ಹಿಂದಿಯ 'ಪ್ಯಾಡ್ ಮ್ಯಾನ್' ಸಿನಿಮಾ ಕನ್ನಡಕ್ಕೆ ಬರುತ್ತಾ?
Recommended Video

ಬಾಲಿವುಡ್ ಅಂಗಳದಲ್ಲಿ ಒಂದು ತಿಂಗಳಿಂದ ಸದ್ದು ಮಾಡುತ್ತಿರುವ 'ಪ್ಯಾಡ್ ಮ್ಯಾನ್' ಸಿನಿಮಾದ ಪ್ರಭಾವ ಕನ್ನಡ ಸಿನಿಮಾರಂಗದ ಮೇಲೆ ಬಿದ್ದಿದೆ. ಬಾಲಿವುಡ್ ಮಂದಿ ಸಿನಿಮಾ ಪ್ರಚಾರ ಮಾಡಿದ ರೀತಿಯಲ್ಲೇ ಕನ್ನಡದಲ್ಲೂ ಹಿತಾ ಚಂದ್ರಶೇಖರ್ ರೆಡ್ ರೆವಲ್ಯೂಷನ್ ಹೆಸರಿನಲ್ಲಿ ಅಭಿಯಾನವನ್ನು ಪ್ರಾರಂಭ ಮಾಡಿದ್ದರು.
ನಟಿ ಶೃತಿ ಹರಿಹರನ್ ಸ್ಯಾನಿಟರಿ ಪ್ಯಾಡ್ ಹಿಡಿದು ಹೆಣ್ಣು ಮಕ್ಕಳು ಮುಟ್ಟಾಗುವ ವಿಚಾರವನ್ನ ಮುಕ್ತವಾಗಿ ಮಾತನಾಡಬೇಕು ಎಂದಿದ್ದರು. ಅದಷ್ಟೇ ಅಲ್ಲದೆ ಕನ್ನಡ ಸಿನಿ ಪ್ರೇಕ್ಷಕರು ನಮ್ಮಲ್ಲೂ ಇಂತಹ ಚಿತ್ರಗಳು ಬರಬೇಕು ಅನ್ನೋ ಆಸೆಯನ್ನ ವ್ಯಕ್ತ ಪಡಿಸಿದ್ದರು.
ಪ್ರೇಕ್ಷಕರ ಆಸೆಯಂತೆ ಕನ್ನಡಕ್ಕೆ 'ಪ್ಯಾಡ್ ಮ್ಯಾನ್' ಬರುವ ಸೂಚನೆ ಸಿಕ್ಕಿದೆ. ತಮಿಳು ಹಾಗೂ ಕನ್ನಡದಲ್ಲಿ ಸಿನಿಮಾ ನಿರ್ಮಾಣ ಮಾಡಲು ಟ್ವಿಂಕಲ್ ಖನ್ನಾ ಮತ್ತು ತಂಡ ಯೋಚನೆ ಮಾಡಿದ್ಯಂತೆ.

ಬಾಕ್ಸ್ ಆಫೀಸ್ ನಲ್ಲಿ ಸಖತ್ ಸದ್ದು ಮಾಡುತ್ತಿರುವ 'ಪ್ಯಾಡ್ ಮ್ಯಾನ್' ತಮಿಳಿನಲ್ಲೂ ನಿರ್ಮಾಣವಾಗಲಿದ್ದು ನಟ ಧನುಷ್ ಅಕ್ಷಯ್ ಕುಮಾರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ . ಆದರೆ ಕನ್ನಡದಲ್ಲಿ ಯಾರು ಅಭಿನಯಿಸಲಿದ್ದಾರೆ ಎನ್ನುವ ಬಗ್ಗೆ ಇನ್ನು ಸುಳಿವು ಬಿಟ್ಟುಕೊಟ್ಟಿಲ್ಲ 'ಪ್ಯಾಡ್ ಮ್ಯಾನ್' ತಂಡ.


Click it and Unblock the Notifications











