ಸಹೋದರಿ ಪರಿಣಿತಿ ಚೋಪ್ರಾ ಮದುವೆಗೆ ಚಕ್ಕರ್ ಹಾಕ್ತಾರಾ ಪ್ರಿಯಾಂಕಾ ಚೋಪ್ರಾ?: ಹೊಸ ಪೋಸ್ಟ್ ಕೊಟ್ಟ ಹಿಂಟ್ ಇದು!

ಉದಯಪುರದಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ರಾಘವ್ ಚಡ್ಡಾ ಅವರೊಂದಿಗೆ ನಟಿ ಪರಿಣಿತಿ ಚೋಪ್ರಾ ಅವರ ವಿವಾಹ ಮಹೋತ್ಸವ ನಡೆಯುತ್ತಿದೆ. ಆದರೆ ಈ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸುಳಿವು ನೀಡಿದ್ದಾರೆ.

ಈ ಹಿಂದೆ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಜೊತೆ ಪರಿಣಿತಿ ಮದುವೆಗೆ ಹಾಜರಾಗಲಿದ್ದಾರೆ ಎಂಬ ವರದಿಗಳಿದ್ದವು. ಆದರೆ, ಈವರೆಗೆ ಪ್ರಿಯಾಂಕಾ ಅವರ ತಾಯಿ ಮಧು ಚೋಪ್ರಾ ಮಾತ್ರ ಮದುವೆಯ ಮೆಹಂದಿ, ಹಳದಿಶಾಸ್ರ್ತ ಸಂಭ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.

Will Priyanka Chopra skips Parineeti Chopra-Raghav Chadha wedding

ಪರಿಣಿತಿ ಮದುವೆಗೆ ಪ್ರಿಯಾಂಕಾ ಮಿಸ್?

ಶನಿವಾರ ಬೆಳಗ್ಗೆ ಪ್ರಿಯಾಂಕಾ ಚೋಪ್ರಾ ತಮ್ಮ Instagram ಸ್ಟೋರೀಸ್‌ನಲ್ಲಿ ಪರಿಣಿತಿ ಚೋಪ್ರಾ ಅವರ ಹಳೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಕಪ್ಪು ಬಣ್ಣದ ಟಾಪ್, ಮಿಕ್ಸ್ ಕಲರ್ ಸ್ಕರ್ಟ್ ಮತ್ತು ಟೋಪಿ ಧರಿಸಿ, ಕೈಯಲ್ಲಿ ಕೂಲ್‌ ಡ್ರಿಂಕ್ಸ್ ಕುಡಿಯುತ್ತಾ ಪರಿಣಿತಿ ಚೋಪ್ರಾ ನಗುತ್ತಲೇ ಕಣ್ಣು ಮುಚ್ಚಿದ್ದಾರೆ. ಈ ಫೋಟೋದೊಂದಿಗೆ ಇಬ್ಬರಿಗೂ ಶುಭಾಶಯ ಹೇಳಿದ್ದಾರೆ ಪ್ರಿಯಾಂಕಾ ಚೋಪ್ರಾ.

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಆಮ್ ಆದ್ಮಿ ಪಕ್ಷದ ರಾಜಕಾರಣಿ ರಾಘವ್ ಚಡ್ಡಾ ಅವರ ಮದುವೆಯ ತಯಾರಿ ಆರಂಭವಾಗುತ್ತಿದ್ದಂತೆ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಮಗಳು ಭಾಗವಹಿಸುತ್ತಾರೆ. ಆದರೆ ನಿಕ್ ಜೋನಸ್ ಮದುವೆಗೆ ಹಾಜರಾಗುವುದಿಲ್ಲ ಎಂದು ಹೇಳಲಾಗಿತ್ತು. ಆದರೆ, ಹೊಸ ಪೋಸ್ಟ್ ಹಾಕಿ ಪ್ರಿಯಾಂಕಾ ಚೋಪ್ರಾ ತಾವು ಕೂಡ ಮದುವೆಗೆ ಚಕ್ಕರ್ ಹಾಕುತ್ತಿರುವುದರ ಸುಳಿವು ನೀಡಿದ್ದಾರೆ.

Will Priyanka Chopra skips Parineeti Chopra-Raghav Chadha wedding

ಫಾರ್ಮ್‌ನಲ್ಲಿ ಮಾಲ್ತಿ ಮತ್ತು ಫ್ರಾಂಕಿಯೊಂದಿಗೆ ಪ್ರಿಯಾಂಕಾ

ಪರಿಣಿತಿ ಚೋಪ್ರಾಗೆ ವಿಶ್ ಮಾಡುವ ಮೊದಲು ನಟಿ ಪ್ರಿಯಾಂಕಾ ತಮ್ಮ ಮಗಳು ಮಾಲ್ತಿ ಮತ್ತು ಅವರ ನಿಕ್ ಜೋನಸ್ ಸಹೋದರ ಫ್ರಾಂಕಿ ಜೋನಸ್ ಅವರೊಂದಿಗೆ ಫಾರ್ಮ್‌ನಲ್ಲಿ ಸಮಯ ಕಳೆದಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಕ್ಲಿಪ್‌ನಲ್ಲಿ, ಪ್ರಿಯಾಂಕಾ ಮೇಕೆಯನ್ನು ತನ್ನ ಬೆನ್ನಿನ ಮೇಲೆ ನಿಲ್ಲಿಸಿಕೊಂಡು ಎಂಜಾಯ್ ಮಾಡುತ್ತಿರುವುದನ್ನು ಕಾಣಬಹುದು.

ವಿಡಿಯೋದಲ್ಲಿ ಪ್ರಿಯಾಂಕಾ ಚೋಪ್ರಾ ಬಿಳಿ ಶರ್ಟ್, ಖಾಕಿ ಪ್ಯಾಂಟ್, ಕ್ಯಾಪ್ ಮತ್ತು ಬಿಳಿ ಸ್ನೀಕರ್ಸ್ ಧರಿಸಿದ್ದರು. ಮಗಳು ಮಾಲ್ತಿ ನೀಲಿ ಮತ್ತು ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿ ಪ್ರಾಣಿಗಳನ್ನು ನೋಡುತ್ತಿದ್ದರು. ಫ್ರಾಂಕಿ ತನ್ನ ತಲೆ ಮತ್ತು ಕೈಗಳ ಮೇಲೆ ಕೆಲವು ಪಕ್ಷಿಗಳನ್ನು ಕೂರಿಸಿಕೊಂಡು ಪೋಸ್ ನೀಡಿದ್ದಾರೆ.

ಪರಿಣಿತಿ ಚೋಪ್ರಾ - ರಾಘವ್ ಚಡ್ಡಾ ಮದುವೆ

ಸಂಸದ ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾ ವಿವಾಹ ಉದಯಪುರದಲ್ಲಿ ನಡೆಯಲಿದೆ. ಲೀಲಾ ಪ್ಯಾಲೇಸ್ ಉದಯಪುರದಲ್ಲಿ ಶನಿವಾರ ನಡೆಯಲಿರುವ ವಿವಾಹ ಪೂರ್ವ ಕಾರ್ಯಕ್ರಮಗಳು ಮತ್ತು ಭಾನುವಾರದ ಮುಖ್ಯ ಸಮಾರಂಭದಲ್ಲಿ ಪ್ರಮುಖ ರಾಜಕಾರಣಿಗಳು ಮತ್ತು ಚಿತ್ರರಂಗದ ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ರಾಘವ್ ಮತ್ತು ಪರಿಣಿತಿ ಮೇ 13 ರಂದು ತಮ್ಮ ನಿಶ್ಚಿತಾರ್ಥ ಮಾಡಿಕೊಂಡರು. ನವದೆಹಲಿಯ ಕಪುರ್ತಲಾ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಣಿತಿ ಅವರ ಸೋದರ ಸಂಬಂಧಿ ಮತ್ತು ನಟಿ ಪ್ರಿಯಾಂಕಾ ಚೋಪ್ರಾ ಕೂಡ ಹಾಜರಿದ್ದರು. ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾ ಅವರ ವಿವಾಹ ಸಂಭ್ರಮ ಈಗಾಗಲೇ ಪ್ರಾರಂಭವಾಗಿದ್ದು, ಉದಯಪುರದಲ್ಲಿ ಮೆಹೆಂದಿ ಕಾರ್ಯಕ್ರಮವು ಸೆಪ್ಟೆಂಬರ್ 22 ರಂದು ನಡೆದಿದೆ. ಇತರ ಕಾರ್ಯಕ್ರಮಗಳು ಸೆಪ್ಟೆಂಬರ್ 23 ರಂದು ನಡೆಯಲಿದ್ದು, ಸೆಪ್ಟೆಂಬರ್ 24 ರಂದು ವಿವಾಹ ಸಮಾರಂಭ ನಡೆಯಲಿದೆ.

More from Filmibeat

English summary
Will Priyanka Chopra skips Parineeti Chopra-Raghav Chadha wedding?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X