'ಟಾಕ್ಸಿಕ್' ಚಿತ್ರದ ಹಸಿಬಿಸಿ ದೃಶ್ಯದಲ್ಲಿ ಕಿಯಾರಾ ? ಪತಿ ಸಿದ್ಧಾರ್ಥ್ ಇದೆಲ್ಲ ಒಪ್ತಾರಾ ?

ಯಶ್ ನಟನೆಯ 'ಟಾಕ್ಸಿಕ್' ಚಿತ್ರದ ಒಂದೊಂದೇ ಟೀಸರ್ ಬಂದು ಸದ್ದು ಮಾಡ್ತಿದೆ. ಆಕ್ಷನ್, ರೊಮ್ಯಾನ್ಸ್ ಬಿಟ್ರೆ ಬೇರೇನು ಇಲ್ಲ ಎನ್ನುವಂತೆ ಟೀಸರ್‌ಗಳಲ್ಲಿ ತೋರಿಸಲಾಗ್ತಿದೆ. ಹಾಲಿವುಡ್ ಶೈಲಿಯಲ್ಲಿ ಸಿನಿಮಾ ಕಟ್ಟಿಕೊಟ್ಟಿರುವುದು ಗೊತ್ತಾಗುತ್ತಿದೆ. ಸದ್ಯ ಬಂದಿರುವ 'ಲೇಡೀಸ್ ಅಂಡ್ ಲೇಡೀಸ್' ಟೀಸರ್ ಬಗ್ಗೆ ಕೂಡ ಪರ ವಿರೋಧ ಚರ್ಚೆ ನಡೀತಿದೆ. ಅಭಿಮಾನಿಗಳಿಗೆ ಇಷ್ಟವಾಗಿದೆ. ಆದರೆ ಒಂದು ವರ್ಗದವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಕಿಯಾರಾ ಅದ್ವಾನಿ ಬಹಳ ಮಾದಕವಾಗಿ ನಟಿಸಿದ್ದಾರೆ. ಹಸಿಬಿಸಿ ದೃಶ್ಯಗಳಲ್ಲಿ ಮೈಚಳಿ ಬಿಟ್ಟು ನಟಿಸಿದ್ದಾರೆ. ಈ ಬಗ್ಗೆ ಕೂಡ ಸಾಕಷ್ಟು ಚರ್ಚೆ ನಡೀತಿದೆ. ಕಿಯಾರಾ ಬಿಂದಾಸ್ ಆಗಿ ನಟಿಸಿರುವುದು ಇದೇ ಮೊದಲೇನಲ್ಲ. ಆದರೆ ಮದುವೆ ಬಳಿಕ ಇಷ್ಟು ಹಸಿಬಿಸಿ ದೃಶ್ಯಗಳಲ್ಲಿ ನಟಿಸಿದ್ರೆ ಹೆಂಗೆ? ಇದನ್ನು ಪತಿ ಸಿದ್ದಾರ್ಥ್ ಮಲ್ಹೋತ್ರಾ ಒಪ್ತಾರಾ? ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಾರೆ 'ಟಾಕ್ಸಿಕ್' ಟೀಸರ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Will Sidharth Malhotra accept Toxic teaser Kiara Advani romantic scenes criticised

ಏನೇ ಹಾಲಿವುಡ್ ರೇಂಜ್ ಸಿನಿಮಾ ಆಗಿದ್ರು, ಕಥೆ, ಚಿತ್ರಕಥೆ ಏನೇ ಇದ್ರು ಯಾಕೋ ಅತಿಯಾಯ್ತು. ಇಂತಹ ಹಸಿಬಿಸಿ ದೃಶ್ಯಗಳನ್ನು ತೋರಿಸಿ ಸಿನಿಮಾ ಗೆಲ್ಲಿಸಿಕೊಳ್ಳುವ ಮಟ್ಟಕ್ಕೆ ಇನ್ನು ಯಶ್ ಇಳಿದಿಲ್ಲ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮದುವೆ ಬಳಿಕ ನಟಿಯರು ಬಿಂದಾಸ್ ಪಾತ್ರಗಳಲ್ಲಿ ಹಸಿಬಿಸಿ ದೃಶ್ಯಗಳಲ್ಲಿ ನಟಿಸೋಕೆ ಹಿಂದೇಟು ಹಾಕುತ್ತಾರೆ. ಆದರೆ ಕಿಯಾರಾ ಅದಕ್ಕೆಲ್ಲಾ ಕ್ಯಾರೇ ಎನ್ನುವಂತೆ ಕಾಣುತ್ತಿಲ್ಲ.

ಹಸಿಬಿಸಿ ದೃಶ್ಯಗಳನ್ನು ಬಹಳ ಕ್ಲೋಸ್‌ ಅಪ್‌ನಲ್ಲಿ ತೋರಿಸಲಾಗಿದೆ. ಯಾರು ಆ ದೃಶ್ಯಗಳಲ್ಲಿ ನಟಿಸಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ. ಕಿಯಾರಾ ನಿಜಕ್ಕೂ ಅಷ್ಟು ಬಿಂದಾಸ್ ಆಗಿ ನಟಿಸಿದ್ದಾರಾ? ಎನ್ನುವ ಅನುಮಾನ ಕೂಡ ಮೂಡಿದೆ. ಮದುವೆ ಆಗಿರುವ ಕಿಯಾರಾ ಹೀಗೆ ಹಸಿಬಿಸಿ ದೃಶ್ಯಗಳಲ್ಲಿ ನಟಿಸಬಾರದು ಎನ್ನುವುದಾದರೆ ಮದುವೆ ಆಗಿರುವ ಯಶ್ ನಟಿಸಬಹುದಾ? ಎಂದು ಕೆಲವರು ತಿರುಗೇಟು ನೀಡುತ್ತಿದ್ದಾರೆ. ಅಂದಹಾಗೆ 'ಟಾಕ್ಸಿಕ್' ಟೀಸರ್ ನೋಡಿ ಕಿಯಾರಾ ಅದ್ವಾನಿ ಪತಿ ಸಿದ್ದಾರ್ಥ್ ಮಲ್ಹೋತ್ರಾ ಲೈಕ್ ಮಾಡಿದ್ದಾರೆ. ಅವ್ರೇ ಇಷ್ಟಪಟ್ಟ ಮೇಲೆ ಬೇರೆಯವರು ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ಬಾಲಿವುಡ್ ನಟಿಯರು ಮದುವೆಯಾದ ಬಳಿಕ ಕೂಡ ಮಾದಕವಾಗಿ ನಟಿಸುವುದು ಹೊಸದೇನು ಅಲ್ಲ. 'ವಾರ್- 2' ಚಿತ್ರದಲ್ಲೂ ಕಿಯಾರಾ ಸಖತ್ ಬಿಂದಾಸ್ ಆಗಿ ನಟಿಸಿದ್ದರು. ಕಥೆ ಬಯಸಿದರೆ ಯಾವ ರೀತಿ ಬೇಕಾದರೂ ನಟಿಸುತ್ತೇವೆ ಎನ್ನುತ್ತಾರೆ. ಹಾಗಾಗಿ ಇಂತಹ ಚರ್ಚೆ ಬೇಡ. ಸಿದ್ದಾರ್ತ್ ಮಲ್ಹೋತ್ರಾ ಕೂಡ ಬೇರೆ ನಟಿಯರ ಜೊತೆ ಹಸಿಬಿಸಿ ದೃಶ್ಯಗಳಲ್ಲಿ ನಟಿಸ್ತಾರೆ, ಅದನ್ನು ಯಾಕೆ ಯಾರು ಕೇಳಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಇದು ಕುಟುಂಬ ಸಮೇತ ನೋಡಯವ ಸಿನಿಮಾ ಅಲ್ಲ, ಮಕ್ಕಳಿಗಾಗಿ ಮಾಡಿರುವ ಸಿನಿಮಾ ಅಲ್ಲ ಎಂದು ಚಿತ್ರತಂಡ ಪದೇ ಪದೆ ಹೇಳ್ತಿದೆ. ಇಷ್ಟ ಇರುವವರು ನೋಡಿ, ಬಳಿಕ ಮಾತನಾಡಿ. ಬರೀ ಟೀಸರ್ ನೋಡಿ ಏನೇನೋ ಕಾಮೆಂಟ್ ಮಾಡಬೇಡಿ ಎಂದು ಕೆಲವರು ವಾದ ಮುಂದಿಡುತ್ತಿದ್ದಾರೆ. ಒಂದೂವರೆ ನಿಮಿಷದ ಟೀಸರ್ ನೋಡಿ ಸಿನಿಮಾ ಬಗ್ಗೆ ಯಾವುದೇ ನಿರ್ಧಾರಕ್ಕೆ ಬರಬೇಡಿ. ಆಗಸ್ಟ್ 26ರವರೆಗೆ ಕಾದುನೋಡಿ ಎನ್ನುತ್ತಿದ್ದಾರೆ.

ಕಿಯಾರಾ ಮಾತ್ರವಲ್ಲ ತಾರಾ ಸುತಾರಿಯಾ ಕೂಡ ಬಿಂದಾಸ್ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ. ಹಸಿಬಿಸಿ ದೃಶ್ಯಗಳ ನಡುವೆ ನಯನತಾರಾ ಆಕ್ಷನ್ ಸನ್ನಿವೇಶಗಳು ಗೌಣವಾಗಿಬಿಟ್ಟಿದೆ. ಚಿತ್ರದಲ್ಲಿ ಮಹಿಳಾ ಪಾತ್ರಗಳನ್ನು ಸಿಕ್ಕಾಪಟ್ಟೆ ಪವರ್‌ಫುಲ್ ಆಗಿ ತೋರಿಸಿರುವುದಾಗಿ ಚಿತ್ರತಂಡ ಹೇಳ್ತಿದೆ. ಆದರೆ ಟೀಸರ್ ನೋಡಿದ್ರೆ ಆ ರೀತಿ ಅನ್ನಿಸ್ತಿಲ್ಲ ಎನ್ನುವ ಕಾಮೆಂಟ್ಸ್ ಕೂಡ ಹೆಚ್ಚಾಗಿದೆ. ಟ್ವಿಟರ್‌ನಲ್ಲಿ ಯಶ್ ಟೀಸರ್ ಲಿಂಕ್ ಶೇರ್ ಮಾಡಿದ್ದಾರೆ. ಕಾಮೆಂಟ್ಸ್ ಬಾಕ್ಸ್‌ನಲ್ಲೇ ಸಾಕಷ್ಟು ನೆಗೆಟಿವ್ ಕಾಮೆಂಟ್ಸ್ ಎದ್ದು ಕಾಣ್ತಿದೆ.

Read more about: yash toxic kiara advani
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X