ಶಾರುಖ್ ಖಾನ್‌ರ ಪಠಾಣ್‌ನ ಬಾಕ್ಸ್ ಆಫೀಸ್ ದಾಖಲೆಗಳನ್ನು ಸರಿಗಟ್ಟಲಿದೆಯೇ ಗದರ್ 2?

ಗದರ್‌: ಏಕ್ ಪ್ರೇಮ್ ಕಥಾ ಮೂಲಕ ಬ್ಲಾಕ್‌ಬಸ್ಟರ್ ನೀಡಿದ ಸುಮಾರು 22 ವರ್ಷಗಳ ನಂತರ ಸನ್ನಿ ಡಿಯೋಲ್ ಮತ್ತು ಅಮೀಶಾ ಪಟೇಲ್ ಗದರ್ 2 ಚಿತ್ರದ ಮೂಲಕ ಬೆಳ್ಳಿ ತೆರೆ ಮೇಲೆ ಅಬ್ಬರಿಸಿದ್ದಾರೆ. ಬಿಡುಗಡೆಯಾದ ಐದು ದಿನಗಳಲ್ಲಿ ಚಿತ್ರ 228.9 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಮುಂದುವರಿಸುತ್ತಲೇ ಇದೆ.

ಗದರ್ 2 ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ನೋಡಿದ ಹಲವರು ಈ ವರ್ಷದ ಶಾರುಖ್ ಖಾನ್‌ರ ಬ್ಲಾಕ್‌ಬಸ್ಟರ್ ಪಠಾಣ್‌ ದಾಖಲಿಸಿದ್ದ 543 ಕೋಟಿ ಕಲೆಕ್ಷನ್‌ಗಳನ್ನು ಇದು ಶೀಘ್ರದಲ್ಲೇ ಮುರಿಯಲಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

Will Sunny Deols Gadar 2 beat Shah Rukh Khans Pathaans box office records?

ಹಿಂದೂಸ್ತಾನ್ ಟೈಮ್ಸ್ ಉಲ್ಲೇಖಿಸಿರುವ ಚಲನಚಿತ್ರ ವಿಶ್ಲೇಷಕ ಕೋಮಲ್ ನಹ್ತಾ ಗದರ್ 2 ಚಿತ್ರವು ಪಠಾಣ್ ದಾಖಲೆ ಮುರಿಯುವ ಸಾಧ್ಯತೆಗಳು 95% ಇದೆ ಎಂದಿದ್ದಾರೆ. ಆದರೆ ಗಿರೀಶ್ ಜೋಹರ್ ಅವರು ಎರಡು ತಿಂಗಳಿಗಿಂತ ಹೆಚ್ಚು ಕಾಲ ಥಿಯೇಟರ್‌ಗಳಲ್ಲಿ ತನ್ನದೇ ಪ್ರಾಬಲ್ಯ ಹೊಂದಿದ್ದ ಚಲನಚಿತ್ರದೊಂದಿಗೆ ಹೊಸದಾಗಿ ಬಿಡುಗಡೆಯಾಗಿರುವ ಚಿತ್ರವನ್ನು ಹೋಲಿಸುವುದು ತುಂಬಾ ಆತುರ ಎಂದು ಹೇಳಿದ್ದಾರೆ.

ಗದರ್ 2 ಪಠಾಣ್ ಅನ್ನು ಸೋಲಿಸಬಲ್ಲದು!

ಗದರ್ 2 ಪಠಾಣ್ ಅವರನ್ನು ಮೀರಿಸುವ ಬಹಳ ಅವಕಾಶಗಳಿವೆ ಎಂದು ವಿಶ್ಲೇಷಕ ಕೋಮಲ್ ನಹ್ತಾ ಹೇಳಿದ್ದಾರೆ. ನೆಗೆಟಿವ್ ವಿಮರ್ಶೆಗಳ ಹೊರತಾಗಿಯೂ ಚಲನಚಿತ್ರವು ಥಿಯೇಟರ್‌ಗಳಲ್ಲಿ ಪ್ರದರ್ಶನವಾಗುತ್ತಿರುವ ಬಗ್ಗೆ ಮಾತನಾಡಿದ ಅವರು, "ವಿಮರ್ಶೆಗಳು ಮುಖ್ಯವೆಂದು ನಾನು ಭಾವಿಸುವುದಿಲ್ಲ. ಒಂದು ಚಿತ್ರ ಕ್ಲಿಕ್ ಆಗುತ್ತದೋ ಇಲ್ಲವೋ ಎಂಬುದನ್ನು ವಿಮರ್ಶೆಗಳು ನಿರ್ಧರಿಸುವುದಿಲ್ಲ. ಹೆಚ್ಚಾಗಿ ಪ್ರೇಕ್ಷಕರು ಖಂಡಿತವಾಗಿಯೂ ಮಾಸ್ ಚಿತ್ರಗಳ ಪರವಾಗಿಲ್ಲ. ಹೌದು, ಆದರೆ ಪತ್ರಕರ್ತರು ಏನು ಬರೆಯುತ್ತಾರೆ ಅಥವಾ ವಿಮರ್ಶಕರು ಏನು ಬರೆಯುತ್ತಾರೆ ಎಂಬುದರ ಬಗ್ಗೆ ಜನಸಾಮಾನ್ಯರು ಚಿಂತಿಸುವುದಿಲ್ಲ. ಜನ ಇಷ್ಟಪಟ್ಟರೆ ಅವರು ಅದನ್ನು ನೋಡುತ್ತಾರೆ. ಹಾಗಾಗಿ ಬಾಯಿಂದ ಬಾಯಿಗೆ ಹೋಗುವ ಮಾತು ಹೆಚ್ಚು ಮುಖ್ಯ. ಗದರ್ 2 ಇದಕ್ಕೆ ಉದಾಹರಣೆ" ಎಂದಿದ್ದಾರೆ.

Will Sunny Deols Gadar 2 beat Shah Rukh Khans Pathaans box office records?

ಇನ್ನು, ವಿಶ್ಲೇಷಕ ಅಕ್ಷಯ ರಥಿ ಕೂಡ ಇದೇ ಮಾತನ್ನು ಹೇಳಿದ್ದಾರೆ. "ಗದರ್ 2 ಪಠಾಣ್‌ನನ್ನು ಸೋಲಿಸಬಹುದು, ಇದು ದಾಖಲೆಯೇ ಸರಿ. ಭಾರತದಾದ್ಯಂತ ಆಗಸ್ಟ್ 15 ರಂದು ಜನ ಚಿತ್ರಮಂದಿರಗಳಲ್ಲಿ ವೀಕ್ಷಿಸಿದ್ದು ಸಂಪೂರ್ಣ ಐತಿಹಾಸಿಕ. ಚಲನಚಿತ್ರ ವಲಯದಲ್ಲಿರುವ ನಾವೆಲ್ಲರೂ ನಮ್ಮ ಪ್ರೇಕ್ಷಕರಿಗೆ ಸೇವೆ ಸಲ್ಲಿಸಲು ಮತ್ತು ಅವರು ಥಿಯೇಟರ್‌ಗಳಿಂದ ಸಂತೋಷದಿಂದ ಹೊರ ಹೋಗುವುದನ್ನು ನೋಡಬೇಕು. ಮಂಗಳವಾರ ಗದರ್ 2 ಮಾತ್ರವಲ್ಲದೆ OMG 2, ಜೈಲರ್, ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ, ಒಪೆನ್‌ಹೈಮರ್ ಸೇರಿ ಎಲ್ಲಾ ಚಿತ್ರಗಳನ್ನು ನೋಡಿದ್ದಾರೆ. ಜನ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಗಳಲ್ಲಿ ನೋಡುತ್ತಿರುವುದು ಸಂತಸ ತಂದಿದೆ" ಎಂದಿದ್ದಾರೆ.

'ಗದರ್ 2' ಎರಡನೇ ವಾರಾಂತ್ಯದವರೆಗೆ ಕಾಯಬೇಕು

ನಿರ್ಮಾಪಕ ಮತ್ತು ಚಲನಚಿತ್ರ ವಿಶ್ಲೇಷಕ ಗಿರೀಶ್ ಜೋಹರ್ ಅವರು "ಚಿತ್ರವು ಐದು ದಿನಗಳಲ್ಲಿ 225 ಕೋಟಿ ಗಳಿಸಿದೆ. ಇದು ಒಳ್ಳೆಯ ಸಂಖ್ಯೆ. ಆದರೆ ಪಠಾಣ್ ಹೆಚ್ಚು ದಿನಗಳ ಕಾಲ ಥಿಯೇಟರ್‌ನಲ್ಲಿ ಇತ್ತು. ಪಠಾಣ್ ಸುಮಾರು ₹ 500 ಕೋಟಿ ಗಳಿಸಿದೆ. ಗದರ್ 2 ಇನ್ನೂ ₹ 300 ಕೋಟಿಗೂ ಹೆಚ್ಚು ಗಳಿಸಬೇಕಿದೆ. ಗದರ್ 2 ರ ಐದು ದಿನಗಳನ್ನು ಪಠಾಣ್‌ನ ಎಂಟು ವಾರಗಳೊಂದಿಗೆ ಹೋಲಿಸುವುದು ತುಂಬಾ ಆತುರದ ನಿರ್ಧಾರ" ಎಂದು ತಿಳಿಸಿದ್ದಾರೆ.

"ಕಮರ್ಷಿಯಲ್ ಚಿತ್ರ ಎಂದರೆ ಹೀಗೆ. ಪಠಾಣ್ ವಿಮರ್ಶಕರಿಂದ ಉತ್ತಮ ವಿಮರ್ಶೆ ಪಡೆಯಲಿಲ್ಲ. ಆದರೆ ಸಾರ್ವಜನಿಕರು ಅದನ್ನು ಇಷ್ಟಪಟ್ಟರು. ಸನ್ನಿ ಡಿಯೋಲ್ ಸುತ್ತಿಗೆಯಿಂದ ಕಾರುಗಳನ್ನು ಒಡೆಯುತ್ತಿದ್ದರೂ, ಸಾರ್ವಜನಿಕರು ಈ ಚಿತ್ರದಲ್ಲಿ ಸಿಗುತ್ತಿರುವ ಮನರಂಜನೆಯನ್ನು ಮಾತ್ರ ಬಯಸುತ್ತಾರೆ" ಎಂದು ಹೇಳಿದ್ದಾರೆ.

ಅನಿಲ್ ಶರ್ಮಾ ನಿರ್ದೇಶನದ, ಗದರ್ 2 ನಲ್ಲಿ ಸನ್ನಿ ಡಿಯೋಲ್ ಮತ್ತು ಅಮೀಶಾ ಪಟೇಲ್ ಜೊತೆಗೆ ಉತ್ಕರ್ಷ್ ಶರ್ಮಾ, ಮನೀಶ್ ವಾಧ್ವಾ, ಗೌರವ್ ಚೋಪ್ರಾ, ಸಿಮ್ರತ್ ಕೌರ್, ಲುವ್ ಸಿನ್ಹಾ, ರಾಕೇಶ್ ಬೇಡಿ ಮತ್ತು ಡಾಲಿ ಬಿಂದ್ರಾ ಸಹ ನಟಿಸಿದ್ದಾರೆ. ಇದು ಅಕ್ಷಯ್ ಕುಮಾರ್ ಅವರ ಓಎಂಜಿ 2 ಜೊತೆಗೆ ಆಗಸ್ಟ್ 11 ರಂದು ಬಿಡುಗಡೆಯಾಯಿತು.

More from Filmibeat

English summary
Will Sunny Deol's Gadar 2 beat Shah Rukh Khan's Pathaan's records?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X