ಬಾಲಿವುಡ್ ನಲ್ಲಿ ಮಲ್ಟಿಸ್ಟಾರ್ ಸಿನಿಮಾ: ರಣ್ವೀರ್ ಸಿಂಗ್ ಜೊತೆ ಮಹೇಶ್ ಬಾಬು
ಈಗಾಗಲೇ ಸೌತ್ ಇಂಡಸ್ಟ್ರಿಯ ಸಾಕಷ್ಟು ನಟ, ನಟಿಯರು ಬಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆ ಮಾಡಿದ್ದಾರೆ. ಇದೀಗ ಪ್ರಿನ್ಸ್ ಮಹೇಶ್ ಬಾಬು ಸಹ ಹಿಂದಿ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿ ಇದೆ.
ಬಾಲಿವುಡ್ ನಲ್ಲಿ ಒಂದು ಮಲ್ಟಿಸ್ಟಾರ್ ಸಿನಿಮಾ ಸಿದ್ಧವಾಗುತ್ತಿದ್ದು, ಇದರಲ್ಲಿ ಮಹೇಶ್ ಬಾಬು ಕಾಣಿಸಿಕೊಳ್ಳುತ್ತಾರೆ ಎಂಬ ಸುದ್ದಿ ಹರಿದಾಡಿದೆ. ನಟ ರಣ್ವೀರ್ ಸಿಂಗ್ ಜೊತೆಗೆ ಮಹೇಶ್ ಬಾಬು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ನಿರ್ದೇಶಕ, ನಿರ್ಮಾಪಕ ಸಾಜಿದ್ ನಾದಿಯದ್ವಾಲಾ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಮಹೇಶ್ ಬಾಬುರನ್ನು ಕರೆತರುವ ಪ್ರಯತ್ನವನ್ನು ಅವರು ಮಾಡಿದ್ದಾರೆ. ಈ ಬಗ್ಗೆ ಸಾಜಿದ್ ಮಹೇಶ್ ಬಾಬುರನ್ನು ಸಂಪರ್ಕ ಮಾಡಿದ್ದಾರಂತೆ.

ಈ ಹಿಂದೆ ಒಂದು ಜಾಹಿರಾತಿನಲ್ಲಿ ರಣ್ವೀರ್ ಸಿಂಗ್ ಹಾಗೂ ಮಹೇಶ್ ಬಾಬು ಒಟ್ಟಿಗೆ ಕೆಲಸ ಮಾಡಿದ್ದರು. ಇದೀಗ ಈ ಜೋಡಿ ಸಿನಿಮಾದಲ್ಲಿಯೂ ಒಂದಾಗುವ ಸಾಧ್ಯತೆ ಇದೆ. ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವ ಆಸೆ ಇಲ್ಲ ಎಂದು ಮಹೇಶ್ ಬಾಬು ಹೇಳಿದ್ದರು. ಆದರೆ, ಕಥೆ ಅವರಿಗೆ ಇಷ್ಟ ಆದರೆ, ಈ ಸಿನಿಮಾ ಮಾಡಬಹುದು.
ಈ ಹಿಂದೆ, ರಜನಿಕಾಂತ್, ಚಿರಂಜೀವಿ, ಸೂರ್ಯ, ಧನುಷ್, ಪ್ರಭಾಸ್, ರಾಮ್ ಚರಣ್ ಸೇರಿದಂತೆ ಅನೇಕ ಸ್ಟಾರ್ ಗಳು ಬಾಲಿವುಡ್ ನಲ್ಲಿ ಸಿನಿಮಾ ಮಾಡಿ ಬಂದಿದ್ದಾರೆ.


Click it and Unblock the Notifications











