Don't Miss!
- News ಹಿಂದೂ ಯುವತಿ ಬರ್ಬರ ಹತ್ಯೆ ಪ್ರಕರಣ; ಇದೊಂದು ಲಬ್ ಜಿಹಾದ್ ಎಂದ ಜೋಶಿ: ಸಿದ್ದರಾಮಯ್ಯ ಹೇಳಿದ್ದೇನು?
- Technology Poco: ಹೊಸದಾಗಿ ಲಾಂಚ್ ಆದ ಪೊಕೊ X6 ಪ್ರೊ 5G ಸ್ಮಾರ್ಟ್ಫೋನ್ಗೆ 17% ರಿಯಾಯಿತಿ!8 GB RAM
- Finance ಜಗತ್ತಿಗೆ ಭಾರತವೇ ಬಾಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದ್ದು ಏನು?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಾಯ್ ಫ್ರೆಂಡ್ ಜೊತೆಗೆ ಮುಂದಿನ ವರ್ಷ ನಟಿ ಸುಷ್ಮಿತಾ ಸೇನ್ ಮದುವೆ.?
ಬಾಲಿವುಡ್ ನಲ್ಲಿ ಮದುವೆ ಸಂಭ್ರಮ ಜೋರಾಗಿದೆ. ನಟಿ ಅನುಷ್ಕಾ ಶರ್ಮಾ, ಸೋನಂ ಕಪೂರ್, ನೇಹಾ ಧೂಪಿಯಾ ಇತ್ತೀಚೆಗಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಸದ್ಯದಲ್ಲೇ ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್, ಪ್ರಿಯಾಂಕಾ ಛೋಪ್ರಾ-ನಿಕ್ ಜೊನಾಸ್ ವಿವಾಹ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ.
ಮದುವೆ ಸೀಸನ್ ಶುರು, 2019ಕ್ಕೆ ಅರ್ಜುನ್ ಕಪೂರ್- ಮಲೈಕಾ ಅರೋರಾ ವಿವಾಹ
ಇಷ್ಟು ದಿನ ಮದುವೆ ಬೇಡ ಎಂದು ಎರಡು ಹೆಣ್ಣು ಮಕ್ಕಳನ್ನು ದತ್ತು ಪಡೆದು ಸಾಕುತ್ತಿದ್ದ ಮಾಜಿ ಭುವನ ಸುಂದರಿ ಸುಷ್ಮಿತಾ ಸೇನ್ ಇದೀಗ ಹಸೆಮಣೆ ಏರಲು ಮನಸ್ಸು ಮಾಡಿದ್ದಾರಂತೆ. ತಮ್ಮ ಬಾಯ್ ಫ್ರೆಂಡ್ ರೋಹ್ಮನ್ ಶಾಲ್ ರನ್ನ ವರಿಸಲು ಸುಷ್ಮಿತಾ ಸೇನ್ ಮುಂದಾಗಿದ್ದಾರೆ ಎನ್ನುತ್ತಿವೆ ಮೂಲಗಳು.
ಪ್ರಿಯಾಂಕಾ-ನಿಕ್ ಮದುವೆ ದಿನಾಂಕ ನಿಗದಿ ಆಯ್ತು: ವಿವಾಹ ಎಲ್ಲಿ, ಯಾವಾಗ.?
ಎರಡು ತಿಂಗಳ ಹಿಂದೆಯಷ್ಟೇ ಫ್ಯಾಶನ್ ಈವೆಂಟ್ ಒಂದರಲ್ಲಿ ಸುಷ್ಮಿತಾ ಸೇನ್ ಹಾಗೂ ರೋಹ್ಮನ್ ಶಾಲ್ ಭೇಟಿ ಆಗಿದ್ದರು. ಪರಿಚಯ ಸ್ನೇಹವಾಗಿ, ಇದೀಗ ಸ್ನೇಹ ಪ್ರೀತಿಗೆ ತಿರುಗಿರುವುದರಿಂದ ತಮ್ಮ ಪ್ರೀತಿಗೆ ಅಧಿಕೃತ ಮುದ್ರೆ ಹಾಕಿಸಿಕೊಳ್ಳಲು ಜೋಡಿ ತೀರ್ಮಾನ ಮಾಡಿದ್ಯಂತೆ.
ಫೋಟೋ ನೋಡಿ: ದೀಪಿಕಾ ಪಡುಕೋಣೆ ಮನೆಯಲ್ಲಿ ಮದುವೆ ಸಂಭ್ರಮ ಶುರು
ರೋಹ್ಮನ್ ಶಾಲ್ ರನ್ನ ಮದುವೆ ಆಗಲು ಸುಷ್ಮಿತಾ ಸೇನ್ ಗೆ ಇಬ್ಬರೂ ಹೆಣ್ಮಕ್ಕಳೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಹೀಗಾಗಿ, ಮುಂದಿನ ವರ್ಷ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಸದ್ಯ ಸುಷ್ಮಿತಾ ಸೇನ್ ಎಲ್ಲೇ ಹೋದರೂ, ಅವರ ಜೊತೆಗೆ ರೋಹ್ಮನ್ ಶಾಲ್ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರೂ ಒಟ್ಟಿಗೆ ದೀಪಾವಳಿ ಕೂಡ ಆಚರಿಸಿದ್ದಾರೆ. ಇಬ್ಬರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.