Emergency Box Office Day 1 ; 05 ವರ್ಷದ ನಂತರ ಕಂಗನಾ ಮುಖದಲ್ಲಿ ನಗು, ಎಮರ್ಜೆನ್ಸಿ ಮೊದಲ ದಿನ ಗಳಿಸಿದ್ದೆಷ್ಟು ?

ಚಿತ್ರಕ್ಕೆ ಮತ್ತು ಪಾತ್ರಕ್ಕೆ ತನು-ಮನ ಅರ್ಪಿಸುವುದಲ್ಲದೇ ಪ್ರಬಲ ಶಕ್ತಿಗಳ ಮುಂದೆ ತನ್ನ ವ್ಯಕ್ತಿತ್ವಕ್ಕೆ ಮಸಿ ತಗುಲದಂತೆ ಬಾಲಿವುಡ್ ನಲ್ಲಿ ಸ್ಟಾರ್ ಪಟ್ಟವನ್ನು ಅಲಂಕರಿಸಿದವರು ಕಂಗನಾ ರಣಾವತ್. ಇಂಥಾ ಕಂಗನಾ ರಣಾವತ್ ಈಗ ಕೇವಲ ನಾಯಕಿ ನಿರ್ದೇಶಕಿ ಮಾತ್ರ ಅಲ್ಲ ಬಿಜೆಪಿ ಸಂಸದೆಯೂ ಹೌದು. ಹೀಗಾಗಿ ಭಾರತದ ಇತಿಹಾಸದಲ್ಲಿಯೇ ಕಪ್ಪು ಚುಕ್ಕೆಯಾದ ತುರ್ತು ಪರಿಸ್ಥಿತಿಯನ್ನಾಧರಿಸಿದ ಎಮರ್ಜೆನ್ಸಿ ಚಿತ್ರವನ್ನು ಕಂಗನಾ ಹೇಗೆ ನಿರೂಪಿಸಿರಬಹುದು ಎನ್ನುವ ಕುತೂಹಲ ಎಲ್ಲರಲ್ಲಿತ್ತು. ಆ ಕುತೂಹಲಕ್ಕೆ ನಿನ್ನೆ ಉತ್ತರ ಸಿಕ್ಕಿದೆ. ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದ ಕಂಗನಾ ಮುಖದಲ್ಲಿ ಐದು ವರ್ಷದ ನಂತರ ಮಂದಹಾಸ ಅರಳಿದೆ.

ಹೌದು, ಹತ್ತು ಹಲವು ಅಡೆತಡೆಗಳನ್ನೇದುರಿಸಿ ನಿನ್ನೆ ಭಾರತದೆಲ್ಲೆಡೆ ತೆರೆಗೆ ಬಂದ ಎಮರ್ಜೆನ್ಸಿ ಚಿತ್ರ ಮೊದಲನೇ ದಿನ ₹2.35 ಕೋಟಿಯನ್ನು ಗಳಿಸಿದೆ ಎಂದು ಬಾಕ್ಸಾಫೀಸ್‌ನ ಲೆಕ್ಕವನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ಕ್ ವೆಬ್ ಸೈಟ್ ವರದಿ ಮಾಡಿದೆ. ನಿಜಾ. ಕಂಗನಾ ಎಂಬ ಹೆಸರು ಅವರಿಗೆ ಇರುವ ಸ್ಟಾರ್ ಪವರು ಎರಡನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಮೊದಲ ದಿನದ ಗಳಿಕೆ ತುಂಬಾನೇ ಕಡಿಮೆನೇ.

Will Kangana s Emergency Win at the Box Office Against All Odds Here s the Day 1 Collection

ಆದರೆ.. ಇಷ್ಟೊಂದು ದೊಡ್ಡ ಮೊತ್ತವನ್ನು ಬಾಕ್ಸಾಫೀಸ್‌ನಲ್ಲಿ ಕಂಗನಾ ಕಣ್ತುಂಬಿಕೊಂಡು ಐದು ವರ್ಷಗಳೇ ಆಗಿದ್ದವು. ಇವರ ಹಿಂದಿನ ಚಿತ್ರ ತೇಜಸ್ ಮೊದಲ ದಿನ ₹1.25 ಕೋಟಿ ಗಳಿಸಿದ್ದರೆ ಅದಕ್ಕೂ ಹಿಂದೆ ಧಾಕಡ್ ಫಸ್ಟ್ ಡೇ ₹1.20 ಕೋಟಿ ಗಳಿಸಿತ್ತು. ಇನ್ನು ಜಯಲಲಿತಾ ಅವರ ಜೀವನಾಧಾರಿತ ಚಿತ್ರ ತಲೈವಿ ಮೂರು ಭಾಷೆಯಲ್ಲಿ ತೆರೆಗೆ ಬಂದಿದ್ದರು ಕೂಡ ಮೊದಲ ದಿನ ₹1.46 ಕೋಟಿಯನ್ನು ಮಾತ್ರ ಗಳಿಸಿತ್ತು. ಕೊರೊನಾದಿಂದ ಅನೇಕರು ಕಂಗಾಲಾಗುವ ಸಮಯದ ಸುತ್ತ ಮುತ್ತ ಬಂದ ಪಂಗಾ ಮೊದಲ ದಿನ ₹2.76 ಕೋಟಿಯನ್ನು ಗಳಿಸಿತ್ತು. ಈ ಅರ್ಥದಲ್ಲಿ ಮುಳುಗುತ್ತಿದ್ದ ಕಂಗನಾ ಅವರ ವೃತ್ತಿ ಜೀವನಕ್ಕೆ ಎಮರ್ಜೆನ್ಸಿ ₹2.35 ಕೋಟಿ ಗಳಿಸುವ ಮೂಲಕ ಮರು ಜೀವ ನೀಡಿದೆ ಅಂದರೆ ತಪ್ಪಾಗಲಿಕ್ಕಿಲ್ಲ.

ಅಂದ್ಹಾಗೇ ಮೊದಲ ದಿನ ಚಿತ್ರದ ಗಳಿಕೆ ಉತ್ತಮವಾಗಿದೆ. ಹಾಗಂಥ ಚಿತ್ರದ ಪ್ರದರ್ಶನ ಹೀಗೆ ಮುಂದುವರೆಯುತ್ತೆ, ಚಿತ್ರ ಗೆಲ್ಲುತ್ತೆ ಎಂದು ಹೇಳಲು ಸಾಧ್ಯ ಇಲ್ಲ. ಯಾಕೆಂದರೆ. ಕಂಗನಾ ಈಗ ಬಿಜೆಪಿ ಸಂಸದೆ ಆದ ಕಾರಣ ಅನೇಕರು ಚಿತ್ರದ ಕುರಿತು ತಕರಾರು ತೆಗೆಯುತ್ತಿದ್ದಾರೆ. ಇಂದಿರಾ ಗಾಂಧಿ ಅವರನ್ನು ಚಿತ್ರದಲ್ಲಿ ಅವಮಾನಿಸಲಾಗಿದೆ ಎನ್ನುವ ಆರೋಪ ಮಾಡುತ್ತಿದ್ದಾರೆ.

ಇನ್ನು ಪಂಜಾಬ್‌ನಲ್ಲಿ ಈ ಚಿತ್ರದ ವಿರುದ್ಧ ಆಕ್ರೋಶದ ಅಲೆ ಎದ್ದಿದೆ. ಸಿಖ್ ಸಮುದಾಯಕ್ಕೆ ಈ ಚಿತ್ರದಲ್ಲಿ ಅವಮಾನ ಮಾಡಲಾಗಿದೆ ಎಂದು ಗುಡುಗಿರುವ ಶಿರೋಮಣಿ ಗುರುದ್ವಾರದ ಪ್ರತಿಬಂಧಕ ಸಮಿತಿ ಚಿತ್ರವನ್ನು ಬ್ಯಾನ್ ಮಾಡಬೇಕೆಂದು ಒತ್ತಾಯಿಸಿ ಅಮೃತಸರದಲ್ಲಿ ನಿನ್ನೆ ಪ್ರತಿಭಟನೆಯನ್ನು ಕೂಡ ಮಾಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಎಡಪಂಥ-ಬಲಪಂಥ ಎಂಬ ವಿಚಾರವನ್ನು ಪಕ್ಕಕ್ಕೆ ಇಟ್ಟರು ಕೂಡ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾದ ಅಭಿಪ್ರಾಯ ಮಿಶ್ರವಾಗಿದೆ.

ಇನ್ನೂ ಕಂಗನಾ ತಮ್ಮ ಚಿತ್ರಕ್ಕೆ ಎಮರ್ಜೆನ್ಸಿ ಎಂಬ ಹೆಸರಿನ್ನಿಟ್ಟಿದ್ದಾರೆ. ಆದರೆ, ಎರಡು ವರ್ಷಗಳ ಕಾಲ ಇದ್ದ ಎಮರ್ಜೆನ್ಸಿಯ ಕಥೆಗೆ ಒತ್ತು ನೀಡದೆ ಇಂದಿರಾ ಗಾಂಧಿ ಅವರ ಇಡೀ ಜೀವನದ ಕಥೆಯನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಈ ವಿಚಾರ ಕೂಡ ಚಿತ್ರಕ್ಕೆ ಹಿನ್ನೆಡೆಯಾಗುವ ಸಾಧ್ಯತೆ ಇದೆ. ಈ ಕಾರಣಕ್ಕೆ ಇಂದು ಮತ್ತು ನಾಳೆಯ ಬಾಕ್ಸಾಫೀಸ್ ಲೆಕ್ಕ ಕಂಗನಾ ಪಾಲಿಗೆ ತುಂಬಾನೇ ಮಹತ್ವವಾದದ್ದು.

Disclaimer: ಎಮರ್ಜೆನ್ಸಿ ಚಿತ್ರದ ಮೊದಲ ದಿನದ ಗಳಿಕೆಯ ಈ ಅಂಕಿ ಅಂಶಗಳನ್ನು ಬೇರೆ ಮೂಲಗಳಿಂದ ಸಂಗ್ರಹಿಸಿದ್ದು, ಚಿತ್ರತಂಡ ಇನ್ನೂ ಅಧಿಕೃತವಾಗಿ ಮಾಹಿತಿ ನೀಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X