ಇದೇ ವರ್ಷ ರಣ್ವೀರ್-ದೀಪಿಕಾ ಮದುವೆಯಂತೆ.! ಹೌದಾ.?

By Harshitha

ಬಹುಭಾಷಾ ನಟಿ ಶ್ರಿಯಾ ಶರಣ್, ಬಾಲಿವುಡ್ ಬೆಡಗಿ ಸೋನಂ ಕಪೂರ್ ಮದುವೆ ಎಲ್ಲೆಡೆ ಸೌಂಡ್ ಮಾಡಿದ್ದು ಆಯ್ತು. ಈಗ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಸರದಿ.

ಹೌದು, ಇನ್ನು ಕೆಲವೇ ತಿಂಗಳಲ್ಲಿ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ವಿವಾಹ ಮಹೋತ್ಸವ ನಡೆಯಲಿದ್ಯಂತೆ. ಕಡಲ ಕಿನಾರೆಯಲ್ಲಿ ದೀಪಿಕಾ-ರಣ್ವೀರ್ ಮದುವೆ ನೆರವೇರಲಿದ್ಯಂತೆ. ಹಾಗಂತ ಬಾಲಿವುಡ್ ಅಂಗಳದಲ್ಲಿ ಗುಲ್ಲೋ ಗುಲ್ಲು.

'ಪದ್ಮಾವತ್' ಸಿನಿಮಾದ ಯಶಸ್ಸಿನ ಖುಷಿಯಲ್ಲಿ ಇರುವ ಈ ಜೋಡಿ, ಇದೇ ವರ್ಷ ಸಪ್ತಪದಿ ತುಳಿಯಲು ಮನಸ್ಸು ಮಾಡಿದ್ದಾರಂತೆ. ಉಭಯ ಕುಟುಂಬಗಳು ಕೂಡ ಮದುವೆಗೆ ಸಕಲ ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. ಇಂತಹ ಅಂತೆ-ಕಂತೆ ಸುದ್ದಿ ಹೆಚ್ಚಾಗ್ತಿದಂತೆ 'ಮದುವೆ' ಬಗ್ಗೆ ರಣ್ವೀರ್ ಸಿಂಗ್ ತುಟಿ ಎರಡು ಮಾಡಿದ್ದಾರೆ.

Will Ranveer Singh marry Deepika Padukone by mid 2018.?

''ಮದುವೆ ಸುದ್ದಿ ಎಲ್ಲಿಂದ ಬರ್ತಿದೆ ಅನ್ನೋದೇ ಗೊತ್ತಾಗುತ್ತಿಲ್ಲ. ನಾನೀಗ ಸಿನಿಮಾಗಳ ಶೂಟಿಂಗ್ ನಲ್ಲಿಯೇ ಬಿಜಿಯಾಗಿದ್ದೇನೆ. ಕೈ ತುಂಬಾ ಸಿನಿಮಾಗಳಿವೆ'' ಅಂತ ಸಂದರ್ಶನವೊಂದರಲ್ಲಿ ಹೇಳಿ ಎಲ್ಲ ರೂಮರ್ ಗಳನ್ನೂ ನಿವಾಳಿಸಿ ಬಿಸಾಕಿದ್ದಾರೆ ರಣ್ವೀರ್ ಸಿಂಗ್.

ಹಾಗ್ನೋಡಿದ್ರೆ, ಈ ವರ್ಷಾರಂಭದಲ್ಲೇ ದೀಪಿಕಾ ಪಡುಕೋಣೆ ಹುಟ್ಟುಹಬ್ಬದಂದು ನಿಶ್ಚಿತಾರ್ಥ ಸಮಾರಂಭ ನಡೆಯುತ್ತೆ ಎಂಬ ಸುದ್ದಿ ಜೋರಾಗಿ ಕೇಳಿಬಂದಿತ್ತು. ಆದ್ರೆ, ಅದು ಸುಳ್ಳಾಯ್ತು. ಈಗ ಇದೇ ವರ್ಷದ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಇಬ್ಬರ ಮದುವೆ ನಡೆಯಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಅದನ್ನ ರಣ್ವೀರ್ ಸಿಂಗ್ ತಳ್ಳಿಹಾಕಿದ್ದಾರೆ.

ಸದ್ಯಕ್ಕೆ ರಣ್ವೀರ್ ಸಿಂಗ್ ಕೈಯಲ್ಲಿ 'ಗಲ್ಲಿ ಬಾಯ್' ಮತ್ತು '1983' ಸಿನಿಮಾಗಳಿವೆ. ಇನ್ನೂ ದೀಪಿಕಾ ಕೂಡ 'ಪದ್ಮಾವತ್' ಬಳಿಕ ಉತ್ತಮ ಚಿತ್ರಗಳನ್ನ ಆಯ್ಕೆ ಮಾಡುವಲ್ಲಿ ಬಿಜಿಯಾಗಿದ್ದಾರೆ.

More from Filmibeat

English summary
Will Ranveer Singh marry Deepika Padukone by mid 2018.?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X