8 ವರ್ಷದ ಬಳಿಕ ನಟನೆ: ತಾಯಿ-ತಂಗಿ ಪಾತ್ರ ಮಾಡುವುದಿಲ್ಲವೆಂದ ಜೆನಿಲಿಯಾ

ನಟಿ ಜೆನಿಲಿಯಾ ನಟನೆಯಿಂದ ವಿರಾಮ ತೆಗೆದುಕೊಂಡು ಬರೋಬ್ಬರಿ ಎಂಟು ವರ್ಷಗಳಾದವು. ಆದರೆ ಈಗ ನಟನೆಗೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ ಈ ಪ್ರತಿಭಾವಂತ ನಟಿ.
ನಟಿ ಕೊನೆಯದಾಗಿ ನಟಿಸಿದ್ದು 2012 ರಲ್ಲಿ. ತೆಲುಗಿನ 'ನಾ ಇಷ್ಟಂ' ಜೆನಿಲಿಯಾರ ಕೊನೆಯ ನಟನೆಯ ಸಿನಿಮಾ. ಆ ನಂತರ ಕೆಲವು ಸಿನಿಮಾಗಳಲ್ಲಿ ಅವರು ಕಾಣಿಸಿಕೊಂಡರಾದರೂ ಅದು ಕೇವಲ ಅತಿಥಿ ಪಾತ್ರದಲ್ಲಿಯಷ್ಟೆ.
ಆದರೆ ಈಗ ಸ್ವತಃ ಜೆನಿಲಿಯಾ ಅವರೇ ತಾವು ಮತ್ತೆ ನಟನೆಗೆ ಸಿದ್ಧವಾಗಿರುವುದಾಗಿ ಹೇಳಿದ್ದು, ಒಳ್ಳೆಯ ಪಾತ್ರಗಳಿಗಾಗಿ ಎದುರು ನೋಡುತ್ತಿದ್ದೇನೆ ಎಂದಿದ್ದಾರೆ. ಕೆಲವು ನಿರ್ದಿಷ್ಟ ರೀತಿಯ ಪಾತ್ರಗಳಿಗಾಗಿಯೇ ಎದುರು ನೋಡುತ್ತಿರುವುದಾಗಿಯೂ ಹೇಳಿದ್ದಾರೆ ಜೆನಿಲಿಯಾ.

ಸಿದ್ಧ ಮಾದರಿ ತಾಯಿ-ತಂಗಿ ಪಾತ್ರ ಮಾಡಲ್ಲ: ಜೆನಿಲಿಯಾ
'ಡೆಲ್ಲಿ ಕ್ರೈಂ, ಆರ್ಯಾ ರೀತಿಯ ವೆಬ್ ಸರಣಿಗಳನ್ನು ನೋಡುವಾಗ, ಈಗಿನ ದಿನಗಳಲ್ಲಿ ಮಹಿಳೆ ಸಹ ಬಹು ಗಟ್ಟಿಯಾದ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ ಎನಿಸುತ್ತಿದೆ. ನಾನೂ ಸಹ ಅಂಥಹಾ ಗಟ್ಟಿ ಪಾತ್ರಗಳ ನಿರೀಕ್ಷೆಯಲ್ಲಿದ್ದೇನೆ. ಅದೇ ಸಿದ್ಧ ಮಾದರಿ ತಾಯಿ, ಸಹೋದರಿ ಪಾತ್ರಗಳಲ್ಲಿ ನಟಿಸುವುದಿಲ್ಲ' ಎಂದಿದ್ದಾರೆ ಜೆನಿಲಿಯಾ.
Recommended Video

ಚಿರಂಜೀವಿ ಸಿನಿಮಾಕ್ಕೆ ಒಲ್ಲೆ ಎಂದ ಜೆನಿಲಿಯಾ
ಮಲಯಾಳಂ ನ 'ಲುಸೀಫರ್' ಸಿನಿಮಾದ ರೀಮೇಕ್ ನಲ್ಲಿ ಚಿರಂಜೀವಿ ನಟಿಸುತ್ತಿದ್ದು ಸಿನಿಮಾದಲ್ಲಿ ಪ್ರಮುಖ ಪಾತ್ರಕ್ಕೆ ಜೆನಿಲಿಯಾಗೆ ಆಫರ್ ನೀಡಲಾಗಿತ್ತು. ಆದರೆ ಆ ಆಫರ್ ಅನ್ನು ಜೆನಿಲಿಯಾ ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ.


Click it and Unblock the Notifications










