರೆ.

ಯುವ ಪಡೆ ದೇಶದ ಆಡಳಿತ ನಡೆಸಬೇಕು ಎನ್ನುವ ಉದ್ದೇಶ ಹೊಂದಿರುವ ಕಂಗನಾ ಲೋಕಸಭೆ ಚುನಾವಣೆಯಲ್ಲಿ ರಾಜಕೀಯ ಪ್ರವೇಶಿಸುವ ಊಹಾಪೋಹ ಇದೆ. ಕಂಗಾನ ದೇಶಕ್ಕೆ ಸೇವೆ ಸಲ್ಲಿಸುವ ಮನಸ್ಸು ತಮಗಿದೆ ಎನ್ನುವುದನ್ನು ತಿಳಿಸಿದ್ದು, ಬಾಲಿವುಡ್ ಅಂಗಳದಲ್ಲಿ ರಾಜಕೀಯದ ಸುದ್ದಿ ದಟ್ಟವಾಗಿದೆ.

Will Kangana Ranaut entering politics?

ಇನ್ನು ಎಲ್ಲರಿಗೂ ತಿಳಿದಿರುವಂತೆ ಕಂಗನಾ ಈ ಹಿಂದೆಯೇ ನಾನು ತಾನು ಪ್ರಧಾನಿ ಮೋದಿ ಅವರ ಬಹು ದೊಡ್ಡ ಅಭಿಮಾನಿ ಎಂದಿದ್ದರು. ಅವರ ಯಶಸ್ವಿ ಜೀವನ ನಮಗೆ ರೋಲ್ ಮಾಡೆಲ್. ಒಬ್ಬ ಚಾಯ್ ವಾಲ ಪ್ರಧಾನಿ ಆಗುವುದು, ಸಾಮಾನ್ಯ ಮನುಷ್ಯನ ಸಾಧನೆ ಮಾತ್ರವಲ್ಲ. ಅದು ನಮ್ಮ ಪ್ರಜಾಪ್ರಭುತ್ವದ ಯಶಸ್ಸು ಕೂಡ ಎನ್ನುವ ಅಭಿಪ್ರಾಯವನ್ನು ಹೊರ ಹಾಕಿದ್ದರು.

ಇದಕ್ಕೆ ಪೂರಕವಾಗಿ ಇತ್ತೀಚಿಗೆ ಕಂಗನಾ 2019ರಲ್ಲಿ ಮೋದಿ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೋದಿ ಅವರು ಮತ್ತೆ ಅಧಿಕಾರಕ್ಕೆ ಬರಬೇಕು. ದೇಶದ ಅಭಿವೃದ್ಧಿ ಮಾಡಲು ಐದು ವರ್ಷ ಸಾಕಾಗುವುದಿಲ್ಲ ಎಂದಿದ್ದಾರೆ.

More from Filmibeat

English summary
Will Bollywood actress Kangana Ranaut entering politics?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X