For Quick Alerts
  ALLOW NOTIFICATIONS  
  For Daily Alerts

  ಏಪ್ರಿಲ್ 19ಕ್ಕೆ ಅರ್ಜುನ್ ಕಪೂರ್ ಜೊತೆ ಮಲೈಕಾ ಮದುವೆ?

  |

  ಬಾಲಿವುಡ್ ನಲ್ಲಿ ಮತ್ತೆ ಮದುವೆ ಸಂಭ್ರಮ ಸುದ್ದಿಯಾಗುತ್ತಿದೆ. ಕಳೆದ ವರ್ಷ ದೀಪಿಕಾ ಪಡುಕೋಣೆ - ರಣ್ವೀರ್ ಸಿಂಗ್ ಹಾಗೂ ಪ್ರಿಯಾಂಕಾ ಚೋಪ್ರಾ - ನಿಕ್ ಜೋನಸ್ ಹಸೆಮಣೆ ಏರಿದ್ದರು. ಈ ವರ್ಷ ಮತ್ತೊಂದು ತಾರಾ ಜೋಡಿಯ ಮದುವೆ ಸುದ್ದಿ ಸದ್ದು ಮಾಡುತ್ತಿದೆ.

  ಅದು ಮತ್ಯಾರು ಅಲ್ಲ... 45 ವರ್ಷದ ನಟಿ ಮಲೈಕಾ ಅರೋರಾ ಮತ್ತು 33 ವರ್ಷದ ಅರ್ಜುನ್ ಕಪೂರ್ ಮದುವೆ ವಿಚಾರ. ಹೌದು, 1998ರಲ್ಲಿ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಮದುವೆಯಾಗಿದ್ದ ಮಲೈಕಾ, 2017ರಲ್ಲಿ ವಿಚ್ಚೇದನ ಪಡೆಯುವ ಮೂಲಕ 18 ವರ್ಷದ ವಿವಾಹ ಸಂಬಂಧವನ್ನು ಕಡಿದುಕೊಂಡಿದ್ದರು. ಈಗ ಮಲೈಕಾ, ಅರ್ಜುನ್ ಕಪೂರ್ ಕೈ ಹಿಡಿಯುತ್ತಿದ್ದಾರೆ.

  'ದಬ್ಬಂಗ್-3' ಚಿತ್ರದಿಂದ ಮಲೈಕಾಗೆ ಗೇಟ್ ಪಾಸ್ ಕೊಟ್ಟ ಸಲ್ಮಾನ್ ಖಾನ್.!'ದಬ್ಬಂಗ್-3' ಚಿತ್ರದಿಂದ ಮಲೈಕಾಗೆ ಗೇಟ್ ಪಾಸ್ ಕೊಟ್ಟ ಸಲ್ಮಾನ್ ಖಾನ್.!

  ಬಾಲಿವುಡ್ ನಲ್ಲಿ ಮಲೈಕಾ ಮತ್ತು ಅರ್ಜುನ್ ಕಪೂರ್ ಗೆಳೆತನ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದ್ದರು ನಾವಿಬ್ಬರು ಉತ್ತಮ ಸ್ನೇಹಿತರು ಅಂತನೇ ಹೇಳಿಕೊಂಡು ಓಡಾಡುತ್ತಿದ್ದರು. ಪ್ರತಿಯೊಂದು ಕಾರ್ಯಕ್ರಮಗಳಲ್ಲಿಯೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಈಗ ಮದುವೆ ಆಗುವ ನಿರ್ಧಾರಕ್ಕೆ ಬಂದಿದ್ದಾರಂತೆ. ಅಷ್ಟೆಯಲ್ಲ ಇಬ್ಬರ ಮದುವೆ ದಿನಾಂಕ ಕೂಡ ನಿಗದಿಯಾಗಿದೆಯಂತೆ.

  ಬಿಕಿನಿ ತೊಟ್ಟಿರುವ ಮಲೈಕಾಗೆ ಇನ್ಸ್ಟಾಗ್ರಾಮ್ ನಲ್ಲಿ ಶೇಮ್ ಶೇಮ್.! ಬಿಕಿನಿ ತೊಟ್ಟಿರುವ ಮಲೈಕಾಗೆ ಇನ್ಸ್ಟಾಗ್ರಾಮ್ ನಲ್ಲಿ ಶೇಮ್ ಶೇಮ್.!

  ಮೂಲಗಳ ಪ್ರಕಾರ, ಮಲೈಕಾ ಮತ್ತು ಅರ್ಜುನ್ ಕಪೂರ್ ಏಪ್ರಿಲ್ 19ಕ್ಕೆ ವಿವಾಹವಾಗುತ್ತಿದ್ದಾರಂತೆ. ಇಬ್ಬರ ಮದುವೆ ಕ್ರಿಸ್ಟಿಯನ್ ಸಂಪ್ರದಾಯದ ಪ್ರಕಾರ ನಡೆಯುತ್ತಿದ್ದು, ಕೆಲವೇ ಕೆಲವು ಆಪ್ತರಿಗೆ ಮಾತ್ರ ಆಮಂತ್ರಣ ನೀಡಲಾಗಿದೆಯಂತೆ. ನಟಿ ಕರೀನಾ ಕಪೂರ್, ಕರೀಶ್ಮಾ ಕಪೂರ್, ದೀಪಿಕಾ ಪಡುಕೊಣೆ ದಂಪತಿ ಸೇರಿದಂತೆ ಕೆಲವೇ ಕೆಲವರು ಮಾತ್ರ ಭಾಗಿಯಾಗಲಿದ್ದಾರೆ. ಅಲ್ಲದೆ ಮದುವೆ ವಿಚಾರವಾಗಿ ಗೌಪ್ಯತೆ ಕಾಪಾಡುವಂತೆ ಆಪ್ತರಿಗೆ ಮನವಿ ಮಾಡಿದ್ದಾರಂತೆ ಮಲೈಕಾ ಮತ್ತು ಅರ್ಜುನ್ ಕಪೂರ್.

  English summary
  Actress Malaika Arora and Actor Arjun Kapoor get married on April 19 rumors going around in Bollywood. They invite only close friends and family for their wedding.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X